ಸಚಿವ ಶಿವರಾಜ್ ತಂಗಡಿಗಿ ವಿರುದ್ಧ ವಿವಾದ ಬೇಡ ಕೆ ಗಂಗಾಧರ ಸ್ವಾಮಿ.. ಕನಕಗಿರಿ.

ಸಚಿವ ಶಿವರಾಜ್ ತಂಗಡಿಗಿ ವಿರುದ್ಧ ವಿವಾದ ಬೇಡ ಕೆ ಗಂಗಾಧರ ಸ್ವಾಮಿ
ಕನಕಗಿರಿ ಚುನಾವಣಾ ಪ್ರಚಾರಕ್ಕೆ
ಬಿಜೆಪಿಯಲ್ಲಿ ಅಭಿವೃದ್ಧಿ ವಿಷಯಗಳೇ ಬಿಜೆಪಿಯಲ್ಲಿ ಇಲ್ಲ.
ಮೋದಿ ಮೋದಿ ಎನ್ನುವ ಯುವಕರಿಗೆ ಕಪಾಳಕ್ಕೆ ಹೊಡೆಯಿರಿ ಎನ್ನುವ ತಂಗಡಗಿಯವರ ಹೇಳಿಕೆಯನ್ನು ಬಿಜೆಪಿ ನಾಯಕರು ಅನಗತ್ಯ ವಿವಾದ ಸೃಷ್ಟಿಸುತ್ತಿದ್ದಾರೆ ಕಳೆದ ಚುನಾವಣೆಯಲ್ಲಿ
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು
ಪ್ರಚಾರದ ವೇಳೆ ಎರಡು ಕೋಟಿ ಪ್ರತಿ ವರ್ಷ
ಉದ್ಯೋಗ ಸೃಷ್ಟಿ ಮಾಡುತ್ತೇನೆ ಸ್ಮಾರ್ಟ್ ಸಿಟಿ ಮಾಡುವುದಾಗಿ ಹೇಳಿ ಮಾತು ತಪ್ಪಿರುವ ಮೋದಿಯವರ ಜಪ ಮಾಡುವ ಯುವಕರಿಗೆ ಎಚ್ಚರಿಸಿ ಎಂಬರ್ಥದ ಹೇಳಿಕೆಯನ್ನು ಬಿಜೆಪಿಯವರು ಮನಸೋ ಇಚ್ಛೆ ತಿರುಚುವ ಕೆಲಸ ಮಾಡುತ್ತಿದ್ದಾರೆ ಎಂದು ಕನಕಗಿರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ
ಕೆ ಗಂಗಾಧರ ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದರು.ಪಟ್ಟಣದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದವರು ಬಿಜೆಪಿ ಅಭಿವೃದ್ಧಿ ನಾಯಕರಿಗೆ ವಿಷಯಗಳೇ ಇಲ್ಲ
ಕಾಂಗ್ರೆಸ್ ಅಭಿವೃದ್ಧಿ ಪರವಾಗಿದ್ದು ಅದನ್ನು ಸಹಿಸದ ಬಿಜೆಪಿ ಇಂತಹ ಹೇಳಿಕೆಗಳನ್ನು ಅನಗತ್ಯವಾಗಿ ವಿವಾದ ಮಾಡಿ ಕಾಂಗ್ರೆಸ್ ಬಗ್ಗೆ ಅಪಪ್ರಚಾರ ಮಾಡೋದೇ ಬಿಜೆಪಿ ಕೆಲಸ ಎಂದು ಆರೋಪಿಸಿದರು. ಇತ್ತೀಚೆಗೆ
ಬಿಜೆಪಿಯ ವಿಧಾನ ಪರಿಷತ್ ಸದಸ್ಯರೊಬ್ಬರು ಅವರ ಪಕ್ಷದ ಕಾರ್ಯಕರ್ತರೊಬ್ಬರಿಗೆ ಮತ ಕೇಳಲು ಬೂಟಿನಿಂದ ಹೊಡೆಯುತ್ತೇನೆ ಎಂದಿದ್ದರು.
