ಸಾಮರ್ ಇಂಟರ್‌ನ್ಯಾಷನಲ್ ಇಸ್ಲಾಮಿಕ್ ಸ್ಕೂಲ್ ಪರವಾನಗಿ ರದ್ದುಪಡಿಸುವಂತೆ – ಅಬ್ದುಲ್ ಹಮೀದ್..ಆಗ್ರಹ.. ಬೆಂಗಳೂರು :

ಸಾಮರ್ ಇಂಟರ್‌ನ್ಯಾಷನಲ್ ಇಸ್ಲಾಮಿಕ್ ಸ್ಕೂಲ್ ಪರವಾನಗಿ ರದ್ದುಪಡಿಸುವಂತೆ – ಅಬ್ದುಲ್ ಹಮೀದ್..ಆಗ್ರಹ.. ಬೆಂಗಳೂರು : ಹೆಗ್ಗಡೆನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾಮರ್ ಇಂಟರ್‌ನ್ಯಾಷನಲ್ ಇಸ್ಲಾಮಿಕ್ ಸ್ಕೂಲ್ ವಿರುದ್ಧ ಗಂಭೀರ ಕಾನೂನು ಉಲ್ಲಂಘನೆ ಆರೋಪ ಕೇಳಿಬಂದಿದ್ದು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶಾಲೆಯ ಪರವಾನಗಿಯನ್ನು ತಕ್ಷಣವೇ ರದ್ದುಪಡಿಸುವಂತೆ ಇಂದು ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಅಬ್ದುಲ್ ಹಮೀದ್. ಸರ್ಕಾರವನ್ನು ಡಿಮ್ಯಾಂಡ್ ಮಾಡಿದರು. ಸಾಮಾಜಿಕ ಸಂಘಟನೆಗಳು ಸೇರಿದ್ದಾರೆ. ಈ ಶಾಲೆಯ ಆಡಳಿತವನ್ನು ಜಾಮಿಯಾ ಮೊಹಮ್ಮದೀಯ ಎಜುಕೇಷನ್ ಸೊಸೈಟಿ, ಮುಂಬೈ ನಡೆಸುತ್ತಿದೆ ಎಂದು ತಿಳಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಚಾಮರಾಜಪೇಟೆ ಘಟಕದ ಅಧ್ಯಕ್ಷ ಶ್ರೀ ಚಾಂಗ್ ಪಾಷ ಅವರು ನೀಡಿದ ಮಾಹಿತಿಯಂತೆ, ಶಾಲೆ ಇಲಾಖೆಯಿಂದ ಅನೇಕ ಬಾರಿ ನೋಟಿಸ್ ಪಡೆದಿದ್ದರೂ ಯಾವುದೇ ದಾಖಲೆಗಳು ಅಥವಾ ಸ್ಪಷ್ಟನೆ ನೀಡಿಲ್ಲ. ಈ ಮೂಲಕ ಶಾಲೆಯ ಶಿಕ್ಷಣ ನಿರ್ದೇಶನಗಳನ್ನೇ ಲಘುವಾಗಿ ಮಾಡಲಾಗಿತ್ತು.
ಮಾಹಿತಿ ಹಕ್ಕು ಕಾಯ್ದೆ (RTI) ಮೂಲಕ ದೊರೆತ ವಿವರಗಳ ಪ್ರಕಾರ, ಈ ಶಾಲೆಯು ಮಹಾರಾಷ್ಟ್ರದ ಶಿಕ್ಷಣ ಇಲಾಖೆಯಲ್ಲಿ ನೋಂದಾಯಿತವಾಗಿಲ್ಲ. ಶಾಲೆಯು “ಜಾಮಿಯಾ ಮೊಹಮ್ಮದೀಯ ಎಜುಕೇಷನ್ ಸೊಸೈಟಿ”, “ಜಾಮಿಯಾ ಮೊಹಮ್ಮದೀಯ ಮನ್ಸೂರ” ಮತ್ತು “ಜಾಮಿಯಾ ಮೊಹಮ್ಮದೀಯ ಎಜುಕೇಷನ್ ಟ್ರಸ್ಟ್” ಎಂಬ ಮೂರು ವಿಭಿನ್ನ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿರುವುದು ನಿರ್ಧಿಷ್ಟವಾದ ಸಂಶಯಗಳಿಗೆ ಕಾರಣವಾಗಿದೆ.
ಇದೆ ವೇಳೆ, ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮದರಸಾ ಗುಣಮಟ್ಟದ ಶಿಕ್ಷಣ ಯೋಜನೆಯಲ್ಲಿ 2017–18ನೇ ಸಾಲಿಗೆ ಈ ಸಂಸ್ಥೆಯು ರೂ.10 ಲಕ್ಷಗಳ ಅನುದಾನವನ್ನು ಪಡೆದಿದೆ ಎಂದರು ಆದರೆ ಸಂಸ್ಥೆಯು “ಅನುದಾನ ರಹಿತ ಶಾಲೆ” ಎಂದು ಸರ್ಕಾರದಲ್ಲಿ ನೋಂದಾಯಿತ ವಾಗಿದೆ. ಇದು ಸಾರ್ವಜನಿಕ ಹಣದ ದುರುಪಯೋಗ ಮತ್ತು ವಂಚನೆ ಎಂದು ಆರೋಪಿಸಲಾಗಿದೆ.
ಮಕ್ಕಳಿಗೆ ಹಲ್ಲೆ ಮತ್ತು ದೌರ್ಜನ್ಯ ನಡೆದಿರುವ ಕುರಿತು ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಾಲೆಯು ಭೂಕಬಳಿಕೆ, ಅಕ್ರಮ ಚಟುವಟಿಕೆಗಳು ಹಾಗೂ ಆಡಳಿತದ ದೌರ್ಜನ್ಯ ಗಳಲ್ಲಿ ತೊಡಗಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ ಎಂದರು.
. ದಲಿತ ಮುಖಂಡ ಎಂ. ಕೃಷ್ಣಪ್ಪ ಅವರ ಮಕ್ಕಳ ಭದ್ರತೆ ಹಾಗೂ ಸಾರ್ವಜನಿಕ ಹಿತಕ್ಕಾಗಿ ಈ ಶಾಲೆಯ ಪರವಾನಗಿಯನ್ನು ತಕ್ಷಣ ರದ್ದುಪಡಿಸಿ, ಸಂಬಂಧಿತ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರವನ್ನು ಆಗ್ರಹ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಅಬ್ದುಲ್ ಅಹ್ಮದ್ ಪಾಶಾ , ಎಂ ಕೃಷ್ಣಪ್ಪ ಮತ್ತು , ಚಂಡ್ ಪಾಶಾ ಉಪಸ್ಥಿತಿ ಇದ್ದರು ವರದಿ. ಮಂಜುಳಾ ರೆಡ್ಡಿ



