ಸುದ್ಧಿ

ಕರ್ನಾಟಕ ಬಿಜೆಪಿ ಪಕ್ಷ ಕಳಚಿಕೊಳ್ಳುತ್ತಿದೆ ಲಿಂಗಾಯತರ ಕೊಂಡಿ.

ಕರ್ನಾಟಕ ಬಿಜೆಪಿ ಪಕ್ಷ ಕಳೆಚಿಕೊಳ್ಳುತ್ತಿದೆ ಲಿಂಗಾಯತರ ಕೊಂಡಿ.

ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಶರೀರವಾದರೆ ಲಿಂಗಾಯತ ಜನಾಂಗ ಶಾರೀರ ಎಂಬ ಮಾತು ಪ್ರಚಲಿತದಲ್ಲಿತ್ತು

ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಲಿಂಗಾಯತರನ್ನು ಕಡೆಗಣಿಸುತ್ತಾ ನಡೆದಾಗ ರಾಮಕೃಷ್ಣ ಹೆಗಡೆ ಅವರ ನಾಯಕತ್ವದಲ್ಲಿ ಬಿಜೆಪಿ ಮತ್ತು ಲಿಂಗಾಯತ್ ಜನಾಂಗದ ನಡುವೆ ಸೇತುವೆಯಂತೆ ಕೆಲಸ ಮಾಡಿ ಶೇಕಡ 75ರಷ್ಟು ಲಿಂಗಾಯತ ನಾಯಕರನ್ನು ಬಿಜೆಪಿಗೆ ಎಳೆತಂದು ಕೂಡಿ ಹಾಕಿದ ಕೀರ್ತಿ ದಿವಂಗತ ರಾಮಕೃಷ್ಣ ಹೆಗಡೆ ಅವರಿಗೆ ಸಲ್ಲುತ್ತದೆ. ಅಂದಿನಿಂದ ಇಂದಿನವರೆಗೂ ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಪಕ್ಷ ಮತ್ತು ಲಿಂಗಾಯತ ನಾಯಕರು ಹಾಲು ಜೇನಿನಂತೆ ಕೂಡಿಕೊಂಡು ಕೆಲಸ ಮಾಡುತ್ತಾ ನಡೆದಿದ್ದಾರೆ ಆದರೆ ಕಲಿಯುಗದ ಮಹಿಮೆಯು ತಿಳಿಯದಾಗಿದೆ ಕೇಂದ್ರ ನಾಯಕರು ಕೆಲವೇ ಜನರ ಮಾತಿಗೆ ಮರುಳಾಗಿ ಬಿಜೆಪಿ ಪಕ್ಷದ ಹಲವಾರು ಲಿಂಗಾಯತ ನಾಯಕರನ್ನು ಕಡೆಗಣಿಸುತ್ತಾ ನಡೆಯುತ್ತಿದೆ ಅಪ್ಪ ಮಕ್ಕಳ ಕಾರಸ್ಥಾನ ರಾಜ್ಯದಲ್ಲಿ ಲಿಂಗಾಯತ ಧರ್ಮ ನಾಯಕರು ಬಿಜೆಪಿ ಕೊಂಡಿಯಿಂದ ಕಳಚಿ ಬೀಳಲು ಪ್ರಥಮ ಕಾರಣಿಭೂತರಾಗಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ
ತಾನೆಂದರೆ ಬಿಜೆಪಿ ಪಕ್ಷ. ತಾನಿಲ್ಲದಿದ್ದರೆ ಬಿಜೆಪಿ ಪಕ್ಷ ಕರ್ನಾಟಕದಲ್ಲಿ ಇಲ್ಲವೇ ಇಲ್ಲ ಎಂಬ ಹೆಮ್ಮೆಯಿಂದ ಬೀಗುತ್ತಿರುವ ಅಪ್ಪ ಮಕ್ಕಳ ದುರಾಡಳಿತ ದುರಾಲೋಚನೆ ವಿರೋಧ ಪಕ್ಷಗಳೊಂದಿಗೆ ಕುಚುಕು ಕುಚುಕು ಹವ್ಯಾಹತವಾಗಿ ನಡೆಯುತ್ತಿದೆ ಯಾಕೆ? ಎಂದು ಕೇಳಿದವರೆಲ್ಲ ಬಿಜೆಪಿ ಪಕ್ಷದಿಂದ ಹೊರನೂಕಲ್ಪಡುತ್ತಿದ್ದಾರೆ.

