ಕನ್ನಡ ನಾಡಿನ ಕಲ್ಯಾಣ ಕರ್ನಾಟಕದ ಪುಣ್ಯದ ಫಲದಿಂದ ಸನ್ಮಾನ್ಯ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರು ಹುಟ್ಟಿ ಬಂದರೆಂದರು.

ಗೊಮ್ಮಟನೆತ್ತರಕ್ಕೆ ಬೆಳೆದ ಖರ್ಗೆ. ನಾಡಿನ ಭುವನದ ಭಾಗ್ಯದಿಂದ ಒಬ್ಬ ಕವಿ ಸಾಹಿತಿ ಕಲಾವಿದ ಮತ್ತು ಹೋರಾಟಗಾರ ಹುಟ್ಟಿಕೊಳ್ಳುತ್ತಾನೆ ಹಾಗೆ ಕನ್ನಡ ನಾಡಿನ ಕಲ್ಯಾಣ ಕರ್ನಾಟಕದ ಪುಣ್ಯದ ಫಲದಿಂದ ಸನ್ಮಾನ್ಯ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರು ಹುಟ್ಟಿ ಬಂದರೆಂದರೆ ಅತಿಶಯೋಕ್ತಿಯಾಗಲಾರದು ಅವಶ್ಯಕತೆ ಹಾಗೂ ಅನಿವಾರ್ಯವಿದ್ದಲ್ಲಿ ವ್ಯಕ್ತಿಯ ಮಹಾಪುರುಷನಂನಂತೆ ಅವತಾರವಾಗುತ್ತದೆ ಅವತಾರವೆಂದರೆ ಮೇಲಿನಿಂದ ಕೆಳಗೆ ದೊಪ್ಪನೆ ಬೀಳುವುದು ಎಂದರ್ಥವಲ್ಲ ನೆಲದಿಂದಲೇ ಒಬ್ಬ ವ್ಯಕ್ತಿ ಸಿದ್ದನಾಗುವುದು ನಮ್ಮ ಮಧ್ಯದಲ್ಲಿ ನಮಗಾಗಿ ನಮ್ಮನ್ನು ಉದ್ದರಿಸುವುದಕ್ಕೋಸ್ಕರನಮಗೋಸ್ಕರ ನಮ್ಮ ವರಲ್ಲಿಯೇ ಒಬ್ಬರು ಎದ್ದು ನಿಲ್ಲುತ್ತಾರೆ ಅವರಿಂದ ನಾಡು ನುಡಿ ದೇಶ ಉದ್ದಾರವಾಗುತ್ತದೆ ಇದಕ್ಕೆ ನಾವು ಅವತಾರವೆಂದು ಕರೆಯುತ್ತೇವೆ ಎಂದು ಭಗವದ್ಗೀತೆ ಹೇಳುತ್ತದೆ ಹಾಗೆ ಈ ನಾಡಿನ ನೋವುಗಳನ್ನು ನಿವಾರಿಸಿ ಕಷ್ಟ ಸುಖಗಳನ್ನು ದೂರ ಮಾಡುವ ಕೊರತೆಯನ್ನು ನೀಗಿಸಲು ಮತ್ತು ಸಮಸ್ಯೆಗಳನ್ನು ಪರಿಹರಿಸಲು ಸನ್ಮಾನ್ಯ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವತರಿಸಿದಾರೆಂದರೆ ತಪ್ಪಾಗಲಾರದು ಆದರೆ ನನ್ನ ದೃಷ್ಟಿಯಲ್ಲಿ ಅವರು ಅವತಾರಿ ವ್ಯಕ್ತಿಯಂತೆ ಕಾಣುತ್ತಾರೆ ಯಾಕೆಂದರೆ ಕೆಸಲಿನಲ್ಲಿ ಕಮಲ ಅರಳಿದಂತೆ ದಲಿತ ಸಮುದಾಯದಲ್ಲಿ ಜನಿಸಿದ ವ್ಯಕ್ತಿ ಈಗಿನ ಕಾಲದಲ್ಲಿ ಜನಬಲ ಜಾತಿ ಬಲ ಹಣಬಲವಿಲ್ಲದೆ ಬೆಳೆಯಲಾರ ಆದರೆ ಎಲ್ಲ ಬಲಗಳು ಕಡಿಮೆ ಇದ್ದಾಗಲೂ ತಮ್ಮ ದಲಿತ ಸಮುದಾಯದಿಂದ ಮೇಲೆ ಬಂದವರು ಅವರಿಗೆ ಯಾವುದೇ ರೀತಿಯ ಗಾಡ್ ಫಾದರ್ ಇಲ್ಲ ಆದರೆ ಜನ್ಮ ಕೊಟ್ಟ ಫಾದರ್ ಮಾತ್ರ ಇದ್ದರು ಅವರು ಕಲ್ಬುರ್ಗಿಯ ಎಂ ಎಸ್ ಕೆ ಮಿಲ್ಲ ನಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು