ಸುದ್ಧಿ

ಪಾಕಿಸ್ತಾನಕ್ಕೆ ಸ್ವಾತಂತ್ರ್ಯ ಮಾತ್ರ ಸಿಕ್ಕಿತು, ಭಾರತಕ್ಕೆ ಸ್ವಾತಂತ್ರ್ಯದೊಂದಿಗೆ ಡಾ.ಬಿ ಆರ್ ಅಂಬೇಡ್ಕರ್ ಅವರ ರೂಪದಲ್ಲಿ ಜ್ಞಾನದ ಶಿಖರವೇ ಸಿಕ್ಕಿತು. ಪಾಕಿಸ್ತಾನದ ಮಾಜಿ ಪ್ರಧಾನಿ ಜುಲ್ಫಿಕರ್ ಭುಟ್ಟೋ

ಬಾಬಾ ಸಾಹೇಬರ ಬಗ್ಗೆ ಪಾಕಿಸ್ತಾನ ಪ್ರಧಾನಿ ಜುಲ್ಫೀಕರ್ ಭುಟ್ಟೋ ಹೇಳಿದ ಮಾತುಗಳು :

ಮಿಲಿಟರಿ ಆಡಳಿತದ ಅರಾಜಕತೆ ಕಾರಣದಿಂದಾಗಿ ತನ್ನ ಸೇನಾಧಿಕಾರಿ ಜಿಯಾ ಉಲ್ ಹಕ್ ನಿಂದ ನೇಣುಗಂಬಕ್ಕೆ ಏರಲ್ಪಡುವಂತಹ ಸಂದರ್ಭದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಜುಲ್ಫಿಕರ್ ಭುಟ್ಟೋ ಅವರು ಹೇಳಿದ ಮಾತಿದು :-

1947 ರಲ್ಲಿ ಭಾರತೀಯರಿಗೆ ಸ್ವಾತಂತ್ರ್ಯ ಸಿಕ್ಕಿದಂತೆಯೇ ಪಾಕಿಸ್ತಾನಕ್ಕೂ ಸಹ ಸ್ವಾತಂತ್ರ್ಯ ಸಿಕ್ಕಿತು.

ಆದರೆ ಪಾಕಿಸ್ತಾನಕ್ಕೆ ಸ್ವಾತಂತ್ರ್ಯ ಮಾತ್ರ ಸಿಕ್ಕಿತು, ಭಾರತಕ್ಕೆ ಸ್ವಾತಂತ್ರ್ಯದೊಂದಿಗೆ ಡಾ.ಬಿ ಆರ್ ಅಂಬೇಡ್ಕರ್ ಅವರ ರೂಪದಲ್ಲಿ ಜ್ಞಾನದ ಶಿಖರವೇ ಸಿಕ್ಕಿತು.

ಪ್ರತ್ಯೇಕ ಪಾಕಿಸ್ತಾನದ ಪ್ರಸ್ತಾಪವನ್ನು ಹಿಂತೆಗೆದುಕೊಳ್ಳಿ ಎಂದು ಮಹಮದ್ ಅಲಿ ಜಿನ್ನಾ ಅವರನ್ನು ಅಂಬೇಡ್ಕರ್ ಅವರು ಹಲವು ಬಾರಿ ವಿನಂತಿಸಿಕೊಂಡಿದ್ದರು. ಆದರೆ ಅಂದು ಜಿನ್ನಾ ಅವರ ಮಾತನ್ನು ಕೇಳದೇ ಹೋದರು.

ಆದರೆ ಅಂಬೇಡ್ಕರ್ ಅವರಿಗೆ ಇದೊಂದು ದೂರದೃಷ್ಟಿ ಅಲ್ಲದ ನಿರ್ಧಾರ ಎಂಬ ಸಂಗತಿಯ ಅರಿವಿತ್ತು.

ಕಾರಣ ಒಂದು ದೇಶಕ್ಕೆ ಸ್ವಾತಂತ್ರ್ಯ ಎಷ್ಟು ಅಗತ್ಯವೋ, ಆ ಸ್ವಾತಂತ್ರ್ಯ ಪಡೆದ ನಂತರದಲ್ಲಿ ದೇಶವನ್ನು ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಆಶಯಗಳಿಗೆ ಅನುಸಾರವಾಗಿ ಮುನ್ನಡೆಸಲು ಜ್ಞಾನವೂ ಅಷ್ಟೇ ಅವಶ್ಯಕವಿದ್ದು ಇಂತಹ ಅಗತ್ಯ ಜ್ಞಾನ ಇಲ್ಲದ ಪಾಕಿಸ್ತಾನದ ಜನರು ಮುಂದೆ ತೊಂದರೆಗೆ ಸಿಲುಕುತ್ತಾರೆ ಎಂದು ಬಾಬಾ ಸಾಹೇಬರು ನಂಬಿದ್ದರು.

