ಸುದ್ಧಿ

ಬಡವರಿಗೆ ಬದುಕುವ ಹಕ್ಕು ಇಲ್ವಾ ಈ ರಾಜ್ಯದಲ್ಲಿ … ಮಾನವ ಹಕ್ಕುಗಳ ಸಂಘದದೇವರಾಜ್ …

ಬಡವರಿಗೆ ಬದುಕುವ ಹಕ್ಕು ಇಲ್ವಾ ಈ ರಾಜ್ಯದಲ್ಲಿ … ಮಾನವ ಹಕ್ಕುಗಳ ಸಂಘದದೇವರಾಜ್ …

                          ಬೆಂಗಳೂರು.ಬಡವರಿಗೆ ಬದುಕುವ ಹಕ್ಕು ಇಲ್ವಾ ಈ ರಾಜ್ಯದಲ್ಲಿ   ಮಾನವ ಹಕ್ಕುಗಳ ಸಂಘದ  ರಾಜ್ಯಾಧ್ಯಕ್ಷರಾದ  ಬಿ. ದೇವರಾಜ್  ಅವರು ಇಂದು ಬೆಂಗಳೂರು ಪ್ರೆಸ್ಸ್ ಕ್ಲಬ್ ನಲ್ಲಿ  ಸರ್ಕಾರವನ್ನು  ಪ್ರಶ್ನಿಸಿದರು .                           ಶಿವಶಂಕರ್  ಪತ್ರಿಕಾ ಗೋಷ್ಠಿ ಯಲ್ಲಿ ಮಾತನಾಡುತ್ತಾ  ರೋಗಿಗಳ ತಪಾಸಣೆ ವೇಳೆ ಮೈಸೂರಿನ ಜಯದೇವ ಆಸ್ಪತ್ರೆಯಲ್ಲಿ ದುರ್ನಡತೆ ಹಾಗೂ ಗೂಂಡಾಗಿರಿ. ತೋರಿದ ವೈದ್ಯ ಡಾ. ದಿನೇಶ್ ಮತ್ತು ಅವರ ಸಿಬ್ಬಂದಿಗಳಿಗೆ ಅಮಾನತ್ತು ಮಾಡುವ ಕುರಿತು ಮುಖ್ಯಮಂತ್ರಿಗಳಿಗೆ,  ಅವರ ನೋವು ಗೊತ್ತಾಗಬೇಕೆಂದು , ಯಾರಿಗೂ ಬಡವರಿಗೆ ಈ ರೀತಿ ಆಗಬಾರದೆಂದು ಅವರ ಅಳಲನ್ನು ತೋಡಿಕೊಂಡರು

ಎಸ್.ಶಿವಶಂಕರ್ ದಿನಕೂಲಿ ಕಾರ್ಮಿಕ ನನ್ನ ಮಗ ಮೈಸೂರಿನ ಜಿ.ಟಿ.ಡಿ.ಸಿ ವ್ಯಾಸಂಗ ಮುಗಿಸಿರುತ್ತಾನೆ. ಕಾಲೇಜು ವ್ಯಾಸಂಗ ಮುಗಿಸಿದ ಮೇಲೆ ಮಗನ ಟಿ.ಸಿ.ಪಡೆಯಲು ಮೈಸೂರಿಗೆ ತೆರಳಿದ್ದೆ.

ಶಿವಶಂಕರ್ ಆದ ನಾನು ನನ್ನ ಸ್ನೇಹಿತರ ಜೊತೆಯಲ್ಲಿ ಕಾಲೇಜಿನ ಬಳಿ ತೆರಳುತ್ತಿದ್ದಾಗ ನನಗೆ ಎದೆನೋವು ಕಾಣಿಸಿಕೊಂಡು ಸುಸ್ತಾಗಿ ನೆಲೆಕ್ಕೆ ಬಿದ್ದೆ. ಎದೆನೋವುನಿಂದ ಬಳಲುತ್ತಿದ್ದ ನಾನು ಹತ್ತಿರದಲ್ಲಿ ಇರುವ ಮೈಸೂರಿನ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ದಿನಾಂಕ 05-8-2025 ಬೆಳಿಗ್ಗೆ 10.35 ನನಗೆ ಜಯದೇವ ಆಸ್ಪತ್ರೆಯಲ್ಲಿ ಇಕೋ, ಇಸಿಜಿ ತಪಾಸಣೆ ನಡೆಸಲಾಯಿತು ನಂತರ ಆಗಿದ್ದೆ ಶೋಚನಿಯ ಸಂಗತಿ.

