ನಾಡೋಜ ಪ್ರಶಸ್ತಿ ಮರಳಿ ಪಡೆಯಲಿ. ಪ್ರೊ ಶಿವರಾಜ್ ಪಾಟೀಲ್ ಚಿಂತಕರು ಕಲ್ಬುರ್ಗಿ

ನಾಡೋಜ ಪ್ರಶಸ್ತಿ ಮರಳಿ ಪಡೆಯಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷರಾದ ಮಹೇಶ್ ಮಹೇಶ್ ಜೋಶಿ ಅವರಿಗೆ ಕನ್ನಡ ವಿಶ್ವವಿದ್ಯಾಲಯ ಹಂಪಿ ಉನ್ನತ ಮಟ್ಟದ ಸಭೆಯಲ್ಲಿ ನಿರ್ಣಯಿಸಿ ನೀಡಿದ ನಾಡೋಜ ಪ್ರಶಸ್ತಿ ಪದವಿಯನ್ನು ಕೂಡಲೇ ಹಿಂಪಡೆಯಬೇಕು ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಹಣವನ್ನು ದುರುಪಯೋಗಪಡಿಸಿಕೊಂಡು ಆರೋಪಕ್ಕೆ ಗುರಿಯಾಗಿ ಆಜೀವ ಸದಸ್ಯತ್ವ ಕಳೆದುಕೊಂಡಿರುವ ಮಹೇಶ್ ಜೋಶಿ ಅವರು ಕೂಡಲೇ ಆ ಪ್ರಶಸ್ತಿಯನ್ನು ನೈತಿಕ ಹೊಣೆ ಹೊತ್ತು ಹಿಂದುರಿಗಿಸಬೇಕು ಇದು ಅವರ ಹೊಣೆಗಾರಿಕೆಯಾಗಿದೆ ಕನ್ನಡ ಸಾಹಿತ್ಯ ಪರಿಷತ್ತಿನ ಆಡಳಿತ ಅಧಿಕಾರಿಗಳು ಜೋಶಿಯವರ ಆಜೀವ ಸದಸ್ಯತ್ವವನ್ನು ರದ್ದುಗೊಳಿಸಿ ಆದೇಶ ಹೊರಡಿಸಿದ್ದಾರೆ ಸರ್ಕಾರ ಕೂಡಲೇ ಹಂಪಿ ಕನ್ನಡ ವಿಶ್ವವಿದ್ಯಾಲಯ ನೀಡಿದ ನಾಡೋಜ ಪದವಿಯನ್ನು ಹಿಂಪಡೆಯಬೇಕು ಮತ್ತು ಅವರಿಗೆ ರಾಜ್ಯ ಸರ್ಕಾರದ ಮತ್ತು ಅಧೀನ ಸಂಘ ಸಂಸ್ಥೆಗಳು ನೀಡಿದ ಯಾವುದಾದರು ಪ್ರಶಸ್ತಿಗಳಿದ್ದರೆ ಅವುಗಳನ್ನು ಒಟ್ಟಾಗಿ ಹಿಂಪಡೆಯಬೇಕು ಇಲ್ಲದಿದ್ದರೆ ಕನ್ನಡ ನಾಡು ನುಡಿಗೆ ಮಾಡಿದ ಅಪಚಾರವಾಗುತ್ತದೆ ಮತ್ತು ಪ್ರತಿಷ್ಠಿತ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದವರು ಇಂತಹ ಅಪರಾಧ ಮನೋಭಾವನೆ ಹೊಂದಿರುವುದು ಮತ್ತು ಮೇಲ್ನೋಟದಲ್ಲಿ ಅಪರಾಧ ಸಾಬೀತಾಗಿರುವುದು ನೋಡಿದರೆ ಕೂಡಲೇ ಈ ಪ್ರಶಸ್ತಿಗಳನ್ನು ಹಿಂಪಡೆಯಬೇಕು ಇಲ್ಲದಿದ್ದರೆ ಸಮಾಜಕ್ಕೆ ಕೆಟ್ಟ ಸಂದೇಶ ರವಾನೆ ಆಗುತ್ತದೆ ಇವರಿಗಿಂತ ಮುಂಚೆ ಮತ್ತು ಅನಂತರ ಪಡೆದವರು ಕೂಡ ಸಂಶಯಾ ಸ್ಪದ ವ್ಯಕ್ತಿಗಳಾಗಿ ನಿಲ್ಲುತ್ತಾರೆ ಅರ್ಹತೆ ಯೋಗ್ಯತೆ ಮತ್ತು ಪಾರದರ್ಶಕ ಚರಿತ್ರೆ ಇಲ್ಲದವರಿಗೆ ಇಂಥ ಪ್ರಶಸ್ತಿಗಳು ಕೊಡುವುದು ಸರಿಯಲ್ಲ ಎಂಬುದು ಸಾಮಾನ್ಯ ಅನಿಸಿಕೆ ಆಗಿದೆ ಆದ್ದರಿಂದ ಜೋಶಿಯವರು ಈಗ ಕನ್ನಡ ಸಾಹಿತ್ಯ ಪರಿಷತ್ತಿನ ಹಣವನ್ನು ದುರುಪಯೋಗಪಡಿಸಿಕೊಂಡು ಭ್ರಷ್ಟಾಚಾರ ಬ್ರಹ್ಮಾಂಡವಾಗಿಸಿದ್ದಾರೆ ಅದನ್ನು ಸರಿಪಡಿಸಲು ಮತ್ತು ನಾಡೋಜ ಪದವಿಯನ್ನು ನೀಡಿದ ವಿಶ್ವವಿದ್ಯಾಲಯದ ಪವಿತ್ರತೆ ಮತ್ತು ಅದರ ಘನತೆ ಗೌರವ ಎತ್ತಿ ಹಿಡಿಯಲು ಕೂಡಲೆ ಸರ್ಕಾರ ಉನ್ನತ ಮಟ್ಟದ ಸಭೆಯನ್ನು ಕರೆದು ಇವರಿಗೆ ನೀಡಿದ ನಾ ಆರೋಗ್ಯ ಪದವಿಯನ್ನು ಹಿಂಪಡೆಯಬೇಕೆಂದು ಆಗಿ ವಿಶ್ವವಿದ್ಯಾಲಯಕ್ಕೆ ಆದೇಶ ನೀಡಬೇಕೆಂದು ವಿನಂತಿಸಿಕೊಳ್ಳುತ್ತೇನೆ ಅವರು ಚಂದನ ವಾಹಿನಿಯ ನಿರ್ದೇಶಕರಾಗಿದ್ದಾಗ ತುಂಬಾ ಪ್ರಭಾವಿಯಾಗಿ ಕೆಲಸ ಮಾಡಿರೋದು ಮೇಲ್ನೋಟದಲ್ಲಿ ಕಂಡು ಬಂದಿರುವುದರಿಂದ ವಿಶ್ವವಿದ್ಯಾಲಯ ಇಂತಹ ನಿರ್ಣಯ ತೆಗೆದುಕೊಂಡಿರಬಹುದು ಈಗ ಅದನ್ನು ಮರಳಿ ಪಡೆಯುವುದರ ಮೂಲಕ ವಿಶ್ವವಿದ್ಯಾಲಯದ ಗೌರವ ಎತ್ತಿ ಹಿಡಿಯಬೇಕೆಂದು ಒತ್ತಾಯಿಸುತ್ತೇನೆ ಪ್ರೊ ಶಿವರಾಜ್ ಪಾಟೀಲ್ ಚಿಂತಕರು ಕಲ್ಬುರ್ಗಿ



