ಕುಚುಕು ಗೆಳೆಯನಿಗೆ ಅದೆಂಥಹ ಮೋಸ.?

ಕುಚುಕು ಗೆಳೆಯನಿಗೆ ಅದೆಂಥಹ ಮೋಸ.?
ಒಂದು ಕಾಲದಲ್ಲಿ ಈಶ್ವರಪ್ಪ-ಯಡ್ಯೂರಪ್ಪ ಭಾರತೀಯ ಜನತಾ ಪಕ್ಷದಲ್ಲಿ ಜೋಡೆತ್ತಿನಂತೆ, ಸಹೋದರರಂತೆ,
ಎಂದು ಜನರು ಅನ್ನುತ್ತಿದ್ದರು. ಏನೂ ಇಲ್ಲದ ಸ್ಥಿತಿಯಲ್ಲಿದ್ದ ಬಿ.ಜೆ.ಪಿ. ಪಕ್ಷದಲ್ಲಿ ಹಲವಾರು ಉತ್ಸಾಹಿ ಯುವಕರು ತಮ್ಮ ಮನೆ ಕೆಲಸವೆಂಬಂತೆ ಹಗಲು-ರಾತ್ರಿ ಬಿ.ಜೆ.ಪಿ ಪಕ್ಷಕ್ಕಾಗಿ ದುಡಿಯುತ್ತಿದ್ದರು.
ಆ ವೇಳೆಯಲ್ಲಿ ಪಕ್ಷದ ಮೀಟಿಂಗ್ಗೆ ಶಿಕಾರಿಪುರದಿಂದ ಬರುತ್ತಿದ್ದ ಯಡ್ಯೂರಪ್ಪನವರನ್ನು ಶಿವಮೊಗ್ಗೆಯ ಖಾಸಗಿ ಬಸ್ ಸ್ಟ್ಯಾಂಡಿನಿಂದ ತಮ್ಮ ಡಕೋಟಾ ಸ್ಕೂಟರ್ನ ಹಿಂದಿನ ಸೀಟನಲ್ಲಿ ಕುಳ್ಳಿರಿಸಿಕೊಂಡು ಮೀಟಿಂಗ್ ನಡೆಯುವ ಸ್ಥಳಕ್ಕೆ ಕರೆದೋಯ್ಯೂತ್ತಿದ್ದ ಈಶ್ವರಪ್ಪನವರು ಮೀಟಿಂಗ್ ನಂತರ ಮಧ್ಯಾಹ್ನದ ಊಟ ಮಾಡಿಕೊಂಡು. ಸೆಕೆಂಡ್ ಸೆಶನ್ನಲ್ಲಿ ಪಕ್ಷದ ಕಾರ್ಯಕರ್ತರ ಚರ್ಚೆ, ನೋವು ನಲಿವು ಸಂಘಟನೆಯ ವಿಚಾರಗಳನ್ನು ಚರ್ಚಿಸುತ್ತಿದ್ದರು. ಸಾಯಂಕಾಲ ಟೀ ಕಾಫಿ ಆದನಂತರ ಅದೇ ಡಕೋಟಾ ಸ್ಕೂಟರ್ನಲ್ಲಿ ಯಡ್ಯೂರಪ್ಪನವರನ್ನು ಅದೇ ಸ್ಡ್ಯಾಂಡಿಗೆ ಕರೆತಂದು ಶಿಕಾರಿಪುರ ಬಸ್ಸ ಹತ್ತಿಸಿ ಹೋಗುತ್ತಿದ್ದರಂತೆ. ಇಂಥಹವೇ ಹಲವಾರು ವಿಷಯಗಳನ್ನು ೯೦ ರ ದಶಕದ “ ಲಂಕೇಶ ವಾರಪತ್ರಿಕೆ ” ಯಲ್ಲಿ ಓದಿದ ನೆನಪು.
ಇದ್ದುದ್ದನ್ನು ಇದ್ದಂತೆ ಮಾತಾಡಿ “ ಖಂಡಿತವಾದಿ ಲೋಕ ವಿರೋಧಿ ” ಎನ್ನುವಂತೆ ಈಶ್ವರಪ್ಪನವರು ಹಲವಾರು ಬಾರಿ ಸತ್ಯೆ ಹೇಳಿಯೇ ಪಕ್ಷದಲ್ಲಿ ಮತ್ತು ವಿರೋಧಿ ಪಾಳಯದಲ್ಲಿ ಛೀ….ಥೂ…. ಎನ್ನಿಸಿಕೊಂಡಿದ್ದಿದೆ,. 72 + ವಯಸ್ಸಿನ ಈಶ್ವರಪ್ಪನವರಿಗೆ ನಖರಾ ಮಾಡುವುದು, ಮುಲುಕಾಡುವುದು, ಗಿಮಿಕ್ ಮಾಡುವುದು, ಕೈ ಹೊಸೆಯುವುದು, ತಲೆ ತುರಿಸಿಕೊಳ್ಳುವುದು, ಡೊಗ್ಗು ಸಲಾಮ ಹಾಕುವ ಆಸನಗಳನ್ನು ಕಲಿಯಲೇ ಇಲ್ಲ.
