ಸುದ್ಧಿ
ಧಾರವಾಡ ಹೈಕೋರ್ಟಿನಲ್ಲಿ ಇವತ್ತಿನ ದಿನ ಗಣೇಶ್ ಚೌತಿಯ ಪ್ರಯುಕ್ತ ಸಂಗೀತ ಕಾರ್ಯಕ್ರಮಗಳು.

ಧಾರವಾಡ ಹೈಕೋರ್ಟಿನಲ್ಲಿ ಇವತ್ತಿನ ದಿನ ಗಣೇಶ್ ಚೌತಿಯ ಪ್ರಯುಕ್ತ ಸಂಗೀತ ಕಾರ್ಯಕ್ರಮಗಳು.
ಧಾರವಾಡ ಉಚ್ಚ ನ್ಯಾಯಾಲಯದಲ್ಲಿ 16ನೆಯ ಗಣೇಶ್ ಚೌತಿ ಕಾರ್ಯಕ್ರಮವನ್ನು ವಿಜ್ರಂಭಣೆಯಿಂದ ಜಾರುಗಿತು. ಇಂದಿನ ದಿನ ಅಂದರೆ ದಿನಾಂಕ 28/08/2025 ರಂದು ಧಾರವಾಡ ಮಹಾನಗರದ ವಿಶ್ವಖ್ಯಾತ ಭಾವ ಗೀತೆ ಸಂಗೀತಗಾರರಾದ ಶ್ರೀಮತಿ ಶೃತಿ ಕುಲಕರ್ಣಿ ಮತ್ತು ಅವರ ಸಂಗೀತ ಕ್ಷೇತ್ರದ ಸಂಗಾoತಿ ಮತ್ತು ಜೀವನ ಸಂಗಾoತಿ ಶ್ರೀಧರ ಕುಲಕರ್ಣಿಯವರು ಜೊತೆಗೂಡಿ, ವಕೀಲರ ಸಂಘದ ಹಾಲ್ನಲ್ಲಿ ಸಂಗೀತ ರಸದೌತಣ ಉಣಬಡಿಸಿದರು ಪ್ರಾರಂಭದಲ್ಲಿ ” ನಮ್ಮಮ್ಮ ಶಾರದೆ ಎಂಬ ಜನಪ್ರಿಯ ಭಾವಗೀತೆಯೊಂದಿಗೆ ಅದ್ಭುತ ಸ್ವರ ಸಂಗೀತದೊಂದಿಗೆ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.”

ಈ ಸಂಗೀತ ಕಾರ್ಯಕ್ರಮವನ್ನು ವಕೀಲರ ಸಂಘದ ಚೇತನ್ ಲಿಂಬಿಕಾಯಿ ವಕೀಲರು ನಡೆಸಿಕೊಟ್ಟರು.




