ನ್ಯಾ. ನಾಗಮೋಹನ್ದಾಸ್ ವರದಿಯನ್ನು ತಿರಸ್ಕರಿಸಲು ಒತ್ತಾಯಿಸುತ್ತೇವೆ … ಸಿದ್ಧರಾಮೇಶ್ವರ ಸ್ವಾಮೀಜಿ ಬೆಂಗಳೂರು.

ದೋಷ ಪೂರಿತ ನ್ಯಾ. ನಾಗಮೋಹನ್ದಾಸ್ ವರದಿಯನ್ನು ತಿರಸ್ಕರಿಸಲು ಒತ್ತಾಯಿಸುತ್ತೇವೆ … ಸಿದ್ಧರಾಮೇಶ್ವರ ಸ್ವಾಮೀಜಿ ಬೆಂಗಳೂರು. ದೋಷ ಪೂರಿತ ನ್ಯಾ. ನಾಗಮೋಹನ್ದಾಸ್ ವರದಿಯನ್ನು ತಿರಸ್ಕರಿಸಲು ಒತ್ತಾಯಿಸುತ್ತೇವೆ … ಸಿದ್ಧರಾಮೇಶ್ವರ ಸ್ವಾಮೀಜಿ ಕರ್ನಾಟಕ ಬೋವಿ ಸಂಘರ್ಷ ಸಮಿತಿ ಇಂದ ಇಂದು ಬೆಂಗಳೂರು ಪ್ರೆಸ್ಸ್ ಕ್ಲಬ್ ನಲ್ಲಿ ಸರ್ಕಾರ ವನ್ನು ಡೈಮಂಡ್ ಮಾಡಿದರು. ನಾಗಮೋಹನ್‌ದಾಸ್ ರವರ ಒಳ ಮೀಸಲಾತಿ ವರದಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಲೋಪ ದೋಷಗಳು ಕಂಡು ಬಂದಿರುವುದರಿಂದ ಭೋವಿ ಜನಾಂಗ ಕಡುಬಡವರು ಆಗಿರುವುದರಿಂದ ಹೊಟ್ಟೆ ಪಡಿಗಾಗಿ ಕೂಲಿ ಮಾಡಲು ಹೋರ ರಾಜ್ಯಗಳಿಗೆ. ಬೇರೆ ಜಿಲ್ಲೆಗಳಿಗೆ ಗೂಳೆ (ವಲಸೆ) ಹೋಗಿರುತ್ತಾರೆ. ಸದರಿ ಭೋವಿ ಜನಾಂಗದವರು ಆರು ತಿಂಗಳ ಗೊಮ್ಮೆ ಅವರ ಅವರ ಊರಿಗಳಿಗೆ ದಸರಾ ಮತ್ತು ಯುಗಾದಿಗೆ ಹಬ್ಬಕ್ಕೆ ಬಂದು ಹೋಗುತ್ತಾರೆ. ಉಳಿದ ದಿನಗಳಲ್ಲಿ ಯಾರು ಊರುಗಳಲ್ಲಿ ಇರುವುದಿಲ್ಲ. ಇಂತಹ ಸಂದರ್ಬದಲ್ಲಿ ಜನಗಣಿತಿ ಮಾಡಿರುತ್ತಾರೆ. ಅದರಂತೆ ಲಕ್ಷಾಂತರ ಜನರು ಜನಗಣಿತಿಗೆ ಪರಿಗಣೆನೆಗೆ ಬಂದಿರುವುದಿಲ್ಲ. ಮರು ಪರಿಶೀಲನೆ ಮಾಡದೇನೆ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿರುತ್ತಾರೆ. ಅದ್ದರಿಂದ ಮರು ಪರಿಶೀಲನೆ ಮಾಡಲು ಸರ್ಕಾರಕ್ಕೆ ತಿಳಿಸಿಕೊಡಬೇಕೆಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತಿರುವ ಬಗ್ಗೆ.
