“ಅ.ನ.ಕೃ. ಕನ್ವೆನ್ಷನ್ ಸೆಂಟರ್”ಮತ್ತು “ಡಾ. ಪುನೀತ್ ರಾಜ್ ಕುಮಾರ್ ಸಭಾಂಗಣ”ದ ಲೋಕಾರ್ಪಣೆ ಕಾರ್ಯಕ್ರಮ”

“ಅ.ನ.ಕೃ. ಕನ್ವೆನ್ಷನ್ ಸೆಂಟರ್”ಮತ್ತು “ಡಾ|| ಪುನೀತ್ ರಾಜ್ ಕುಮಾರ್ ಸಭಾಂಗಣ”ದ ಲೋಕಾರ್ಪಣೆ ಕಾರ್ಯಕ್ರಮ”
ಬೆಂಗಳೂರು ಮಹಾನಗರದಲ್ಲಿ ಕಲ್ಯಾಣ ಮಂಟಪಗಳ ಬಾಡಿಗೆ ದರ ಕನಿಷ್ಠ ಐದಾರು ಲಕ್ಷ ರೂಪಾಯಿಗಳಿಗೂ ಹೆಚ್ಚು ಇದ್ದು, ಬಡ ಕುಟುಂಬಗಳ ಸದಸ್ಯರ ವಿವಾಹ / ನಿಶ್ಚಿತಾರ್ಥ / ಆರತಕ್ಷತೆಗಳಂತಹ ಶುಭ ಕಾರ್ಯಗಳನ್ನು ನೆರವೇರಿಸಲು ಕಷ್ಟಸಾಧ್ಯವಾಗಿರುವ ಹಿನ್ನೆಲೆಯಲ್ಲಿ ಮತ್ತು ಮಧ್ಯಮ / ಕೆಳ ಮಧ್ಯಮ / ಬಡ ಕುಟುಂಬಗಳ ಶುಭ ಸಮಾರಂಭಗಳನ್ನು ನೆರವೇರಿಸಿಕೊಳ್ಳಲು ಅತೀ ಕಡಿಮೆ ಶುಲ್ಕದಲ್ಲಿ ಮತ್ತು ಅತ್ಯಂತ ವೈಭವೋಪೇತವಾದ ಭವನದಲ್ಲಿ ಅನುವು ಮಾಡಿಕೊಡಬೇಕೆಂಬ ಸದುದ್ದೇಶದಿಂದ ಬೃಹತ್ತಾದ ಮತ್ತು ವೈಭವೋಪೇತವಾದ ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆಯೊಂದಿಗೆ “ಅ.ನ.ಕೃ. ಕನ್ವೆನ್ಷನ್ ಸೆಂಟರ್”ಅನ್ನು ಹಾಗೂ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ, ಸಿನಿಮಾ ಬಿಡುಗಡೆ ಪೂರ್ವ ಕಾರ್ಯಕ್ರಮ, ಸಾಂಸ್ಕೃತಿಕ / ರಂಗಭೂಮಿ ಕಾರ್ಯಕ್ರಮಗಳು, ಶಾಲಾ-ಕಾಲೇಜು ವಾರ್ಷಿಕೋತ್ಸವಗಳಂತಹ ಕಾರ್ಯಕ್ರಮಗಳನ್ನು ನಡೆಸಲು ಯಾವುದೇ Multiplex ಗಳಿಗೂ ಕಡಿಮೆ ಇಲ್ಲದಂತೆ ಅಂತರರಾಷ್ಟ್ರೀಯ ಗುಣಮಟ್ಟದಲ್ಲಿ ಮತ್ತು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ “ಡಾ|| ಪುನೀತ್ ರಾಜ್ ಕುಮಾರ್ ಸಭಾಂಗಣ”(Dr. Puneeth Rajkumar Auditorium) ವನ್ನು ಪಾಲಿಕೆ ವತಿಯಿಂದ ಯಡಿಯೂರು ವಾರ್ಡಿನ ಐತಿಹಾಸಿಕ ಯಡಿಯೂರು ಕೆರೆಯ ಎದಿರು ನಿರ್ಮಿಸಲಾಗಿದ್ದು, ಇದನ್ನು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಶ್ರೀ. ಆರ್. ಅಶೋಕ್ ರವರು, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ. ಎಲ್. ಎಸ್. ತೇಜಸ್ವಿ ಸೂರ್ಯ ರವರು, ಖ್ಯಾತ ನಿರ್ಮಾಪಕಿ ಶ್ರೀಮತಿ. ಅಶ್ವಿನಿ ಪುನೀತ್ ರಾಜ್ ಕುಮಾರ್ ರವರು ಮತ್ತು ಅ.ನ.ಕೃ. ಅವರ ಪುತ್ರ ಶ್ರೀ. ಗೌತಮ್ ಅವರು ಇಂದು (ದಿನಾಂಕ: 22/06/2026, ಸೋಮವಾರ) ಲೋಕಾರ್ಪಣೆಗೊಳಿಸಿದರು.