ಈಶ್ವರಪ್ಪನವರು ಒಮ್ಮೆ ನಂಬಿದ್ದೇ ಆದರೇ ಮುಗಿಯಿತು ಸುಣ್ಣದ ನೀರು ಕುಡಿಸಿದರೂ ಇದು ಹಾಲಿದೆ ಎನ್ನುತ್ತಲೇ ರಾಜಕೀಯದಲ್ಲಿ ಶ್ರಮಿಸಿದರು. ರಾಜಕೀಯ ಜೀವನ ಸವೆಸಿದರು.
ಕೆಲ ಆಕ್ರಮದ ವಾಸನೆಯಿಂದ ಅಧಿಕಾರ ಕಳೆದುಕೊಂಡಿದ್ದ ಈಶ್ವರಪ್ಪನವರನ್ನು, ಕಳಂಕ ಕಳಚಿಕೊಂಡು ಬನ್ನಿ ಮತ್ತೇ ನಿಮ್ಮನ್ನು ಮಂತ್ರಿಯಾಗಿಸುತ್ತೇನೆ. ಮಗನಿಗೆ ಎಮ್.ಎಲ್.ಎ. ಸೀಟ್ ಕೊಡಿಸುತ್ತೆನೆ. ಶಿವಮೊಗ್ಗದ ಶಾಸಕ ಸ್ಥಾನ ಬಿಟ್ಟುಕೊಡಿ ನಿಮ್ಮನ್ನು ಎಮ್.ಎಲ್.ಸಿ. ಮಾಡಿಸುತ್ತೆನೆ. ನಿಮ್ಮ ಮಗ ಕಾಂತೇಶನಿಗೆ ಹಾಂವೇರಿ ಲೋಕಸಭಾ ಕ್ಷೇತ್ರಕ್ಕೆ ಟಿಕೇಟ್ ಕೊಡಿಸುತ್ತೇನೆ ಎಂಬ ಭರವಸೆಗಳಿಗೆ ಈಶ್ವರಪ್ಪನವರು ಈ ಎಲ್ಲಾ ಸುಳ್ಳುಗಳನ್ನು ನಂಬುತ್ತಲೇ ಬಂದರು. ಅದ್ಯಾಕೆ ನಂಬಿದರೋ ಈವತ್ತಿಗೂ ತಿಳಿಯುತ್ತಿಲ್ಲ. ‘’ ನಂಬಿ ಕೆಟ್ಟವರಿಲ್ಲವೋ’’ ಎಂಬ ದಾಸರ-ವಾಣಿಗೆ ಜೋತು ಬಿದ್ದರಾ? ಹಳೇ ತಲೆಮಾರಿನ ಇವರು ತಳಮಟ್ಟದಿಂದ ಪಕ್ಷ ಕಟ್ಟಿ ಬೆಳೆಸಿದವರು. ಕುರುಬ ಸಮಾಜದ ನಾಯಕರು ( ಕರ್ನಾಟಕ ರಾಜ್ಯದಲ್ಲಿ ಅತೀ ದೊಡ್ಡ ಸಮಾಜ ಹೊಂದಿರುವ ಕುರುಬ ಜನಾಂಗ) ಜನಸಂಘಟಕರು, ಇಷ್ಟೇಲ್ಲಾ ಪ್ಲಸ್ ಪಾಯಿಂಟ ಇದ್ದರೂ ಎಲ್ಲಿ ಎಡವಿದರು ಎಂದರೇ? ನಂಬಿದರು. ನಂಬುತ್ತಲೇ ಇದ್ದರು. ನಂಬುತ್ತಲೇ ನಡೆದರು. ನಂಬಿಗೆಯೇ ಮೈಯೆಲ್ಲಾ ಪೂಸಿಕೊಂಡರು ಇದರಿಂದಾಗಿಯೇ ಮಿತ್ರದ್ರೋಹಿ ತನ್ನ ಜಾಣತನ ತೋರಿಸಿಯೆ ಬಿಟ್ಟನು. ಮಿತ್ರದ್ರೋಹ ಮಾಡಿಯೇಬಿಟ್ಟರು. ಪ್ರಜಾ ದ್ರೋಹ, ಪತ್ನಿ ದ್ರೋಹ, ಪಕ್ಷ ದ್ರೋಹ ಮಾಡಿರುವ ವ್ಯಕ್ತಿಗೆ ಇದೇನೂ ವಿಶೇಷವಲ್ಲ. ಹೊಸದಂತೂ ಅಲ್ಲವೇ ಅಲ್ಲ.
ಈಶ್ವರಪ್ಪನವರ ನೇರ ನುಡಿ, ಸಾಮಾಜಿಕ ಕಳಕಳಿಯ ಗುಣಕ್ಕೆ ಮೆಚ್ಚಿ ಅವರ ಅಭಿಮಾನಿಯಾಗಿದ್ದ ಕಾರಣಕ್ಕೇನೇ ಕಳೆದ ೨ ದಿನದಿಂದಲೂ ತುಂಬಾ ಕಳವಳ ಆಗುತ್ತಿದೆ. ಕಳೆದ ವರ್ಷ ಶಿವಮೊಗ್ಗ ನಗರದ ಹೊರವಲಯದಲ್ಲಿರುವ ಅವರ ಮನೆಗೆ ಹೋಗಿದ್ದಾಗ ಸಾಯಂಕಾಲ ೬ ಗಂಟೆಯಾಗಿತ್ತು. ನೂರಾರು ಜನ ಅವರಿಗಾಗಿ ಕಾಯುತ್ತಿದ್ದರು. ೬-೩೦ ಕ್ಕೆ ಅವರು ಹಾಲನಲ್ಲಿ ಬಂದು ಕುಳಿತಾಗ ಜನರು ತಮ್ಮ ಅಹವಾಲು ಹೇಳಿಕೊಂಡು ಪರಿಹಾರ ಪಡೆದುಕೊಂಡು ಹೋಗುತ್ತಿದ್ದರು. ನಾನು ಅವರನ್ನು ಭೇಟಿಯಾಗಿ ಸಾರ್ವಜನಿಕ ಕೆಲಸವೊಂದರ ಮಾಹಿತಿ ಕೊಟ್ಟಾಗ ಗಂಟೆ ೯ ಆಗಿತ್ತು ಆಗ ಅವರು ನನ್ನ ಕೆಲಸಕ್ಕೆ ಲೆಟರ್ ರೆಡಿ ಮಾಡಲು ತಮ್ಮ ಸಹಾಯಕನಿಗೆ ತಿಳಿಸಿದರು. ಶಾಸಕರ ಕಾರ್ಯಾಲಯಕ್ಕೆ ಹುಡುಗನನ್ನು ಕಳುಹಿಸಿ ವಿಷಯ ಟೈಪ ಮಾಡಿಸಿ ತರಿಸಿದರು. ಸಹಿ ಮಾಡಿಕೊಟ್ಟು ಮುಗುಳ್ನಕ್ಕರು. ಖುಷಿಯಾಗಿ ಮನೆಯಿಂದ ಹೊರ ಬರುವಾಗ ಅನ್ಯ ಧರ್ಮಿಯ ಕೆಲ ಹೆಂಗಸರು ಬಂದು ಈಶ್ವರಪ್ಪನವರಿಗೆ ತಮ್ಮ ವಿಷಯ ಹೇಳಲಾರಂಭಿಸಿದರು. ಶಾಂತ ಚಿತ್ತದಿಂದ ಆಲಿಸಿದ ಇವರು ಸಂಬಂಧಿಸಿದ ಅಧಿಕಾರಿಗೆ ಫೋನ ಮಾಡಿ ಸಮಸ್ಯೆಯನ್ನು ಪರಿಹರಿಸಿದರು.
ನಾನು ಹೊರಬರುವ ಮುಂಚೆ ಅದೇನು ಸರ್, ಅನ್ಯಧರ್ಮಿರ ಬಗ್ಗೆ ಹಲವಾರು ಬಾರಿ ವ್ಯೆತಿರಿಕ್ತ ಹೇಳಿಕೆ ಕೊಡುತ್ತಿರಾ? ಇಲ್ಲಿ ನೋಡಿದರೆ ಹೀಗೆ ಎಂದು ಕುತೂಹಲ ತಡೆಯಲಾರದೇ ಕೇಳಿದರೇ.
ಪಕ್ಷ, ರಾಜಕೀಯವೇ ಬೇರೆ ಮಾನವೀಯತೆಯೇ ಬೇರೆ? ಎಂದರು.
ಸರಣಿಯೊಂದಿಗೆ ಬರಲಿದೆ ಓದಿ.




