ಸುದ್ಧಿ

43 ವರ್ಷದಿಂದ ಕಾಂಗೈನಲ್ಲಿ ದುಡಿಯುತ್ತಿರುವ ಪಕ್ಷದ ಕಾರ್ಯಕರ್ತನಿಗೆ ಆಗಿರುವ ಅನ್ಯಾಯದ ಬಗ್ಗೆ ತಮಗೆ ಬಹಿರಂಗ ಪತ್ರ

ಸನ್ಮಾನ್ಯಶ್ರೀ ಡಿ.ಕೆ.ಶಿವಕುಮಾರ ಜೀ ಮಾನ್ಯ ಅಧ್ಯಕ್ಷರು, ಕರ್ನಾಟಕ ಪ್ರದೇಶ ಕಾಂಗ್ರೇಸ್ (ಐ) ಪಕ್ಷ ಇವರಿಗೆ,

43 ವರ್ಷದಿಂದ ಕಾಂಗೈನಲ್ಲಿ ದುಡಿಯುತ್ತಿರುವ ಪಕ್ಷದ ಕಾರ್ಯಕರ್ತನಿಗೆ ಆಗಿರುವ ಅನ್ಯಾಯದ ಬಗ್ಗೆ ತಮಗೆ ಬಹಿರಂಗ ಪತ್ರ

ಸನ್ಮಾನ್ಯಶ್ರೀ ಡಿ.ಕೆ.ಶಿವಕುಮಾರ ಜೀ ಮಾನ್ಯ ಅಧ್ಯಕ್ಷರು, ಮತ್ತು ಸಚಿವರೇ,

   ಈ ಮೂಲಕ ನಾನು ಎಮ್.ಎ.ಸುಗಂಧಿ ವಕೀಲರು, ಪತ್ರಕರ್ತರು, ಕಾಂಗೈ ಕಾರ್ಯಕರ್ತ ಬೆಂಗಳೂರು ಈ ಮೂಲಕ ವಿಷಾಧನೀಯವಾಗಿ ತಮಗೆ ಬಹಿರಂಗ ಪತ್ರ ಬರೆದುಕೊಳ್ಳುತ್ತಾ, ಮತ್ತು ನೋಂದಣಿ ಅಂಚೆ ಮೂಲಕ ಕಳುಹಿಸಿದ ಪತ್ರ ವಿಷವೇನೆಂದರೇ, 

43 ವರ್ಷಗಳಿಂದಲೂ ಕಾಂಗೈ ಪಕ್ಷದ ಕಾರ್ಯಕರ್ತನಾಗಿದ್ದೆನೆ. 1982 ರಲ್ಲಿ ಅಂದು ವಿಧ್ಯಾರ್ಥಿಗಳ ನಾಯಕರಾಗಿದ್ದ ದಿ.ರಾಜ ಮದನಗೋಪಾಲ ನಾಯಕರು ಮಾಜಿ ಶಾಸಕರು, ಮಾಜಿ ಸಚಿವರೊಂದಿಗೆ ಗುರುತಿಸಿಕೊಂಡವನು. ದಿ.ರಾಜಾ ವೆಂಕಟಪ್ಪ ನಾಯಕರು ಜನಪ್ರೀಯ ಮಾಜೀ ಶಾಸಕರು ಇವರೊಂದಿಗೆ 1995 ಅಂದರೇ ೩೦ ವರ್ಷಗಳಿಂದಲೂ ಗುರುತಿಸಿಕೊಂಡಿದ್ದೆನೆ. ಅಂದಿನಿoದಲೂ ಸುರಪುರ ಕ್ಷೇತ್ರದಲ್ಲಿ ನಡೆದ ಎಲ್ಲಾ ಚಿಕ್ಕ-ದೊಡ್ಡ ಚುನಾವಣೆಯಲ್ಲೂ ನಾನು ಮತ್ತು ನನ್ನವರಿಂದ, ನನ್ನ ಹಿತೈಷಿಗಳಿಂದ ಕಾಂಗೈಗೇನೇ ಮತ ಚಲಾಯಿಸಿ ಹಲವಾರು ಬಾರಿ ಪಕ್ಷದ ಗೆಲುವಿಗೆ ಕಾರಣನಾಗಿದ್ದು ದೇವರಾಣೆಗೂ ಸತ್ಯೆ.