ರಾಜ್ಯದ ಪರಿಶಿಷ್ಟ ಜಾತಿ ಹಾಗೂ ಭೋವಿ ಜನಾಂಗದ ಜನಸಂಖ್ಯೆಯ ನ್ಯೂನ್ಯತೆಗಳು ಸದರಿ ವರದಿಯಲ್ಲಿ ಪುಟ ಸಂಖ್ಯೆ 24ರಲ್ಲಿ ತಿಳಿಸಿರುವಂತೆ 2001 ರಿಂದ 2011ವರೆಗೆ ಜನಸಂಖ್ಯೆಯ ದಶಕವಾರು ಬೆಳವಣಿಗೆಯ ಪ್ರಮಾಣ 22.31% ರಷ್ಟಿದೆ. ಇದೇ ಮಾನದಂಡವನ್ನು 2011 ರಿಂದ 2025ವರೆಗೆ ಅಂದರೆ 15 ವರ್ಷಗಳ ನಂತರದ ಜನಸಂಖ್ಯೆ ಕೆಳಕಂಡಂತಾಗಬೇಕು. ವರದಿಯಂತೆ ರಾಜ್ಯದ ಪರಿಶಿಷ್ಟ ಜಾತಿ ಜನಸಂಖ್ಯೆ ಕೋಟಿ 7ಲಕ್ಷ ಹಾಗೂ ಭೋವಿ ಜನಾಂಗದ – 11.29.301.
ಪುಟ ಸಂಖ್ಯೆ51ರಲ್ಲಿ ಸದಾಶಿವ ಆಯೋಗ ಹಾಗೂ 2011ರ ಜನಗಣತಿಯಲ್ಲಿ ಎರಡು ಸಮೀಕ್ಷೆ ಏಕಕಾಲದಲ್ಲಿ ನಡೆದರೂ ಸಹ ಪರಿಶಿಷ್ಟ ಜಾತಿ ಜನಸಂಖ್ಯೆ ವಿಚಾರದಲ್ಲಿ ದೊಡ್ಡ ಪ್ರಮಾದ ವ್ಯತ್ಯಾಸ ಇದೆ ಎಂದು ನ್ಯಾಯಮೂರ್ತಿಗಳು ತಿಳಿಸಿ, ಈ ಕಾರಣದಿಂದ ಹೊಸದಾಗಿ ನಡೆಯಬೇಕಾಗಿದೆ ಏಕೆಂದರೆ ಭೋವಿ ಜನಾಂಗ ಕಡುಬಡವರು ಆಗಿರುವುದರಿಂದ ಹೊಟ್ಟೆ ಪಡಿಗಾಗಿ ಕೂಲಿ ಮಾಡಲು ಹೋರ ರಾಜ್ಯಗಳಿಗೆ, ಬೇರೆ ಜಿಲ್ಲೆಗಳಿಗೆ ಗೂಳೆ (ವಲಸೆ) ಹೋಗಿರುತ್ತಾರೆ. ಸದರಿ ಭೋವಿ ಜನಾಂಗದವರು ಆರು ತಿಂಗಳ ಗೊಮ್ಮೆ ಅವರ ಅವರ ಊರಿಗಳಿಗೆ ದಸರಾ ಮತ್ತು ಯುಗಾದಿಗೆ ಹಬ್ಬಕ್ಕೆ ಬಂದು ಹೋಗುತ್ತಾರೆ. ಉಳಿದ ದಿನಗಳಲ್ಲಿ ಯಾರು ಇರುವುದಿಲ್ಲ. ಇಂತಹ ಸಂದರ್ಬದಲ್ಲಿ ಜನಗಣಿತಿ ಮಾಡಿರುತ್ತಾರೆ. ಅದರಂತೆ ಲಕ್ಷಾಂತರ ಜನರು ಜನಗಣಿತಿಗೆ ಪರಿಗಣೆನೆಗೆ ಬಂದಿರುವುದಿಲ್ಲ. ಮರು ಪರಿಶೀಲನೆ ಮಾಡದೇನೆ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿರುತ್ತಾರೆ. ಎಂದು ಹೇಳಿರುವಾಗ ಪ್ರಸ್ತುತ ಲೋಪದೋಷಗಳನ್ನು ಸರಿಡಿಸಲು ಕೇಂದ್ರ ಸರ್ಕಾರ 2006ರ ಜನಗಣತಿ ಆಗುವವರೆಗೂ ಕಾಯುವುದು ಸೂಕ್ತ.
