ಸುದ್ಧಿ

ಗೀತಾ ನಾಗರಾಜ್ ವಕೀಲರು ಖಜಾಂಚಿ ಸ್ಥಾನದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಕ್ರಮ ಸಂಖ್ಯೆ 2 ಇದೆ. ಬನ್ನಿಬೆಂಬಲಿಸೋಣ.

ಗೀತಾ ನಾಗರಾಜ್ ವಕೀಲರು ಖಜಾಂಚಿ ಸ್ಥಾನದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಕ್ರಮ ಸಂಖ್ಯೆ 2 ಇದೆ. ವಕೀಲ ಬಂಧುಗಳೇ ಇವರನ್ನು ಬೆಂಬಲಿಸೋಣ ಬನ್ನಿ.

ಬೆಂಗಳೂರು ವಕೀಲರ ಸಂಘ ಚುನಾವಣೆ 2025-26.

ಆತ್ಮೀಯ ಬಂಧುಗಳೇ, ಬೆಂಗಳೂರು ವಕೀಲರ ಸಂಘ ಚುನಾವಣೆಯಲ್ಲಿ ಗೀತಾ ನಾಗರಾಜ್ ವಕೀಲರು ಖಜಾಂಚಿ ಸ್ಥಾನದ ಅಭ್ಯರ್ಥಿ ಯಾಗಿ ಸ್ಪರ್ಧೆ ಮಾಡುತ್ತಿದ್ದಾರೆ ಕ್ರಮ ಸಂಖ್ಯೆ 2 ಇದೆ.

ಈ ಚುನಾವಣೆಯ ಕರಪತ್ರದಲ್ಲಿ ಗೀತಾ ನಾಗರಾಜ್ ಅವರು ಬರೆದುಕೊಂಡಿರುವಂತೆ ” ಪ್ರಸ್ತುತ ನಡೆಯುತ್ತಿರುವ ಬೆಂಗಳೂರು ವಕೀಲರ ಸಂಘದ ಚುನಾವಣೆಯಲ್ಲಿ ಎಲ್ಲಾ ವಕೀಲರ ಪರಿಪೂರ್ಣ ಬೆಂಬಲದೊಂದಿಗೆ ನಾನು ಗೆಲ್ಲುವ ವಿಶ್ವಾಸವಿದೆ ಇಲ್ಲಿ ಸಿಗುವ ಗೆಲುವು ಅಧಿಕಾರ ಅನುಭವಿಸಲು ಸಿಕ್ಕ ವೇದಿಕೆ ಎಂದು ನಾನು ಭಾವಿಸುವುದಿಲ್ಲ. ಬದಲಾಗಿ ನಮ್ಮ ಎಲ್ಲಾ ವಕೀಲರ ಸಮಗ್ರ ಕಲ್ಯಾಣಕ್ಕೆ ವಕೀಲರ ಸಂಘದ ಒಗ್ಗಟ್ಟು ಪ್ರದರ್ಶಿಸುವುದಕ್ಕೆ ಸಿಕ್ಕ ಒಂದು ಅದ್ಭುತ ಸದಾ ಅವಕಾಶ ಎಂದು ಭಾವಿಸಿ ಮುಕ್ತ ಮನಸ್ಸಿನಿಂದ ಸ್ವೀಕರಿಸುತ್ತೇನೆ ಹಾಗೂ ಯಾವುದೇ ಸ್ವಾರ್ಥ ಮತ್ತು ಸ್ವಾಹಿತಾಸಕ್ತಿ ಇಲ್ಲದೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತೇನೆ ಅವಿರತವಾಗಿ ನಮ್ಮ ಸಂಘದ ಏಳಿಗೆಗಾಗಿ ಹಗಲು ಇರುಳು ಶ್ರಮಿಸುತ್ತೇನೆ ” ಎಂದು ಹೇಳಿದ್ದಾರೆ.

ಚಿಕ್ಕ ವಯಸ್ಸಿನ ಪಾದರಸದಂತಹ ಯುವ ವಕೀಲರು. ಇವರು ವಕೀಲರ ಶ್ರೇಯೋಭಿವೃದ್ಧಿಗಾಗಿ ಹೋರಾಡುವ ಮನೋಭಾವನೆ ಹೊಂದಿರುವ ಇವರನ್ನು ನಾವೆಲ್ಲ ಬೆಂಬಲಿಸೋಣ.