ಆದರೇ ಇಂದು ಸುರಪುರ ಕಾಂಗೈ ಶಾಸಕರು ಶ್ರೀ ವೇಣುಗೋಪಾಲ ಸರ್ ಅವರ ಪಿ.ಎ. ಮತ್ತು ದೇವಪುರ ಗ್ರಾಮದ ಪುಡಾರಿಗೌಡ ಎಂಬ ಪುಢಾರಿ ಜೊತೆಗೂಡಿ ನನಗೆ ಇನ್ನಿಲ್ಲದಂತೆ ತೊಂದರೆ ಕೊಡುತ್ತಿದ್ದಾರೆ. ಸುರಪುರ ಪೊಲೀಸ ಸ್ಟೇಷನ್‌ಗೆ ಶಾಸಕರ ಕಾರ್ಯಾಲಯದಿಂದ ಫೋನ ಮಾಡಿಸಿ ತಮ್ಮ ಪ್ರಭಾವ ಬೀರಿ ನಮ್ಮ ಸಹೋದರನ ಮನೆಯಲ್ಲಿ ಚಿನ್ನ ಕದ್ದ ಕಳ್ಳ ಹಾಗೂ ಆತನ ಮಗನನ್ನು ರಕ್ಷಿಸುತ್ತಿರುವುದು ಶೋಚನೀಯ ಸಂಗತಿಯಾಗಿದೆ.

ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ದೇವಪುರ ಗ್ರಾಮದಲ್ಲಿ ನನ್ನ ಸಹೋದರನ ಮನೆಯಲ್ಲಿ ದಿನಾಂಕ. 17/01/2024 ರಂದು 75 ಗ್ರಾಂ. ಚಿನ್ನ, ರೂ. ೧೫ ಸಾವಿರ ದುಡ್ಡು  ನಮ್ಮ ವಾರ್ಡಿನ ಯುವಕ ಮತ್ತು ಆತನ ಮಗ ಕದ್ದಿದ್ದಾರೆ. ಪೊಲೀಸ ಕೇಸ ಆಗಿ, ಎಫ್.ಐ.ಆರ್. ಆಗಿದೆ.

ಆದರೇ ಚಿನ್ನ ಕದ್ದ ಕಳ್ಳ ಮತ್ತು ಆತನ ಮಗನನ್ನು ಬಚಾವ ಮಾಡಲು ದೇವಪುರ ಗ್ರಾಮದ ಗೌಡ ಎಂಬ ಪುಢಾರಿ ಮತ್ತು ಸುರಪುರ ಕಾಂಗೈ ಶಾಸಕರ ಪಿ.ಎ. ಈ ಎರಡೂ ಜನ ಜೊತೆಗೂಡಿ ಪೊಲೀಸ ಸ್ಟೇಷನ್‌ಗೆ ಫೋನ ಮಾಡಿ ಚಿನ್ನ ಕದ್ದ ಕಳ್ಳ ಮತ್ತು ಆತನ ಮಗನನ್ನು ರಕ್ಷಿಸುತ್ತಿದ್ದಾರೆ. ಅವರನ್ನು ಯಾವುದೇ ಕಾರಣಕ್ಕೂ ಬಂಧಿಸಬಾರದು ಕದ್ದ ವಸ್ತುವಿನ ಬಗ್ಗೆ ಬಾಯಿ ಬಿಡಿಸಬಾರದು, ಎಂಬ ಕುಯುಕ್ತಿಯೊಂದಿಗೆ ಪ್ರಕರಣದ ದಿಕ್ಕು ತಪ್ಪಿಸಲು ಸುರಪುರ ಪೊಲೀಸ ಸ್ಟೇಷನ್‌ನ ಕೆಲವು ಪೊಲೀಸರೊಂದಿಗೆ ಜೊತೆಗೂಡಿ ದೇವಪುರ ಗ್ರಾಮದ ಹಲವಾರು ಅಮಾಯಕರನ್ನು ಬಂಧಿಸಿ ಪೊಲೀಸ ಸ್ಟೇಷನ್‌ಗೆ ಎತ್ತಾಕಿಕೊಂಡು ಹೋಗಿ ಬೆದರಿಸಿ, ಹೊಡೆದು ಬಡಿದು ಅಮಾಯಕರಿಂದ ದುಡ್ಡು ವಸೂಲಿ ಮಾಡಲು ಕೆಲ ಪೊಲೀಸರೊಂದಿಗೆ ಕೈಜೋಡಿಸಿದ್ದಾರೆ.
“ ಸರಕಾರ ನಮ್ಮದೇ ಇದೇ, ಪ್ರೀಯಾಂಕ ಖರ್ಗೇಯವರು ನಮ್ಮವರಿದ್ದಾರೆ, ಸಚಿವರು ಶರಣಬಸಪ್ಪ ದರ್ಶನಾಪುರ, ಸಚಿವರು ಶರಣಪ್ರಕಾಶ ಪಾಟೀಲರು ನಮ್ಮವರಿದ್ದಾರೆ. ಪೊಲೀಸರೇ ನೀವು ನಮ್ಮ ಮಾತು ಕೇಳದಿದ್ದರೇ ನಿಮ್ಮನ್ನು ಬೇರೆಡೆ ವರ್ಗಾಯಿಸುತ್ತೆವೆ ಹುಷಾರ್. ನಮ್ಮ ಒಂದೇ ಒಂದು ಫೋನ ಕಾಲ್‌ಗೆ ಸಚಿವರು ಹ್ಯಾಗೆ ಪ್ರತಿಕ್ರಿಯಿಸುತ್ತಾರೆ ತೋರಿಸುತ್ತೇನೆ ಬನ್ನಿ ” ಎನ್ನುತ್ತಾ ಸುರಪುರ ಶಾಸಕರ ಪಿ.ಎ. ಪೊಲೀಸ ಅಧಿಕಾರಿಗಳಿಗೆ, ಪೊಲೀಸರಿಗೆ ರೋಪ ಹಾಕುತ್ತಿರುವುದು ವಿಚಿತ್ರ ಆದರೂ ಸತ್ಯೆ.
ಸುರಪುರ ಶಾಸಕರ ಕಾರ್ಯಾಲಯದಿಂದ ಶಾಸಕರ ಪಿ.ಎ.ಗಳಿಂದ ಅಧಿಕಾರ ದುರುಪಯೋಗವಾಗುತ್ತಿದೆ.
ದೇವಪುರದ ಈ ಪುಢಾರಿ ಗೌಡನ ಮಾತು ಕೇಳಿಕೊಂಡು ಸುರಪುರ ಶಾಸಕರ ಪಿ.ಎ. ಕಳ್ಳರ ಬೆನ್ನಿಗೆ ನಿಂತಿದ್ದಾರೆ. ಶಾಸಕರ ಪಿ.ಎ. ಸುರಪುರ ಪೊಲೀಸ ಸ್ಟೇಷನ್‌ಗೆ ಫೋನ ಮಾಡಿ, ಚಿನ್ನ ಕದ್ದ ಕಳ್ಳ ಮತ್ತು ಆತನ ಮಗನನ್ನು ಬಚಾವ ಮಾಡಲು ಸಹಕರಿಸುತ್ತಿರುವುದು ಇದು ಅನ್ಯಾಯದ ಪರಮಾವಧಿಯಾಗಿದೆ.
ಸುರಪುರ ಪೊಲೀಸ ಸ್ಟೇಷನ್‌ನ ಪೊಲೀಸರಾದ ಮಲ್ಲಯ್ಯ ಪಿ.ಸಿ. ಮತ್ತು ಲಕ್ಕಪ್ಪ ಪಿ.ಸಿ. ಆನಂದ ಪಿ.ಐ ಇವರು ಕಳ್ಳನನ್ನು ತಮ್ಮೊಂದಿಗೆ ಪೊಲೀಸ ಸ್ಟೇಷನ್‌ನಲ್ಲಿಯೇ ಇಟ್ಟುಕೊಂಡು ಅಮಾಯಕರನ್ನು ಬಂಧಿಸುತ್ತಿದ್ದಾರೆ ಎಂಬ ವಿಷಯವನ್ನು ನಾನು ಡಿ.ಜಿ.ಪಿ.ಯಾದಿಯಾಗಿ ಎಲ್ಲಾ ಪೊಲೀಸ ಅಧಿಕಾರಿಗಳಿಗೆ ಬರೆದುಕೊಂಡಿದ್ದೆನೆ. ಅದರಂತೆ ಸುರಪುರ ಪೊಲೀಸ ಸ್ಟೇಷನ್‌ನ ಕ್ರೆöಮ ಬ್ರಾಂಚಿನ ಪೊಲಿಸರು ಚಿನ್ನ ಕದ್ದ ಅಸಲಿ ಕಳ್ಳನನ್ನು ಹಿಡಿದುಕೊಂಡು ಸುರಪುರ ಪೊಲೀಸ ಸ್ಟೇಷನ್‌ಗೆ ತಂದಿದ್ದಾರೆ. ಆಗ ಇದೇ ದೇವಪುರ ಗ್ರಾಮದ ಪುಢಾರಿ ಗೌಡ ಶಾಸಕರ ಕಾರ್ಯಾಲಯದಿಂದ ಫೋನ ಮಾಡಿಸಿ 5೦ ಗ್ರಾಂ.( 5 ತೊಲಾ ) ಚಿನ್ನ ವಾಪಿಸ್ಸು ಕೊಡಿಸುತ್ತೇನೆ ಇದು ನನ್ನ ಜವಾಬ್ದಾರಿ ಎಂದು ಪೊಲೀಸರೊಂದಿಗೆ ಮಾತಾಡಿಕೊಂಡು ಒಪ್ಪಿಸಿ ಕಳ್ಳ ವ್ಯಕ್ತಿಯನ್ನು ಸ್ಟೇಷನ್‌ನಿಂದ ಬಿಡಿಸಿಕೊಂಡು ಹೋಗಿದ್ದಾನೆ. 2 ದಿನದ ನಂತರ ಆ ವ್ಯಕ್ತಿ ಚಿನ್ನ ಕೊಡುವುದಿಲ್ಲವಂತೆ ಎಂದು ಪುಢಾರಿ ಗೌಡ ಪೊಲೀಸರೆದುರು ಕೈ ಎತ್ತಿದ್ದಾನೆ. ಈಗ ಸುರಪುರ ಸ್ಟೇಷನ್‌ನ ಕ್ರೈಂ ಬ್ರಾö್ಯಂಚ್ ಪೊಲೀಸರು ಇಂಗು ತಿಂದ ಮಂಗನ0ತಾಗಿದ್ದಾರೆ.