ಸರ್ವೋಚ್ಚನ್ಯಾಯಾಲಯದ 01/08/2024ರ ತೀರ್ಪಿನಂತೆ ಪರಿಶಿಷ್ಟ ಜಾತಿಗಳು ವರ್ಗಿಕರಿಸಿ ಈ ಕೆಳಗಿನ ಮಾನದಂಡಗಳನ್ನು ಅನುಸರಿಸಬೇಕೆಂದು ಸೂಚಿಸುತ್ತದೆ.
ಶೈಕ್ಷಣಿಕ ಹಿಂದುಳಿದಿರುವಿಕೆ
ಸರ್ಕಾರಿ ಉದ್ಯೋಗ ಅಥವಾ ಸಾರ್ವಜನಿಕ ಸಂಸ್ಥೆಗಳು ಪ್ರಾತಿನಿಧ್ಯ , ಆರ್ಥಿಕ ನೈತಿಕತೆ
ಸಾಮಾಜಿಕ ಹಿಂದುಳಿದಿರುವಿಕೆ.
ವರದಿಯಲ್ಲಿ ತಿಳಿಸಿರುವಂತೆ ಈ ಎಲ್ಲಾ ಮಾನದಂಡಗಳಲ್ಲಿ ಭೋವಿ ಜನಾಂಗವು, ಎಡಗೈ, ಬಲಗೈ ಹಾಗೂ ಬಂಜಾರ ಸಮಾಜಗಳಕ್ಕಿಂತ ಅತ್ಯಂತ ಕಡಿಮೆ ಅಭಿವೃದ್ಧಿ ಹೊಂದಿದ್ದರು ಭೋವಿ ಸಮಾಜವನ್ನು ಮುಂದುವರೆದ ಗುಂಪಿಗೆ ಸೇರಿಸಲಾಗಿದೆ ಎಂದು
ವರದಿಯಲ್ಲಿರುವ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಮತ್ತು ಉದ್ಯೋಗ ಸೂಚಕಗಳಿಗೂ ಹಾಗೂ ಮೀಸಲಾಗಿರುವ ಶೇಕಡೆ ನಿಗದಿ ಪಡೆಸಿರುವುದಕ್ಕೂ ಯಾವುದೇ ತಾಳೇ ಇಲ್ಲದಿರುವುದು ಸ್ಪಷ್ಟವಾಗಿ ಕಂಡು ಬರುತ್ತದೆ ಎಂದು ಶ್ರೀ ಪರಮ ಪೂಜ್ಯ ಬಂಗಾರ ರಂಗನಾಥ ಸ್ವಾಮಿ ಹೇಳಿದರು.
ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಸೂಚಕಗಳು ಮತ್ತು ವಿವಿಧ ಗುಂಪುಗಳಲ್ಲಿ ನಿಗದಿಪಡಿಸಿದ ಮೀಸಲಾತಿಯ ಪ್ರಮಾಣಗಳ ನಡುವೆ ಯಾವುದೇ ಪರಸ್ಪರ ಸಂಬಂಧವಿಲ್ಲ, ಸಮೀಕೆಗೆ ಕೇಂದ್ರ ಸರ್ಕಾರದ ಜನಗಣತಿಯ ಸಮಯದಲ್ಲಿ ಅನುಸರಿಸಲಾಗುವ ವಿಧಾನವನ್ನು ಅನುಸರಿಸಿದರೆ ಮತದಾರರ ಪಟ್ಟಿಯನ್ನು ಮಾನದಂಡವಾಗಿ ಇಟುಕೊಂಡು ಸಮೀಕ್ಷೆ ಮಾಡಿರುವುದೇ ಈ ಎಲ್ಲಾ ಗೊಂದಲಗಳಿಗೆ ಕಾರಣ ವೆಂದು ಗೌತಮ ವೆಂಕಿ ಆರೋಪಿಸಿದರು.
