ಸುದ್ಧಿ

ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಘಟಿಕೋತ್ಸವ 6 ಜನ ಗಣ್ಯರಿಗೆ ಡಾಕ್ಟರೇಟ್ ಪದವಿ ಪ್ರಧಾನ – ಡಾ. ಟಿ .ಎಂ. ಮಂಜುನಾಥ್.

ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಘಟಿಕೋತ್ಸವ 6 ಜನ ಗಣ್ಯರಿಗೆ ಡಾಕ್ಟರೇಟ್ ಪದವಿ ಪ್ರಧಾನ – ಡಾ. ಟಿ .ಎಂ. ಮಂಜುನಾಥ್.
ಬೆಂಗಳೂರು. ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಘಟಿಕೋತ್ಸವ ನಿರ್ವಹಿಸಲಾಗುತ್ತದೆ ಎಂದು ಕ್ಲಸ್ಟರ್ ಕುಲಪತಿ ಡಾ. ಟಿ .ಎಂ. ಮಂಜುನಾಥ್ಪ್ರ ಇಂದು ಬೆಂಗಳೂರು ಕ್ಲಬ್ ನಲ್ಲಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಪ್ರಖ್ಯಾತ ಚಲನ ಚಿತ್ರ ನಟಿ ಶ್ರೀ ಮತಿ ಭಾರತಿ ವಿಷ್ಣುವರ್ಧನ್ , ಹೋಮಿಯೋಪತಿ ವೈದ್ಯರು ಡಾ. ಬಿ. ಟಿ . ರುದ್ರೇಶ್, ಶಿಕ್ಷಣ ತಜ್ಞರು , ಡಾ. ಹೆಚ್ .ಎನ್. ಉಷಾ , ಬಯೋಕಾನ್ ಎಕ್ಸಿಕ್ಯೂಟಿವ್ ಫೌಂಡರ್ , ಡಾ . ಕಿರಣ್ ಮಜುಂದಾರ್ ಷಾ , ಮಾನವ ಹಕ್ಕುಗಳ ಹೋರಾಟಗಾರ್ತಿ ದು. ಸರಸ್ವತಿ , ಮತ್ತು ಮಹಿಳಾ ಕ್ರಿಕೆಟರ್ ಶ್ರೀಮತಿ ವೇದಾ ಕೃಷ್ಣ ಮೂರ್ತಿ ಅವರಿಗೆ ಘಟಿಕೋತ್ಸವ ಸಮ್ಮರಂಭದಲ್ಲಿ ಡಾಕ್ಟರೇಟ್ ಪ್ರಧಾನ ಮಾಡಲಾಗುತ್ತದೆ ಎಂದು ಮಂಜುನಾಥ್ ಅವರು ಹೇಳಿದರು . 23, ನೇ 24 ವರ್ಷದ ಸ್ವರ್ಣ ಪದಕ , ಅರ್ಹ ವಿದ್ಯಾರ್ಥಿಗಳು , ರಾಂಕ್ ವಿಧ್ಯಾರ್ಥಿಗಳು ಸೇರಿ ಒಟ್ಟು 24 ಪದವಿ ಪ್ರಧಾನ ಪತ್ರ ವಿತರಣೆ, 24 ನೇ,25 ಸಾಲಿನ 52 ವಿಧ್ಯಾರ್ಥಿಗಳು 52 ಜನರಿಗೆ ಪದವಿಗಳನ್ನು ಪ್ರದಾನ ಮಾಡಲಾಗುತ್ತದೆ ಇಂದು ತಿಳಿಸಿದರು . ಅಕ್ಟೋಬರ್ 3 ಶುಕ್ರವಾರದಂದು, ಬೆಂಗಳೂರು ನಗರ ವಿಶ್ವವಿದ್ಯಾಲಯ ಅವರಣದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ 2ನೇ ಮುತ್ತು 3ನೇ ವಾರ್ಷಿಕ ಘಟಿಕೋತ್ಸವ ಸಮಾರಂಭ ಏರ್ಪಡಿಸಿದ್ದು, ಈ ಘಟಿಕೋತ್ಸವ ಸಮಾರಂಭವನ್ನು ಕರ್ನಾಟಕ ರಾಜ್ಯಪಾಲರು ಹಾಗೂ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯಗಳ ಕುಲಾಧಿಪತಿಗಳಾದ ಶ್ರೀ ತಾವರ್ ಚಂದ್ ಗೇಹ್ಲೋಟ್ ಅವರು ಅಧ್ಯಕ್ಷತೆ ವಹಿಸಲಿದ್ದು, ಸಮಾರಂಭಕ್ಕೆ ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಸಚಿವರಾದ ಡಾ. ಎಂ.ಸಿ. ಸುಧಾಕರ್ ಅವರು ಹಾಜರಾಗುತ್ತಾರೆಂದು ತಿಳಿಸಿದರು. ಈ ಪತ್ರಿಕಾಗೋಷ್ಟಿ ಯಲ್ಲಿ ಡಾ. ಮಂಜುನಾಥ್ ಅವರು, ಪ್ರೂ . ಎಸ್. ಸತೀಶ್ ಅವರು ಉಪಸ್ಥಿತರಿದ್ದರು . ವರದಿ. ಮಂಜುಳಾ ರೆಡ್ಡಿ.

Related Articles

Leave a Reply

Your email address will not be published. Required fields are marked *

Back to top button