ಸುದ್ಧಿ

ನಮ್ಮ ಪೊಲೀಸ ನಮ್ಮ‌ ಹೆಮ್ಮೆ-1.

ಪೊಲೀಸ್ ಠಾಣಾ ಮಾಹಿತಿ.

ಕರ್ನಾಟಕ ರಾಜ್ಯ ಸರ್ಕಾರ, ಪೊಲೀಸ್ ಇಲಾಖೆಯಲ್ಲಿ ಪ್ರತಿಯೊಂದು ಸ್ಥರದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು, ಸಿಬ್ಬಂಧಿಗಳ ಪರಿಚಯ ಮತ್ತು ಅವರ ಕರ್ತವ್ಯಗಳನ್ನು ಜನ ಸಾಮಾನ್ಯರಿಗೆ ಈ ಮೂಲಕ ಮಾಹಿತಿ ಕೊಡಲಾಗುವದು.
ಪೊಲೀಸ ಇಲಾಖೆಯಲ್ಲಿ ಮೊಟ್ಟ ಮೊದಲನೇಯದಾಗಿ ಔಟ್ ಪೊಸ್ಟ ಪೊಲೀಸ ಠಾಣೆಯಿಂದ ಕಾರ್ಯಪ್ರವೃತ್ತವಾಗುತ್ತದೆ. ಮತ್ತು ಆ ಔಟ್‌ಪೋಸ್ಟ ಠಾಣೆಗೆ ಪೊಲೀಸ್ ಮುಖ್ಯ ಪೇದೆಯು ಔಟಪೋಸ್ಟ ಠಾಣೆಯ ಅಧಿಕಾರಿಯಾಗಿರುತ್ತಾನೆ. ಮುಖ್ಯ ಪೇದೆಯ ಕರ್ತವ್ಯವೆಂದರೆ, ತನ್ನ ಆಧಿನ ಪೊಲೀಸ ಸಿಬ್ಬಂಧಿಗಳಿಗೆ ಕೆಲಸದ ಬಗ್ಗೆ ನಿರ್ದೇಶನ ಕೊಡುವುದು ಪರಿವಿಕ್ಷೀಸುವುದು, ನಿಯಮಿತವಾಗಿ ಕಡತಗಳನ್ನು ಇಡುವುದು ಮತ್ತು ನಮೂನೆ ಸಂಖ್ಯೆ ೨೭ ರಲ್ಲಿ ಮೇಲಾಧಿಕಾರಿಗಳಿಗೆ ದಿನನಿತ್ಯದ ವರದಿಯನ್ನು ಕಳುಹಿಸುವುದು ಹಾಗೂ ಅದರ ಜೊತೆಗೆ ಉಪಠಾಣೆಯ ಸಿಬ್ಬಂಧಿಗಳು ನಿರ್ವಹಿಸಿದ ಕರ್ತವ್ಯದ ಸಂಕ್ಷಿಪ್ತ ವರದಿ ಕಳುಹಿಸುವುದು.
ಉಪಠಾಣೆಯ ಪ್ರಭಾರ ಹೊಂದಿರುವ ಮುಖ್ಯ ಪೇದೆಯು ಆ ಠಾಣೆಯ ಆಡಳಿತ ಅಧಿಕಾರಿಯಲ್ಲ. ಮತ್ತು ದಂಡಪ್ರಕ್ರಿಯಾ ಸಂಹಿತೆಯ ಕಲಮು ೧೫೪ ರ ಅನ್ವಯ ಒಂದು ಸಂಜ್ಷೇಯ ಅಪರಾಧದ ಪ್ರಥಮ ವರ್ತಮಾನ ವರದಿಯನ್ನು ಬರೆದುಕೊಳ್ಳಲು ಅಥವಾ ಪ್ರಥಮ ವರ್ತಮಾನ ವರದಿಯ ಸಾರಾಂಶವನ್ನು ನಮೂದಿಸಲು ತನ್ನ ಮೇಲಾಧಿಕಾರಿಯ ಹೆಸರಿನಲ್ಲಿ/ನಿರ್ದೇಶನದಲ್ಲಿ ಕಾರ್ಯನಿರ್ವಹಿಸುತ್ತಾನೆ.
