ರಾಜ್ಯ

ನವಂಬರ್ 25ರಂದು ನೇಪಾಳದಲ್ಲಿ ಅಂತರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವ

ನವಂಬರ್ 25ರಂದು ನೇಪಾಳದಲ್ಲಿ ಅಂತರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವ

ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ನವಂಬರ್ 25ನೇ ತಾರೀಖು ಸಂಜೆ 5ಗಂಟೆಗೆ ನೇಪಾಳದ ಪಶುಪತಿನಾಥ ದೇವಾಲಯ ಸನ್ನಿಧಿಯಲ್ಲಿರುವ , ಆನಂದ ಪಶುಪತಿ ದೇವಾಲಯ ಅವರಣದಲ್ಲಿ ಅಂತರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ.

ಉದ್ಘಾಟನೆಯನ್ನು ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರು ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಎ.ಅಮೃತ್ ರಾಜ್ ರವರು ಮುಖ್ಯ ಅತಿಥಿಗಳಾಗಿ ಮೈಸೂರು ಮಹಾರಾಜರ ಧರ್ಮಪತ್ನಿ ಶ್ರೀಮತಿ ತ್ರಿಶಿಖಾಕುಮಾರಿ ಒಡೆಯರ್ ರವರು, ಐ.ಪಿ.ಎಸ್.ಪೂಲೀಸ್ ಅಧಿಕಾರಿ ಶ್ರೀಮತಿ ರೂಪ ಮೌದ್ಗೀಲ್ ರವರು ಮತ್ತು ವಿಶೇಷ ಅಹ್ವಾನಿತರಾಗಿ ಬಿಬಿಎಂಪಿ ಉಪ ಆಯುಕ್ತರಾದ ಮಂಜುನಾಥ್ ಸ್ವಾಮಿರವರು, ಜಂಟಿ ಆಯುಕ್ತೆ ಶ್ರೀಮತಿ ಲಕ್ಷ್ಮಿದೇವಿರವರು, ಖ್ಯಾತ ಹಿನ್ನಲೆ ಗಾಯಕಿ ಕುಮಾರಿ ಅನುರಾಧ ಭಟ್, ಹಿರಿಯ ವಕೀಲರಾದ ವಿ.ಶ್ರೀನಿವಾಸ್ ಪತ್ರಕರ್ತ ವೈ ಜಿ ಅಶೋಕ್ ಕುಮಾರ್,ತ್ಯಾಗಟೂರ್ ಸಿದ್ದೇಶ್ ರವರು ಭಾಗವಹಿಸಲಿದ್ದಾರೆ.

ಇದೇ ಸಂದರ್ಭದಲ್ಲಿ ಅಧ್ಯಕ್ಷರಾದ ಎ.ಅಮೃತ್ ರಾಜ್ ರವರು ಮಾತನಾಡಿ ನೇಪಾಳದಲ್ಲಿ ನವಂಬರ್ 25ನೇ ತಾರೀಖು ಜರುಗುವ ಅಂತರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಜ್ಯದಿಂದ 700ಕ್ಕೂ ಕನ್ನಡಿಗರು ಭಾಗವಹಿಸುತ್ತಿದ್ದಾರೆ .

ಕನ್ನಡ ಭಾಷೆಯ ಕಲೆ,ಸಾಹಿತ್ಯ ಸಂಸ್ಕೃತಿ ವಿಶ್ವದ ಎಲ್ಲ ಕಡೆ ಪಸರಿಸಲಿ ಎಂಬ ಉದ್ದೇಶ.

ನೇಪಾಳದಲ್ಲಿ ರಾಜ್ಯೋತ್ಸವ ಸಮಾರಂಭಕ್ಕೆ ಆಡಳಿತಗಾರರಾದ ರಾಕೇಶ್ ಸಿಂಗ್ ರವರು ಮತ್ತು ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ರವರು ಮತ್ತು ಬಿಬಿಎಂಪಿ ಆಡಳಿತ ವರ್ಗ ಸಂಪೂರ್ಣ ಸಹಕಾರ ನೀಡಿದೆ.

ಕರ್ನಾಟಕ ಮತ್ತು ನೇಪಾಳದ ಪಶುಪತಿನಾಥ ದೇವಾಲಯ ಸನ್ನಿಧಕ್ಕೂ ನೂರಾರು ವರ್ಷಗಳ ಸಂಭಂದವಿದೆ.

ಅಂತರಾಷ್ಟ್ರೀಯ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಂಜೆ 4ಗಂಟೆಗೆ ಬಿಬಿಎಂಪಿ ಅಧಿಕಾರಿ ಮತ್ತು ನೌಕರರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಖ್ಯಾತ ಹಿನ್ನಲೆ ಗಾಯಕಿ ಅನುರಾಧಭಟ್ ರವರಿಂದ ಸಂಗೀತ ಸಂಜೆ ಹಾಗೂ ಬಿಬಿಎಂಪಿ ಉಪ ಆರೋಗ್ಯಧಿಕಾರಿ ಡಾ||ಎ.ಎಲ್.ಕಲಾವತಿರವರಿಗೆ ಮೈಸೂರು ಮಹಾರಾಜರಿಂದ ಗೌರವ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಮತ್ತು ಸಂಜೆ 5ಗಂಟೆಗೆ ಮೈಸೂರು ಮಹಾರಾಜರಿಂದ ಅಂತರಾಷ್ಟ್ರೀಯ ಕರ್ನಾಟಕ ಉದ್ಘಾಟನೆಯಾಗಲಿದೆ ಎಂದು ಹೇಳಿದರು.

Related Articles

Leave a Reply

Your email address will not be published. Required fields are marked *

Back to top button