ತುರ್ವಿಹಾಳ:-ಪಟ್ಟಣದಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳು

ತುರ್ವಿಹಾಳ:-ಪಟ್ಟಣದಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳು
ಅನಧಿಕೃತ ಅಂಗಡಿಗಳ ತೆರವಿಗೆ ಶಾಸಕ ತುರ್ವಿಹಾಳ ಸೂಚನೆ

ತುರ್ವಿಹಾಳ:-ಪಟ್ಟಣದ ಸಿಂಧನೂರು -ಹೆಮ್ಮಡಗ ರಸ್ತೆ ಬದಿಯಲ್ಲಿ ಅನಧಿಕೃತವಾಗಿ ಇಟ್ಟುಕೊಂಡು ಅಂಗಡಿಗಳು ಮತ್ತು ರಸ್ತೆಯಲ್ಲಿ ಅಡ್ಡಾದಿಡ್ಡಿ ವಾಹನ ಪಾರ್ಕಿಂಗ್ ನಿಂದ ತೆರವುಗೊಳಿಸಲು ಶಾಸಕರು ಆರ್ ಬಸನಗೌಡ ತುರವಿಹಾಳ ರವರು ಪೋಲಿಸ್ ಇಲಾಖೆ ಮತ್ತು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಗಳಿಗೆ ಸೂಚಿಸಿದರು.
ಸಿಂಧನೂರು -ಹೆಮ್ಮಡಗ ಸಿಂಧನೂರು ರಸ್ತೆಯ ನಯರ್ ಪೆಟ್ರೋಲ್ ಬಂಕ್ ನಿಂದ ಕುಷ್ಟಗಿ ರಸ್ತೆಯ
ಸರಕಾರಿ ಪ್ರೌಢಶಾಲೆಯವರೆಗೆ ಅನಧಿಕೃತ ಅಂಗಡಿಗಳು ಮತ್ತು ರಸ್ತೆಯಲ್ಲಿ ಅಡ್ಡಾದಿಡ್ಡಿ ವಾಹನ ಪಾಕಿರ್ಂಗ್ ನಿಂದ ದಿನೇ ದಿನೇ ಅಪಘಾತಗಳು ಹೆಚ್ಚಾಗುತ್ತಿದ್ದು
ವಾಹನ ಅಪಘಾತ ಆದಾಗ ಮಾತ್ರ ಜನರು ಬೈದುಕೊಂಡು ಸುಮ್ಮನಾಗುತ್ತಿದ್ದರು ಆದ್ದರಿಂದ ಶಾಸಕರು ಸೋಮವಾರ ಬೆಳಗ್ಗೆ ಸ್ವತಃ ತಾವೇ ಪ್ರತಿ ಅಂಗಡಿಗಳಿಗೆ ತೆರಳಿ ತೆರವುಗೊಳಿಸಲು ಸೂಚಿಸಿದರು.ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆಯವರು ಹಾಗೂ ಪಟ್ಟಣ್ಣ ಪಂಚಾಯತ್ ಮುಖ್ಯಧಿಕಾರಿ ಸಾಬಣ್ಣ ಕಟ್ಟೆಕಾರ್ ಹಾಗು ಸಿಬಂದಿ ಇದ್ದರು




