ಅಂತರ್ಜಾಲ ಕುಸಿತದಿಂದ ತೊಂದರೆ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ.

ಅಂತರ್ಜಾಲ ಕುಸಿತದಿಂದ ತೊಂದರೆ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ
ಕನಕಗಿರಿ ಪಟ್ಟಣದಲ್ಲಿ ಹಲವು ವಾರ್ಡುಗಳಲ್ಲಿ ಹಾಗೂ ಶಾಲೆಗಳಲ್ಲಿ ಬೇಸಿಗೆಯ ತಾಪಮಾನ ಅಧಿಕವಾಗುತ್ತಿದ್ದರಿಂದ ನೀರಿನ ಸಮಸ್ಯೆ ಚಲೆದುರುವ ಲಕ್ಷಣಗಳು ಅಲ್ಲಲ್ಲಿ ಕಾಣಿಸಿ ಗುತ್ತಿವೆ ಕನಕಗಿರಿ ಕೆಲವು ವಾರ್ಡ್ಗಳಲ್ಲಿ ನೀರನ ಸಮಸ್ಯೆ ಉಂಟಾಗಿದ್ದು ಹಾಗೂ ಕೆಲ ಶಾಲೆಗಳಲ್ಲಿ ನೀರಿನ ಅಭಾವ ತೊಂದರೆ ವಿದ್ಯಾರ್ಥಿಗಳು ಎದುರಿಸುತ್ತಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಉಪಾಧ್ಯಕ್ಷ ರಾದ ಶರಣಪ್ಪ ಸಜ್ಜನ್ ಅವರು ಆಕ್ರೋಶ ವ್ಯಕ್ತಪಡಿಸಿದರು ಪಟ್ಟಣ ಪಂಚಾಯಿತಿಯ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕರ್ನಾಟಕದ ರಕ್ಷಣೆ ವೇದಿಕೆ ಹಾಗೂ ಊರಿನ ಜನರೊಂದಿಗೆ ಹೋರಾಟವನ್ನು ಹಮ್ಮಿಕೊಳ್ಳುತ್ತೇವೆ ಎಂದು ಹೇಳಿದರು.
ಕನಕಗಿರಿ ಪಟ್ಟಣದ ಹಲವು ವಾರ್ಡುಗಳಲ್ಲಿ ಕುಡಿಯಲು ಅಲ್ಲದೆ ಬಳಕೆಗೂ ನೀರಿಲ್ಲದ ಪರಿಸ್ಥಿತಿ ನಿರ್ವಹಣವಾಗಬಾರದು ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇತ್ತ ಗಮನಹರಿಸಿ ನೀರಿನ ಸಮಸ್ಯೆ ಬಗೆಹರಿಸಬೇಕೆಂದು ಶರಣಪ್ಪ ಸಜ್ಜನ್ ಒತ್ತಾಯಿಸಿದ್ದಾರೆ.
ಕನಕಗಿರಿ ತಾಲೂಕು ಹಲವು ಗ್ರಾಮಗಳಲ್ಲಿ ಕೆರೆಗಳಿಗೆ ನೀರಿನ ಪ್ರಭಾವ ಕಡಿಮೆ ಆಗಿರುವುದರಿಂದ ಧನಕರಗಳಿಗೆ ಮೇವು ಮತ್ತು ನೀರುನ ಸಮಸ್ಯೆ ಎದುರಿಸಬೇಕಾದ ಪರಿಸ್ಥಿತಿ ಇದೆ ಈ ವರ್ಷ ಮಳೆ ಇಲ್ಲದಿರುವ ಕಾರಣ ಪಶು ಪಕ್ಷಿಗಳಿಗೆ ತೊಂದರೆ ಉಂಟಾಗುವ ಪರಿಸ್ಥಿತಿ ಇರುವ ಕಾರಣ ಇದನ್ನು ಆಡಳಿತ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಗಮನದಲ್ಲಿ ಇಟ್ಟುಕೊಂಡು ಮುನ್ನೆಚ್ಚರಿಕೆ ವಹಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು
ಗೌತಮ್ ಯಾದವ್ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ



