ರಾಜಕೀಯ

ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು 134 ನೇ ಜಯಂತಿ – ಶ್ರೀನಿವಾಸ್

ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು 134 ನೇ ಜಯಂತಿ – ಶ್ರೀನಿವಾಸ್

ಬೆಂಗಳೂರು. ಅಂಬೇಡ್ಕರ್ ಸ್ವಾಭಿಮಾನದ ಬದುಕು ಕಟ್ಟಿಕೊಂಡರು ಎಂದು ಬೆಂಗಳೂರು ನಗರದ ಹೆಚ್ ಏ ಎಲ್ ನ ಯುವಕರ ತಂಡ ದಿಂದ ಡಾ.ಬಿ.ಆರ್ ಅಂಬೇಡ್ಕರ್ ಯುವಕರ ಸಂಘದ ವತಿಯಿಂದ 134 ನೇ ಜಯಂತಿ ಆಚರಿಸಲಾಯಿತು. ಈ ವೇಳೆಯಲ್ಲಿ ಸ್ಥಳೀಯ ರಾಜಕೀಯ ಮುಖಂಡರಾದ ಶ್ರೀನಿವಾಸ್ ಮಾತನಾಡಿ ಅಂಬೇಡ್ಕರ್ 1891 ಏಪ್ರಿಲ್ 14 ರಂದು ಮಧ್ಯಪ್ರದೇಶದ ಮಹೂ ಎಂಬಲ್ಲಿ ಜನಿಸಿದರು.ಇವರು ಸಾಮಾಜಿಕ, ಸಮಾನತೆ ಅಸ್ಪೃಶ್ಯತೆ ನಿವಾರಣೆಗಾಗಿ ಹೋರಾಡಿದ ಭಾರತೀಯ ಮಹಾನ್ ನಾಯಕ ಹಾಗೂ ಸಂವಿಧಾನವನ್ನು ರಚಿಸಿದ ಸಂವಿಧಾನ ಶಿಲ್ಪಿ ಎಂದು , ಮಹಿಳಾ ಸುದ್ರಣೆ ಯಲ್ಲಿ ದಾರಿ ತೋರಿಸಿದ ಮಹಾನ್ ವ್ಯಕ್ತಿ ಎಂದು ದಲಿತರ ದಾರಿ ದೀಪ ಎಂದರು . ಇವರು ಅಸಾಧಾರಣ ಸಮಾಜ ಸುಧಾರಕ ಹಾಗೂ ತುಳಿತಕ್ಕೆ ಒಳಗಾದ ವಿಮೋಚಕ ವಿದ್ವಾಂಸ ಮತ್ತು ಶಿಕ್ಷಣ ತಜ್ಞ ಮಾನವ ಹಕ್ಕುಗಳ ನಿಜವಾದ ಹರಿಕಾರ. ಸಂವಿಧಾನದಲ್ಲಿ ಎಲ್ಲಾ ಭಾರತೀಯ ನಾಗರಿಕರಿಗೆ ಸಮಾನ ಹಕ್ಕುಗಳನ್ನು ನೀಡಿದಂತಹ ಮಹಾನ್ ಚೇತನ ಎಂದುರು .ಇಂದಿಗೂ ಭಾರತ ದೇಶಕ್ಕೆ ಅಂಬೇಡ್ಕರ್ ಕೊಡುಗೆ ಅಪಾರವಾದುದ್ದು ಇವರ ಆದರ್ಶ ತತ್ವಗಳು ನಮಗೆಲ್ಲ ಮಾದರಿಯಾಗಬೇಕು ಎಂದರು. ಅಂಬೇಡ್ಕರ್ ವಿಶ್ವ ಕಂಡ ಮಹಾ ನಾಯಕರಲ್ಲಿ ಒಬ್ಬರು.ಕೇವಲ ಒಂದು ಜಾತಿಗೆ ಸೀಮಿತವಾಗದೆ ಸ್ವಾತಂತ್ರ ಹಾಗೂ ಸಮಾನತೆಯ ಬಗ್ಗೆ ಹೋರಾಟ ಮಾಡಿದ ದೀನ ದಲಿತರ ಹಾಗೂ ಹಿಂದುಳಿದ ವರ್ಗಗಳ ಆರಾಧ್ಯ ದೈವ ಎಂದರೆ ತಪ್ಪಾಗಲಾರದು ಎಂದರು. ಕಟ್ಟಕಡೆಯ ವ್ಯಕ್ತಿಯ ಸಲುವಾಗಿ ಜೀವನವನ್ನು ಪಣಕ್ಕಿಟ್ಟು ಹೋರಾಟ ಮಾಡಿದ ಮಹಾನ್ ನಾಯಕ ಎಂದುರು. ಯುವ ಮುಖಂಡರಾದ ಕೆ ಆರ್. ಸಂಜಯ್ ಅಭಿನವ್ ಈ ಸಂದರ್ಭದಲ್ಲಿ ಭೋಜನ ವಸತಿ ಮತ್ತು ಬಡಮಕ್ಕಳಿಗೆ ಪುಸ್ತಕ ನೀರಿನ ಬಾಟಲ್ ವಿತರಿಸಿದರು. ಅರುಣ್ ಅರ್ಜುನ್ ಉದಯ ರಾಹುಲ್ ಮುಂತಾದ ಯುವಕರ ಪಡೆ ಇಂದ ಅದ್ದೂರಿಯಾಗಿ ಅಬೇಡ್ಕರ್ ಜಯಂತಿ ಆಚರಿಸಿದರು. ವರದಿ. ಮಂಜುಳಾ ರೆಡ್ಡಿ.

Related Articles

Leave a Reply

Your email address will not be published. Required fields are marked *

Back to top button