ಈ ಗೌಡನಿಂದಾಗಿ ದೇವಪುರದ ಗ್ರಾಮದಲ್ಲಿ ಯಾರಿಗೂ ನೆಮ್ಮದಿಯಿಲ್ಲದಂತಾಗಿದೆ, ಹಲವಾರು ಕಾಂಗೈ ಕಾರ್ಯಕರ್ತರೇ ಈ ಪುಡಾರಿಗೌಡನನ್ನು ಧ್ವೇಷಿಸುತ್ತಿದ್ದಾರೆ. ಸುರಪುರ ಶಾಸಕರ ಪಿ.ಎ.ನನ್ನು ಹಿಡಿದುಕೊಂಡು ಒಳಗಿಂದೊಳಗೆ ಸರಕಾರದಿಂದ ಬರುವ ಸೌಲಭ್ಯಗಳನ್ನು ತಾನೇ ಕಬಳಿದುಕೊಂಡು ತಿನ್ನುತ್ತಾನಂತೆ. ಸುರಪುರ ಶಾಸಕರ ಪಿ.ಎ. ಮತ್ತು ಈ ಗೌಡ ಪಾರ್ಟನರ್ ಮೇಲೆ ಸರ್ಕಾರದ ಕಾಮಗಾರಿಗಳು, ಸೌಲಭ್ಯಗಳನ್ನು ಬಾಚಿಕೊಳ್ಳುತ್ತಿದ್ದಾರೆ. ದೇವಪುರ ಗ್ರಾಮದ ಈ ಪುಢಾರಿ ಗೌಡ  ತನ್ನೊಂದಿಗಿರುವ ಕಾಂಗೈ ಮುಖಂಡರಿಗೇನೇ ಮೋಸ ಮಾಡುತ್ತಿದ್ದಾನೆ. ಅದಲ್ಲದೇ ಶಾಸಕರ ಪಿ.ಎ. ಯಿಂದ  ಸುರಪುರ ಪೊಲೀಸ ಸ್ಟೇಷನ್ನಿಗೆ ಫೋನ ಮಾಡಿಸಿ ದಲಾಲಿ ಮಾಡುತ್ತಾನೆ. ತಾನೇ ಮಧ್ಯದಲ್ಲಿ ನಿಂತು ಲಂಚದ ವ್ಯೆವಹಾರ ಕುದುರಿಸಿ ಅದರಲ್ಲಿ ಸಖತ್ ಕಮೀಷನ್ ಹೊಡೆಯುತ್ತಾನೆ. 