ಗೀತಾ ನಾಗರಾಜ್ ಅವರನ್ನೇ ಯಾಕೆ ಬೆಂಬಲಿಸಬೇಕು?

ವಕೀಲರ ಸಂಘದ ಚುನಾವಣೆಯಲ್ಲಿ ಖಜಾಂಚಿ ಹುದ್ದೆಗೆ ಸ್ಪರ್ಧಿಸಿರುವ ಗೀತಾ ನಾಗರಾಜ ಅವರೇ ಹೇಳಿದಂತೆ ” ನಾ ಕಂಡ ಕನಸಿನ ಯೋಜನೆ ” ಗಳನ್ನು ಪ್ರಸ್ತುತ ಪಡಿಸುತ್ತಿದ್ದೇನೆ.

ಗೀತಾ ನಾಗರಾಜ್ ಅವರು ಈ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆ ಆದ ನಂತರ ಅವರು ಮಾಡಬೇಕೆಂದು ಕನಸು ಕಂಡಿರುವ ಯೋಜನೆಗಳು
ಹೈಕೋರ್ಟ್ ನಲ್ಲಿ ಡಿಜಿಟಲ್ ಲೈಬ್ರರಿ ಆರಂಭಿಸುವುದು , ಆರೋಗ್ಯವೇ ಮಹಾಭಾಗ್ಯ ಎಂಬ ಸ್ತೋಕ್ತಿಯಂತೆ ವಕೀಲರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಉದ್ದೇಶ ಹೊಂದಿದ್ದಾರೆ.

ಗೀತಾ ನಾಗರಾಜ್ ಅವರು ಪರ್ಸನಲ್ ಕೌನ್ಸಿಲಿಂಗ್ ಸ್ಟೇಷನ್ ಆಯೋಜಿಸಲು ಇಷ್ಟ ಪಡುತ್ತಾರೆ ವಕೀಲರ ಸಂಘದ ವತಿಯಿಂದ ಆಗಿಂದಾಗೆ ಸಂಪೂರ್ಣ ಆರೋಗ್ಯ ತಪಾಸಣೆ ಮತ್ತು ಉಚಿತ ನೇತ್ರ ತಪಾಸಣೆ ಶಿಬಿರಗಳನ್ನು ಆಯೋಜಿಸುವ ವಿಚಾರವಿದೆ.

ಈ ತರಹ ಸುಮಾರು 21 ಯೋಜನೆಗಳನ್ನು ತಯಾರಿಸಿ ವಕೀಲ ಬಂಧುಗಳಿಗೆ ಕರಪತ್ರದ ಮುಖಾಂತರ ವಿಷಯ ತಿಳಿಸಿದ್ದಾರೆ. ಗೀತಾ ನಾಗರಾಜ್ ಅವರ ಸಮಯೋಚಿತ ಭವಿಷ್ಯದ ಚಿಂತನೆ ವಕೀಲರ ಆರೋಗ್ಯ, ವಕೀಲರ ಪ್ರಾಕ್ಟೀಸ್, ಬಗ್ಗೆ ಹೊಂದಿರುವ ಮುಂಜಾಗ್ರತೆ, ಕಾಳಜಿಯನ್ನು ಮೆಚ್ಚಲೇಬೇಕಾಗಿದೆ. ಕಾರಣ ನವೊತ್ಸಾಹದಲ್ಲಿರುವ ಗೀತಾ ನಾಗರಾಜ ಅವರನ್ನು ಬೆಂಬಲಿಸೋಣ ವಕೀಲರ ಸಂಘದ ಕೀರ್ತಿ ಪತಾಕೆ ಹಾರಿಸೋಣ ಬನ್ನಿ.
ಎಮ್. ಎ. ಸುಗಂಧಿ ವಕೀಲರು ಬೆಂಗಳೂರ್/ಕಲಬುರ್ಗಿ.9731113141

Related Articles

Leave a Reply

Your email address will not be published. Required fields are marked *

Back to top button