ಬಾಗಲಕೋಟ ಐಡಿ ಯುಕೆಪಿಯ ಎಸ್.ಎಲ್.ಓ. ಕಾರ್ಯಾಲಯದಲ್ಲಿ ಭ್ರಹ್ಮಾಂಡ ಭ್ರಷ್ಟಾಚಾರ.ನಕಲಿ ದಾಖಲೆ ಸೃಷ್ಟಿಸಿ ಒಂದೇ ಸರ್ವೇ. ನಂಬರಗೆ 5 ಸಲ ಹಣ ಮಂಜೂರಿ?

ನಕಲಿ ದಾಖಲೆ ಸೃಷ್ಟಿಸಿ ಒಂದೇ ಸರ್ವೇ. ನಂಬರಗೆ 5 ಸಲ ಹಣ ಮಂಜೂರಿ?

ಬಾಗಲಕೋಟ ಐಡಿ ಯುಕೆಪಿಯ ಎಸ್.ಎಲ್.ಓ. ಕಾರ್ಯಾಲಯದಲ್ಲಿ ಭ್ರಹ್ಮಾಂಡ ಭ್ರಷ್ಟಾಚಾರ?
ನಕಲಿ ದಾಖಲೆ ಸೃಷ್ಟಿಸಿ ಒಂದೇ ಸರ್ವೇ. ನಂಬರಗೆ 5 ಸಲ ಹಣ ಮಂಜೂರಿ?
ನಕಲಿ ದಾಖಲೆ ಸೃಷ್ಟಿಸಿ ಸಾವಿರ ಸಾವಿರ ಕೋಟಿ ಹಗಲು ದರೋಡೆ?
ಬಾಗಲಕೋಟ ಜಿಲ್ಲೆ. ಬಾಗಲಕೋಟ ನಗರದ ನವನಗರದಲ್ಲಿರುವ ಕೃಷ್ಣಾ ಮೇಲ್ದಂಡೆ ಯೋಜನೆ ನೀರಾವರಿ ಇಲಾಖೆಯ ಎಸ್.ಎಲ್.ಓ. ಡಿವಿಜನ, ಸಬ್-ಡಿವಿಜನ ಕಾರ್ಯಾಲಯಗಳ ಅಧಿಕಾರಿಗಳು, ಸಿಬ್ಬಂಧಿ, ಮಧ್ಯವರ್ಥಿಗಳು, ಸುಮಾರು 4೦ ವರ್ಷಗಳಿಂದ ಮುಳುಗಡೆಯಾಗಿರುವ ಹಲವಾರು ಜಮೀನು ಸರ್ವೆ ನಂಬರಗಳ ನಕಲಿ ದಾಖಲೆ ಸೃಷ್ಟಿಸಿ 1,2, 3, 4 ಹೀಗೆ ಲೆಕ್ಕವಿಲ್ಲದಷ್ಟು ಸಲ ಹಣ ದೋಚಿದ್ದಾರೆ. ಅಧಿಕಾರಿಗಳು, ಸಿಬ್ಬಂಧಿಗಳು, ಲೆಕ್ಕಾಧೀಕಾರಿಗಳು, ಮಧ್ಯೆವರ್ತಿಗಳು, ಒಂದು ಸರ್ವೆ ನಂಬರಿಗೆ ೫ ಸಲ ಹಣ ಮಂಜೂರಿ ಮಾಡಿಕೊಂಡಿರುವ ಉದಾರಣೆಗಳು ಉಂಟು.
ಅಂದಿನ ಜನಪ್ರೀಯ ಮಾಜಿ ಪ್ರಧಾನ ಮಂತ್ರಿಗಳಾದ ಶ್ರೀ ಲಾಲಬಹದ್ದೂರು ಶಾಸ್ತ್ರೀಜೀ ಕರ್ನಾಟಕ ರಾಜ್ಯದ ಉತ್ತರ ಕರ್ನಾಟಕ ಜನರ, ರೈತರ ಜೀವನಾಡಿಯಾಗಿರುವ ಕೃಷ್ಣಾ ನದಿಗೆ ಆಣೆಕಟ್ಟೆ ನಿರ್ಮಿಸಿ, ಅಲ್ಲಿನ ರೈತರ ಜೀವನದಲ್ಲಿ ಹಾಗೂ ಅವರ ಹೊಲಗಳಲ್ಲಿ ಹಚ್ಚಹಸಿರು ತುಂಬಲು ಕನಸುಕಂಡು ಕೃ. ಮೇ. ಯೋ. ಯೋಜನೆ ಹಮ್ಮಿಕೊಂಡು ಅದನ್ನು ಸಾಕಾರಗೊಳಿಸಿದ್ದರು.