ಸಚಿವ ತಂಗಡಗಿಯವರು ಆ ರೀತಿಯ ಪದಗಳನ್ನು ಬಳಸಿಲ್ಲವೆಲ್ಲ ಆಗ ಖಂಡಿಸದ ಬಿಜೆಪಿ ಈಗ ಎದ್ದು ಕೂತಿರುವುದು ಗಮನಿಸಿದರೆ ಗೊತ್ತಾಗುತ್ತದೆ. ಈ ವಿಷಯವನ್ನ ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡು ಕಾಂಗ್ರೆಸ್ ಪಕ್ಷವನ್ನು ಅತ್ಯಕುವ ಯತ್ನಾ ಈ ಬಾರಿ ಕೊಪ್ಪಳ ಕಾಂಗ್ರೆಸ್ ಪಕ್ಷದ ಲೋಕಸಭಾ ಅಭ್ಯರ್ಥಿ 100000 ಅಧಿಕ ಮತಗಳಿಂದ ಗೆಲ್ಲುತ್ತಾರೆ ಮತ್ತು ಬಿಜೆಪಿಯವರು ಸೋಲಿನ ಭೀತಿಯಲ್ಲಿದ್ದಾರೆ ಇದೇ ಹೇಳಿಕೆಯನ್ನು ಇಟ್ಟುಕೊಂಡು ವ್ಯಕ್ತಿಯ ಹುಟ್ಟಿನ ಬಗ್ಗೆ ಮಾತನಾಡುವ ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ
ತಾವು ಹುಟ್ಟಿದ ಬಗ್ಗೆಯನ್ನು ಅರಿತುಕೊಳ್ಳಲಿ.
ಎಂದರು. ನಂತರ ಮಾತನಾಡಿದ ಪ್ರಚಾರ ಸಮಿತಿ ಅಧ್ಯಕ್ಷ ರಮೇಶ್ ನಾಯಕ್ ಮಾತನಾಡಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯವರು ಶ್ರೀರಾಮುಲು ಅವರನ್ನು ಉಪಮುಖ್ಯಮಂತ್ರಿ ಮಾಡುತ್ತೇವೆ ಎಂದು ಹೇಳಿ ಐದು ವರ್ಷ ಸರ್ಕಾರ ನಡೆಸಿದರು ನಾಯಕ ಸಮುದಾಯಕ್ಕೆ ಅನ್ಯಾಯ ಮಾಡಿದರು ಆದರೆ ಕೊಟ್ಟ ಮಾತಿನಂತೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿಗಳನ್ನು ರಾಜ್ಯದ ಪ್ರತಿ ಮನೆ ಮನೆಗಳಿಗೂ ತಲುಪಿಸುವಂತಹ
ಕಾರ್ಯ ಸಹಿಸದ ಬಿಜೆಪಿಯವರು ಕ್ಷುಲ್ಲಕ
ಕಾರಣಗಳನ್ನು ಒಡ್ಡಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನ ಸೋಲಿಸಲಾಗುವುದಿಲ್ಲ ಮುಂಬರುವ ದಿನಮಾನಗಳಲ್ಲಿ ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ರಾಜ್ಯದ ಜನ ಗೆಲ್ಲಿಸುವ ಮೂಲಕ ಬಿಜೆಪಿಗರಿಗೆ ತಕ್ಕ ಉತ್ತರ ಕೊಡಲಿದ್ದಾರೆ ಎಂದರು. ಇದೇ ವೇಳೆ ಮಾಜಿಜಿಲ್ಲಾ ಪಂಚಾಯತಿ ಸದಸ್ಯರುಗಳಾದ
ವಿರೇಶ್ ಸುಮ ಗಂಡಿ ಅಂಬರೀಶ್ ಗೋನಾಳ್. ಶರಣಪ್ಪ ಬತ್ತ ದ್. ವಿರುಪಣ್ಣ ಕಲ್ಲೂರ್ ಸಿದ್ದಪ್ಪ ನೀರ್ಲೂಟಿ. ಸುದ್ದಿಗೋಷ್ಠಿ ಕುರಿತು ಮಾತನಾಡಿದರು ಈ ಸಂದರ್ಭದಲ್ಲಿ ಪ್ರಮುಖರಾದ ಸಂಗಪ್ಪ ಸಜ್ಜನ್. ಅನಿಲ್ ಬಿಜ್ಜಳ. ನಾಗರಾಜ್ ತಳವಾರ್ ಹಜರತ್ ಹುಸೇನ್ ರಾಮಣ್ಣ ಆಗೋಲಿ. ನೀಲಕಂಠ ಬಡಿಗೇರ್ ರಾಮನಗೌಡ ಬುನ್ನಟ್ಟಿ ರುದ್ರಮುನಿ ದೊಡ್ಡಿಹಾಳ ರಾಜಶೇಖರ್ ಪಾಟೀಲ್ ದೊಡ್ಡಪ್ಪ ಬತ್ತದ ಸೇರಿದಂತೆ ಕಾಂಗ್ರೆಸ್ ಮುಖಂಡರುಗಳಿದ್ದರು.
ಗೌತಮ್ ಯಾದವ್ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ.