ತಪಾಸಣೆ ಮಾಡುತ್ತಿರುವ ವೇಳೆ ವೈದ್ಯರ ಬಳಿ ಸಂಪೂರ್ಣ ರಿಪೋರ್ಟ್ ತೊರಿಸಲು ವೈದ್ಯ ಡಾ|ದಿನೇಶ್ ರವರ ಬಳಿ ಹೋದೆವು. ನಿನಗೆ ಉತ್ತಮ ಚಿಕಿತ್ಸೆ ಬೇಕಾದರೆ ಕುವೆಂಪುನಗರದಲ್ಲಿರುವ ನನ್ನ ದಿನೇಶ್ ಕಾರ್ಡಿಯಾಲಜಿ ಕಿನ್ನಿಕ್‌ಗೆ ಬನ್ನಿ ಎಂದು ಹೇಳಿ ಚೀಟಿ ಬರೆದುಕೊಟ್ಟರು.
ತುಂಬಾ ಸುಸ್ತಾಗುತ್ತಿದೆ ಎಂದು ವೈದ್ಯರಿಗೆ ಹೇಳಿದೆ ಸತ್ತರೆ, ಸಾಯಿ ನಿನ್ನಂಥವರು ಬಹಳ ಜನ ಸಾಯುತ್ತಾರೆ ಎಂದು ವೈದ್ಯ ದಿನೇಶ್ ಹೇಳುತ್ತಾರೆ. ರೋಗಿಗಳಿಗೆ ಸರಿಯಾಗಿ ಸಮಯಕ್ಕೆ ಚಿಕಿತ್ಸೆ ದೊರಕಬೇಕು ಅದುವೇ ಗೋಲ್ಡನ್ ಮಿನಿಟ್ಸ್ ಅದು ಪ್ರಾಣ ಉಳಿಸುವ ಕ್ಷಣ ಮಾತ್ರವಾಗಿರುತ್ತದೆ. ಏನಾದರು ಆಗಬಹುದು ವೈದ್ಯ ಡಾ. ದಿನೇಶ್ ಇವೆಲ್ಲದರ ಕಡೆ ಗಮನವಿಲ್ಲ, ನೂರಾರು ರೋಗಿಗಳು ಪ್ರತಿದಿನ ಬರುತ್ತಾರೆ ಏನು ಮಾಡುವುದು ಎಂಬ ಉಡಾಫೆ ಉತ್ತರ ನೀಡುತ್ತಾರೆ.
ಆಗ ನಾನು ಸಾರ್ ನಾನು ಪರಿಶಿಷ್ಟ ಸಮುದಾಯಕ್ಕೆ ಸೇರಿದವನು, ಬಡ ದಿನಕೂಲಿ ನೌಕರ ಅಷ್ಟು ಖರ್ಚು ಮಾಡಲು ಆಗವುದಿಲ್ಲ ಎಂದು ಹೇಳಿದೆ. ಕೊಡಲೆ ನನಗೆ ಕೆಟ್ಟ ಶಬ್ದದಿಂದ ನಿಂದಿಸಿ ಅವರ ಸಿಬ್ಬಂದಿಗಳಿಗೆ ಹೇಳಿ ಕತ್ತು ಹಿಡಿದು ಆಚೆ ದಬ್ಬು ಇವನನ್ನ ಎಂದು ಹೇಳಿದರು, ಏಕಾಏಕಿ ನನ್ನ ಮೇಲೆ ಮಾತಿನ ವಾದವನ್ನು ಮಾಡಿ ನಿಮ್ಮಂತರವು ಏಕ ಆಸ್ಪತ್ರೆಗೆ ಬರುತ್ತೀರಿ ಎಂದು ಕೂಗಾಡಿ ಹೊರಗೆ ದಬ್ಬಿದರು, ಸಿಬ್ಬಂದಿಯವರಿಗೆ ರೂ.2,000/-ಗಳ ಲಂಚಸಹಾ ಕೊಟ್ಟಿರುತ್ತೇನೆ. ಅದಕ್ಕೆ ನಾನು ಮನನೊಂದು ಕೂಡಲೇ ಸಿಬ್ಬಂದಿಗೆ ಪ್ರಶ್ನೆ ಮಾಡಿದೆ ಅದಕ್ಕೆ ಅವರು ದೊಡ್ಡವರು ಸಿ.ಎಂ.ರವರ ಪತ್ನಿಯರವ ಸಂಬಂಧಿ ಅವರ ಬಳಿ ಹಾಗೆ ವಾದ ಮಾಡಿಬೇಡಿ ಎಂದು ಹೇಳಿರುತ್ತಾರೆ. ನಾನು ಸುಮಾರು 20 ನಿಮಿಷ ಅಲ್ಲೆ ಕುಳಿತಿದ್ದರು ಅವರು ಪುನಃ ನನ್ನನ್ನು ಕರೆಯಲಿಲ್ಲ. ನಂತರ ನೋವಿನಿಂದ ದುಃಖಕರವಾಗಿ ಹೋರಗೆ ಬಂದಿರುತ್ತೇನೆ.
