ರಾಜ್ಯ

ವಿಲೇಜ್ ಆಫೀಸರ್ಸ್ ಹುದ್ದೆಗಳನ್ನು ಖಾಯಂ ಗೊಳಿಸಿ – ಸಂಬಳ ಹೆಚ್ಚುಮಾಡಿ – ಪಾವಗಡ ಶ್ರೀರಾಮುಲು ಕರ್ನಾಟಕ ರಾಜ್ಯ ಕಂದಾಯ ಇಲಾಖೆ ಗ್ರಾಮ ಸಹಾಯಕರ ಸಂಘ (ರಿ)

ವಿಲೇಜ್ ಆಫೀಸರ್ಸ್ ಹುದ್ದೆಗಳನ್ನು ಖಾಯಂ ಗೊಳಿಸಿ – ಸಂಬಳ ಹೆಚ್ಚುಮಾಡಿ – ಪಾವಗಡ ಶ್ರೀ ರಾಮುಲು ಕರ್ನಾಟಕ ರಾಜ್ಯ ಕಂದಾಯ ಇಲಾಖೆ ಗ್ರಾಮ ಸಹಾಯಕರ ಸಂಘ (ರಿ)

ಬೆಂಗಳೂರು. ಕರ್ನಾಟಕ ರಾಜ್ಯ ಕಂದಾಯ ಇಲಾಖೆ ಗ್ರಾಮ ಸಹಾಯಕರ ಸಂಘ (ರಿ) ಕರ್ನಾಟಕ ಗ್ರಾಮ ಕಛೇರಿಗಳ ರದ್ದತಿ ಕಾಯ್ದೆ 1961 ಅನ್ವಯ ದಿನಾಂಕ:1/2/1963 ರಿಂದ ಅನ್ವಯವಾಗುವಂತೆ ವಂಶಪಾರಂಪರ್ಯದ ಎಲ್ಲಾ ಗ್ರಾಮೀಣ ಹಂತದ ವಿಲೇಜ್ ಆಫೀಸರ್ಸ್ ಹುದ್ದೆಗಳು ರದ್ದಾದ್ದರಿಂದ ಕೆಳ ಹಂತದ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ, ನಮ್ಮನ್ನು ಆಡಳಿತಾತ್ಮಕ ದೃಷ್ಟಿಯಿಂದ ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗರಿಗೆ ಸಹಾಯ ಮಾಡುವ ಸಲುವಾಗಿ 10450 ಗ್ರಾಮ ಸಹಾಯಕರ ಹುದ್ದೆಗಳನ್ನು ಸೃಜಿಸಿ ಆಗಿಂದ್ದಾಗೆ ವೇತನ ಹೆಚ್ಚಳ ಮಾಡುತ್ತಾ ಬಂದು 2007ನೇ ಸಾಲಿನಲ್ಲಿ ಗ್ರಾಮಸಹಾಯಕರ ಹುದ್ದೆಗಳನ್ನು ಖಾಯಂಗೊಳಿಸಿ ಪ್ರಸ್ತುತ 15000/- ಮಿತವೇತನ ಮಾತ್ರ ಪಾವತಿಸಲಾಗುತ್ತಿರುತ್ತದೆ. ಆದರೆ ಯಾವುದೇ ಸೇವಾಭದ್ರತೆ ಕಲ್ಪಿಸಿರುವುದಿಲ್ಲ. ಸದರಿ ವೇತನದಿಂದ ಇಂದಿನ ಅಗತ್ಯ ವಸ್ತುಗಳ ಬೆಲೆ ಏರಿಕೆ, ತಂದೆ ತಾಯಿಗಳ ಸಂಧ್ಯಾ ಕಾಲದ ಪೋಷಣೆ, ಮಕ್ಕಳ ವಿದ್ಯಾಭ್ಯಾಸ ಮತ್ತು ಕುಟುಂಬ ನಿರ್ವಹಣೆಗೆ ತುಂಬಾ ಕಷ್ಟ ಕರವಾಗಿರುತ್ತದೆ. ಈ ನಿಟ್ಟಿನಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಬೆಳಗಾವಿಯಲ್ಲಿ ನಡೆದ ಅಧಿವೇಶನದ ಸಮಯದಲ್ಲಿ ನಾವು ನಡೆಸಿದ ಮುಷ್ಕರದಲ್ಲಿ ಸರ್ಕಾರದ ಮಾನ್ಯ ಕಂದಾಯ ಸಚಿವರು ಮುಷ್ಕರದ ಸ್ಥಳಕ್ಕೆ ಆಗಮಿಸಿ ಗ್ರಾಮಸಹಾಯಕರಿಗೆ ನಮ್ಮ ಪ್ರಮುಖ ಬೇಡಿಕೆಗಳಲ್ಲಿ ಒಂದಾದ ಸೇವಾಭದ್ರತೆ ನೀಡಿ ಡಿ ಗ್ರೂಪ್ ಸಮಾನವಾದ ವೇತನವನ್ನು ಪಡೆಯಲು ತ್ವರಿತವಾಗಿ ಆದೇಶ ನೀಡಿ ಉಳಿದ ಬೇಡಿಕೆಗಳನ್ನು ಮಾನ್ಯ ಮುಖ್ಯಮಂತ್ರಿಗಳವರ ಜೊತೆ ಚರ್ಚಿಸಿ ಆದಷ್ಟು ಬೇಗನೆ ಈಡೇರಿಸುವುದಾಗಿ ಭರವಸೆ ನೀಡಿ ಬಂದಿರುತ್ತಾರೆ. ಆದರೆ ಮುಷ್ಕರ ನಡೆದು ಎರಡು ವರ್ಷಗಳಾದರೂ ಇದುವರೆಗೂ ನಮ್ಮ ಬೇಡಿಕೆ ಈಡೇರಿರುವುದಿಲ್ಲ ಮುಖ್ಯವಾಗಿ ಗ್ರಾಮಸಹಾಯಕರಿಗೆ ಸೇವಾಭದ್ರತೆ ನೀಡಿ ಡಿ ಗ್ರೂಪ್ ಸಮಾನ ವೇತನ ನೀಡಲು ಪರಿಶೀಲಿಸಿ ಕಾನೂನು ಅಭಿಪ್ರಾಯ ಪಡೆಯಲು ಆದೇಶಿಸಿರುವ ಮೇರೆಗೆ ಅಂದಿನ ಅಡ್ವಕೇಟ್ ಜನರಲ್ ಪ್ರೊ| ರವಿವರ್ಮಕುಮಾರ್‌ರವರು ಅವರ ವರದಿಯಲ್ಲಿ ಗ್ರಾಮ ಸಹಾಯಕರು ಸರ್ಕಾರದ ಮಾತೃ ಇಲಾಖೆಯಲ್ಲಿ ತಳ ಹಂತದಲ್ಲಿ ಕಾರ್ಯನಿರ್ವಹಿಸುವ ಮುಖ್ಯ ಕೆಲಸಗಾರರಾಗಿದ್ದು, ನಮ್ಮಗಳ ಸೇವೆಯನ್ನು ಗುರುತಿಸಿ ಕಂದಾಯ ಇಲಾಖೆಗೆ ನಮ್ಮ ಸೇವೆ ಅವಶ್ಯವಿರುವುದನ್ನು ಮನಗಂಡು ನಮ್ಮ ಹಾಗೂ ಕುಟುಂಬಗಳ ಭದ್ರತೆಗಾಗಿ, ಡಿ ಗ್ರೂಪ್ ನೌಕರರೆಂದು ಪರಿಗಣಿಸಿ ಅದಕ್ಕೆ ಸಮಾನವಾದ ವೇತನ ನೀಡಬಹುದೆಂದು ಅಭಿಪ್ರಾಯ ವ್ಯಕ್ತಪಡಿಸಿರುತ್ತಾರೆ ಎಂದು ಪಾವಗಡ ಶ್ರೀರಾಮುಲು ಇಂದು ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಸರ್ಕಾರ ವನ್ನು ಡಿಮಾಂಡ್ ಮಾಡಿದರು.