600 ರಿಂದ 700 ಜನ ಆಸೀನರಾಗಬಹುದಾದ “Reception Hall”, 300 ಕ್ಕೂ ಹೆಚ್ಚು ಜನ ಒಂದೇ ಬಾರಿಗೆ ಊಟ ಮಾಡಬಹುದಾದ “ಭೋಜನಾಲಯ”ಮತ್ತು 08 ಬೃಹತ್ ಕೊಠಡಿಗಳನ್ನು ಒಳಗೊಂಡ ಸಂಪೂರ್ಣ ಹವಾನಿಯಂತ್ರಿತವಾದ “ಅ.ನ.ಕೃ. ಕನ್ವೆನ್ಷನ್ ಸೆಂಟರ್”ನ ಬಾಡಿಗೆ ಒಂದು ಮದುವೆ ಕಾರ್ಯಕ್ರಮಕ್ಕೆ ಕೇವಲ ₹. 70,000 (ಎಪ್ಪತ್ತು ಸಾವಿರ) ರೂಪಾಯಿಗಳಷ್ಟು ಮಾತ್ರ ಇರುತ್ತದೆ.
ಹಾಗೆಯೇ, 322 ಮಂದಿ ಆಸೀನರಾಗಬಹುದಾದ “ಐಷಾರಾಮಿ ಆಸನ”ಗಳನ್ನು ಒಳಗೊಂಡಿರುವ ಮತ್ತು “Surround Sound” ವ್ಯವಸ್ಥೆ ಇರುವಂತಹ “ಡಾ|| ಪುನೀತ್ ರಾಜ್ ಕುಮಾರ್ ಆಡಿಟೋರಿಯಂ”ನ ಬೆಲೆ ಕೇವಲ ₹. 25,000 (ಇಪ್ಪತ್ತೈದು ಸಾವಿರ) ರೂಪಾಯಿಗಳಷ್ಟಿದ್ದು, ರಂಗಭೂಮಿ ಚಟುವಟಿಕೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಮಾತ್ರವಲ್ಲದೇ ಕನ್ನಡ ಚಿತ್ರರಂಗಕ್ಕೆ ಅತ್ಯಂತ ಕಡಿಮೆ ದರದಲ್ಲಿ ಸಿನಿಮಾ ಬಿಡುಗಡೆ ಪೂರ್ವ ಕಾರ್ಯಕ್ರಮಗಳನ್ನು ಮಾಡಲು ಅವಕಾಶ ಮಾಡಿಕೊಡಲಾಗಿದೆ.
“ಅ.ನ.ಕೃ. ಕನ್ವೆನ್ಷನ್ ಸೆಂಟರ್”ಮತ್ತು “ಡಾ|| ಪುನೀತ್ ರಾಜ್ ಕುಮಾರ್ ಸಭಾಂಗಣ”ದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕರಾದ ಶ್ರೀ. ರಮೇಶ್ ಎನ್. ಆರ್. ರವರು, ಪಾಲಿಕೆಯ ಮಾಜಿ ಸದಸ್ಯರಾದ ಶ್ರೀಮತಿ. ಪೂರ್ಣಿಮಾ ರಮೇಶ್, ಶ್ರೀ. ಎ. ಹೆಚ್. ಬಸವರಾಜ್, ಶ್ರೀ. ಎಲ್. ಗೋವಿಂದರಾಜು, ಶ್ರೀ. ಗೋವಿಂದ ನಾಯ್ಡು ಸೇರಿದಂತೆ ಹಲವಾರು ಗಣ್ಯರು ಹಾಗೂ 500 ಕ್ಕೂ ಹೆಚ್ಚು ಯಡಿಯೂರು ವಾರ್ಡ್ ಮತ್ತು ಸುತ್ತಮುತ್ತಲ ಪ್ರದೇಶಗಳ ನಾಗರಿಕರು ಹಾಜರಿದ್ದರು.