ತರಾತುರಿಯಲ್ಲಿ ಅಲ್ಪ ಸಮಯದಲ್ಲಿ ಸಮೀಕ್ಷೆ ಕಾರ್ಯವನ್ನು ಪೂರ್ಣಗೊಳಿಸಲುಸಾಧ್ಯ ವಿಲ್ಲ ವೆಂದು , ಪರಿಶಿಷ್ಟ ಜಾತಿ ಕುಟುಂಬಗಲನ್ನು ಗುರುತಿಸಲು ಪಡಿತರ ಚೀಟಿಯನ್ನು ಒಂದು ಮಾನದಂಡವಾಗಿ ಬಳಸಲಾಗಿದೆ ಎಂದು ಆದರೆ ವರದಿಯಲ್ಲಿ ತಿಳಿಸಿರುವಂತೆ ಸುಮಾರು 7 ಲಕ್ಷ ಪರಿಶಿಷ್ಟ ಜಾತಿ ಕುಟುಂಬಗಳು ಪಡಿತರ ಚೀಟಿಯೇ ಹೊಂದಿಲ್ಲ.(ಪುಟ ಸಂಖ್ಯೆ 98) ಅಂದ ಮೇಲೆ ಪರಿಶಿಷ್ಟ ಜಾತಿ ಕುಟುಂಬಗಳನ್ನು ಗುರುತಿಸುವಲ್ಲಿ ಲೋಪವಾಗಿ ಸುಮಾರು 30 ಲಕ್ಷ ಜನರನ್ನು ಕೈ ಬಿಡಲಾಗಿದೆ ಹಾಗೂ ಭೋವಿ ಜನಾಂಗದ ಸುಮಾರು 3.5 ಲಕ್ಷ ಜನರನ್ನು ಸಮೀಕ್ಷೆ ಯಿಂದ ಕೈಬಿಡಲಾಗಿದೆ ಎಂದು ಶ್ರೀ ಪ್ರಶಾಂತ್ ಕುಮಾರ್ ಸ್ವಾಮಿ ದೂರಿದರು.
ಭೋವಿ ಸಮಾಜವು 2026ರಲ್ಲಿ ಕೇಂದ್ರ ಸರ್ಕಾರ ಸಡೆಸುವ ಜನಗಣತಿ ಆಧಾರದ ಮೇಲೆ ಸಾಮಾಜಿಕ ಮತ್ತು ಆರ್ಥಿಕ ಸೂಚಕಗಳ ಆಧಾರದ ಮೇಲೆ ಒಳಮಿಸಲಾತಿಯನ್ನು ಕಲ್ಪಿಸಲು ಒತ್ತಾಯಿಸುತ್ತದೆ. ಹಾಗೂ ದೋಷ ಪೂರಿತ ನ್ಯಾ. ನಾಗಮೋಹನ್ದಾಸ್ ವರದಿಯನ್ನು ತಿರಸ್ಕರಿಸಲು ಒತ್ತಾಯಿಸುತ್ತೇವೆ.
ಒಳಮೀಸಲಾತಿ ನೀಡುವ ಸಮಯದಲ್ಲಿ ನಿಖರವಾದ ವೈಜ್ಞಾನಿಕಾ ಅಂಕಿ ಅಂಶಗಳನ್ನು ಪಡೆದು ಭೋವಿ ಸಮಾಜವನ್ನು ಪ್ರತ್ಯೇಕ ಗುಂಪಾಗಿ ಗುರುತಿಸಲು ಸರ್ಕಾರವನ್ನು ಡಿಮ್ಯಾಂಡ್ ಮಾಡಿದರು.
ರಾಜ್ಯಾಧ್ಯಕ್ಷರು ಗೌತಮ್ ವೆಂಕಿ , ಅಪ್ಪಣ್ಣ ಒಡ್ಡೆರ್, ಮಂಜುನಾಥ್ , ಗಗನ್ , ಹುಲಿಯಪ್ಪ , ಸುರೇಶ್ , ವೀರಯ್ಯ , ಮಹಾಲಿಂಗಪ್ಪ ವಿನಯ್ ಕುಮಾರ್, ಉಪಸ್ಥಿತರಿದ್ದರು . ವರದಿ. ಮಂಜುಳಾ ರೆಡ್ಡಿ.