ಅವರ ಮಗನಾಗಿ ಬಸವನಗರದ ಕೊಳಚೆ ಪ್ರದೇಶ ದಲ್ಲಿ ಕೆಸರಿನಲ್ಲಿ ಸುಂದರವಾದ ಕಮಲದ ಹೂವ ಅರಳುವಂತೆ ಸುಂದ ರವಾದ ಹೂವಾಗಿ ತಮ್ಮ ವ್ಯಕ್ತಿತ್ವದ ಮಕರಂದವನ್ನು ಸೂಸುವ ಮೂಲಕ ಸರ್ವ ಜನಾಂಗದ ಪ್ರೀತಿಗೆ ಪಾತ್ರರಾಗಿ ಗೊಮ್ಮಟನ ಎತ್ತರಕ್ಕೆ ಬೆಳೆದು ನಿಂತಿದ್ದಾರೆ ಅವರ ಬೆಳವಣಿಗೆ ಒಂದೇ ದಿನದಲ್ಲಿ ಅದುದಲ್ಲ ಜಾದು ಮಾಡಿದಂತೆ ಮೇಲೆ ಬಂದವರಲ್ಲ ಹಾಗು ತ್ವರಿತ ಗತಿಯಲ್ಲಿ ಬದಲಾದವರಲ್ಲ ಪ್ರತಿಕ್ಷಣ ಪ್ರತಿದಿನ ಸ್ವಂತ ಪ್ರಯತ್ನದಿಂದ ಮೇಲೆ ಹೋದವರು ಸ್ಟೆಪ್ ಹತ್ತಿ ಮೇಲೆ ಹೋದವರು ಲಿಫ್ಟ್ ಹತ್ತಿ ಮೇಲೆ ಹೋದವರಲ್ಲ ಕೆಲವರು ಲಿಫ್ಟ್ ಹತ್ತುತ್ತಾರೆ ಹಲವರು ಸ್ಟೆಪ್ ಹತ್ತಿ ಮೇಲೆ ಹೋಗುತ್ತಾರೆ. ಖರ್ಗೆ ಅವರು ತಮ್ಮ ಬೆವರ ಹನಿ ಸುರಿಸಿ ಮೇಲೆ ಬಂದವರು ಅವರನ್ನು ನಾವು ಪ್ರಯತ್ನವಾದಿ ಎಂದು ಹೇಳಬಹುದು ಸತತ ಪ್ರಯತ್ನ ನಿರಂತರ ಹೋರಾಟ ಬಿಡುವಿಲ್ಲದ ಹೋರಾಟ ಹಾಗೂ ಜನ ಸಂಪರ್ಕ ಸಂದಾನಗಳ ಮೂಲಕ ಇಷ್ಟೊಂದು ಎತ್ತರಕ್ಕೆ ಹೋದವರು ಅವರ ಟವರಿಂಗ್ ಪರ್ಸನಾಲಿಟಿ ಮೆಚ್ಚಬೇಕು ಏನು ಇಲ್ಲದ ಒಬ್ಬ ಮನುಷ್ಯ ಇಷ್ಟೊಂದು ಎತ್ತರಕ್ಕೆ ಬೆಳೆಯಬೇಕೆಂದರೆ ಅಷ್ಟು ಸುಲಭ ಸಾಧ್ಯವಲ್ಲ ಇದು ಇವರ ಬದುಕು ಅನೇಕರಿಗೆ ಸ್ಪೂರ್ತಿ ಮತ್ತು ಪ್ರೇರಣೆ ನೀಡುವಂತದ್ದು ಅವರ ಇದುವರಿಗೆನ ಬದುಕಿನಲ್ಲಿ ಯಾವುದೇ ಹಗರಣಗಳಿಲ್ಲದೆ ತಮ್ಮ ಬಿಳಿ ಬಟ್ಟೆಗೆ ಕಪ್ಪು ಚುಕ್ಕೆ ಹಚ್ಚಿಕೊಳ್ಳದೆ ಶುಭ್ರ ಶ್ವೇತ ವರ್ಣವಾಗಿ ವ್ಯಕ್ತಿತ್ವವನ್ನು ಬೆಳೆಸಿಕೊಂಡಿದ್ದಾರೆ ಕಾಡಿ ತಿನ್ನುವ ಬಡತನ ಹಸಿವುಗಳ ಮಧ್ಯದಲ್ಲಿ ಇದ್ದವರು ಅವರು ಕಲ್ಬುರ್ಗಿಯ ಸರ್ಕಾರಿ ಪದವಿ ಮಹಾವಿದ್ಯಾಲಯದಿಂದ ಪದವೀಧರರಾಗಿ ಸೇಟ ಶಂಕರ್ ಲಾಲ್ ಕಾನೂನು ಕಾಲೇಜಿನಿಂದ ಪದವಿಯನ್ನು ಸಂಪಾದಿಸಿ ತಮ್ಮ ವಕಾಲತ್ತು ವೃತ್ತಿಯನ್ನು ಪ್ರಾರಂಭಿಸಿದರು ಕಲ್ಬುರ್ಗಿಯ ಜಗತ್ ರಸ್ತೆಯಲ್ಲಿ ತಮ್ಮ ವಕಾಲತ್ತು ಕಚೇರಿಯನ್ನು ಪ್ರಾರಂಭಿಸಿ ವೃತ್ತಿಯಲ್ಲಿ ತೊಡಗಿಸಿಕೊಂಡರು ನ್ಯಾಯಮೂರ್ತಿ ಶಿವರಾಜ್ ಪಾಟೀಲರ ಜೊತೆಗೆ ಅವರ ಜೂನಿಯರ್ ಆಗಿ ಪ್ರಾಕ್ಟೀಸ್ ಮಾಡಿದರು