ಕಳೆದ ಕೆಲವು ವರ್ಷಗಳ ಹಿಂದೆ ಬಿಜೆಪಿ ಪಕ್ಷವು ಅಪ್ಪ ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲವೆಂಬ ಕಾರಣದಿಂದ ಅಪ್ಪ ಬಿಜೆಪಿ ಪಕ್ಷದಿಂದ ಹೊರ ನಡೆದು ಕೆಜೆಪಿ ಪಕ್ಷವನ್ನು ಕಟ್ಟಿ ವಿಧಾನಸಭಾ ಚುನಾವಣೆಯನ್ನು ಎದುರಿಸಿದರು.. ಬಿಜೆಪಿ ಪಕ್ಷ ಕರ್ನಾಟಕದಲ್ಲಿ ನಿರ್ನಾಮ ಮಾಡುತ್ತೇನೆ ಎಂದು ಘಂಟಾಘೋಷಣವಾಗಿ ಕೂಗುತ್ತಾ ರಾಜ್ಯದಲ್ಲಿಡೆ ಓಡಾಡಿ ಆ ವಿಧಾನಸಭಾ ಚುನಾವಣೆಯಲ್ಲಿ ತನ್ನೊಂದಿಗೆ ನಾಲ್ಕು ಜನರನ್ನು ಆಯ್ಕೆ ಮಾಡಲಷ್ಟೇ ಕಾರಣಿಭೂತರಾದರು ಆದರೆ ಬಿಜೆಪಿ ಪಕ್ಷ ಬಿಟ್ಟು ಕೆಜೆಪಿ ಪಕ್ಷ ಕಟ್ಟಿ , ಸಂಪೂರ್ಣ ಬಹುಮತದೊಂದಿಗೆ ನಾನೇ ಆಯ್ಕೆಯಾಗುತ್ತೇನೆ ನನ್ನ ಕೆಜೆಪಿ ಪಕ್ಷ ಆರಿಸಿ ಬರುತ್ತದೆ ನಾನು ಮುಖ್ಯಮಂತ್ರಿ ಆಗುತ್ತೇನೆ. ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಮಣ್ಣು ಮುಕ್ಕಿಸುತ್ತೇನೆ ಎಂದು ಹಗಲು ಕನಸು ಕೊಂಡು ತನ್ನ ಆಟ ಆಡಿದ ಅಪ್ಪ ಇನ್ನಿಲ್ಲದಂತೆ ಮಕಾಡೆ ಮಲಗಿ ಅಂಭೋ ಎಂದು ತೆರೆಯ ಮರೆಯಲ್ಲಿ ಅಳಲಾರಂಭಿಸಿದರು

ತನ್ನ ಸೊಕ್ಕುಮುರಿಸಿಕೊಂಡು ತನ್ನ ತಪ್ಪಿನ ಅರಿವಾಗಿ ಮತ್ತೆ ಬಿಜೆಪಿ ತೆಕ್ಕೆಯಲ್ಲಿ ಬರಲು ಬಿಜೆಪಿಯೊಂದಿಗೆ ಮುಗುಳ್ನಗಲು ಪ್ರಾರಂಭಿಸಿದರು ಲವ್ ಮಾಡಲು ಆರಂಭಿಸಿದರು ಅವರಿವರಿಂದ ಬಿಜೆಪಿಯ ಕೇಂದ್ರ ನಾಯಕರಿಗೆ ಪಕ್ಷಕ್ಕೆ ಸೇರಿಸಿಕೊಳ್ಳಲು ದುಂಬಾಲು ಬಿದ್ದು ದಮ್ಮಯ್ಯ ಎನ್ನುತ್ತಾ ಕೊನೆಗೂ ಬಿಜೆಪಿ ಪಕ್ಷ ಸೇರಿಕೊಂಡರು.