ದೇವಪುರ ಗ್ರಾಮದ ಕಾಡಾ ಕ್ಯಾಂಪಿನ ಪ್ರದೇಶದಲ್ಲಿ ಬೀದರ್ – ಬೆಂಗಳೂರು ರಸ್ತೆಯನ್ನು ಅಡ್ಡಡ್ಡಲಾಗಿ ಅಗೆದು ಪೈಪಲೈನ ಮಾಡಿಕೊಂಡಿದ್ದಾನೆ ಆ ರಸ್ತೆ ಸರಿಯಾಗಿ ಮುಚ್ಚದೇ ಇರುವುದರಿಂದ ದಿನಬೆಳಗಾದರೇ ಅ ಪ್ರದೇಶದಲ್ಲಿ ಆಕ್ಷಿಡೆಂಟ ಆಗುತ್ತಿವೆ. ಅಗೆದಿರುವ ರಸ್ತೆ ಮುಚ್ಚು ಕನಿಷ್ಟ ಜ್ಞಾನವಾಗಲೀ, ಮಾನವೀಯತೆಯಾಗಲೀ ಇಲ್ಲ ಪುಢಾರಿ ಗೌಡನಿಗೆ.
ಕಳೆದ 2024 ರಲ್ಲಿ ದೇವಪುರ ಗ್ರಾಮದಲ್ಲಿ 13 ಮೊಟರ್‌ಬೈಕಗಳು, 1 ಬೊಲೇರೋ ವಾಹನ ಕಳುವಾಗಿದೆ. ಇದಕ್ಕೆ ಈ ಗೌಡನ ಕೈಚಳಕ ಎಷ್ಟರ ಮಟ್ಟಿಗೆ ಇದೆ ಎಂಬುದನ್ನು ಪ್ರಮಾಣಿಕವಾಗಿ ತನಿಖೆ ಮಾಡಿದರೇ ಎಲ್ಲವೂ ತಿಳಿದು ಬರುತ್ತದೆ.
ಕಳುವಾಗಿರುವ ವಾಹನಗಳ ಮಾಲೀಕರು ಪೊಲೀಸರೊಂದಿಗೆ ಮಾತಾಡಲು ಈ ಪುಡಾರಿಗೌಡನನ್ನೇ ಪೊಲೀಸ ಸ್ಟೇಷನ್‌ಗೆ ಕರೆದುಕೊಂಡು ಹೋಗಿದ್ದಾರೆ. ಕಳುವಾದ ವಾಹನ ಪತ್ತೆಗಾಗಿ ಈ ಪುಢಾರಿಗೌಡನು ವಾಹನ ಮಾಲೀಕರಿಂದಲೇ ತನಗೆ ಬೇಕಿದ್ದ ಪೊಲೀಸರಿಗೆ ಲಂಚ ಕೊಡಿಸಿದ್ದಾನೆ. ಕೆಲ ದಿನಗಳಾದ ನಂತರ ವಾಹನ ಸಿಕ್ಕುತ್ತಿಲ್ಲ ನಾವೇನು ಮಾಡೋಣ? ಎಂದು ಪೊಲೀಸರು ವಾಹನ ಮಾಲಿಕರಿಗೆ ಬೆದರಿಸಿ ಕಳುಹಿಸಿದ್ದಾರೆ. ಸರಿಯಾಗಿ ತನಿಖೆ ಮಾಡಿದರೇ ವಾಹನ ಕಳುವಿನ ಹಿಂದೆ ಈ ಪುಢಾರಿಗೌಡನ ಕೈಚಳಕ ಹೊರಬರುತ್ತದೆ.
ದೇವಪುರ ಗ್ರಾಮದಲ್ಲಿ ಆಗುತ್ತಿರುವ ಅದೆಷ್ಟೋ ಕಳುವು ಮುಚ್ಚಿಹೋಗುತ್ತಿರುವುದು ಈ ಪುಢಾರಿಗೌಡನಿಂದಲೇ ಎಂಬುದು ಮುಂದಿನ ದಿನಗಳಲ್ಲಿ ಸಾಬೀತಾಗುತ್ತದೆ ಯಾವುದೇ ಕಾರಣಕ್ಕೂ ಶತಾಯ ಗತಾಯ ಹೊರಗಡೆ ಬಂದೇ ಬರುತ್ತದೆ ಮತ್ತು ಎಲ್ಲಾ ಕಡೆಗೂ ಪ್ರಚಾರವಾಗುತ್ತದೆ.
ಮಾನ್ಯ ಅಧ್ಯಕ್ಷರೇ, ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ದೇವಪುರ ಗ್ರಾಮದಲ್ಲಿ ನನ್ನ ಸಹೋದರನ ಮನೆ ಕಳುವು ಆಗಿ ಸುಮಾರು 8 ತಿಂಗಳಾಗಿದೆ. ಸುರಪುರ ಪೊಲೀಸ ಸ್ಟೇಷನನಲ್ಲಿ ಎಫ್.ಐ.ಆರ್. ಆಗಿದೆ ಆದರೇ ಪುಢಾರಿಗೌಡ ಎಂಬ ವ್ಯಕ್ತಿ ಕಳ್ಳರ ಬೆನ್ನಿಗೆ ನಿಂತಿದ್ದಾನೆ ಸುರಪುರ ಠಾಣೆಯ ಈ ಕೇಸ ನೋಡಿಕೊಳ್ಳುತ್ತಿರುವ ಪೊಲೀಸರು ಮತ್ತು ಪಿ.ಐ. ಆನಂದ ಅವರು ಈ ಕಳುವಿನ ಪ್ರಕರಣದಲ್ಲಿ ಕಳ್ಳರನ್ನು ಬೆನ್ನಿಗೆ ಹಾಕಿಕೊಂಡು ದೇವಪುರದ ವಾರ್ಡ ಸಂಖ್ಯೆ-3 ರಲ್ಲಿರುವ ಹಲವಾರು ಅಮಾಯಕ ಜನರನ್ನು ಬಂಧಿಸಿ ಸ್ಟೇಷನ್‌ಗೆ ಕರೆದುಕೊಂಡು ಹೋಗುತ್ತಿದ್ದಾರೆ. ವಿನಾಕಾರಣ ಹೊಡೆದು, ಬಡಿದು, ಹೆದರಿಸಿ, ಬೆದರಿಸಿ ರೋಪ ಹಾಕಿ, ಕಳ್ಳತನ ಒಪ್ಪಿಕೋ ಇಲ್ಲವೇ 50 ಸಾವಿರ ಕೊಡು, ಒಂದು ಲಕ್ಷ ಕೊಡಿರಿ ನಿಮ್ಮನ್ನು ಬಿಟ್ಟು ಬಿಡುತ್ತೇವೆ ಇಲ್ಲದಿದ್ದರೇ ಈ ಕಳುವಿನ ಕೇಸನಲ್ಲಿ ನಿನ್ನನ್ನು ಫಿಟ್ ಮಾಡುತ್ತೇವೆ ಎಂದು ಹೆದರಿಸಿ ದುಡ್ಡು ವಸೂಲಿ ಮಾಡುತ್ತಿದ್ದಾರೆ.
ಸಂಶಯಾಸ್ಪದದ ಮೇಲೆ ಪೊಲೀಸರು ಅಮಾಯಕರನ್ನು ಎತ್ತಾಕಿಕೊಂಡು ಹೋದಾಗ ಅಮಾಯಕರ ಸಂಬ0ಧಿಕರು ಈ ಗೌಡನನ್ನು ಜೊತೆಗೆ ಕರೆದುಕೊಂಡು ಸುರಪುರ ಪೊಲಿಸ ಸ್ಟೇಷನ್‌ಗೆ ಕರೆದುಕೊಂಡು ಹೋಗುತ್ತಾರೆ. ಆಗ ಪುಢಾರಿಗೌಡ ಶಾಸಕರ ಕಾರ್ಯಾಲಯದ ಪಿ.ಎ.ಯಿಂದ ಪೊಲೀಸ ಸ್ಟೇಷನ್‌ಗೆ ಫೋನ ಹಾಕಿಸಿ ಅವರನ್ನು ಬಿಟ್ಟು ಬಿಡಲು ಹೇಳಿಸುತ್ತಾರೆ. ಆಗ ಪುಢಾರಿಗೌಡ ಅಮಾಯಕರ ಸಂಬ0ಧಿಗಳಿ0ದ ದುಡ್ಡು ವಸೂಲಿ ಮಾಡಿ ಪೊಲೀಸರಿಗೆ ಕೊಡುತ್ತಾನೆ. ದೇವಪುರದಲ್ಲಿ ಚಿನ್ನ ಕಳುವಾಗಿರುವ ಸುಗಂಧಿ ಮನೆಯವರೇ ನಿಮ್ಮ ಹೆಸರು ಪೊಲೀಸರಿಗೆ ಹೇಳಿದ್ದಾರೆ, ನಿಮ್ಮ ಓಣಿಯ ಸುಮಾರು 50 ಜನರ ಹೆಸರು ಸುಗಂಧಿ ಮನೆಯವರೇ ಬರೆಯಿಸಿದ್ದಾರೆ ಮುಂದಿನ ದಿನಗಳಲ್ಲಿ ನಿಮ್ಮ ವಾರ್ಡನ ಪ್ರತಿ ಮನೆಯಿಂದ ಒಬ್ಬರ ನಂತರ ಒಬ್ಬರಂತೆ ಪೊಲೀಸರು ಹಿಡಿದುಕೊಂಡು ಬಂದು ಬೆಂಡೆತ್ತುತ್ತಾರೆ ಎಂದು ಅಮಾಯಕರಿಗೆ ಕಿವಿಯೂದಿ ಸುಗಂಧಿ ಸಹೋದರರಿಗೂ ಮತ್ತು ಅದೇ ವಾರ್ಡನ ಮುಗ್ದ ಜನರ ನಡುವೆ ಬೆಂಕಿ ಹಚ್ಚುವ, ಕಡ್ಡಿ ಆಡಿಸುವ ಕೆಲಸ ಮಾಡುತ್ತಿದ್ದಾನೆ.
ಕಳೆದ ತಿಂಗಳು ದಿನಾಂಕ. 29/03/2025 ರಂದು ಮೊಹರಂ-ಯುಗಾದಿಯ ವೇಳೆಯಲ್ಲಿ ಅಂಬಿಗರ ಓಣಿಯಲ್ಲಿಯ ಶಂಕರಪ್ಪ ಯಜಮಾನನ ಮಗ ಹಣಮಂತ ಮತ್ತು ಮೊಮ್ಮಗನಾದ ಮಹೇಶ ಎಂಬ ಅಮಾಯಕರನ್ನು ಪೊಲೀಸರು ಎತ್ತಾಕಿಕೊಂಡು ಹೋದಾಗ ಪುಡಾರಿ ಗೌಡನೆ ಮುಂದೆ ನಿಂತು ಪೊಲೀಸ ಸ್ಟೇಷನನಲ್ಲಿ ಕೆಲ ಪೊಲೀಸರೊಂದಿಗೆ ದುಡ್ಡು ಮಾತಾಡಿ ತಲಾ 60 ಸಾವಿರ ಕೊಡಲು ಒತ್ತಾಯಿಸಿದ್ದಾನೆ. ಆಗ ಶಂಕರಪ್ಪ ಯಜಮಾನ ಮತ್ತು ಆತನ ದೊಡ್ಡ ಮಗ ಗೊವಿಂದ, ಅವರು ದುಡ್ಡು ಕೊಡಲು ಒಪ್ಪಿಲ್ಲ. ಮೊಹರಂ ಮತ್ತು ಯುಗಾದಿ ಹಬ್ಬವಿದೆ ಹಬ್ಬ ಕಳೆದ ನಂತರ ಬರುತ್ತೇವೆ ಎಂದು ಹೇಳಿ ಎಲ್ಲರನ್ನೂ ಈ pudhariಗೌಡನೇ ಕರೆದುಕೊಂಡು ವಾಪಿಸ್ಸು ದೇವಪುರಕ್ಕೆ ಬಂದಿದ್ದಾನೆ.
ನಂತರ ದಿನಾಂಕ.೦1/೦4/2025 ರಂದು ಪೊಲೀಸರು ಕಾಲ ಮಾಡಿದ್ದಾರೆ ಅರ್ಜಂಟ ಬರಬೇಕಂತೆ ಎಂದು ಹಣಮಂತ ಮತ್ತು ಮಹೇಶ ಅವರನ್ನು ಕರೆದುಕೊಂಡು ಬನ್ನಿರಿ ಎಂದು ಈ ಗೌಡ ಫೋನ ಮಾಡಿ ಸುರಪುರ ಪೊಲೀಸ ಸ್ಟೇಷನ್‌ಗೆ ಕರೆಯಿಸಿದ್ದಾನೆ ಆದರೇ ಹಣಮಂತ ಹೋಗಿಲ್ಲ ಮಹೇಶ ಒಬ್ಬನೇ ಹೋಗಿದ್ದಾನೆ ಮಹೇಶನ ವಿರುದ್ಧ (೧) ಕಂಪ್ಲೇ0ಟ ಇಲ್ಲ (೨) ಕಂಪ್ಲೇ0ಟ ಮಾಡಿದ ವ್ಯಕ್ತಿನೇ ಇಲ್ಲ (೩) ಎನ್.ಸಿ.ಆರ್. ಇಲ್ಲ (೪) ಎಫ್.ಐ.ಆರ್. ಇಲ್ಲ. (೫) ವಿಚಾರಣೆಗೆ ಹಾಜರಾಗಲು ಪೊಲೀಸ ಸ್ಟೇಷನ್‌ನಿಂದ ನೋಟೀಸ ಇಲ್ಲ ಯಾವ ಕಾರಣವೂ ಇಲ್ಲದೇ ಮಹೇಶನನ್ನು ಬಂಧಿಸಿ ಸುರಪುರ ಪೊಲೀಸ ಸ್ಟೇಷನ್ ಕಸ್ಟಡಿಯಲ್ಲಿ ಹಾಕಿದ್ದಾರೆ.
ಮರುದಿನ 1/೦3/2025 ರಂದು ಸಾಯಂಕಾಲ ೪ ಗಂಟೆಯವರೆಗೂ ಮಹೇಶ ಕಸ್ಟಡಿಯಲ್ಲಿಯೇ ಇದ್ದಾನೆ. ನಂತರ ಮಲ್ಲಯ್ಯಾ ಪಿ.ಸಿ. ಲಕ್ಕಪ್ಪ ಪಿ.ಸಿ. ಮತ್ತು ಪಿ.ಐ. ಆನಂದ ಇವರು ಲಂಚಕ್ಕಾಗಿ ಹಗ್ಗ-ಜಗ್ಗಾಟ ನಡೆಯಿಸಿದ್ದಾರೆ. ಗೊವಿಂದನು ಫೋನ ಮಾಡಿ ಮಾಮಾ ನನ್ನ ಅಕ್ಕನ ಮಗ ಮಹೇಶನನ್ನು ನಿನ್ನೆಯಿಂದಲೂ ಪೊಲೀಸ ಕಸ್ಟಡಿಯಲ್ಲಿ ಇಟ್ಟುಕೊಂಡಿದ್ದಾರೆ ಆಗಲೇ 26 ಗಂಟೆಯಾಗುತ್ತಿದೆ. ಈಗ ನನ್ನ ತಮ್ಮ ಹಣಮಂತನನ್ನೂ ಕೂಡ ಪೊಲೀಸ ಸ್ಟೇಷನ್‌ಗೆ ಕರೆದುಕೊಂಡು ಬನ್ನಿರಿ. ಹಣಮಂತ ಮತ್ತು ಮಹೇಶನನ್ನು ಬಂಧಿಸಿ ಯಾದಗಿರಿ ಜೈಲಿಗೆ ಕಳುಹಿಸುತ್ತೇವೆ ಎಂದು ಪಿ.ಐ. ಮತ್ತು 2 ಜನ ಪೊಲಸರು ಹೇಳುತ್ತಿದ್ದಾರೆ. ನಿಮ್ಮ ಮನೆಯ ಚಿನ್ನ ನನ್ನ ತಮ್ಮ ಹಣಮಂತ ಮತ್ತು ನನ್ನ ಅಕ್ಕನ ಮಗ ಮಹೇಶ ಕದ್ದಿಲ್ಲ ಮಾಮಾ ವಿನಾಕಾರಣ ಪೊಲೀಸರು ತಲಾ ೬೦ ಸಾವಿರ ಕೊಡಿ ಇಲ್ಲದಿದ್ದರೇ ಅವರನ್ನು ಯಾದಗಿರಿ ಜೈಲಿಗೆ ಕಳುಹಿಸುತ್ತೇವೆ ಎನ್ನುತ್ತಿದ್ದಾರೆ ಎಂದು ಬೆಂಗಳೂರಿನಲ್ಲಿರುವ ನನಗೆ ಫೋನ ಮಾಡಿ ಅಲವತ್ತುಕೊಂಡನು. ಆಗ ನಾನು ಯಾದಗಿರಿ ಜಿಲ್ಲೆಯ ಎಸ್.