ಗ್ರಾಮೀಣ ಕ್ರೀಡೆಗಳಿಗೆ ಉತ್ತೇಜನ ನೀಡಿ, ಮಾದಯ್ಯ ಸ್ವಾಮಿ ಗುರುವಿನ್. ತುರವಿಹಾಳ.
ಗ್ರಾಮೀಣ ಕ್ರೀಡೆಗಳಿಗೆ ಉತ್ತೇಜನ ನೀಡಿ, ಮಾದಯ್ಯ ಸ್ವಾಮಿ ಗುರುವಿನ್
ತುರವಿಹಾಳ:ಕಾರ ಹುಣ್ಣಿಮೆಯ ಪ್ರಯುಕ್ತ ಗ್ರಾಮೀಣ ಕ್ರೀಡೆಗಳಿಗೆ ಚಾಲನೆ ನೀಡಿ ಮಾತನಾಡಿದ ಮಾದಯ್ಯ ಸ್ವಾಮಿ ಗುರುವಿನ್ ಗ್ರಾಮೀಣ ಕ್ರೀಡಾಪಟುಗಳಿಗೆ ಹೆಚ್ಚಿನ ಆದ್ಯತೆ ಕೊಡುವುದರಿಂದ ಗ್ರಾಮೀಣ ಪ್ರತಿಭೆಗಳು ಬೆಳೆಯುತ್ತಾರೆ. ಪ್ರತಿವರ್ಷದಂತೆ ಈ ವರ್ಷವೂ ಕೂಡ ಕಾರ ಹುಣ್ಣಿಮೆಯ ಪ್ರಯುಕ್ತ ಸಾಂಗ್ರಾಣಿ ಕಲ್ಲು ಮತ್ತು ಉಸುಕಿನ ಚೀಲ ಎತ್ತುವ ಸ್ಪರ್ಧೆ ಹಮ್ಮಿಕೊಳ್ಳಲಾಗಿದ್ದು ವಿವಿಧ ಕಡೆಗಳಿಂದ ಕ್ರೀಡಾಪಟುಗಳು ಆಗಮಿಸಿದ್ದರು. 10. ಕೆಜಿಯಿಂದ ಪ್ರಾರಂಭವಾಗಿ 100. ಕೆಜಿಯವರೆಗೆ ಭಾರ ವಿರುವ ಈ ಸಾಂಗ್ರಾಣಿ ಕಲ್ಲು ಮತ್ತು ಕ್ವಿಂಟಲಿನ ಉಸುಕಿನ ಚೀಲ ಯಾವ ಕ್ರೀಡಾಪಟು ಎಷ್ಟು ಬಾರಿ ತನ್ನ ಶಕ್ತಿಪ್ರದರ್ಶನ ಮಾಡುತ್ತಾನೋ ಅಂತವರಿಗೆ ಉತ್ತಮ ಎಂದು ಪ್ರಥಮ ಬಹುಮಾನ ನೀಡಲಾಗುವುದು. ಅದಕ್ಕೂ ಕಡಿಮೆ ಭಾರ ವಿರುವ ಕಲ್ಲು ಮತ್ತು ಉಸುಕಿನ ಚೀಲ ಎತ್ತಿ ತಮ್ಮ ಪ್ರದರ್ಶನ ನೀಡುತ್ತಾರೋ ಅಂತವರಿಗೆ ದ್ವಿತೀಯ ಮತ್ತು ತೃತೀಯ ಬಹುಮಾನ ನೀಡಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ:-ಊರಿನ ಹಿರಿಯ ಮುಖಂಡರಾದ ಮಲ್ಲನಗೌಡ ದೇವರಮನಿ, ಪ.ಪ.ಸದಸ್ಯ ಶಾಮಿದ್ ಸಾಬ್ ಚೌದ್ರಿ, ಉಮರ್ ಸಾಬ್, ಮೌಲಪ್ಪಯ್ಯ ಗುತ್ತೇದಾರ್, ಎಂ.ಡಿ ಫಾರುಕ್ ಸಾಬ್, ದೊಡ್ಡಪ್ಪ ಕಲ್ಗೂಡಿ,ನಾಗಪ್ಪ ಸಂದೂರಿ,ಮಹಾಂತೇಶ್ ಸಾಹುಕಾರ್, ರಮೇಶ್ ಕರಡೋಣಿ, ಯಲ್ಲಪ್ಪ ಭೋವಿ ಪ.ಪ.ಸದಸ್ಯರು,ಮುತ್ತಣ್ಣ ನವಲಿ ,ಫಕೀರಪ್ಪ ಭಂಗಿ,ಶಂಕರಗೌಡ ದೇವರಮನಿ,ಮಲ್ಲು ಭಂಗಿ,ಅರವಿಂದ ರೆಡ್ಡಿ,ಕ್ರೀಡಾ ಅಭಿಮಾನಿಗಳು ಮತ್ತು ಗ್ರಾಮಸ್ಥರು. ಉಪಸ್ಥಿತರಿದ್ದರು,