ಉತ್ತರ ಕರ್ನಾಟಕದ ಜೀವ ನಾಡಿ ಕೃಷ್ಣಾನದಿಗೆ ವಿಜಯಪುರ ಜಿಲ್ಲೆಯ ( ಈಗಿನ ಬಾಗಲಕೋಟೆ ಜಿಲ್ಲೆ) ಲಾಲ ಬಹಾದ್ದೂರು ಶಾಸ್ತಿ ಡ್ಯಾಂ. (ಆಲಮಟ್ಟಿ ಡ್ಯಾಂ) ನಿರ್ಮಿಸಲು ಹಾಗೂ ಕಲಬುರ್ಗಿ ಜಿಲ್ಲೆಯ ( ಈಗಿನ ಯಾದಗಿರಿ ಜಿಲ್ಲೆ) ನಾರಾಯಣಪುರ ಸ್ಥಳದಲ್ಲಿ ಬಸವ ಆಣೆಕಟ್ಟು ನಿರ್ಮಿಸಲು ಶಂಕು ಸ್ಥಾಪನೆ ಮಾಡಿದರು. ನಂತರ 4 ದಶಕಗಳ ಹಿಂದೆ ಈ 2 ಡ್ಯಾಂ ನಿರ್ಮಿಸುವುದಾಗ ಆಣೆಕಟ್ಟಿನ ಹಿನ್ನಿರಿನಿಂದ ಮುಳುಗಡೆಯಾಗುತ್ತಿರುವ ಬಾಗಲಕೋಟೆ ನಗರ ಹಾಗೂ ಇನ್ನೂ ಹಲವಾರು ಗ್ರಾಮ, ಪಟ್ಟಣಗಳ ಸ್ಥಳಾಂತರ ಮಾಡಿಸುವುದು ಅನಿವಾರ್ಯ ವಾಗುತ್ತು.
ಡ್ಯಾಂನಲ್ಲಿ ನೀರು ಸಂಗ್ರಹಿಸಿ ಕಾಲುವೆ ಮೂಲಕ ರೈತನ ಹೊಲಕ್ಕೆ ಹರಿಸುವ ಕೆಲಸ ಪ್ರಾರಂಭವಾಯಿತು. ಈ ಕಾರ್ಯಕ್ಕಾಗಿ ಹಲವಾರು ಲಕ್ಷ ಕೋಟಿ ಖರ್ಚು ಮಾಡಿದ್ದಾರೆ.
ಆದರೆ ಡ್ಯಾಂನಲ್ಲಿ ನೀರು ಸಂಗ್ರಹಿಸುವ ಮತ್ತು ಕಾಲುವೆಗಳಿಗೆ ಹರಿಸಲು ಖರ್ಚು ಮಾಡಿದ ಹಣಕ್ಕಿಂತಲೂ ಅಧಿಕಾರಿಗಳು, ಗುತ್ತಿಗೆದಾರರು, ರಾಜಕಾರಣಿಗಳ ಜೇಬು ತುಂಬಿದ್ದೇ ಹೆಚ್ಚು. ಯು.ಕೆ.ಪಿಯ ನಿರಾವರಿ ಇಲಾಖೆಯಿಂದ 2 ಡ್ಯಾಂಗಳಲ್ಲಿ ಸಂಗ್ರಹವಾಗುತ್ತಿರುವ ನೀರಿಗಿಂತಲೂ ಅಧಿಕಾರಿ, ಗುತ್ತಿಗೆದಾರರು, ರಾಜಕಾರಣಿಗಳ ಮನೆಯಲ್ಲಿ ಹಣದ ಡ್ಯಾಂ ಸಂಗ್ರಹವಾಗಿರುವುದು ನಿಜ.