ಪಿ.ಯವರಿಗೆ ಫೋನ ಮಾಡಿ ಅಮಾಯಕರಿಂದ ತಲಾ ರೂ.೬೦,೦೦೦ ಲಂಚ ಕೇಳುತ್ತಿದ್ದಾರೆ ಸರ್, ಆ ೨ ಹುಡುಗರು ನಮ್ಮ ಮನೆಯ ಪಕ್ಕದಲ್ಲಿಯೇ ಇದ್ದಾರೆ ಕಳುವು ಮಾಡುವಂಥಹ ಮನಸ್ಥಿತಿ ಅವರದ್ದಲ್ಲ ಅವರ ಕುಟುಂಬ ನಮ್ಮ ಕುಟುಂಬ ಅಕ್ಕ-ಮಾವ ಎಂಬ ಸಂಬಂಧದೊಂದಿಗೆ ತಲೆ ತಲಾಂತರದಿ0ದ ನಡೆದುಕೊಂಡು ಬಂದಿದ್ದೆವೆ. ಆದರೇ ಸುರಪುರ ಪೊಲೀಸ ಸ್ಟೇಷನ್‌ನ ಪಿ.ಐ. ಆನಂದ, ಪಿ.ಸಿ.ಮಲ್ಲಯ್ಯ ಮತ್ತು ಪಿ.ಸಿ ಲಕ್ಕಪ್ಪ ಅವರು ಅನ್ಯಾಯವಾಗಿ ಹುಡುಗನನ್ನು ಬಂಧಿಸಿದ್ದಾರೆ ಆಗಲೇ 26 ಗಂಟೆಯಾಗಿದೆ ಮಹೇಶ ಎಂಬ ಹುಡುಗ ಕಸ್ಟಡಿಯಲ್ಲಿದ್ದಾನೆ. ೨ನೇ ಹುಡುಗ ಹಣಮಂತನನ್ನೂ ಕೂಡ ಹುಡುಕಿ ಕರೆ ತನ್ನಿರಿ ಎಂದು ಹೇಳುತ್ತಿದ್ದಾರೆ ಎಂದು ಫೋನ ಮುಖಾಂತರ ಎಸ್.ಪಿ.ಯವರಿಗೆ ಮನವಿ ಮಾಡಿಕೊಂಡೆನು ಆಗ ಎಸ್.ಪಿ.ಯವರು ನಾನು ಚೆಕ್ ಮಾಡ್ತೇನೆ ಎಂದು ಹೇಳಿದರು. ಎಸ್. ಪಿ. ಯವರು ಅಂದOತೆ ಒಂದು ಗಂಟೆಯ ಒಳಗಾಗಿ ಮಹೇಶನನ್ನು ಬಿಟ್ಟು ಕಳುಹಿಸಿದ್ದಾರೆ ಹಣಮಂತನನ್ನು ಬಂಧಿಸಲು ಬರಲೇ ಇಲ್ಲ.
ಸುರಪುರ ಶಾಸಕರ ಕಾರ್ಯಾಲಯದ ಪಿ.ಎ.ನಿಂದ ನನಗೆ ಆಗುತ್ತಿರುವ ತೊಂದರೆಯಿ0ದಾಗಿ ರೋಷಿ ಹೋಗಿದ್ದೆನೆ. ಈ ವಿಷಯ ತಮ್ಮ ಗಮನಕ್ಕೆ ತರುತ್ತಿದ್ದೆನೆ ದಯವಿಟ್ಟು ಕ್ರಮ ತೆಗೆದುಕೊಳ್ಳಬೇಕಾಗಿ ವಿನಂತಿ.

ಮು0ದಿನ ದಿನಗಳಲ್ಲಿ ಬೆಂಗಳೂರು ಮಹಾನಗರದ ಪ್ರದೇಶ ಕಾಂಗೈ ಕಾರ್ಯಾಲಯದ ಎದುರು ಉಪವಾಸ ಸತ್ಯಾಗ್ರ ಮಾಡುತ್ತೆನೆ.

ಗೌರವಾದರಗಳೊಂದಿಗೆ.
                            ತಮ್ಮ ವಿಶ್ವಾಸಿ,
                    ಎಮ್.ಎ.ಸುಗಂಧಿ,ವಕೀಲರು, ಪತ್ರಕರ್ತರು,
                    ಬೆಂಗಳೂರು – 560010 ಮೋ.9731113141.

Related Articles

Leave a Reply

Your email address will not be published. Required fields are marked *

Back to top button