8 ನೇಯ ಪೀಠಾಧಿಪತಿ ಪರಮ ಪೂಜ್ಯ ಡಾಕ್ಟರ್ ಶರಣಬಸವಪ್ಪ ಅಪ್ಪ ಈಗ ಕೇವಲ ನೆನಪಾಗಿ ಉಳಿದಿದ್ದಾರೆ..

ಡಾಕ್ಟರ್ ಅಪ್ಪ ಒಂದು ಸ್ಮರಣೆ. ಕಲ್ಬುರ್ಗಿಯಲ್ಲಿ ಶೈಕ್ಷಣಿಕ ಹಬ್ ವಾತಾವರಣವನ್ನು ನಿರ್ಮಿಸಿದ ಶ್ರೀ ಶರಣಬಸವೇಶ್ವರ ಸಂಸ್ಥಾನದ ಎಂಟನೆಯಪೀಠಾಧಿಪತಿಗಳಾದ ಪರಮ ಪೂಜ್ಯ ಡಾಕ್ಟರ್ ಶರಣಬಸವಪ್ಪ ಅಪ್ಪ ಈಗ ಕೇವಲ ಒಂದು ನೆನಪಾಗಿ ಉಳಿದಿದ್ದಾರೆ 88 ವರ್ಷಗಳ ಕಾಲ ಸುಧೀರ್ಘವಾದ ಜೀವನವನ್ನು ನಡೆಯಿಸಿ ಸರ್ವದಲೇ ಜ್ಞಾನ ದಾಸೋಹವನ್ನು ಮಾಡಿ ವಿದ್ಯೆಯೆಂಬುದು ಅಭ್ಯಾಸಿ ಗನ ಕೈವಶ ಎಂಬ ಮಾತನ್ನು ಸಾಕಾರಗೊಳಿಸಿ ಅನೇಕ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಕೆಜಿಯಿಂದ ಪಿಜಿಯವರಿಗೆ ಅತ್ಯುತ್ತಮವಾದ ಶಿಕ್ಷಣವನ್ನು ನೀಡಿ ಕಲ್ಬುರ್ಗಿಯಲ್ಲಿ ಶೈಕ್ಷಣಿಕ ಹಬ ವಾತಾವರಣವನ್ನು ನಿರ್ಮಿಸಿ ಇಂದು ಕಣ್ಮರೆಯಾಗಿದ್ದಾರೆ ಅವರ ಸ್ಮರಣೆ ಮಾಡಿಕೊಳ್ಳಬೇಕಾದದ್ದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಮಾಜಿ ಕೂಡಾ ಛೇರ್ಮನರಾದ ಶಾಮರಾವ್ ಪ್ಯಾಟೆ ಅವರು ಹೇಳಿದರು ಅವರು ಮಹಾಂತ ಜ್ಯೋತಿ ಪ್ರತಿಷ್ಠಾನ ಏರ್ಪಡಿಸಿದ ಡಾಕ್ಟರ್ ಅಪ್ಪ ಒಂದು ಸ್ಮರಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು ನಮ್ಮಂತಹ ದೀನ ದಲಿತ ಶೋಷಿತ ಜನಾಂಗಕ್ಕೆ ಪ್ರೋತ್ಸಾಹ ನೀಡಿ ವಿದ್ಯಾವಂತರನ್ನಾಗಿ ಮಾಡಿಸುವ ದಿಸೇಯಲ್ಲಿ ಅವರ ಶ್ರಮ ಬಹುದೊಡ್ಡದು ನಾನು ಇಂಜಿನಿಯರ್ ಪದವಿ ಪಡೆಯಬೇಕಾದರೆ ಅವರು ಎಚ್ ಕೆ ಇ ಸೊಸೈಟಿ ಅಧ್ಯಕ್ಷರಾಗಿದ್ದಾಗ ವಸತಿ ನಿಲಯದಲ್ಲಿ ವಾಸಿಸಲು ಅವಕಾಶ ಮಾಡಿಕೊಟ್ಟರು ಅವರ ಕೃಪಾ ಶೀರ್ವಾದದಿಂದ ನಾನು ಇಂಜಿನಿಯರಿಂಗ್ ಪದವಿ ಪಡೆಯಲು ಸಾಧ್ಯವಾಯಿತು ಎಂದು ಭಾವುಕರಾಗಿ ನುಡಿದರು ಪರಮಪೂಜ್ಯ ಡಾಕ್ಟರ್ ಶರಣಬಸವಪ್ಪ ಅಪ್ಪ ಅವರು ಗುಣ ಗ್ರಾಹಿಗಳಾಗಿದ್ದರು ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಸದಾ ಪ್ರೋತ್ಸಾಹಿಸಿ ಬೆಸ್ಟ್ ಸ್ಟೂಡೆಂಟ್ಸ್ ಬೆಸ್ಟ್ ಟೀಚರ್ ಪ್ರಶಸ್ತಿ ನೀಡಿ ಗೌರವಿಸುತ್ತಿದ್ದರು ಮೆರಿಟ್ಗೆಗೆ ಮಹತ್ವ ಕೊಡುತ್ತಿದ್ದರು . ಹೀಗಾಗಿ ಶಿಕ್ಷಣ ಕ್ಷೇತ್ರದಲ್ಲಿ ಆರೋಗ್ಯಕರವಾದ ಸ್ಪರ್ಧೆಯನ್ನು ಮೂಡಿಸಿ ತಮ್ಮ ವಿದ್ಯಾವರ್ಧಕ ಸಂಘ ಉನ್ನತ ಮಟ್ಟಕ್ಕೆ ಏರಿಸಲು ಕಾರನೀ ಭೂತರಾದರು ಅವರ ಅವಧಿಯಲ್ಲಿ ಶರಣಬಸವೇಶ್ವರ ವಿಶ್ವವಿದ್ಯಾಲಯ ಸ್ಥಾಪನೆ ಗೊಂಡಿದ್ದು ಒಂದು ಇತಿಹಾಸ ದಾಖಲಾತ್ಮಕವಾದ ಸಂಗತಿ ಆಗಿದೆ ಎಂದು ಶರಣಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯ ಡಾ. ಭೀಮಾಶಂಕರ್ ಮಾಲೀ ಪಾಟೀಲ್ ಅವರು ಹೇಳಿದರು ಈ ಸಂದರ್ಭದಲ್ಲಿ ಪ್ರತಿಷ್ಠಾನದ ಅಧ್ಯಕ್ಷ ಪ್ರೊಫೆಸರ್ ಶಿವರಾಜ್ ಪಾಟೀಲ್ ಪ್ರಾಸ್ತಾವಿಕ ನುಡಿಗಳನ್ನು ಹೇಳುತ್ತಾ ಶರಣಬಸವಪಾ ಅಪ್ಪ ಶಿಕ್ಷಣ ಲೋಕದ ಮಿನುಗು ತಾರೆಯಾಗಿ ಮಿಂಚಿ ಮರೆಯಾಗಿದ್ದಾರೆ ಅವರು ಗುಲ್ಬರ್ಗ ವಿಶ್ವವಿದ್ಯಾಲಯ ಸ್ಥಾಪನೆಯಾಗಲು ಕಾರನೀ ಭೂತರು ಮತ್ತು ಶರಣಬಸವೇಶ್ವರ ವಿಶ್ವವಿದ್ಯಾಲಯದ ಸಂಸ್ಥಾಪಕರು ದಾಸೋಹ ಸೂತ್ರಗಳನ್ನು ರಚಿಸಿ ಮಹಾದಾಸೋಹ ಪರಂಪರೆಯನ್ನು ಜಗತ್ತಿಗೆ ತೋರಿಸಿಕೊಟ್ಟವರು ಅವರ ಅಗಲಿಕೆ ಅನ್ನ ಮತ್ತು ಜ್ಞಾನದಾಸೋಹಕ್ಕೆ ಬಿದ್ದ ಪೆಟ್ಟಾಗಿದೆ ಶಿಕ್ಷಣ ಕ್ಷೇತ್ರ ಅವರನ್ನು ಕಳೆದುಕೊಂಡು ಬಡವಾಗಿದೆ ಕಲ್ಯಾಣ ಕರ್ನಾಟಕ ಎಂಡೂ ಮರೆಯದ ಈ ಭಾಗದ ವಿದ್ಯಾ ಭಂಡಾರಿ ಶಿಕ್ಷಣ ತಜ್ಞರು ಅವರಾಗಿದ್ದಾರೆಂದು ಬಣ್ಣಿಸಿದರು ಈ ಸಂದರ್ಭದಲ್ಲಿ ಶ್ರೀಮತಿ ಯರಾದ ಮಹಾದೇವಿ ಪಾಟೀಲ್ ಆಲಗೂಡ ಶಾಂತಾ ವಾಲಿ ಸವಿತಾ ಜಗತಿ ಜಗದೇವಿ ಪಾಟೀಲ್ ಅವರುಗಳು ಉಪಸ್ಥಿತರಿದ್ದರು ನಾನಾಗೋಡ ಪಾಟೀಲರು ಸ್ವಾಗತಿಸಿದರು ದತ್ತರಾಜ್ ಕಲ್ಶೆಟ್ಟಿ ಅವರು ಪ್ರಾರ್ಥಿಸಿದರು ಶಿವಲೀಲಾ ಪಾಟೀಲ್ ಅವರು ಕಾರ್ಯಕ್ರಮ ನಿರೂಪಿಸಿದರು ಲಕ್ಷ್ಮಿ ಪಾಟೀಲ್ ಅವರು ವಂದಿಸಿದರು.





