ಸುದ್ಧಿ

ಜಡತ್ವ ತುಂಬಿರುವ ದೇಹಕ್ಕೆ ಯೋಗ ಅತ್ಯವಶ್ಯಕ : ಕೆ.ರಾಜಶೇಖರ್

ಜಡತ್ವ ತುಂಬಿರುವ ದೇಹಕ್ಕೆ ಯೋಗ ಅತ್ಯವಶ್ಯಕ : ಕೆ.ರಾಜಶೇಖರ್

ಅಮೃತ ಸರೋವರ ಕೆರೆ ದಡದಲ್ಲಿ ಯೋಗಾ ದಿನಾಚರಣೆ

ಕನಕಗಿರಿ: ಜಡತ್ವ ತುಂಬಿರುವ ದೇಹಕ್ಕೆ ಚಲನಶೀಲತೆ ನೀಡಬೇಕು ಅದಕ್ಕೆ ಯೋಗ ತುಂಬಾ ಅಗತ್ಯ ಎಂದು ತಾ.ಪಂ ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ರಾಜಶೇಖರ ಹೇಳಿದರು.

ಅವರು, ಅಂತರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ತಾಲೂಕಿನ ಚಿಕ್ಕಡಂಕನಕಲ್ ಗ್ರಾ.ಪಂ ವ್ಯಾಪ್ತಿಯ ಚಿರ್ಚನಗುಡ್ಡಾ ತಾಂಡಾ ಅಮೃತ ಸರೋವರದ ದಡದಲ್ಲಿ ಹಮ್ಮಿಕೊಂಡಿದ್ದ ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಇಂದಿನ ಧಾವಂತದ ಬದುಕಿನಲ್ಲಿ ನಿತ್ಯ ಸಮಸ್ಯೆಗಳೊಂದಿಗೆ ನಾವು ಹೋರಾಡಬೇಕಿದೆ. ಅದು ಮಾನಸಿಕ, ಆರ್ಥಿಕ ಅಥವಾ ಆರೋಗ್ಯದ ಸಮಸ್ಯೆಗಳಿರಬಹುದು. ಯೋಗ ಮೈಗೂಡಿಸಿಕೊಂಡರೆ ಇಂತಹ ಜಟಿಲ ಸಮಸ್ಯೆಗಳಿಗೆ ಎದೆಯೊಡ್ಡಿ ನಿಲ್ಲಬಹುದು. ಯೋಗ ಎಲ್ಲರಿಗೂ ಕೈಗೆಟುಕುವಂಥದ್ದು. ದುಬಾರಿ ಸಾಧನಗಳು ಬೇಕಿಲ್ಲ. ಹಣ ವ್ಯಯಿಸುವ ಅಗತ್ಯವೂ ಇಲ್ಲ. ಮಕ್ಕಳಿಂದ ವೃದ್ಧರವರೆಗೂ ಸರಳವಾಗಿ ಯೋಗ ಕಲಿಯಬಹುದು. ನೀರು, ಗಾಳಿ, ವಾತಾವಾರಣ ಕಲುಷಿತವಾಗಿರುವ ಇಂದಿನ ಕಾಲಘಟ್ಟದಲ್ಲಿ ಆರೋಗ್ಯಯುತ ಜೀವನಕ್ಕೆ ಯೋಗವೇ ಮದ್ದು ಎಂದು ತಿಳಿಸಿದರು.

ನಂತರ ಯೋಗ ಶಿಕ್ಷಕಿ ಅಂಬಿಕಾ ಬಾಯಿ ಅವರು ನೆರೆದಿದ್ದ ಎಲ್ಲರಿಗೂ ವಿವಿಧ ಯೋಗಾಸನಗಳನ್ನು ಮಾಡಿಸಿ, ಯೋಗದ ಮಹತ್ವವನ್ನು ತಿಳಿಸಿಕೊಟ್ಟರು.

ಬಳಿಕ ನರೇಗಾ ಕಾಯಕ ಬಂಧುಗಳಿಗೆ ಗ್ರಾ.ಪಂ ವತಿಯಿಂದ ನೀರಿನ ಕ್ಯಾನ್ ಗಳನ್ನು ವಿತರಣೆ ಮಾಡಿದರು.

ಈ ಸಂದರ್ಭದಲ್ಲಿಗ್ರಾ.ಪಂ ಪಿಡಿಓ ಈರಪ್ಪ, ಅಧ್ಯಕ್ಷೆ ನೀಲಮ್ಮ ಗಂ.ಬಸವರಾಜ್ ಉಪಾಧ್ಯಕ್ಷ ರಾಮಚಂದ್ರ ಗೌಡ ಸೇರಿದಂತೆ ಸರ್ವ ಸದಸ್ಯರು, ತಾಲೂಕು ಐಇಸಿ ಸಂಯೋಜಕ ಶಿವಕುಮಾರ್‌ ಕೆ ಹಾಗೂ ತಾಲೂಕು ಐಇಸಿ ಸಂಯೋಜಕ ಶಿವಕುಮಾರ್‌ ಕೆ, ಗ್ರಾಮದ ಮುಖಂಡರು, ಕೂಲಿಕಾರರು, ಅಂಗನವಾಡಿ-ಆಶಾ ಕಾರ್ಯಕರ್ತೆಯರು ಸೇರಿದಂತೆ ಶಾಲಾ ಮಕ್ಕಳು, ಗ್ರಾ.ಪಂ ಸಿಬ್ಬಂದಿಗಳು ಹಾಜರಿದ್ದರು.
ಗೌತಮ್ ಯಾದವ್ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ

Oplus_0

Related Articles

Leave a Reply

Your email address will not be published. Required fields are marked *

Back to top button