ಕೆಲವು ವರ್ಷಗಳು ಕಳೆದ ಮೇಲೆ. ಎಂ ಎಸ್ ಕೆ ಮೀ ಲ್ಲಿನ ಕಾರ್ಮಿಕ ಮುಖಂಡರಾಗಿ ಕಾರ್ಮಿಕ ನಾಯಕರಾಗಿ ಕಾಣಿಸಿಕೊಂಡರು ಆರಂಭದಲ್ಲಿ ಕಲ್ಬುರ್ಗಿಯ ಬಸವನಗರದಿಂದ ನಗರಸಭೆ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸಿದ ಅವರು ಸೋಲನ್ನು ಕಂಡರು ಈ ಸೋಲೇ ಅವರ ಮುಂದಿನ ಜೀವನದ ಗೆಲುವಿನ ಸೋಪಾನವಾಯಿತು ಸೋಲರಿಯದ ಸರದಾ ರರನ್ನಾಗಿಸಿತ್ತು ಕರ್ಮ ಧರ್ಮ ಸಯೋಗವೆನ್ನುವಂತೆ ಆಗ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಇಂದಿರಾಜಿಯವರ ಆಪ್ತ ವಲಯದಲ್ಲಿ ಸೇರಿಕೊಂಡರು ಗುರುಮಟ್ಕಲ್ ಮೀಸಲು ಮತಕ್ಷೇತ್ರದಿಂದ ಸ್ಪರ್ಧಿಸಿ ಗೆಲುವನ್ನು ಸಾಧಿಸಿದರು ಸತತವಾಗಿ 8 ಬಾರಿ ಆ ಮತ ಕ್ಷೇತ್ರದಿಂದ ಗೆದ್ದು ಕರ್ನಾಟಕ ಸರ್ಕಾರದಲ್ಲಿ ಜನಪ್ರಿಯ ಶಾಸಕರಾಗಿ ಸಚಿವರಾಗಿ ಅನೇಕ ಖಾತೆಗಳನ್ನು ದಕ್ಷ ಹಾಗೂ ಸಮರ್ಥವಾಗಿ ಕಾರ್ಯ ನಿರ್ವಹಿಸಿದರು ಮುಂದೆ ಆ ಕ್ಷೇತ್ರ ಸಾಮಾನ್ಯ ಕ್ಷೇತ್ರವಾಗಿ ಪರಿವರ್ತನೆಗೊಂಡಾಗ ಚಿತ್ತಾಪುರ ಕ್ಷೇತ್ರಕ್ಕೆ ವಲಸೆ ಬಂದರು ಇಲ್ಲಿ ಸಹ ಗೆಲುವಿನ ಯಶಸ್ಸನ್ನು ಕಂಡರು ಮುಂದೆ ಕಲ್ಬುರ್ಗಿ ಲೋಕಸಭಾ ಮತ ಕ್ಷೇತ್ರಕ್ಕೆ ಸ್ಪರ್ಧಿಸಿದರು ಕಲ್ಬುರ್ಗಿ ಮೀಸಲು ಮತಕ್ಷೇತ್ರದ ಮೊದಲ ಅಭ್ಯರ್ಥಿಯಾಗಿ ವಿಜಯಶಾಲಿಯಾದರು ತಮ್ಮ ಚಿತ್ತಾಪುರ ಮತ ಕ್ಷೇತ್ರವನ್ನು ತಮ್ಮ ಮಾನಸ ಪುತ್ರ ಪ್ರೀತಿಯ ಮಗ ಪ್ರಿಯಾಂಕ ಖರ್ಗೆಯವರನ್ನು ಅಭ್ಯರ್ಥಿಯನ್ನಾಗಿಸಿ ಗೆಲುವು ಸಾಧಿಸಿದರು ನಂತರ ಅವರು ಸತತವಾಗಿ ಗೆದ್ದು ಹ್ಯಾಟ್ರಿಕ್ ಗೆಲುವನ್ನು ಪಡೆದರು ಕಲ್ಬುರ್ಗಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಲಬುರ್ಗಿ ಜಿಲ್ಲೆಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ ತಂದೆಯ ಮಾರ್ಗದರ್ಶನ ಹಾಗೂ ವಿದ್ಯಾರ್ಥಿ ಜೀವನದ ಹೋರಾಟದ ಅನುಭವದ ಹಿನ್ನೆಲೆಯಲ್ಲಿ ಒಬ್ಬ ಅತ್ಯುತ್ತಮ ಜಿಲ್ಲಾ ಉಸ್ತುವಾರಿ ಸಚಿವರಾಗಿ ಹೊರಹೊಮ್ಮಿದರು ಮುಂದೆ ಕೆಲವು ವರ್ಷಗಳ ನಂತರ ಮತ್ತೆ ದೇಶದ ಸಾರ್ವತ್ರಿಕ ಚುನಾವಣೆ ಬಂದಾಗ ಈ ಬಾರಿ ಸನ್ಮಾನ್ಯ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರು ಸೋಲಿನ ಕಹಿ ಅನುಭವವನ್ನು ಅನುಭವಿಸಿದರು ಆಗ ಕಾಂಗ್ರೆಸ್ ಪಕ್ಷವು ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡುವುದರ ಮೂಲಕ ರಾಜ್ಯಸಭಾ ವಿರೋಧ ಪಕ್ಷದ ನಾಯಕನ ಪಟ್ಟವನ್ನು ಕಟ್ಟಿ ಮತ್ತೆ ರಾಜಕೀಯ ಜೀವನಕ್ಕೆ ಹೊಸ ಚೈತನ್ಯವನ್ನು ತುಂಬಿದರು ಈಗ ಅವರು ನವ ದೆಹಲಿಗೆ ರಾಷ್ಟ್ರಮಟ್ಟದ ನಾಯಕರಾದರು ಸೋನಿಯಾ ಗಾಂಧಿ ಆಪ್ತವಲಯಕ್ಕೆ ಸೇರಿಕೊಂಡು ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸುವ ಜವಾಬ್ದಾರಿಯನ್ನ ನಿರ್ವಹಿಸುವ ಸಂದರ್ಭದಲ್ಲಿ ತೊಡಗಿಸಿಕೊಂಡರು ಅವರ ಭಾಷಣ ಭಾಷಾ ಚಾತುರ್ಯ ವಿಚಾರಗಳ ಸರಣಿ ಐದು ದಶಕಗಳ ರಾಜಕೀಯ ಅನುಭವ ಮತ್ತು ಗಟ್ಟಿಯಾಗಿ ಅದ್ಭುತವಾದ ಮತ್ತು ಪರಿಣಾಮಕಾರಿಯಾದ ಮಾತುಗಳ ಸರಣಿ ಇವೆಲ್ಲವನ್ನೂ ಗಮನಿಸಿದ ಸೋನಿಯಾ ಗಾಂಧಿಯವರು ತಮ್ಮ ಸ್ಥಾನವನ್ನು ಬಿಟ್ಟುಕೊಟ್ಟು ಅವರನ್ನು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನವನ್ನು ನೀಡಿದರು ಈ ಹುದ್ದೆ ಬಹುದೊಡ್ಡದು ಯಾಕೆಂದರೆ ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನದಲ್ಲಿ ಗಾಂಧೀಜಿ ನೆಹರು ಇಂದಿರಾಗಾಂಧಿ ರಾಜೀವ್ ಗಾಂಧಿ ಸೋನಿಯಾ ಗಾಂಧಿ ಇವರೆಲ್ಲ ಕುಳಿತ ಕುರ್ಚಿಯ ಮೇಲೆ ಕೊಡುವ ಸದಾವಕಾಶ ಅವರಿಗೆ ದೊರೆಯಿತು ಹಿಂದೂ ಧರ್ಮದ ಪ್ರಕಾರ ಚತುರ್ವರ್ಣ ಪದ್ಧತಿಯಲ್ಲಿ ಶೂದ್ರ ಸಂಸ್ಕೃತಿಯಲ್ಲಿ ಅಸ್ಪೃಶ್ಯ ಜನಾಂಗದಲ್ಲಿ ಜನಿಸಿದ ಖರ್ಗೆಯವರನ್ನು ರಾಷ್ಟ್ರ ನಾಯಕನ ಹುದ್ದೆಯನ್ನು ಸ್ವೀಕರಿಸುವ ಸು ಸಂದರ್ಭ ಬಂದು ಒದಗಿತ್ತು ಈ ಸ್ಥಾನವನ್ನು ಅಲಂಕರಿಸಿದಾಗ ಮೋದಿಯವರು ಮೂಗಿನ ಮೇಲೆ ಕೈಯಿಟ್ಟುಕೊಂಡರು. ಇಡೀ ಕಾಂಗ್ರೆಸ್ ಪಕ್ಷದ ಜನ ಆಶ್ಚರ್ಯ ಚಿಕಿತರಾದರು ಕರ್ನಾಟಕದಲ್ಲಿ ದಲಿತ ಸಮುದಾಯದಲ್ಲಿ ಜನಿಸಿದ ಖರ್ಗೆ ಅವರಿಗೆ ಮುಖ್ಯಮಂತ್ರಿಯ ಸ್ಥಾನ ದೊರೆಯುವುದು ಕಷ್ಟವಾಗಿತ್ತು ಅಂತಹದರಲ್ಲಿ 31 ರಾಜ್ಯಗಳ ಮುಖ್ಯಮಂತ್ರಿಗಳ ಸಂಪರ್ಕ ಸಂಬಂಧ ಬರುವ ಅವಕಾಶ ದೊರೆಯಿತು ಅನೇಕ ಮುಖ್ಯ ಮಂತ್ರಿಗಳು ಇವರನ್ನು ಭೇಟಿಯಾಗಲಿಕ್ಕೆ ಸಮಯ ತೆಗೆದುಕೊಳ್ಳುವಂತೆ ಆಯ್ತು ಇಡೀ ದೇಶದ ತುಂಬಾ ಸಂಚರಿಸಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಿ ಅನೇಕ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರುವ ಪ್ರಯತ್ನದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ರಾಜ್ಯಸಭೆಯಲ್ಲಿ ಮೋದಿಯವರನ್ನು ಹಣೆಯುತ್ತಿದ್ದಾರೆ ಹೊರಗಿನ ಸಭೆ ಸಮಾರಂಭಗಳಲ್ಲಿ ಅವರ ಕೆಲಸ ಕಾರ್ಯಗಳನ್ನು ಕುರಿತು ಟೀಕಿಸುತ್ತಾರೆ ಆಗಾಗ ವಿಷಯಕ್ಕನುಸಾರವಾಗಿ ಕುಟುಕುತ್ತಾರೆ ಮತ್ತು ಮೋದಿಯವರು ಸದಾ ಜಾಗೃತಿಯಿಂದ ಇರುವಂತೆ ಮಾತನಾಡುತ್ತಾರೆ ಆಳುವ ಪಕ್ಷಕ್ಕೆ ಕೇಳುವ ಪಕ್ಷ ಇರಬೇಕು ಎನ್ನುವುದನ್ನು ಸಾಬೀತುಪಡಿಸಿ ತೋರಿಸಿದ್ದಾರೆ ಹೀಗೆ ಬಸವ ನಗರದ ಕೊಳಚೆ ಪ್ರದೇಶದಿಂದ ನವದೆಲಿಯವರೆಗೆ ಬೆಳೆದ ನಾಯಕ ಮಲ್ಲಿಕಾರ್ಜುನ ಖರ್ಗೆಯವರಾಗಿದ್ದಾರೆ ಈಗ ಅವರು ಲೋಕ ನಾಯಕರಾಗುವ ಹಂತದಲ್ಲಿದ್ದಾರೆ ಮುಂದಿನ ದಿನಗಳಲ್ಲಿ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಪ್ರಧಾನಮಂತ್ರಿಯೂ ಆಗಬಹುದು ಇದು ದೇಶದ ಇತಿಹಾಸದಲ್ಲಿ ಒಂದು ಹೊಸ ಇತಿಹಾಸ ನಿರ್ಮಾಣವಾದಂತಾಗುತ್ತದೆ ಅಖಿಲ ಭಾರತ ಕಾಂಗ್ರೆಸ್ ಸಮಿತಿಗೆ ದಕ್ಷಿಣ ಭಾರತದಿಂದ ಅಧ್ಯಕ್ಷರಾದ ವ್ಯಕ್ತಿಗಳು ಅಪರೂಪ ಹಾಗೆಯೇ ಅವರಲ್ಲಿ ಇವರು ಒಬ್ಬರಾಗಿದ್ದಾರೆ ಹಾಗೆ ದಕ್ಷಿಣ ಭಾರತದಿಂದ ಪ್ರಧಾನಿ ಆದರೆ ಅದರಲ್ಲಿಯೂ ಕೂಡ ಇದೇ ರೀತಿ ಹೊಸ ಅನುಭವವನ್ನು ಪಡೆಯುತ್ತಾರೆ. ಪ್ರಸಂಗ ಬಂದರೆ ಪ್ರಧಾನಿ ಆಗದಿದ್ದರೂ ರಾಷ್ಟ್ರಪತಿಯಾಗುವ ಸಾಧ್ಯತೆಗಳು ಇವೆ. ಒಟ್ಟಾರೆ ಖರ್ಗೆ ಅವರು ಎಲ್ಲಿಂದ ಎಲ್ಲಿಯವರೆಗೆ ಬೆಳೆದರಲ್ಲ ಎಂದು ನಾವು ಆಶ್ಚರ್ಯ ಚಕಿತರಾಗಿ ನೋಡಬಹುದು ಗೊಮ್ಮಟನನ್ನು ನಾವು ನೋಡಬೇಕಾದರೆ ನಮ್ಮ ತಲೆಯ ಮೇಲೆ ಇದ್ದ ಟೋಪಿ ಬೀಳದಂತೆ ನೋಡಿ ಆನಂದಿಸಬೇಕು ಹಾಗೆ ಗೋಮ್ಮಟನ ಎತ್ತರಕ್ಕೆ ಬೆಳೆದ ಖರ್ಗೆಯವರ ವ್ಯಕ್ತಿತ್ವ ತಲೆಯೆತ್ತಿ ನೋಡುವಂತೆ ಮಾಡಿದೆ ಗೊಮ್ಮಟನ ಹಾಗೆ ಬೆಳೆದು ನಿಂತಿದ್ದಾರೆ ಇಡೀ ಭಾರತದ ದಲಿತ ಸಮುದಾಯ ಹೆಮ್ಮೆ ಪಡುವಂತಾಗಿದೆ ಇಂಥ ಎತ್ತರದ ಉನ್ನತ ಹುದ್ದೆಯನ್ನು ಪಡೆದ ಖರ್ಗೆ ಅವರು ಒಂದೇ ದಿನದಲ್ಲಿ ಬೆಳೆದು ನಿಂತವರಲ್ಲ ಪ್ರತಿನಿತ್ಯ ಬೆಳೆದವರು ಪ್ರತಿ ಕ್ಷಣ ಬೆಳೆದವರು ಅವರ ಬೆಳವಣಿಗೆ ಕಂಡು ಅನೇಕರು ಸಹಿಸದೆ ಅನೇಕ ಮಾತುಗಳನ್ನು ಆಡಿದರು ತಲೆ ಕೆಡಿಸಿಕೊಳ್ಳದವರು ನಿಂದಕರು ಇರಬೇಕು ಜಗದಲ್ಲಿ ನಿಂದಕರು ಇರಬೇಕು ಹಂದಿ ಇದ್ದರೆ ಊರ ಸೂಚಿ ಎನ್ನುವಂತೆ ನಿಂದಕರನ್ನು ಕಟ್ಟಿಕೊಂಡೆ ಅವರು ಬೆಳೆದವರು ಅನೇಕ ಜನ ನನ್ನ ಹಿಂದೆ ಟೀಕಾಚಾರ್ಯರು ಇದ್ದಾರೆ ಅವರು ನನ್ನನ್ನು ಚೆನ್ನಾಗಿ ಟೀಕಿಸುತ್ತಾರೆ ಅವರು ಟೀಕಿಸಿದಷ್ಟು ನಾನು ಬೆಂಕಿಯ ಉಂಡೆಯಂತೆ ಪ್ರಖರವಾಗುತ್ತೇನೆ ಪ್ರಕಾಶಮಾನವಾಗುತ್ತೇನೆ ಮತ್ತಷ್ಟು ಮೈ ಮೇಲಿನ ಬೂದಿಯನ್ನು ಕೊಡವಿಕೊಂಡು ನಿಲ್ಲುತ್ತೇನೆ ಎಂದು ಖರ್ಗೆಯವರು ಹೇಳುತ್ತಾರೆ ಹೀಗಾಗಿ ಅವರ ವ್ಯಕ್ತಿತ್ವ ಅಜಾನುಬಾಹು ಸದೃಢ ಶರೀರದಿಂದ ಕೂಡಿದ್ದಾರೆ ಈಗ 85 ವರ್ಷವಾದರೂ ಕೂಡ ಮುಪ್ಪಡರಿಸದೆ ನಿತ್ಯ ಯವ್ವನ ದಿಂದ ಕೂಡಿದ ಸ್ಪೂರ್ತಿದಾಯಕವಾದ ಜೀವನವನ್ನು ನಡೆಸುತ್ತಿದ್ದಾರೆ ಅವರಿಗೆ ಎಲ್ಲರೂ ಸಹಕರಿಸುತ್ತಿದ್ದಾರೆ ಮನಸ್ಸು ತಿಳಿದುಕೊಂಡು ನಡೆಯುವ ಮಡದಿ ಮಾತು ಕೇಳುವ ಮಕ್ಕಳು ಅವರನ್ನು ಅರಿತುಕೊಂಡು ನಡೆಯುವ ಸ್ನೇಹಿತರು ಮತ್ತು ನೆರೆಹೊರೆಯವರು ಅವರ ಬೆಳವಣಿಗೆಯ ಜೀವನಕ್ಕೆ ಸಹಕಾರವಾಗಿದ್ದಾರೆ ಅವರ ಅಳಿಯ ರಾಧಾಕೃಷ್ಣ ಅವರು ತಮ್ಮ ಮಾವನ ಸೋಲನ್ನು ಗೆಲುವನ್ನಾಗಿ ಪರಿವರ್ತಿಸಿ ಈಗ ಕಲಬುರ್ಗಿ ಲೋಕಸಭಾ ಮತ ಕ್ಷೇತ್ರಕ್ಕೆ ಆಯ್ಕೆಗೊಂಡು ಲೋಕಸಭಾ ಸದಸ್ಯರಾಗಿದ್ದಾರೆ ಈಗ ಕಲ್ಬುರ್ಗಿ ಜಿಲ್ಲೆಯನ್ನು ಪ್ರತಿನಿಧಿಸುತ್ತಿದ್ದಾರೆ ಅವರ ಮನೆಯಲ್ಲಿ ಅಧಿಕಾರ ಕೇಂದ್ರಿತ ಸ್ಥಾನಮಾನಗಳಿವೆ. ಖರ್ಗೆಯವರು ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷರು ಮತ್ತು ರಾಜ್ಯಸಭಾ ವಿರೋಧಪಕ್ಷದ ನಾಯಕರಾಗಿದ್ದಾರೆ ಅವರ ಮಗ ಪ್ರಿಯಾಂಕ ಖರ್ಗೆ ಕಲ್ಬುರ್ಗಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕರ್ನಾಟಕ ರಾಜ್ಯ ಗ್ರಾಮೀಣ ಅಭಿವೃದ್ಧಿ ಮಂತ್ರಿಗಳು ಆಗಿದ್ದಾರೆ ಅವರ ಅಳಿಯ ರಾಧಾಕೃಷ್ಣ ಗುಲ್ಬರ್ಗ ಲೋಕಸಭಾ ಮತಕ್ಷೇತ್ರದಿಂದ ಆಯ್ಕೆಗೊಂಡು ಲೋಕಸಭಾ ಸ್ಥಾನವನ್ನು ತುಂಬಿದ್ದಾರೆ ಹೀಗೆ ಅವರ ಮನೆ ಈಗ ಅರಮನೆಯಂತೆ ಶೋಭಿಸುತ್ತಿದೆ ಅಧಿಕಾರ ಬಲದಿಂದ ಜನರ ಸೇವೆ ಮಾಡುವುದಕ್ಕೆ ತ್ರಿಮೂರ್ತಿಗಳು ಸಿದ್ದರಾಗಿದ್ದಾರೆ ಅವರ ಸೇವೆಯನ್ನು ಕಲ್ಬುರ್ಗಿ ಜಿಲ್ಲೆಯ ಜನತೆ ಪಡೆದುಕೊಳ್ಳುತ್ತಿದೆ ಅವರ ಹುಟ್ಟುಹಬ್ಬವನ್ನು ಪ್ರತಿವರ್ಷ ಆಚರಿಸಲಾಗುತ್ತಿದೆ ನಿಜ ಈ ವರ್ಷ ವಿಶೇಷವಾದ ಅಧಿಕಾರದಿಂದ ತುಂಬಿದ ಅವರ ಮನೆಯವರು ಮಕ್ಕಳು ಅಭಿಮಾನಿಗಳು ಸ್ನೇಹಿತರು ಆಪ್ತರರೆಲ್ಲ ಸೇರಿ ಅದ್ಬುತವಾಗಿ ಅವರ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ ಎಂಟು ದಶಕಗಳ ಕಾಲ ಅವರು ತಮ್ಮ ರಾಜಕೀಯ ಜೀವನವನ್ನು ನಡೆಸಿದ್ದಾರೆ ಈಗ 85ನೇ ವರ್ಷದಲ್ಲಿ ಪದಾರ್ಪಣೆ ಮಾಡುತ್ತಿದ್ದಾರೆ ಅವರ ಇಡೀ ಬದುಕನ್ನು ಬಗೆದು ನೋಡಿದಾಗ ನಮಗೆ ಕಂಡುಬರುವುದು ಅವರ ಚರಿತ್ರೆ ಎಷ್ಟು ದೊಡ್ಡದೋ ಅದಕ್ಕಿಂತಲೂ ದೊಡ್ಡದು ಅವರ ಚಾರಿತ್ರ್ಯ ಚರಿತ್ರೆ ಎಲ್ಲರಿಗೂ ಇರುತ್ತದೆ ತಂದೆ ತಾಯಿ ಹುಟ್ಟು ಬಾಲ್ಯ ಬೆಳವಣಿಗೆ ಯವ್ವನ ಮದುವೆ ಮಕ್ಕಳು ಆಸ್ತಿ ಪಾಸ್ತಿ ಅಧಿಕಾರ ಅಂತಸ್ತು ಇವೆಲ್ಲ ಚರಿತ್ರೆಯಲ್ಲಿ ಬರುತ್ತವೆ ಆದರೆ ಇವೆಲ್ಲಕ್ಕಿಂತಲೂ ಖರ್ಗೆ ಅವರ ಬದುಕು ದೊಡ್ಡದು ಅವರ ಭಾವನೆಗಳು ದೊಡ್ಡವು ವಿಚಾರಗಳು ದೊಡ್ಡವು ಅವರ ಚರಿತ್ರೆ ಗಿಂತ ಚಾರಿತ್ರ್ಯ ದೊಡ್ಡದಾಗಿದೆ ಪ್ರತಿ ಹೆಜ್ಜೆಗಳು ಕೂಡ ಗಟ್ಟಿ ಮತ್ತು ದಿಟ್ಟವಾಗಿವೆ ಪ್ರಗತಿ ಸುಧಾರಣೆ ಬದಲಾವಣೆಯನ್ನು ತೋರಿಸುತ್ತವೆ ಅವರ ನಡೆ-ನುಡಿ ನೇರ ದಿಟ್ಟ ನಿರಂತರವಾಗಿವೆ ಅವರು ಯಾವಾಗಲೂ ಒಂದು ಮಾತನ್ನು ಹೇಳುತ್ತಾರೆ ನಮ್ಮ ವಿಚಾರಗಳು ಆಚಾರಕ್ಕೆ ಬರಬೇಕು ಅದರ ಜೊತೆಗೆ ಪ್ರಚಾರವು ಇರಬೇಕು ವಿಚಾರ ಆಚಾರ ಪ್ರಚಾರ ಈ ಮೂರು ಮನುಷ್ಯನ ವ್ಯಕ್ತಿತ್ವವನ್ನು ಉನ್ನತ ಮಟ್ಟಕೇರಿಸುತ್ತವೆ ಎಂದು