ಶ್ರಾದ್ಧ ಭಕ್ತಿಯಿಂದ ಶ್ರೀ ಅಗ್ನಿ ಬನ್ನಿ ರಾಯರ ಜಯಂತಿ ಆಚರಣೆ.ಕನಕಗಿರಿ

ಶ್ರಾದ್ಧ ಭಕ್ತಿಯಿಂದ ಶ್ರೀ ಅಗ್ನಿ ಬನ್ನಿ ರಾಯರ ಜಯಂತಿ ಆಚರಣೆ
ಕನಕಗಿರಿ ಪಟ್ಟಣದ ತಹಸಿಲ್ದಾರ್ ಕಚೇರಿಯಲ್ಲಿ ವಿಶ್ವನಾಥ್ ಮೂರುಡಿ ತಾಲೂಕ್ ಆಡಳಿತ ಅಧಿಕಾರಿಗಳ ನೇತೃತ್ವದಲ್ಲಿ ಶ್ರೀ ಅಗ್ನಿ ಬನ್ನಿ ರಾಯರ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡುವ ಮೂಲಕ ಜಯಂತಿಯನ್ನು ಆಚರಿಸಲಾಯಿತು.
ನಂತರ ಮಾತನಾಡಿದ ತಹಶೀಲ್ದಾರ್ ವಿಶ್ವನಾಥ್ ಮುರುಡಿ ಅವರು ಭಾರತೀಯ ಪರಂಪರೆಗೆ ವಿಶೇಷವಾದ ಕೊಡುಗೆಯನ್ನು ನೀಡಿದ ಮಹನೀಯರು ಕೇವಲ ಒಂದು ಜನಾಂಗಕ್ಕೆ ಸೀಮಿತವಾಗಿರದೆ ಮಾನವ ಜನಾಂಗಕ್ಕೆ ಬಹಳಷ್ಟು ಶ್ರಮಿಸಿದ್ದಾರೆ. ಇಂತಹ ಮಹನೀಯರ ಜಯಂತಿಯನ್ನು ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ ಎಂದು ಹೇಳಿದರು.
ಈ ವೇಳೆ ತಹಶೀಲ್ದಾರರು ವಿಶ್ವನಾಥ ಮುರಡಿ , ಗ್ರೇಡ್ 2 ತಹಶೀಲ್ದಾರರು ಶ್ರೀವಿ.ಎಚ್.ಹೊರಪೇಟಿ ಕನಕಗಿರಿ, ಶ್ರೀವಿಶ್ವೇಶ್ವರಯ್ಯ ಗ್ರೇಡ್-2 ತಹಶೀಲ್ದಾರರು ಕಾರಟಗಿ, ಶ್ರೀಮತಿ ಅನಿತಾ ಇಂಡಿ ಶಿರಸ್ತೇದಾರರು, ಪರಸಪ್ಪ ಘಾಟಿ ಶಿರಸ್ತೇದಾರರು, ಶರಣಪ್ಪ ಉಪ ತಹಶೀಲ್ದಾರರು ಹುಲಿಹೈದರ/ಕನಕಗಿರಿ,ಉಮಾಮಹೇಶ್ ಶಿರಸ್ತೇದಾರರು ಕಾರಟಗಿ, ರವೀಶ ಹಿರೇಮಠ, ವಿಜಯ ಕುಮಾರ, ಶ್ರೀಮತಿ ನೀಲಾಂಬಿಕೆ, ಸೈಯದ್ ಬಶೀರುದ್ದಿನ ಕಂದಾಯ ನಿರೀಕ್ಷಕರು ಕನಕಗಿರಿ/ನವಲಿ, ಶ್ರೀ ಮತಿ ಹೇಮಲತಾ,ಗುರುಲಿಂಗಯ್ಯ ಪೂಜಾರಿ, ಅಂಬರೀಶ್, ಸಂಗಮೇಶ, ಶರಣಪ್ಪ ಗ್ರಾ.ಆ.ಅ ಭೂಮಿ, ಸಿದ್ದಲಿಂಗಯ್ಯ ಸ್ವಾಮಿ ದೇವಸ್ಥಾನ, ಮುಜಾಹಿದ್ ಗಣತಿದಾರರು, ರಾಜಸಾಬ್,ರಮೇಶ ಸರ್ವೇಯರ್,ಸಂದೀಪ್ ಸೆಕ್ರೆಟರಿ ಮೈಲಾಪುರ, ರಾಘವೇಂದ್ರ ಪುರ ಸಭೆ ಕಾರಟಗಿ, ಬಸವರಾಜ, ಶಿವರಾಜ್ ಸದ್ರಿ ಜಯಂತಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಗೌತಮ್ ಯಾದವ್ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ.



