ಅಬಾಕಸ್ ವಿಧಾನ ನೆನಪಿನ ಶಕ್ತಿಯೊಂದಿಗೆ ಮಕ್ಕಳ ಮನಸ್ಸು ಏಕಾಗ್ರತೆಗೊಳಿಸೋಣ- ದೇವಿದಾಸ ರಾಠೋಡ್
ಅಬಾಕಸ್ ವಿಧಾನ ನೆನಪಿನ ಶಕ್ತಿಯೊಂದಿಗೆ ಮಕ್ಕಳ ಮನಸ್ಸು ಏಕಾಗ್ರತೆಗೊಳಿಸೋಣ– ದೇವಿದಾಸ ರಾಠೋಡ್
ಪ್ರಜಾಶ್ರೀ ವಾರ್ತೆ
ತುರ್ವಿಹಾಳ :ಪಟ್ಟಣದಲ್ಲಿ ಎನ್ ಬಿ ಸಿ ಇ. ಸಂಸ್ಥೆಯ ಐದನೇಯ ವಾರ್ಷಿಕೋತ್ಸವ ಸಮಾರಂಭ ಮತ್ತು ಇಂಟರ್ ಕಾಂಪಿಟೇಷನ ಕಾರ್ಯಕ್ರಮವನ್ನು ಶ್ರೀ ಗುರು ಗುಂಡಯ್ಯ ಅಪ್ಪಾಜಿ ಸರ್ವೇಶ್ವರ ಮಠ ಅವರು ಜ್ಯೋತಿ ಬೇಳಗುವ ಮೂಲಕ ಚಾಲನೆ ನೀಡಿದರು.
ನಂತರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ದೇವಿಧಾಸ ರಾಠೋಡ ಮಾತನಾಡಿ ಅಬಾಕಸ್ ವಿಧಾನದ ಮೂಲ ಸಾಧನ. ಇದನ್ನು ಭಾರತೀಯ ಶಾಲೆಗಳಲ್ಲಿ ಉಪಯೋಗಿಸುತ್ತಿದ್ದರೂ,ಅದರ ಮಹತ್ವ
ವನ್ನು ಯಾರೂ ಅರ್ಥ ಮಾಡಿಕೊಂಡಿಲ್ಲ,ಅಬಾಕಾಸ್ ವಿಧಾನ ಅಭ್ಯಾಸ ಮಾಡಿದರೆ ಅತ್ಯಂತ ವೇಗವಾಗಿ ಗಣಿತದ ಲೆಕ್ಕಗಳನ್ನು ಮಾಡ ಬಹುದಾಗಿದೆ.ಎಷ್ಟೇ ದೊಡ್ಡ ಸಂಖ್ಯೆ ಇದ್ದರೂ ಕೂಡಿಸುವುದು, ಕಳೆಯುವುದು,
ಗುಣಿಸುವುದು ಹಾಗೂ ಭಾಗಿಸುವುದನ್ನು ಕೆಲವೇ ಕ್ಷಣಗಳಲ್ಲಿ ಮಾಡಬಹುದಾಗಿದೆ. ಈ ವಿಧಾನದಲ್ಲಿ ನೆನಪಿನ ಶಕ್ತಿ ವೃದ್ಧಿಸುತ್ತದೆ ಮತ್ತು ಮನಸ್ಸಿನ ಏಕಾಗ್ರತೆ ಹೆಚ್ಚುತ್ತದೆ ಎಂದು ವಿವರಿಸಿದರು.
ಹಾಗೂ ಅರ್ ಡಿ ಸಿ ಸಿ ಬ್ಯಾಂಕ್ ವ್ಯವಸ್ಥಾಪಕ ಶಂಕರ್ ನಾಯಕ್ ಮಾತನಾಡಿ ಅಬಾಕಸ್ ತರಬೇತಿ ಪಡೆಯುವುದರಿಂದ ಮಕ್ಕಳಲ್ಲಿ ಸೃಜನ ಶೀಲತೆ, ಊಹಾತ್ಮ ಕೌಶಲ್ಯ, ಮನಸ್ಸು ಕೇಂದ್ರೀಕರಣ, ಸ್ಪುಟವಾದ ಜ್ಞಾಪಕ ಶಕ್ತಿ ಅಭಿವೃದ್ಧಿ ಸೇರಿ ಸರ್ವತೋಮುಖ ಜ್ಞಾನಾಭಿವೃದ್ಧಿಯಾಗಲಿದೆ ಎಂದರು.
ಇಂಟರ್ ಕಾಂಪಿಟೇಷನಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ
ಪ್ರಥಮ,ದ್ವಿತೀಯ,ತೃತೀಯ,ಬಹುಮಾನ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕರೇಶಪ್ಪ ಸಾಹುಕಾರ,ಸರ್ಕಾರಿ ಶಿಕ್ಷಕರ ಸಂಘದ ಅಧ್ಯಕ್ಷ ಕಳಕಪ್ಪ ಗಡೇದ,ವಿ ಎಸ್ ಎಸ್ ಎನ್ ವ್ಯವಸ್ಥಾಪಕ ವಿರೇಶ್,ಎನ್ ಬಿ ಸಿ ಇ ಕಂಪ್ಯೂಟರ್
ಮತ್ತು ಅಬಾಕಸ್ ಅಕಾಡೆಮಿ ವ್ಯವಸ್ಥಾಪಕಿ ಲಕ್ಷ್ಮಿ ಹೂಗಾರ,ಕಂಪ್ಯೂಟರ್ ಶಿಕ್ಷಕರಾದ ಶಾಂಭವಿ,ಸುನೀಲ್,
ಬಸವರಾಜ್,ಸರಸ್ವತಿ,
ಹಾಗೂ ಅಬಾಕಸ್ ಶಿಕ್ಷಕಿ ನಾಗರತ್ನ ವಿದ್ಯಾರ್ಥಿಗಳು ಮತ್ತು ಪಾಲಕರು ಉಪಸ್ಥಿತರಿದ್ದರು.
ವರದಿಗಾರರು: ವಿಜಯ್ ಕುಮಾರ್ ಹಿರೇಮಠ. ತುರುವಿಹಾಳ