ಹೇಳುತ್ತಾರೆ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವಿಚಾರಗಳನ್ನು ತಮ್ಮ ಬದುಕಿನಲ್ಲಿ ಅರಿತು ಅಳವಡಿಸಿಕೊಂಡವರು ಅಷ್ಟೇ ಅಲ್ಲ ಪ್ರತಿ ಉಸಿರಿನಲ್ಲಿಯೂ ಕೂಡ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬದುಕು ಬರಹ ಭಾಷಣವನ್ನು ಉಸಿರಾಡಿದವರು ಭಗವಾನ್ ಬುದ್ಧದೇವ ವಿಶ್ವದ ಬಹುದೊಡ್ಡ ಸಂತ ಅವರ ವಿಚಾರಗಳು ಇಡೀ ವಿಶ್ವವೇ ಒಪ್ಪುತ್ತದೆ ಮತ್ತು ಅವರನ್ನು ಇಡೀ ವಿಶ್ವ ಅನುಸರಿಸುತ್ತಿದೆ ಡಾಕ್ಟರ್ ಬಾಬಾ ಸಾಹೇಬರು ಬುದ್ಧಿಷ್ಟ ಧರ್ಮವನ್ನು ಒಪ್ಪಿಕೊಂಡರು ಬೌದ್ಧ ಧರ್ಮದೀಕ್ಷ ಪಡೆದಿರುವುದರಿಂದ ಅವರ ತತ್ವ ಇವರು ಅನುಸರಿಸುವುದರಿಂದ ಜನಮಾನಸದಲ್ಲಿ ಸನ್ಮಾನ್ಯ ಶ್ರೀ ಮಲ್ಲಿಕಾರ್ಜುನ ಖರ್ಗೆಯವರು ದ್ವಿತೀಯ ಅಂಬೇಡ್ಕರ್ ಎಂದು ಕರೆಸಿಕೊಳ್ಳುತಿದ್ದಾರೆ ಮಲ್ಲಿಕಾರ್ಜುನ ಖರ್ಗೆ ಅವರು ಕಲ್ಬುರ್ಗಿಯಲ್ಲಿ ಬುದ್ಧ ವಿಹಾರವನ್ನು ಕಟ್ಟಿ ಜಗತ್ಪ್ರಸಿದ್ಧರಾಗಿದ್ದಾರೆ ಕಲ್ಬುರ್ಗಿಯಲ್ಲಿ ಲಿಂಗಾಯತರಿಗೆ ಶರಣಬಸವನ ದೇವಾಲಯವಿದೆ ಮುಸ್ಲಿಮರಿಗೆ ಹಜರತ್ ಖಜಾ ಬಂದೇ ನವಾಜ್ ದರ್ಗಾ ಇದೆ ದಲಿತರು ಎಲ್ಲಿ ಹೋಗಬೇಕೆಂಬ ಪ್ರಶ್ನೆ ಬಂದಾಗ ಅದಕ್ಕೆ ಉತ್ತರ ರೂಪವಾಗಿ ಬುದ್ಧ ವಿಹಾರಕ್ಕೆ ಎಂದು ಉತ್ತರಿಸುವಂತೆ ಜಗತ್ಪ್ರಸಿದ್ಧವಾದ ಬುದ್ಧ ವಿಹಾರವನ್ನು ಕಲಬುರ್ಗಿಯಲ್ಲಿ ಕಟ್ಟಿ ಅಮರವಾಗಿದ್ದಾರೆ ಜನಪರ ಅಭಿವೃದ್ಧಿಪರ ಪ್ರಗತಿಪರ ಕೆಲಸಗಳಿಗೆ ಖರ್ಗೆ ಅವರು ಇನ್ನೊಂದು ಹೆಸರು ಅವರನ್ನು ಅಭಿವೃದ್ಧಿಯ ಹರಿಕಾರರೆಂದೆ ಕರೆಯುತ್ತಾರೆ ಅವರಿಗೆ ಯಾವುದೇ ಇಲಾಖೆ ಸಿಗಲಿ ಆ ಇಲಾಖೆಯಲ್ಲಿ ಹೊಸತನವನ್ನು ಅಭಿವೃದ್ಧಿ ಕ್ರಾಂತಿಯನ್ನು ತಂದವರು ಅದನ್ನು ವಿನೂತನ ಗೊಳಿಸಿದವರು ಅವರು ಎಲ್ಲೇ ಕೈ ಇಡಲಿ ಮಣ್ಣನ್ನು ಹೂ ನ್ನನ್ನಾಗಿಸುವನ್ನಾಗಿಸುವ ಶಕ್ತಿ ಅವರಿಗಿದೆ ಅಂತಹ ವಿಚಾರಗಳನ್ನು ಇಟ್ಟುಕೊಂಡು ಬಾಳಿ ಬದುಕಿದವರು, ಕಲ್ಯಾಣ ನಾಡಿನ ಹೆಬ್ಬಾಗಿಲಾಗಿರುವ ಕಲಬುರ್ಗಿ ಜಿಲ್ಲೆಯನ್ನು ತಮ್ಮ ಪ್ರಗತಿಪರ ಚಿಂತನೆಯಿಂದ ಪ್ರತಿನಿತ್ಯ ಅಧಿಕಾರದ ಸಾಧನೆಯ ಬಲದಿಂದ ಶ್ರೇಷ್ಠತೆಯನ್ನು ತಂದವರು