ಗಂಭೀರ ಅಪರಾಧ, ಘಟನೆಯ ಬಗ್ಗೆ ನೇರ ದೂರು ಅಥವಾ ಮಾಹಿತಿ ಬಂದಾಗ ಉಪಠಾಣೆಯ ಪ್ರಭಾರದಲ್ಲಿರುವ ಮುಖ್ಯ ಪೇದೆಯು, ಆ ಉಪಠಾಣೆಯ ದಿನಚರಿಯಲ್ಲಿ ಅದಕ್ಕೆ ಸಂಬAಧಿಸಿದ ಟಿಪ್ಪಣೆ ಮಾಡಿಕೊಂಡು ಫಿರ್ಯಾದಿಯನ್ನು ಅಥವಾ ವರದಿಯನ್ನು ಠಾಣೆಗೆ ಕಳುಹಿಸತಕ್ಕದ್ದು ಮತ್ತು ಕೂಡಲೇ ಘಟನೆಯ ಸ್ಥಳಕ್ಕೆ ಹೋಗಿ ಆ ವಿಷಯದ ಬಗ್ಗೆ ಮಾಹಿತಿ ಸಂಗ್ರಹಿಸುವುದಲ್ಲದೇ ಅವಶ್ಯಕ ಕ್ರಮ ಕೈಗೊಳ್ಳುವುದು. ಅಂದರೇ ಅಪರಾಧಿಯ ದಸ್ತಗಿರಿಯಂಥಹ ಕೆಲಸ ಮಾಡುವುದಲ್ಲದೇ, ತನ್ನ ಹಿರಿಯ ಅಧಿಕಾರಿಯ ಬರುವಿಕೆಗಾಗಿ ಕಾಯಬೇಕು. ಉಪಠಾಣೆಯ ದಿನಚರಿ ಪುಸ್ತಕದಲ್ಲಿ ಫಿರ್ಯಾದಿಯು ತನ್ನಲ್ಲಿಗೆ ಬಂದ ಸಮಯವನ್ನು ಮತ್ತು ಆ ವಿಷಕ್ಕೆ ಸಂಬAಧಿಸಿದAತೆ ತಾನು ತೆಗೆದುಕೊಂಡ ಕ್ರಮವನ್ನು ದಾಖಲಿಸತಕ್ಕದ್ದು
ಇಂಥಹ ಉಪಠಾಣೆಯ ಮುಖ್ಯ ಪೇದೆಯನ್ನು ವರ್ಷಕ್ಕೊಮ್ಮೆ ಬದಲಾಯಿಸಲಾಗುತ್ತದೆ.
ಉಪಠಾಣೆಯ ಒಬ್ಬ ಪ್ರಭಾರಿ ಮುಖ್ಯ ಪೇದೆಯು, ಪೊಲೀಸೆ ಠಾಣೆಯ ಪ್ರಭಾರದಲ್ಲಿರುವ ಅಧಿಕಾರಿಯ ಹಸ್ತಕ್ಷೇಪವಿಲದಲ್ಲದೇ ಕಾನೂನು ಬದ್ಧವಾಗಿ ಮುಖ್ಯಪೇದೆಯು ಕ್ರಮ ತೆಗೆದುಕೊಳ್ಳಬಲ್ಲಂಥಹ ಅಪರಾಧಗಳ ಬಗ್ಗೆ ಕ್ರಮ ತೆಗೆದುದಕೊಳ್ಳಲು ಅಧಿಕಾರಸ್ಥನಾಗಿರುತ್ತಾನೆ.

Related Articles

Leave a Reply

Your email address will not be published. Required fields are marked *

Back to top button