ತದನಂತರ ಇದೇ ರೀತಿ ಅಡ್ವಕೇಟ್ ಜನರಲ್ ಮಧುಸೂದನ್ ನಾಯಕ್ ರವರು ಹಾಗೂ ಇತ್ತೀಚೆಗೆ ಕಾನೂನು ಇಲಾಖೆಯ ಮುಖ್ಯ ಕಾರ್ಯದರ್ಶಿ ಮಾನ್ಯ ಜಿ.ಎಸ್. ಸಂಗ್ರೇಶಿರವರು ಸಹ ನಮ್ಮ ಪರವಾಗಿ ಶಿಫಾರಸ್ಸು ವರದಿ ನೀಡುವ ಮೂಲಕ ನಮಗೆ ಸೇವಾ ಭದ್ರತೆ ನೀಡಿ ಕನಿಷ್ಠ ವೇತನ ನೀಡಲು ಯಾವುದೇ ಕಾನೂನು ತೊಡಕು ಇಲ್ಲವೆಂದು ಸ್ಪಷ್ಟವಾಗಿ ಅಭಿಪ್ರಾಯ ವ್ಯಕ್ತಪಡಿಸಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿರುತ್ತಾರೆ. ಆದರೆ ಸದರಿ ಶಿಫಾರಸ್ಸಿನಂತೆ ನಮಗೆ ಇದುವರೆಗೂ ಸೇವಾಭದ್ರತೆ ನೀಡಿರುವುದಿಲ್ಲ. ಹಾಲಿ ಇರುವ ಸರ್ಕಾರವು ಅಧಿಕಾರಕ್ಕೆ ಬರುವ ಮೊದಲೇ ನೀಡಿದ್ದ ಆಶ್ವಾಸನೆಯಂತೆ ಅನ್ನಭಾಗ್ಯ, ಗೃಹ ಲಕ್ಷ್ಮಿ ಯೋಜನೆ, ಗೃಹದ್ಯೋತಿ, ಶಕ್ತಿ ಯೋಜನೆ, ಯುವನಿಧಿ ಯೋಜನೆಯಂತಹ ಮಹತ್ತರವಾದ ಯೋಜನೆಗಳನ್ನು ದೇಶದಲ್ಲಿಯೇ ಪ್ರಪ್ರಥಮ ಬಾರಿಗೆ ಜಾರಿಗೆ ತಂದು ಉತರೆ ರಾಜ್ಯಗಳಿಗೆ ಮಾದರಿಯಾಗಿರುತ್ತದೆ. ಅದೇ ರೀತಿ ಪೌರಕಾರ್ಮಿಕರಿಗೆ, ಲಾರಿ ಡ್ರೈವರ್, ಕ್ಲೀನರ್‌ಗಳು ಹಾಗೂ ಇತರಿರಗೂ ಸಹ 1ನೇ ಮೇ 2025 ರಿಂದ ಅನ್ವಯವಾಗುವಂತೆ ಖಾಯಂಗೊಳಿಸಲಾಗಿರುತ್ತದೆ. ಹಾಗೂ ರಾಜ್ಯದ ಎಲ್ಲಾ ದುಡಿಯುವ ಕಾರ್ಮಿಕರಿಗೆ ಅವರ ದುಡಿಮೆಗೆ ತಕ್ಕಂತೆ ಕನಿಷ್ಠ ವೇತನವನ್ನು ಗಣನೀಯ ಪ್ರಮಾಣದಲ್ಲಿ ಏರಿಕೆ ಮಾಡಲುl ನಂ.ಕಾ.ಇ 411 LWA 2023 ದಿನಾಂಕ: 11/4/2025 ರಂದು ಅಧಿಸೂಚನೆ ಹೊರಡಿಸುವ ಮೂಲಕ ಎಲ್ಲಾ ಶ್ರಮಿಕ ವರ್ಗದವರ ಪರವಾಗಿ ಆದೇಶ ಹೊರಡಿಸಲಾಗಿರುತ್ತದೆ. ಆದರೆ ಘನ ಸರ್ಕಾರವು ಸರ್ಕಾರದ ಮಾತೃ …. ಇಲಾಖೆ ಕಂದಾಯ ಇಲಾಖೆಯಲ್ಲಿ ಸರಿ ಸುಮಾರು 45 ವರ್ಷಗಳಿಂದಲೂ ಬೇಡದಾನುಗಳಂತೆ ಯಾವುದೇ ಅಡಿಯ ರಸ್ತೆ ಘನ ಸರ್ಕಾರದ ಜನಪರ ಯೋಜನೆಗಳನ್ನು ಯಶಸ್ವಿಯಾಗಿ ಜನಸಾಮಾನ್ಯರ ಮನೆಬಾಗಿಲಿಗೆ ಸವಲತ್ತುಗಳನ್ನು ತಲುಪಿಸುವ ಹಾಗೂ ಕಂದಾಯ ಇಲಾಖೆಯ ತಳಹಂತದಲ್ಲಿ ಅತೀ ಮುಖ್ಯವಾದ ಅಂಕಿ-ಅಂಶಗಳು, ಭೂವ್ಯಾಜ್ಯ, ಸರ್ಕಾರಿ ಜಮೀನು ಒತ್ತುದು ಗುರುತಿಸುವುದು, ದಿದ ಮಾತಾಸನದಾರರನ್ನು ಗುರುತಿಸುವುದು, ಗಣ್ಯಾತಿ ಗಣ್ಯರು, ಹಿರಿಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದ ಬೇಳೆ ಪ್ಪಾಚಾರ ನಾ.. ಚುನಾವಣೆ ಕಾರ್ಯ, ಜನನ-ಮರಣ ನೋಂದಣಿಗೆ ಸಹಕರಿಸುವುದು, ಬೆಳೆಸಮೀಕ್ಷೆ, ಆಧಾರ್ ಸೀಡಿಂಗ್, ಭವತಿ ಖಾತದಾರರನ್ನು ಸುರ ವಾರಸುದಾರರಿಗೆ ಖಾತೆ ಬದಲಾವಣೆ ಮಾಡಲು ಅಗತ್ಯ ಮಾಹಿಯನ್ನು ಒದಗಿಸುವುದು ಈ ರೀಡಿ ಎಲ್ಲಾ ಕೆಲಸ ಕಾರ್ಯಗಳನ್ನು ಪ್ರಾಮಾಣಿಕವಾಗಿ ಹಾಗೂ ಅಷ್ಟೇ ಜವಾಬ್ದಾರಿಯುತವಾಗಿ ನಿರ್ವಹಿಸುವ ಗ್ರಾಮ ಸಹಾಯಕರಾದ ನಮ್ಮನ್ನು ಕಡೆಗಣಿ ನಮಗೆ ಸೇವಾಭದ್ರತ ನೀಡಿ ನಮ್ಮ ಹಾಗೂ ನಮ್ಮ ಕುಟುಂಬಗಳ ಭದ್ರತೆ ಕಲ್ಪಿಸಿಕೊಡವಿರುವುದು ತೀರಾ ನೋವಿನ ಸಂಗತಿಯಾಗಿರುತ್ತದೆ ಅದ್ದರಿಂದ ಇದೇ ವಿಚಾರವಾಗಿ ಕಳೆದ ಎರಡು ವರ್ಷಗಳ ಹಿಂದೆ ಬೆಳಗಾವಿಯ ಅಧಿವೇಶನದ ಸಮಯದಲ್ಲಿ ಕೈಗೊಂಡಿದ್ದ ಮುಷ್ಕರದಲ್ಲಿ ಸರ್ಕಾರದ ಪರವಾಗಿ ಮಾನ್ಯ ಕಂದಾಯ ಸಚಿವರು ಮನವಿ ಸ್ವೀಕರಿಸಿ ಅತೀ ಶೀಘ್ರದಲ್ಲಿ ಸೇವಾಭದ್ರತೆ ನೀಡಿ ಡಿ ಗ್ರೂಪ್ ಸಮಾನವಾದ ವೇತನ ನೀಡುವುದಾಗಿ ಮುಷ್ಕರದಲ್ಲಿ ಭರವಸೆ ನೀಡಿ ಎರಡು ವರ್ಷಗಳಾದರೂ ಸಹ ನಮ್ಮ ಬೇಡಿಕೆ ಈಡೇರಿರುವುದಿಲ್ಲ.
ಈ ಸಂಬಂಧ ದಿನಾಂಕ: 25/09/25 ರಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕಡಿತ ಮಂಡನೆ ಯಾಗಿ ಗ್ರಾಮ ಸಹಾಯಕರನ್ನು ಗ್ರೂಪ್ ಡಿ ಹುದ್ದೆಯ ಯಲ್ಲಿ ಸಕ್ರಮಾತಿ ಗೊಳಿಸಲು ಅಥವಾ 10450 ಗ್ರಾಮ ಸಹಾಯಕರಿಗೆ ನೀಡು ತಿರುವ ಗೌರವ ಧನವನ್ನು ಹೆಚ್ಚಿಸಲು 15000/ ರಿಂದ 27000/ ರೂ ಗಳಿಗೆ ಹೆಚ್ಚಿಸಲು ಮನವಿ ಮಾಡಿಕೊಂಡರು . ಸರ್ಕಾರದ ಕಾನೂನು ಸಚಿವರಾದ ಶ್ರೀ ಹೆಚ್ ಕೆ ಪಾಟೀಲ ರವರು ಪತ್ರಿಕಾ ಹೇಳಿಕೆ ನೀಡಿದ್ದು, ಇದು ರಾಜ್ಯದ ಪ್ರಮುಖ ಹಾಗೂ ಮಾಧ್ಯಮಗಳಲ್ಲಿ ಪ್ರಸಾರವಾಗಿರುತ್ತದೆ. ಆದರೆ ಸದರಿ ಸಚಿವ ಸಂಪುಟ ಸಭೆಯ ತೀರ್ಮಾನವನ್ನು ಇದುವರೆಗೂ ಕಾಯರೂಪಕ್ಕೆ ತಂದು ಆದೇಶ ಹೊರಡಿಸಿರುವುದಿಲ್ಲ, ಏತನ್ಮಧ್ಯೆ ಮತ್ತೊಮ್ಮೆ ಗ್ರಾಮಸಹಾಯಕರಿಗೆ 2000 ರೂ ಮಾಸಿಕ ವೇತನ ನೀಡುವ ಪ್ರಸ್ತಾವನೆ ಸಲ್ಲಿಸಲಾಗಿದ್ದರೂ ಸಹ ಇತ್ತೀಚೆಗೆ ಮಂಡಿಸಲಾದ ಆಯವ್ಯಯ 2026 ಬಡೆಟ್ ನಲ್ಲಿ ಯಾವುದೇ ರೀತಿ ಘೋಷಣೆ ಯಾಗದೆ 10450 ಜನ ಗ್ರಾಮ ಸಹಾಯಕರಿಗೆ ತೀವ್ರ ನೋವನ್ನು ಉಂಟು ಮಾಡುತ್ತಿದ್ದಾರೆಂದು ಪಾವಗಡ ಶ್ರೀ ರಾಮುಲು ಸರ್ಕಾರ ವನ್ನು ದೂರಿದರು. ಗ್ರಾಮಸಹಾಯಕರಿಗೆ ತೀವ್ರ ನಿರಾಸೆ ಉಂಟು ಮಾಡಿರುತ್ತದೆ.
ಆದ್ದರಿಂದ ನಮ್ಮ ಮೂಲ ಬೇಡಿಕೆ ಒಂದು ವೇಳೆ 27 ನೇ ತಾರೀಖಿನ ಒಳಗಾಗಿ ನಮ್ಮ ಬೇಡಿಕೆ ಈಡೇರಿಸದ ಇದ್ದಲ್ಲಿ ರಾಜ್ಯದ 10450 ಜನ ಮತ್ತು ನಮ್ಮ ಕುಟುಂಬದ ಸದಸ್ಯರು ಸೇರಿ ದಿನಾಂಕ:27/03/2026 ರ ನಂತರ ಬೆಂಗಳೂರಿನ ಪ್ರತಂತ್ರ್ಯ ಉದ್ಯಾನದಲ್ಲಿ ಹ ಆಮರಣಾಂತ ಉಪವಾಸ ಕೈಗೊಳ್ಳಲು ರಾಜ್ಯ ಸಂಘದ ವತಿಯಿಂದ ತೀವಾಗಸಲಾಗಿದ್ದ ಆದರಂತ ತನ್ನ ಸಾಕರ್ಗ ಬೇಡಿಕೆಯನ್ನು ಜರೂರಾಗಿ ಈಡೇರಿಸುವ ಮೂಲಕ ಆಮರಣಾಂತ ಉಪವಾಸ ಮಾಡಲು ಅವಕಾಶ ಸರ್ಕಾರವನ್ನು ಒತ್ತಾಯಿಸುತ್ತಿದ್ದು,
ದೇವನಹಳ್ಳಿ ವೆಂಕಟೇಶ್-ಪ್ರಧಾನ ಕಾರ್ಯದರ್ಶ ಸರ್ಕಾರಕ್ಕೆ ಹೆಚ್ಚರಿಕೆ ನೀಡಿದರು. ವರದಿ ಮಂಜುಳಾ ರೆಡ್ಡಿ.

Related Articles

Leave a Reply

Your email address will not be published. Required fields are marked *

Back to top button