ಆರೋಗ್ಯ ಸುರಕ್ಷತೆಗಾಗಿ ಪವರ್ ಸ್ಟಾರ್ ಪುನೀತ್ ರಾಜ್ ರವರ ಜನ್ಮದಿನದಂದು ನಮ್ಮ ಪವರ್ ರನ್..

ಆರೋಗ್ಯ ಸುರಕ್ಷತೆಗಾಗಿ ಪವರ್ ಸ್ಟಾರ್ ಪುನೀತ್ ರಾಜ್ ರವರ ಜನ್ಮದಿನದಂದು ನಮ್ಮ ಪವರ್ ರನ್
ಬೆಂಗಳೂರು: ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಸೂತ್ರ ಫಿಟ್ ನೆಸ್ ಮತ್ತು ನ್ಯೂಟ್ರಿಷನ್ ಸಂಸ್ಥೆಯವತಿಯಿಂದ ಪವರ್ ಸ್ಟಾರ್, ಕರ್ನಾಟಕ ರತ್ನ ಪುನೀತ್ ರಾಜ್ ರವರ ಜನ್ಮದಿನ ಮಾರ್ಚ್ 15ರಂದು ನಮ್ಮ ಪವರ್ ರನ್ 4ನೇ ಅವೃತ್ತಿಯನ್ನು ನೈಸ್ ರಸ್ತೆಯಲ್ಲಿ ಆಯೋಜಿಸಿದ್ದಾರೆ ಇದರ ಕುರಿತು ಮಾಧ್ಯಮಗೋಷ್ಟಿ ವ್ಯವಸ್ಥಾಪಕ ನಿರ್ದೇಶಕಿ ದೀಪ್ತಿವಾಸನ್, ಬಾಬು ಮತ್ತು ಗುರು ರವರು ಭಾಗವಹಿಸಿದ್ದರು.
ಪುನೀತ್ ರಾಜ್ ಕುಮಾರ್ ಖ್ಯಾತ ಚಿತ್ರ ನಟನಾ ಜೊತೆಯಲ್ಲಿ ಮಾನವೀಯ ಹೃದಯವುಳ್ಳ ವ್ಯಕ್ತಿತ್ವದವರು. ಅವರ ಜನ್ಮದಿನದಂದು ಅವರು ರಾಜ್ಯಕ್ಕೆ ನೀಡಿದ ಕೊಡುಗೆ ಸ್ಮರಿಸಲು ಹಾಗೂ ಆರೋಗ್ಯ ಸುರಕ್ಷತೆಗಾಗಿ ನಮ್ಮ ಪವರ್ ರನ್ ಆಯೋಜಿಸಲಾಗಿದೆ ಇದು ನಾಲ್ಕನೇಯ ಅವೃತ್ತಿಯಾಗಿದೆ.
ನಮ್ಮ ಪವರ್ ರನ್ ನಲ್ಲಿ ನೇತ್ರಧಾನ ಸೂಪರ್ ಸ್ಪೆಷಾಲಿಟಿ ಹಾಸ್ಟಿಟಲ್ ಸಹಯೋಗ ನೀಡುತ್ತಿದೆ. ಗ್ಲಾಕೋಮಾ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಸಹ ಇದೆ.
5k ರನ್ ಮತ್ತು ವಾಕ್ ಥಾನ್ ಹಾಗೂ 21.1k ಹಾಫ್ ಮ್ಯಾರಥಾನ್ ಆಯೋಜಿಸಲಾಗಿ ನೋಂದಾಣಿಗಾಗಿ www.nammapowerrun.com ಭೇಟಿ ನೀಡಬಹುದು.
ನಾಲ್ಕನೇಯ ಅವೃತ್ತಿಯಲ್ಲಿ ಹಂಪಿ ಭವ್ಯವಾದ ಕಲ್ಲಿನ ರಥ ಮತ್ತು ಹಂಪಿಯ ಸ್ಮಾರಕಗಳು ಬಿಂಬಿಸುವ ಕಾರ್ಯ ಮಾಡಲಾಗುತ್ತಿದೆ ಮತ್ತು ಗೆದ್ದ ಸ್ಪರ್ಧಿಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮ.
ನಮ್ಮ ಪವರ್ ರನ್ ಕಾರ್ಯಕ್ರಮದಲ್ಲಿ ಚಲನಚಿತ್ರ ನಟರುಗಳಾದ ರಾಘವೇಂದ್ರರಾಜ್ ಕುಮಾರ್, ಶ್ರೀ ಮುರುಳಿ, ವಿಜಯರಾಘವೇಂದ್ರ, ಧನ್ಯರಾಮ್ ಆನೇಕ ಗಣ್ಯ ಮಹನೀಯರುಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು . ವರದಿ . ಮಂಜುಳಾ ರೆಡ್ಡಿ.