ಜಯದೇವ ಆಸ್ಪತ್ರೆ ಸಿಬ್ಬಂದಿಗಳು ಇವರು ಕುರಿತು ಹೇಳುವ ಮಾತುಗಳು ಡಾ|ದಿನೇಶ್ ಪ್ರಭಾವಶಾಲಿ ವ್ಯಕ್ತಿಯಾಗಿದ್ದಾರೆ ಮತ್ತು ಮುಖ್ಯಮಂತ್ರಿಗಳು ಮತ್ತು ಅವರ ಪತ್ನಿರವರ ಕಡೆಯವರು ಅವರನ್ನು ಏನು ಮಾಡಲು ಸಾಧ್ಯವಿಲ್ಲ ಹೇಳುತ್ತಿದ್ದಾರೆ ಎಂದರು.
ದಿನಾಂಕ 22-08-2025ರ ಸುಮಾರು ಮಧ್ಯಾಹ್ನ 12.00 ರಿಂದ 1.00 ವರೆಗೂ ಐದಾರು ಬಾರಿ ನನ್ನ ಮೊಬೈಲಿಗೆ ಅವರ ಸಿಬ್ಬಂದಿ ವರ್ಗದಿಂದ ಬೆದರಿಕೆ ಕರೆ ಬಂದಿರುತ್ತದೆ. ನಂಜುಂಡ ಮತ್ತು ಸುರೇಶ್ ರವರ ಹೆಸರಿನಲ್ಲಿ ಕರೆ ಬರುತ್ತಿದೆ ಎಂದರು. ಈ ವಿಷಯವಾಗಿ ಎಲ್ಲೂ ಮಾತನಾಡ ಬಾರದೆಂದು ಬೆದರಿಕೆ ಹಾಕುತ್ತಿದ್ದಾರೆ ಎಂದರು.
ಇಂತಹ ದುರ್ನಡತೆ ಹಾಗು ಗೂಂಡಾವರ್ತನೆ ತೋರಿದ ಮೈಸೂರಿನ ಜಯದೇವ ಆಸ್ಪತ್ರೆಯ ವೈದ್ಯ ಡಾ|ದಿನೇಶ್ ರವರನ್ನು ಕೊಡಲೆ ಅಮಾನತ್ತು ಮಾಡಬೇಕು ಎಂದು ಮಾನ್ಯ ಮುಖ್ಯಮಂತ್ರಿಗಳು ಮತ್ತು ಆರೋಗ್ಯ ಸಚಿವರು ಮಾನವ ಹಕ್ಕುಗಳ ಆಯೋಗಕ್ಕೆ ಮನವಿ ಮಾಡಿಕೊಂಡಿದ್ದೇನೆಂದು ಹೇಳಿಕೊಂಡರು, ಕೊಡಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು ,ಹಾಗೂ ದಲಿತ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು ಉಪಸ್ಥಿತರಿದ್ದರು ವರದಿ. ಮಂಜುಳಾ ರೆಡ್ಡಿ.

Related Articles

Leave a Reply

Your email address will not be published. Required fields are marked *

Back to top button