ಶಿಕ್ಷಣದ ಗುಣಮಟ್ಟ, ICAR ಮಾನ್ಯತೆ ಹಾಗೂ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಂಬಂಧಿಸಿದ ಮಹತ್ವದ ಬೇಡಿಕೆ..

ಕೃಷಿ ಶಿಕ್ಷಣ ದ ಗುಣಮಟ್ಟಕೆ ದಕ್ಕೆ – ಬೃಹತ್ ಪ್ರತಿಭಟನೆ
ಬೆಂಗಳೂರು, ಆ. 1: ಕರ್ನಾಟಕ ಕೃಷಿ ವಿಶ್ವವಿದ್ಯಾಲಯಗಳ ವಿವಿಧ ವಿದ್ಯಾರ್ಥಿ ಸಂಘಟನೆಗಳು ಹಾಗೂ ರಾಜ್ಯದ ಕೃಷಿ ವಿದ್ಯಾರ್ಥಿಗಳ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಕೃಷಿ ಶಿಕ್ಷಣದ ಗುಣಮಟ್ಟ, ICAR ಮಾನ್ಯತೆ ಹಾಗೂ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಂಬಂಧಿಸಿದ ಮಹತ್ವದ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟರು. ವಿದ್ಯಾರ್ಥಿ ಮುಖಂಡರು, ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡುತ್ತಿರುವ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆ ಉಂಟಾಗುವಂತಹ ಬೆಳವಣಿಗೆಗಳು ನಡೆಯುತ್ತಿದ್ದು, ಸರ್ಕಾರ ಹಾಗೂ ಸಂಬಂಧಿತ ಅಧಿಕಾರಿಗಳು ತಕ್ಷಣವೇ ಮಧ್ಯಪ್ರವೇಶಿಸಿ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಒತ್ತಾಯಿಸಿದರು.
ವಿದ್ಯಾರ್ಥಿಗಳ ಪ್ರಮುಖ ಬೇಡಿಕೆಗಳಲ್ಲಿ ಕೃಷಿ ಶಿಕ್ಷಣದ ತಾಂತ್ರಿಕ ಹುದ್ದೆಗಳಿಗೆ AICTE ಮಾನ್ಯತೆಯ ಬದಲು ICAR ಮಾನ್ಯತೆಯನ್ನೇ ಮುಂದುವರಿಸಬೇಕು. ಈಗಾಗಲೇ ICAR ಮಾನ್ಯತೆ ಪಡೆದಿರುವ ಕೃಷಿ ಪದವೀಧರರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಮುಂದಿನ ದಿನಗಳಲ್ಲಿ ಬೃಹತ್ ಪ್ರತಿಭಟನೆ ಯನ್ನು ನಗರದ ಸ್ವತಂತ್ರ ಹೋರಾಟ ಗಾರರ ಉದ್ಯಾನ ವನದಲ್ಲಿ ಹಮ್ಮಿ ಕೊಳ್ಳಲಾಗುವುದು ಎಂದು ಹೆಚ್ಚರಿಸಿದರು .
ಇದಲ್ಲದೆ, ICAR ಮಾನ್ಯತೆ ಇಲ್ಲದ ಖಾಸಗಿ ಕೃಷಿ ಕಾಲೇಜುಗಳಿಗೆ ಯಾವುದೇ ರೀತಿಯ ಹೊಸ ಸಂಯೋಜನೆ (Affiliation) ನೀಡಬಾರದು. DAESI ಯೋಜನೆಯಡಿ ನಡೆಯುತ್ತಿರುವ ಪ್ರವೇಶ ಪ್ರಕ್ರಿಯೆಗಳನ್ನು ಪರಿಶೀಲಿಸಿ ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯವನ್ನು ತಡೆಯಬೇಕು ಎಂದು ಒತ್ತಾಯಿಸಿದರು.
ಕೃಷಿ ಇಲಾಖೆಯ AO ಹಾಗೂ AAO ಸೇರಿದಂತೆ ಎಲ್ಲಾ ತಾಂತ್ರಿಕ ಹುದ್ದೆಗಳ ನೇಮಕಾತಿಯನ್ನು ಪಾರದರ್ಶಕವಾಗಿ ನಡೆಸಬೇಕು. ಅಗತ್ಯವಿದ್ದಲ್ಲಿ C&R ನಿಯಮಗಳನ್ನು ತಿದ್ದುಪಡಿ ಮಾಡಿ ಮರು ಅಧಿಸೂಚನೆ ಹೊರಡಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದರು.
ಡಾ. ಪುಷ್ಪರಾಜ್ ಕುಮಾರ್ – ಹಿರಿಯ ಕೃಷಿ ವಿಜ್ಞಾನಿ ಕೃಷಿ ಪದವಿಯ ಗೌರವ ಉಳಿಸಿ – ಕೃಷಿ ವಿದ್ಯಾರ್ಥಿಗಳ ಭವಿಷ್ಯ ಕಾಪಾಡಿ ಎಂಬ ಘೋಷಣೆಯೊಂದಿಗೆ ಸರ್ಕಾರವು ವಿದ್ಯಾರ್ಥಿಗಳ ನ್ಯಾಯಸಮ್ಮತ ಬೇಡಿಕೆಗಳನ್ನು ಶೀಘ್ರವಾಗಿ ಈಡೇರಿಸಿ ಕೃಷಿ ಶಿಕ್ಷಣದ ಗುಣಮಟ್ಟ ಮತ್ತು ವಿದ್ಯಾರ್ಥಿಗಳ ಭವಿಷ್ಯವನ್ನು ರಕ್ಷಿಸಬೇಕು ಎಂದು ಸರ್ಕಾರ ವನ್ನು ಡಿಮ್ಯಾಂಡ್ ಮಾಡಿದರು. ರಾಜ್ಯದ ವಿವಿಧ ರೈತ, ಕಾರ್ಮಿಕ ಹಾಗೂ ವಿದ್ಯಾರ್ಥಿ ಸಂಘಟನೆಗಳ ಮುಖಂಡರು ಮತ್ತು ಪ್ರತಿನಿಧಿಗಳು ಪರಶುರಾಮ್ – ಕಾರ್ಮಿಕ ಮುಖಂಡ , ಮಹಾಲಿಂಗ ಶಂಕರ – ದಲಿತ ಮುಖಂಡ, ಯುವರಾಜ್ – ಪ್ರಾಂತ ರೈತ ಸಂಘದ ಮುಖಂಡ, ಚೈತನ್ಯ ಸಂಬುಂದಸ್ವಾಮಿ – ರೈತ, ಬಡಗಲೂರ ನಾಗರಾಜು – ರೈತ ಮುಖಂಡ , ಡಾ. ಪುಷ್ಪರಾಜ್ ಕುಮಾರ್ – ಹಿರಿಯ ಕೃಷಿ ವಿಜ್ಞಾನಿ ಉಪಸ್ಥಿತರಿದ್ದರು. ವರದಿ. ಮಂಜುಳಾ ರೆಡ್ಡಿ.



