ದೇವಪುರ್ ಗ್ರಾಮಕ್ಕೆ ಸಮರ್ಪಕ ವಿದ್ಯುತ್ ಪೂರೈಕೆಯಿಲ್ಲದೇ ಜನ ಜೀವನ ಅಸ್ತವ್ಯೆಸ್ತ ಅಧಿಕಾರಿಗಳು ಗಾಢ ನಿದ್ರೆಯಲ್ಲಿ.
ದೇವಪುರ್ ಗ್ರಾಮಕ್ಕೆ ಸಮರ್ಪಕ ವಿದ್ಯುತ್ ಪೂರೈಕೆಯಿಲ್ಲದೇ ಜನ ಜೀವನ ಅಸ್ತವ್ಯೆಸ್ತವಾಗಿದ್ದು ಸರಿಪಡಿಸಲು ಅಧಿಕಾರಿಗಳಿಗೆ ಮನವಿ.
ದೇವಪುರ್ ಗ್ರಾಮದ 110 KV ನಿಂದ ಹೆಚ್ಚುವರಿ ಗ್ರಾಮಗಳಿಗೆ ಲೈನ್ ಹಾಕಿದ ಕಾರಣ ದೇವಪುರ ಗ್ರಾಮಕ್ಕೆ ವಿದ್ಯುತ್ ಕೊರತೆಯಿಂದ ತೊಂದರೆ ಅನಭವಿಸುವಂತಾಗಿದೆ. Ngy line ನ್ನು ಲಿಂಗದಹಳ್ಳಿ ಭಂಡೋಳಿ ಹುಣಸಿಹೊಳೆ.. ವರೆಗೂ ಹೆಚ್ಚುವರಿಯಾಗಿ ಕನೆಕ್ಷನ್ ಕೊಟ್ಟಿರುವ ಕಾರಣ ದೇವಪುರ ಗ್ರಾಮಕ್ಕೆ ವಿದ್ಯುತ್ ಅಭಾವ ಆಗಿದೆ. ವಿದ್ಯುತ್ ಲೈನು ನಿಲ್ಲುತ್ತಿಲ್ಲ. ನಿರಂತರವಾಗಿ ವಿದ್ಯುತ್ ಪೂರೈಕೆ ಆಗುತ್ತಿಲ್ಲ.
ಇದಕ್ಕೆ ವಿಶೇಷ ಕಾರಣವೆನೆಂದರೇ, ಕೆಲ ಭಾಗದ ಜನರು ಪಂಪ್ಸೆಟ್ ಗಳಿಗೆ ವಿದ್ಯುತ್ ಕಂಬದ ನೇರ ಲೈನ್ಗಳಿಗೆ ವೈರ್ ಕೊಂಡೆಗಳನ್ನು ಹಾಕಿ ತಮ್ಮ ಪಂಪಸೆಟಗಳಿಗೆ ವಿದ್ಯುತ್ ಕನೆಕ್ಷನ್ ಪಡೆದುಕೊಂಡಿದ್ದಾರೆ ಇದರಿಂದಾಗಿ ದೇವಪುರ ಜನರಿಗೆ ನಿರಂತರವಾಗಿ ಅಡಚಣೆ ಉಂಟಾಗುತ್ತಿದೆ… ಈ ವಿಷಯಗಳನ್ನು ಗ್ರಾಮದ ಜನರು ಸಂಬಂಧಿಸಿದ ಜೆಸ್ಕಾಮ್ ಅಧಿಕಾರಿಗಳಿಗೆ, ಮೇಲಾಧಿಕಾರಿಗಳ ಗಮನಕ್ಕೆ ತಂದರು ಕೂಡ ಅವರು ಖ್ಯಾರೆ ಅನ್ನುತ್ತಿಲ್ಲ ಯಾವುದೇ ರೀತಿಯ ಸ್ಪಂದನೆ ಇಲ್ಲ. ನೊಂದ ಜನರಿಗೆ ಸಹಕರಿಸಿದಿರುವುದಿಲ್ಲ .. ಇದರಿಂದಾಗಿ ಲೈನ್ ಮ್ಯಾನ್ ಗಳು ಯಾವುದೇ ಲೈನಿಗೆ ಕೆಲಸ ಮಾಡಬೇಕಾದರೆ ಸುಮಾರು ನಾಲ್ಕು ಲೈನ್ ಗಳನ್ನು ಬಂದು ಮಾಡಬೇಕಾಗುತ್ತದೆ ಇದರಿಂದಾಗಿ ನಿರಂತರವಾಗಿ ವಿದ್ಯುತ್ತನ್ನು ನೀಡಲು ಆಗುತ್ತಿಲ್ಲ… ಆದಕಾರಣ ಜನರ ಅಪೇಕ್ಷೆ ಏನೆಂದರೇ, ಮೊದಲಿನ ಥರಹವ ದೇವಪುರ ಗ್ರಾಮಕ್ಕೆ ವಿದ್ಯುತ್ ಲೈನ್ ಅರಹಳ್ಳಿ ಗ್ರಾಮದ ಹೊರ ವಲಯದಲ್ಲಿತ್ತು. ಇವಾಗ ತಿಂತೀನಿ ಹುಣಸೆಹೊಳೆ ಲಿಂಗದಹಳ್ಳಿ ಬಂಡಳ್ಳಿ.. ಕನಕ ನಗರ ಹೀಗೆ ಅನೇಕ ಕಡೆ ಹಾದು ಹೋಗಿದೆ ಆದಕಾರಣ ನಮಗೆ ತುಂಬಾ ಸಮಸ್ಯೆಗಳು ಎದುರಾಗುತ್ತಿವೆ ನಮಗೆ ನಿರಂತರವಾಗಿ ವಿದ್ಯುತ್ತನ್ನು ನೀಡಲು ಸಾಧ್ಯವಾಗುತ್ತಿಲ್ಲ…… ಆದಕಾರಣ ಎಲ್ಲಾ ನಮ್ಮ ದೇವಪೂರ ಗ್ರಾಮದ ಜನರು ಮುಖಂಡರು ಒಟ್ಟುಗೂಡಿ ಇದಕ್ಕೆ ಪರಿಹಾರ ಮಾರ್ಗವನ್ನು ಕೊಂಡುಕೊಳ್ಳಬೇಕು……! ತಿಂಥಣಿ ಹುಣಸೆಹುಳಿ ಜನರು ನಿನ್ನೆ ಹೋರಾಟ ನಡೆಸಿ ನಮಗೆ ದೇವಪುರದ ಲೈನ್ ಬೇಕು ಎಂದು ಹೋರಾಟ ಮಾಡಿರುತ್ತಾರೆ…. ಆದಕಾರಣ ನಮ್ಮ ಗ್ರಾಮದ ಜನರ ಬೇಡಿಕೆ ಏನೆಂದರೇ, ನಮ್ಮ ಊರಿಗೆ ಮಾತ್ರ ಈ ಲೈನಿನ ಸಂಪರ್ಕ ಕಲ್ಪಿಸಬೇಕು ಎಂದು ದೇವಪುರ ಗ್ರಾಮದ ಜನರು ರೈತರು, ಅಧಿಕಾರಿಗಳಿಗೆ ಒತ್ತಾಯಿಸುತ್ತಿದ್ದೆವೆ. ನ್ಯಾಯಯುತವಾದ ನಮ್ಮ ಬೇಡಿಕೆಯನ್ನು ಪರಿಶೀಲಿಸಿ ಒಂದು ವಾರದಲ್ಲಿ ಸರಿಪಡಿಸದೇ ಇದ್ದರೇ ಉಗ್ರ ಹೋರಾಟ ಮಾಡುತ್ತೆವೆ.
ನೊಂದ ದೇವಪುರ ಗ್ರಾಪಸ್ಥರು.



