ಇಂಡಿಯಾದಲ್ಲಿ ಇರುವವರೆಲ್ಲ ಇಂಡಿಯನರು ಭಾರತದಲ್ಲಿರುವವರೆಲ್ಲಾ ಭಾರತೀಯರು. ಪ್ರೊ ಶಿವರಾಜ್ ಪಾಟೀಲ್ ಚಿಂತಕರು.

. ಹಿಂದೂ ಧರ್ಮವಲ್ಲ ಲಿಂಗಾಯತ ಜಾತಿಯಲ್ಲ ಇಂಡಿಯಾದಲ್ಲಿ ಇರುವವರೆಲ್ಲ ಇಂಡಿಯನರು ಭಾರತದಲ್ಲಿರುವವರೆಲ್ಲಾ ಭಾರತೀಯರು ಹಾಗೆ ಹಿಂದುಸ್ಥಾನದಲ್ಲಿರುವವರೆಲ್ಲ ಹಿಂದುಗಳು ಹಿಂದೂ ಎಂಬುದು ಹಿಂದುಸ್ಥಾನ ದಲ್ಲಿರುವ ಎಲ್ಲರಿಗೂ ಅನ್ವಯಿಸುತ್ತದೆ ಇದು ಭೌಗೋಳಿಕ ಹಾಗೂ ಪ್ರಾದೇಶಿಕ ಹೆಸರು ಅದನ್ನು ನಾವು ಧರ್ಮವೆಂದು ಕರೆಯಲಾಗದು ಹಿಂದೂ ಧರ್ಮವೇ ಅಲ್ಲ ಹಿಂದೂ ಎನ್ನುವುದು ಒಂದು ಜೀವನದ ಕ್ರಮ ಪದ್ಧತಿ, ಸಾಮಾಜಿಕ ವ್ಯವಸ್ಥೆ ಹರಪ್ಪ ಮತ್ತು ಮೆಹೆಂಜೋದಾರೋ ನದಿಗಳ ಮೇಲೆ ಬೆಳೆದ ಸಿಂಧೂ ನದಿಯ ಕೊಳದ ಮೇಲಿರುವ ನಾಗರಿಕತೆಗೆ ಸಿಂಧೂ ಸಂಸ್ಕೃತಿ ಎಂದು ಕರೆದರು ಕ್ರಮೇಣ ಆ ಸಿಂಧು ಹಿಂದುವಾಗಿ ಹಿಂದೂಸ್ತಾನವಾಗಿ ಪರಿಣಮಿಸಿದೆ ಇದು ಭಾರತದ ಎಲ್ಲಾ ತತ್ವಜ್ಞಾನಿಗಳು ಮೇಧಾವಿಗಳು ಹೇಳುತ್ತಲೇ ಬಂದಿದ್ದಾರೆ ಆದರೆ ಕೆಲವು ಜನಗಳು ಪಟ್ಟ ಭದ್ರ ಹಿತಾಸಕ್ತಿಗಳು ತಮ್ಮ ಸ್ವಾರ್ಥ ಸಾಧನೆಗಾಗಿ ಇದನ್ನು ಹಿಂದೂ ಧರ್ಮವೆಂದು ಹೇಳುತ್ತಿರುವುದು ವಿಷಾದ ದ ಸಂಗತಿಯಾಗಿದೆ ಆಳವಾದ ಅಧ್ಯಯನ ಇಲ್ಲದವರು ವಿವೇಚನಾ ರಹಿತರು ಹಿಂದೂ ಧರ್ಮವೆಂದು ಘೋಷಣೆ ಮಾಡುತ್ತಿದ್ದಾರೆ ಹಿಂದೂ ಧರ್ಮವೇ ಅಲ್ಲ ಎಂಬುದು ಸ್ಪಷ್ಟವಾದ ಉಲ್ಲೇಖಗಳಿವೆ ಅವುಗಳನ್ನ ಹಿಂದೂ ರಿಲಿಜನ್ ಎಂಬ ಗ್ರಂಥದಲ್ಲಿ ಗಮನಿಸಬಹುದಾಗಿದೆ ಅದೇ ರೀತಿ ವೀರಶೈವ ಆಗಲಿ ಲಿಂಗಾಯತ ಆಗಲಿ ಅವು ಜಾತಿಗಳಲ್ಲ ವೀರಶೈವ ಧರ್ಮ ಲಿಂಗಾಯತವು ಕೂಡ ಅದೇ ರೀತಿ ಒಂದು ಧರ್ಮ ಇವುಗಳನ್ನು ಜಾತಿ ಎಂದು ಪರಿಗಣಿಸುವ ಹಾಗಿಲ್ಲ ಪರಿಗಣಿಸಲು ಬಾರದು ವೀರಶೈವ ಧರ್ಮಕ್ಕೂ ಲಿಂಗಾಯತ ಧರ್ಮಕ್ಕೂ ಬಹಳಷ್ಟು ಅಂತರವಿದೆ ವೀರಶೈವರೇ ಬೇರೆ ಲಿಂಗಾಯಿತರೆ ಬೇರೆ ವೀರಶೈವರು ಸನಾತನ ಸಂಪ್ರದಾಯಗಳನ್ನು ಆಚರಿಸುತ್ತಾ ಬಂದರೆ ಲಿಂಗಾಯಿತರು ಪ್ರಗತಿಪರ ವಿಚಾರಗಳನ್ನು ಹೊಂದಿದವರು ಪಂಚಾಚಾರ್ಯರು ವೀರಶೈವ ಮತ ಸ್ಥಾಪಕರಾದರೆ ಲಿಂಗಾಯಿತರು ಬಸವ ಧರ್ಮಕ್ಕೆ ಸೇರಿದವರು ಹೀಗಾಗಿ ಹಿಂದುಗಳು ವೀರಶೈವರಲ್ಲ ವೀರಶೈವರು ಲಿಂಗಾಯಿತರಲ್ಲ ಅವರವರ ದಾರಿ ಮಾರ್ಗಗಳು ಭಿನ್ನವಾಗಿವೆ ಹಿಂದುಸ್ಥಾನದಲ್ಲಿರುವವರೆಲ್ಲ ಹಿಂದೂಗಳು ಅದರಲ್ಲಿ ಶೈವ ಧರ್ಮವಿದೆ ವೀರಭದ್ರ ಶೈವ ಧರ್ಮವನ್ನು ರಕ್ಷಿಸಿರುವುದರಿಂದ ಅದು ವೀರಶೈವ ವಾಗಿದೆ ಹಿಂದೂ ಧರ್ಮವಲ್ಲ ಅದೊಂದು ಜೀವನಕ್ರಮ ಶೈವ ಹಾಗೂ ವೀರಶೈವಗಳಲ್ಲಿರುವ ಮೂಢನಂಬಿಕೆ ಅಂದ ಶ್ರದ್ಧೆಗಳನ್ನು ಕಿತ್ತೆಸೆದು ಅವುಗಳ ವಿರುದ್ಧ ಸಿಡಿದೆದ್ದು ನಿಂತ ಧರ್ಮವೇ ಲಿಂಗಾಯತ ಅದನ್ನು ನಾವು ಜಾತಿಯೆಂದು ಹೇಳಲಾಗದು ಪರ್ಯಾಯವಾಗಿ ಲಿಂಗಾಯತ ಧರ್ಮವೆಂದೇ ಹೇಳಬೇಕು ಅದಕ್ಕಾಗಿ ಜನಗಣತಿ ಜಾತಿ ಸಮೀಕ್ಷೆಯಲ್ಲಿ ಕೆಲವು ಜನ ಹಿಂದೂ ವೀರಶೈವ ಹಿಂದೂ ಲಿಂಗಾಯಿತ ಹಿಂದೂ ವೀರಶೈವ ಲಿಂಗಾಯತ ಎಂದು ಬರೆಯಿಸಿ ಎಂದು ಕೆಲವು ಪಟ್ಟಭದ್ರ ಹಾಗೂ ಸ್ವಹಿತಾಸಕ್ತಿ ಜಗದ್ಗುರುಗಳು ಧರ್ಮ ಗುರುಗಳು ಶಿವಾಚಾರ್ಯರು ಮಠ ಮತ್ತುಪೀಠಾಧೀಶರು ತಮ್ಮ ಮನಸ್ಸಿಗೆ ಬಂದಂತೆ ಹೇಳಿ ಸಮಾಜದಲ್ಲಿ ಗೊಂದಲವನ್ನು ಮೂಡಿಸುತ್ತಿದ್ದಾರೆ ಇದು ಸರಿಯಾದ ಕ್ರಮವಲ್ಲ ಅದಕ್ಕಾಗಿ ನಾನು ಸ್ಪಷ್ಟವಾಗಿ ಹೇಳುವುದೇನೆಂದರೆ, ನನ್ನದು ಬಸವ ಧರ್ಮ ನಾನು ಲಿಂಗಾಯತ ನನಗೆ ಸರ್ಕಾರದ ಯಾವ ಸವಲತ್ತುಗಳು ಬೇಕಾಗಿಲ್ಲ ಧರ್ಮ ದೊಡ್ಡದು ಸೌಲಭ್ಯ ದೊಡ್ಡದಲ್ಲ ಸ್ವಧರಮೇ ನಿಧನೇ ಶ್ರೇಯ ನಾವು ಜನ್ಮಿಸಿದ ಧರ್ಮ ದೊಡ್ಡದು ಯಾವ ಧರ್ಮದಲ್ಲಿ ಹುಟ್ಟಿರುತ್ತೇಯೋ ಅದೇ ಧರ್ಮದಲ್ಲಿ ಕೊನೆ ಉಸಿರೇ ಎಳೆಯಬೇಕು ಅದನ್ನು ಬಿಟ್ಟು ಸರ್ಕಾರಿ ಸವಲತ್ತುಗಳಿಗಾಗಿ ಬೆಣ್ಣೆಗಾಗಿ ಧರ್ಮ ಬಿಡುವದು ಶ್ರೇಷ್ಠವಲ್ಲ ಇದು ಒಡೆದು ಆಳುವವರ ಕುತಂತ್ರವಾಗಿದೆ ಧರ್ಮಕ್ಕಿಂತ ದೊಡ್ಡದು ಯಾವುದು ಅಲ್ಲ ಬಿಡಿಗಾಸಿಗಾಗಿ ಉಪಜೀವನಕ್ಕಾಗಿ ಬದುಕುವುದಕ್ಕಾಗಿ ಧರ್ಮ ಬಿಡುವುದು ಒಳ್ಳೆಯದಲ್ಲ ಹೀಗಾಗಿ ಧರ್ಮ ಕಾಲಂನಲ್ಲಿ ನನ್ನದುಬಸವ ಧರ್ಮವೆಂದು ಪರ್ಯಾಯವಾಗಿ ಲಿಂಗಾಯತ ಧರ್ಮವೆಂದು ಬಳಸುತ್ತಿದ್ದೇನೆ ಧರ್ಮ ಜಾತಿ ಉಪಜಾತಿ ಎಲ್ಲವೂ ನನ್ನದು ಲಿಂಗಾಯತ ಬೇಕಿದ್ದರೆ ನೀವು ನನ್ನನ್ನು ಅನುಸರಿಸಿ ಇಲ್ಲದಿದ್ದರೆ ನನ್ನ ವಿಚಾರ ನನಗೆ ನಿಮ್ಮ ವಿಚಾರ ನಿಮಗೆ ನಮ್ಮ ದಾರಿ ನಮಗೆ ನಿಮ್ಮ ದಾರಿ ನಿಮಗೆ. ಜೈ ಲಿಂಗಾಯತ. ಪ್ರೊ ಶಿವರಾಜ್ ಪಾಟೀಲ್ ಚಿಂತಕರು