ಸನ್ಮಾನ್ಯಶ್ರೀ ಲಾಲ ಬಹಾದ್ದೂರ ಶಾಸ್ತಿಜೀಯವರು 2 ಡ್ಯಾಮ್ಗಳನ್ನು ನಿರ್ಮಿಸಲು ಯೋಜನೆ ತಯಾರಿಸಿ ಅದಕ್ಕೆ ತಗಲುವ ವೆಚ್ಚವನ್ನು ಅಂದಾಜಿಸಿ ಹಣ ಮಂಜೂರಿ ಕೊಟ್ಟಿದ್ದರು. ಆದರೇ ಈ 4 ದಶಕಗಳಲ್ಲಿ 20 ಡ್ಯಾಮ ನಿರ್ಮಾಣವಾಗುವಷ್ಟು ಹಣ ಖರ್ಚಾಗಿದೆ. ಅಧಿಕಾರಿಗಳ ದುಂದುವೆಚ್ಚಗಳು,ನಕಲಿ ದಾಖಲೆ ಸೃಷ್ಟಿ, ಹಲವಾರು ಅಪರಾ ತಪರಾಗಳು, ಹಾಗೂ ಒಂದೇ ಸರ್ವೇ ನಂಬರ್ ಜಮೀನಿಗೆ 4 ರಿಂದ 5,6 ಸಲ ಪೇಮೆಂಟ್ ಮಾಡಿರುವುದು ಹಣ ಲಪಟಾಯಿಸಿರುವುದು ಮೇಲ್ನೋಟಕ್ಕೆ ದಾಖಲೆಯೊಂದಿಗೆ ಹಲವಾರು ಪ್ರಕರಣಗಳು ಸಿಕ್ಕುತ್ತಿವೆ. ಕೆದಕಿದಂತೆಲ್ಲ ಹಲವು ಸಾವಿರ ಹಗರಣಗಳು ಹೊರಬರುತ್ತಿವೆ ಈ ತೆರನಾಗಿ ಹಣ ಲೂಟಿ ಮಾಡಿದ ಹಗರಣ ಮುಚ್ಚಿ ಹಾಕಿದ್ದಾರೆ.
ಈ ಇಲಾಖೆಯಲ್ಲಿ ನಡೆದ ಹಲವಾರು ಸಾವಿರ ಹಗರಣಗಳಲ್ಲಿ ಒಂದು ಸ್ಯಾಂಪಲಗಾಗಿ ತಾಜಾ ಉದಾಹರಣೆ ಇಲ್ಲಿದೆ ನೋಡಿ.
ಬಾಗಲಕೋಟೆ ಜಿಲ್ಲೆಯ ಬಾಗಲಕೋಟ ನವನಗರದಲ್ಲಿರುವ ಆಯುಕ್ತರು ಹಾಗೂ ಸರ್ಕಾರದ ಪದನಿಮಿತ್ಯಾ ಕಾರ್ಯದರ್ಶಿ ಕಾರ್ಯಾಲಯ, ನೀ.ಇ. ಕ್ರಮೇಯೋ ನವನಗರ ಬಾಗಲಕೋಟ, ಇದರಡಿಯಲ್ಲಿರುವ ಎಸ್.ಎಲ್.ಓ.ಪು. ನಿ.
ಮತ್ತು ಪು. ವ. ಕಾರ್ಯಾಲಯದಿಂದ ಒಂದೇ ಸರ್ವೆ ನಂಬರ ಜಮೀನಿಗೆ 5 ಬಾರಿ ಪೇಮೆಂಟ್ ಆಗಿದೆ.
(೧) ಸರ್ವೆ ನಂಬರ್ 172/2. ಜಮೀನಿನ ಒಡೆಯನ ಹೆಸರು ಹನುಮಪ್ಪ ಸತ್ಯಪ್ಪ ಬಿಳಿಗಿ ಇವರ ಒಟ್ಟು ಜಮೀನು 2.02 ಎ. ಗು. ದಿನಾಂಕ 28/08/1989 ರಲ್ಲಿ ಪರಿಹಾರದ ಹಣದ ಚೆಕ ನಂಬರ್.. 990959. ಪರಿಹಾರ ಹಣ ರೂ. 18,7,32.37 ಮಂಜುರಿಯಾಗಿದೆ.