ಕ್ರಮೇಣ ಆ ದೇಶದ ಮಟ್ಟಿಗೆ ಅದೇ ನಿಜವಾಯಿತು

ಮುಂದುವರೆದು ಭುಟ್ಟೋ ಹೇಳಿದಂತೆ ಮಿಲಿಟರಿ ಆಡಳಿತವು ಸರ್ವಾಧಿಕಾರವನ್ನು ಪ್ರದರ್ಶಿಸುತ್ತದೆ. ಇಲ್ಲಿ ಸರ್ವಾಧಿಕಾರಿಯು ಸಿಂಹವಾಗಿ ಬದಲಾಗಿ, ತನ್ನ ಪ್ರಜೆಗಳನ್ನು ಕುರಿಗಳಂತೆ ಭಾವಿಸಿ ಅವರನ್ನು ತಿಂದು ಹಾಕುತ್ತಾನೆ.

ಈ ಹಿನ್ನಲೆಯಲ್ಲಿ ಇಂತಹ ಕೆಟ್ಟ ಪರಿಸ್ಥಿತಿ ಭಾರತಕ್ಕೆ ಬರದಂತೆ ತಡೆಯಲು ಅಲ್ಲಿ ಅಂಬೇಡ್ಕರ್ ಅವರ ಸಂವಿಧಾನವಿತ್ತು. ಹೀಗಾಗಿ ಭಾರತಕ್ಕೆ ಉಜ್ವಲ ಭವಿಷ್ಯವಿದೆ ಎಂದು ನಾನು ಅರ್ಥ ಮಾಡಿಕೊಂಡಿದ್ದೇನೆ ಎಂದವರು ಹೇಳುತ್ತಾರೆ.

ಹೀಗಾಗಿ ಸರ್ವಾಧಿಕಾರದ ಕಪಿ ಮುಷ್ಠಿಯಲ್ಲಿ ನರಳುತ್ತಿರುವ ಈ ಪಾಕಿಸ್ತಾನಕ್ಕೆ ಅಂಬೇಡ್ಕರ್ ಅಂತಹ ಮಹಾನ್ ಜ್ಞಾನಿಯ ಅಗತ್ಯವಿತ್ತು ಎಂಬುದು ಜುಲ್ಫೀಕರ್ ಭುಟ್ಟೋ ಅವರ ಅಭಿಪ್ರಾಯವಾಗಿತ್ತು.

ಸ್ವಾತಂತ್ರ್ಯವನ್ನು ಹಾಗೋ ಹೀಗೋ ಪಡೆಯಬಹುದು ಇಲ್ಲವೇ ನೀಡಬಹುದು, ಆದರೆ ಜ್ಞಾನವನ್ನಲ್ಲ.

ಗಾಂಧೀಜಿ, ನೆಹರೂ ಮತ್ತು ಕಾಂಗ್ರೆಸ್ ಪಕ್ಷದಲ್ಲಿದ್ದ ಎಲ್ಲಾ ಬುದ್ಧಿವಂತರ ನಾಯಕತ್ವವು ಭಾರತಕ್ಕೆ ಸ್ವಾತಂತ್ರ್ಯ ಎಂಬ ದೇಹವನ್ನು ನೀಡಿತು, ಆದರೆ ಏಕಾಂಗಿಯಾಗಿದ್ದ ಬಾಬಾ ಸಾಹೇಬರು ತಮ್ಮ ಜ್ಞಾನದಿಂದ ಆ ನಿರ್ಜೀವ ದೇಹಕ್ಕೆ ಜೀವ ತುಂಬಿದರು. ಆ ನಂತರವೇ ಆ ದೇಹವು ಸರಿಯಾಗಿ ಉಸಿರಾಡಲು ಆರಂಭಿಸಿತು.

ಹೀಗಾಗಿ ಹಿಮಾಲಯ ಪರ್ವತದಂತಹ ಜ್ಞಾನ ಶಕ್ತಿಯುಳ್ಳ ಡಾ.ಬಿ ಆರ್ ಅಂಬೇಡ್ಕರ್ ಅವರನ್ನು ನಾನು “ಸಹಸ್ರಮಾನದ ವ್ಯಕ್ತಿ” ಎಂದು ಕರೆಯಲು ಇಚ್ಛಿಸುತ್ತೇನೆ ಎಂದು ಅವರು ಹೇಳುತ್ತಾರೆ. (ಸಂಗ್ರಹ)

Related Articles

Leave a Reply

Your email address will not be published. Required fields are marked *

Back to top button