ನಂತರದ ದಿನಗಳಲ್ಲಿ ಪಕ್ಷ ಮುನ್ನಡೆಸಲಾರಂಭಿಸಿದರು ಈ ಅಪ್ಪ ಅದೆಂತ ದುರಾಸೆ ದುರವರ್ತನೆ ಶೇಡಿನ ಮನೋಭಾವದಿಂದ ಕೂಡಿದ್ದಾರೆ ಎಂದರೆ , ಅಂದು ತಾನು ಸ್ಥಾಪಿಸಿದ ಕೆಜೆಪಿ ಪಕ್ಷಕ್ಕೆ ತನ್ನ ಹಿಂದೆ ಬರಲಿಲ್ಲ ಎಂಬ ಕಾರಣಕ್ಕೆ ಬಿಜೆಪಿಯ ಹಲವಾರು ಲಿಂಗಾಯತ ನಾಯಕರನ್ನು ಒಬ್ಬೊಬ್ಬರಂತೆ ತೆರೆಮರೆಯಲ್ಲಿ ಸದೆಬಡೆಯಲಾರಂಭಿಸಿದರು.
ಜಗದೀಶ್ ಶೆಟ್ಟರ್ ಲಕ್ಷ್ಮಣ ಸೌದಿ ಇನ್ನಿತರ ನಾಯಕರು ಮತ್ತು ಸದ್ಯದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಪಕ್ಷದಿಂದ ಹೊರದಬ್ಬಿಸಿಕೊಂಡವರು ಮತ್ತು ಈ ಅಪ್ಪ ಅದೆಂತ ದುರಾಸೆ ಎಂದರೆ ಮುಂದಿನ ದಿನಗಳಲ್ಲಿ ತನ್ನ ಎರಡನೆಯ ಎಳೆನಿಂಬೇ ಕಾಯಿ ಕುಡಿಯನ್ನು ಈ ರಾಜ್ಯದಲ್ಲಿ ಮುಖ್ಯಮಂತ್ರಿಯನ್ನಾಗಿಸಲು ಇನ್ನಿಲ್ಲದಂತೆ ಕಷ್ಟ ಪಡುತ್ತಿದ್ದಾರೆ ರಾಜಕೀಯದಲ್ಲಿ ಅಂಬೆಗಾಲಿಕ್ಕುತ್ತಿರುವ ಎರಡನೇ ಕುಡಿ ಅಸಎಂಬದ್ದವಾಗಿ ಮಾತಾಡುತ್ತಾ , ಅಭಾಸವಾಗಿ ನಡೆದುಕೊಳ್ಳುತ್ತಿದೆ ಜೊತೆಗೆ ಬಿಜೆಪಿ ಪಕ್ಷದಲ್ಲಿರುವ ಹಿರಿಯ ನಾಯಕರು ಈ ಎಳೆನಿಂಬೆಕಾಯಿ ಕೈ ಕೆಳಗೆ ಕೆಲಸ ಮಾಡುವ ದಿನ ಸ್ಥಿತಿ ಬಂದೊದುಗಿದೆ ಪ್ರತಿಪಟಿಸಿದರೆ ಪಕ್ಷ ಬಿಟ್ಟು ಹೋಗಬೇಕು ಅದೇ ಕಾರಣಕ್ಕೆ ಮೂಗೆತ್ತಿನಂತೆ ಕಣ್ಣು ಕಿವಿ ಬಾಯಿ ಮುಚ್ಚಿಕೊಂಡು ಬಿಜೆಪಿ ಪಕ್ಷದಲ್ಲಿ ಬಾಯಿ ಬಿಡದೆ ಹೊಂದಿಕೊಂಡು ಹೋಗುತ್ತಿದ್ದಾರೆ.

. ಇದೇ ತರಹ ಪಕ್ಷದಲ್ಲಿ ದುರವರ್ತನೆ ನಡೆಸ್ತಾ ಇದ್ದರೆ ಮುಂದೊಂದು ದಿನ ಪಕ್ಷದ ಸಭೆಗೆ ಚಪ್ಪಾಳೆ ತಟ್ಟಲು ಜನ ಸಿಗದಂತ ಪರಿಸ್ಥಿತಿ ಬರಬಹುದು?

Related Articles

Leave a Reply

Your email address will not be published. Required fields are marked *

Back to top button