2) ಅದೇ ಸರ್ವೆ ನಂಬರ್ ಗೆ ಮೈತನ ಹೆಸರಿನಲ್ಲಿ ಬೇರೆಯವರು ಪರಿಹಾರ ಧನ ವಿತರಣೆ ಮಾಡಿದ್ದು ಪರಿಹಾರ ಹಣ ರೂ. 18,7,32-37. Nಇರುತ್ತದೆ ಚೆಕ್ ನಂಬರ್ 313326. ದಿನಾಂಕ 32/03/2006.
3) ಮೇಲಿನ ಅದೇ ಸರ್ವೆ ನಂಬರ್ ಮೈತನ ಹೆಸರಿನಲ್ಲಿ ಶ್ರೀಮತಿ ಸಿದ್ದವ್ವ ಬಸ್ಸಪ್ಪ ಬೀಳಗಿ ಜೆಡ್ರಾಮ್ ಕುಂಟೆ ಚೆಕ್ ನಂಬರ್.. 745213. ಪರಿಹಾರ ಹಣ ರೂ. 1,43,496/- ದಿನಾಂಕ 31/03/2009. ಪರಿಹಾರದ ಹಣ ಪಡೆದ ನಕಲಿ ವ್ಯಕ್ತಿ ಲಕ್ಕಪ್ಪ ಬಸಪ್ಪ ಜಡ್ರಾಂಕುoಟಿ ಹಾಗೂ ಸಿದ್ದವ್ವ ಬಸಪ್ಪ ಜಡ್ರಾಮಕುಂಟಿ. ಈ ಹಗರಣದಲ್ಲಿ ಗ್ರಾಮ ಲೆಕ್ಕಾಧಿಕಾರಿ ಎಂದು ನಕಲಿಯಾಗಿ ಹೆಸರಿಸಿಕೊಂಡು ಹಣ ಮಂಜುರಿ ಮಾಡಿಸಿಕೊಂಡ ವ್ಯಕ್ತಿ ನಾಯಕ್.
4) ಮೇಲೆ ಕಾಣಿಸಿದ ಅದೇ ಸರ್ವೆ ನಂಬರಿಗೆ ನಾಲ್ಕನೇ ಬಾರಿ ಪರಿಹಾರದ ಹಣ ಪಡೆದಿದ್ದು ಚಕ್ ನಂಬರ್ 246740/- ದಿನಾಂಕ 31/03/ 1999. ರೂ. 4, 23,377-50
5) ಮೇಲೆ ಕಾಣಿಸಿದ ಅದೇ ಸರ್ವೆ ನಂಬರ್ ಜಮೀನಿಗೆ 5 ನೆಯ ಬಾರಿ ಪರಿಹಾರದ ಹಣ ಪಡೆದಿದ್ದು ದಿನಾಂಕ 19/12/2018. ಚೆಕ್ ನಂಬರ್… ಹಾಕಿರುವುದಿಲ್ಲ. ಅಕೌಂಟ್ ನಂಬರ್ ಎಸ್. ಬಿ. ಹೆಚ್. ಯಲಬರ್ಗಾ ಬ್ರಾಂಚ್ ಅಕೌಂಟ್ ನಂಬರ್. 62022266602. ಪರಿಹಾರದ ಹಣ ರೂ. 17,58,348.
ಆಯುಕ್ತರು ಮತ್ತು ಪದನಿಮಿತ್ತ ಸರ್ಕಾರದ ಕಾರ್ಯದರ್ಶಿಗಳು, ನೀ. ಇ. ಯುಕೆಪಿ. (ಕಂದಾಯ) ಹಾಗೂ ಮಹಾವ್ಯವಸ್ಥಾಪಕರು, ಭೂ.ಸ್ವಾ.ಇ. ನೀ. ಈ. ಕೃ.ಮೆ.ಯೋ. ಮತ್ತು ವಿಶೇಷ ಜಿಲ್ಲಾಧಿಕಾರಿಗಳು, ನೀ. ಇ.ಕೃ ಮೇ ಯೋ, ಮುಖ್ಯ ಲೆಕ್ಕಾಧಿಕಾರಿಗಳು ಭೂ.ಸ್ವಾ.ಅ. ನೀ. ಇ.ಕೃಮೆ.ಯೊ. ನವನಗರ ಬಾಗಲಕೋಟ ಕಾರ್ಯಾಲಯ ಮತ್ತು ಇವರ ನಿಯಂತ್ರಣದಲ್ಲಿರುವ ಎಸ್ ಎಲ್ ಓ ಕಾರ್ಯಾಲಯ ನೀ.ಇ. ಕೃ.ಮೆ.ಯೋ. ನವನಗರ ಬಾಗಲ್ಕೋಟ್, ಮಹಾ ವ್ಯವಸ್ಥಾಪಕರು ಎಲ್. ಎ. ಕ್ಯೂ. ಹಾಗೂ ಪುನರ್‌ವಸತಿ ಪುನರ್ ನಿರ್ಮಾಣ ಕಾರ್ಯಾಲಯ ಐ.ಡಿ.ಯು.ಕೆ.ಪಿ. ನವನಗರ ಬಾಗಲಕೋಟಿ ಮತ್ತು ವಿಶೇಷ ಜಿಲ್ಲಾಧಿಕಾರಿ ನವನಗರ ಬಾಗಲಕೋಟ. ಎಸ್ ಎಲ್ ಓ ಕಾರ್ಯಾಲಯದಿಂದ ನಕಲಿ ದಾಖಲೆ ಸೃಷ್ಟಿಸಿ ಸಿಬ್ಬಂಧಿಗಳು ಮಧ್ಯವರ್ತಿಗಳು ನಕಲಿ ವ್ಯಕ್ತಿಗಳಿಗೆ 5 ಬಾರಿ ಹಣ ಸಂದಾಯವಾಗಿದೆ.. ಸದರಿ ಕ್ರಮವಾಗಿ 5 ದಾಖಲೆಗಳು ಮೇಲಿನಂತಿವೆ.
ಈ ತೆರನಾದ ನಕಲಿ ದಾಖಲೆ ಹಾಗೂ ಬಿಲ್ಲುಗಳನ್ನು ಸೃಷ್ಟಿಸಿ ಹಣ ಪಾವತಿಸಿದ ಅಧಿಕಾರಿಗಳು, ಸಿಬ್ಬಂಧಿಗಳು ಯಾರೆಂದರೆ? ಎ.ಎಸ.ಎಲ್ ಓ ಕಾರ್ಯಾಲಯದಲ್ಲಿ ಕೆಲಸ ನಿರ್ವಹಿಸುತ್ತಿರುವ (1 )ರಾಮನ್‌ಗೌಡ ಹಂಪನಗೌಡರ. ಎಫ್ ಡಿ ಎ (2) ಭರಮಪ್ಪ ನರಸಪ್ಪ ಚಲವಾದಿ ಎಫ್ ಡಿ ಎ. ಮತ್ತು ಮಧ್ಯವರ್ತಿ ಮತ್ತು ನಕಲಿ ಗ್ರಾಮ ಲೇಖಾಧಿಕಾರಿ (3) ನಾಯಕ್.
ಇದೇ ತೆರನಾಗಿ 1981 ರಿಂದ 2024 ರ ವರೆಗೂ ಎಲ್ಲಾ ದಾಖಲೆಗಳು ಪರಿಶೀಲನೆ ಮಾಡಿದ್ದೇ ಆದರೇ, ಹಲವಾರು ಸಾವಿರ ಕೋಟಿ ಹಗರಣ ಹೊರಗೆ ಬರುತ್ತದೆ.
ಮೇಲಿನ ಸ್ವಷ್ಟವಾದ ದಾಖಲೆಗಳೊಂದಿಗೆ ಬರೆದುಕೊಂಡಿರುವ ಹಗರಣ ಪರಿಶೀಲನೆ ಆಗುವವರೆಗೂ ಎಫ್ ಆರ್ ಎಲ್ ಕೌಂಟರ್ ಮ್ಯಾಪ್ 24 ರಿಂದ 27 ರವರೆಗೂ ತಡೆಹಿಡಿಬೇಕು. ಎಲ್. ಎ. ಸಿ. ಪ್ರಕರಣ 28 ಎ. ಪ್ರಕಾರಣ ಹಾಗೂ ಲೋಕ ಆದಲತ್‌ನ ಯಾವುದೇ ಪ್ರಕರಣಗಳ ಪರಿಹಾರ ಧನ ಮಂಜೂರಿ ಮಾಡದೆ ತಡೆ ಹಿಡಿಯಬೇಕು ಈ ಹಗರಣಗಳ ತಪಾಸಣೆಯನ್ನು ಎಮ್.ಡಿ. ಕೆ.ಬಿ.ಜೆ.ಎನ್.ಎಲ್. ಅಧಿಕಾರಿಗಳಿಂದ ತಪಸಣೆ ಮಾಡದೇ ಕರ್ನಾಟಕ ಸರಕಾರದಿಂದ ವಿಶೇಷ ತಪಾಸಣಾ ತಂಡ ರಚಿಸಿ ಕುಲಂಕೂಶವಾಗಿ ಪರಿಶೀಲನೆ ಮಾಡಬೇಕಾಗಿ ಸಾರ್ವಜನಿಕ ಹಿತಾಸಕ್ತಿ ಕಾರಣದಿಂದ ನಾನು ಈ ಮೂಲಕ ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ.
ಈ ತೆರನಾಗಿ ಎಸ್ ಎಲ್ ಓ ಮತ್ತು ಮುಖ್ಯ ಲೆಕ್ಕಾಧಿಕಾರಿಗಳು ಐ.ಡಿ. ಯು.ಕೆ.ಪಿ. ನವನಗರ ಬಾಗಲಕೋಟ್ ಮತ್ತು ಕಾರ್ಯದರ್ಶಿಯವರ ಕಾರ್ಯಾಲಯಗಳಲ್ಲಿ ಕೋಟಿ ಕೋಟಿ ಹಗರಣಗಳ ದಾಸ್ತಾನು ಸಿಗುತ್ತವೆ
ಮುಂದಿನ ದಿನಗಳಲ್ಲಿ ಎಸ. ಎಲ್. ಓ. ನಿ. ಇ. ಯುಕೆಪಿ. ಕಾರ್ಯಾಲಯದಲ್ಲಿ ನಡೆದಿರುವ ಭ್ರಮ್ಹಾoಡ ಭ್ರಷ್ಟಾಚಾರ ಹಗರಣ ಗಳ ಕಂತು ಕಂತಿನಲ್ಲಿ ಸಂಬಂಧೀತ ಅಧಿಕಾರಿಗಳಿಗೆ,
ಸಾರ್ವಜನಿಕರಿಗೆ ತಿಳಿಸುತ್ತೇವೆ .
ಫಲಾನುಭವಿಗಳು, ಸಂತ್ರಸ್ತರು, ನೊಂದ ರೈತರುಗಳು, ಈ ಎಸ್.ಎಲ್.ಓ ಕಾರ್ಯಾಲಯದ ಅಧಿಕಾರಿಗಳು, ಸಿಬ್ಬಂಧಿಗಳು, ಮಧ್ಯವರ್ತಿಗಳಿಂದ ತೊಂದರೆಗೊಳಪಟ್ಟoಥಹವರು ತಮ್ಮ ದಾಖಲೆಗಳೊಂದಿಗೆ ಪತ್ರಿಕಾ ಕಾಯಾಲಯಕ್ಕೆ ಸಂಪರ್ಕಿಸಿದರೇ ಅನ್ಯಾಯದ ವಿರುದ್ದ ಆಹೋ ರಾತ್ರಿ ಹೋರಾಟ ಮಾಡಿ ನೊಂದವರಿಗೆ ನ್ಯಾಯ ದೊರಕಿಸಿಕೊಡಲು ಶ್ರಮಿಸುತ್ತೇವೆ.
ಸಂಪರ್ಕ ಸಂಖ್ಯೆ 9731113141. ಬೆಂಗಳೂರು. ಸಮೀತಿಯ ಕಾರ್ಯಾಲಯ ಮೋ.ನo. 98802 38094 ಜಿಲ್ಲಾ ನ್ಯಾಯಾಲಯ ಸಂಕೀರ್ಣದ ಹಿಂದುಗಡೆ. ನವನಗರ ಬಾಗಲಕೋಟ.



