“ನೀವು ಅವರ ಬಳಿ ಬಿಕ್ಷೆ ಬೇಡಬೇಡಿ” ಕಾನ್ಷಿರಾಂ ಹೇಳಿದ ಮಾತು ಮರೆಯದಿರಿ.

ಕಾನ್ಷಿರಾಂ ಹೇಳಿದ ಮಾತು ಮರೆತಂತಿದೆ…
ನೀವು ಅವರ ಬಳಿ ಬಿಕ್ಷೆ ಬೇಡಬೇಡಿ ಯಾವುದೇ ಯೋಜನೆಗಾಗಿ ಗೋಗರೆಯಬೇಡಿ ಅಂಗಲಾಚಿ ಕೈ ಮುಗಿದು ಬೀದಿಯಲ್ಲಿ ನಿಂತು ಹೋರಾಟ ಮಾಡಬೇಡಿ ಇದರಿಂದ ಯಾವುದೇ ಪ್ರಯೋಜನವಿಲ್ಲ ಸ್ವತಂತ್ರ ರಾಜ್ಯಾಧಿಕಾರಕ್ಕಾಗಿ ಚಳುವಳಿ ಮಾಡಿ ಆ ಮೂಲಕ ಜನರನ್ನು ಎಚ್ಚರಿಸಿ ನಿರಂತರವಾಗಿ ಚಳುವಳಿ ಕಟ್ಟುತ್ತ ಹೋಗಿ ಬಾಬಾ ಸಾಹೇಬರು ಜೊತೆಗೆ ಇರುತ್ತಾರೆ ನಿಮಗೆ ಗೆಲುವು ಸಿಕ್ಕೆ ಸಿಗುತ್ತದೆ.
ಹೀಗೆ ಮಾಡದೆ ನೀವು ಅವರ ಬಳಿ ಹೋಗಿ ಹೋಗಿ ನಮಗೆ ಯೋಜನೆ ರೂಪಿಸಿ ನಮ್ಮ ಜನರಿಗೆ ಮೋಸ ಮಾಡಬೇಡಿ ಅದು ಇದು ಅಂತ ಬೇಡಿ ನಿಂತರೆ ಅವರು ನಿಮಗೆ ಬೇಕಾದ್ದನ್ನು ಕೊಡುವುದಿಲ್ಲ ಅದಕ್ಕಾಗಿ ನೀವು ಬಾಬಾ ಸಾಹೇಬರ ಚಳುವಳಿ ಕಟ್ಟುವುದರ ಮೂಲಕ ಸ್ವತಂತ್ರ ರಾಜ್ಯಾಧಿಕಾರ ಹಿಡಿಯುವುದರಿಂದ ನಿಮ್ಮ ಜನರಿಗೆ ಬೇಕಾದ ಯೋಜನೆಗಳನ್ನು ಸವಲತ್ತುಗಳನ್ನು ನೀವೆ ಜಾರಿ ಮಾಡಿಕೊಳ್ಳಬಹುದು.
ನೀವು ಇಷ್ಟು ದಿನ ಬೀದಿಯಲ್ಲಿ ನಿಂತು ಹೋರಾಡಿದ್ದಿರಿ ಆದರೆ ನಿಮ್ಮ ಆಳುವವರು ನಿಮ್ಮ ಹೋರಾಟಕ್ಕೆ ಸೊಪ್ಪು ಹಾಕಿಲ್ಲ ಕ್ಯಾರೆ ಅಂದಿಲ್ಲ ಅವರಿಗೆ ಗೊತ್ತಿದೆ ನಿಮಗೆ ಸ್ಪಷ್ಟ ಗುರಿ ಇಲ್ಲ ಎಂದು ಇವರು ಬಾಬಾ ಸಾಹೇಬರ ಸರಿಯಾಗಿ ತಿಳಿದುಕೊಂಡಿಲ್ಲ ಎಂದು ಅವರು ಚೆನ್ನಾಗಿ ಅರಿತಿದ್ದಾರೆ.
ನಾನೊಬ್ಬ ಕಾನ್ಷಿರಾಂ ಆರಾಮಾಗಿ ಇರಬಹುದಿತ್ತು ಆದರೆ ನನ್ನ ಚಳುವಳಿಯ ಹೋರಾಟದ ಪರಿ ನೋಡಿ ಅವರು ಸುಸ್ತು ಹೋಗಿದ್ದಾರೆ ನಿಮಗೂ ಆ ತಾಕತ್ತಿದೆ ನಿಮ್ಮೊಳಗೆ ಬಾಬಾ ಸಾಹೇಬರು ಸದಾ ಎಚ್ಚರವಾಗಿದ್ದರೆ ಅವರು ನಿಮ್ಮ ಸೋಲಿಸಲಾಗುವುದಿಲ್ಲ ಅದು ಬಿಟ್ಟು ನೀವು ಬೀದಿಯಲ್ಲಿ ಪ್ರತಿಭಟನೆ ಮಾಡುತ್ತ ನಿಂತಿದ್ದರೆ ಹಾಗೆ ಪ್ರತಿಭಟಿಸುತ್ತ ನಿಂತಿರಬೇಕಾಗುತ್ತದೆಯೇ ಹೊರತು ನೀವು ಸಾಧಿಸಬೇಕಾದ ಗುರಿ ಸಾಧಿಸಲು ಸಾಧ್ಯವಾಗುವುದಿಲ್ಲ.
ಸ್ಪಷ್ಟ ಗುರಿ ಇರುವ ನಾಯಕರಾಗಿ, ನಿಮಗೆ ಸ್ಪಷ್ಟತೆ ಇದ್ದಾಗ ಎದುರಾಳಿ ಏನು ಮಾಡಲು ಆಗುವುದಿಲ್ಲ ಎಲ್ಲದಕ್ಕೂ ಪರಿಹಾರ ರಾಜ್ಯಾಧಿಕಾರವೇ ಹೊರತು ರಾಜಿ ಸಂಧಾನಗಳಲ್ಲ
ಎಂದಿಗೂ ಅವರು ಸರಿ ಇಲ್ಲ ಎಂದು ಇವರ ಜೊತೆ, ಇವರು ಸರಿ ಇಲ್ಲ ಎಂದು ಅವರ ಜೊತೆ ಹೋಗಬೇಡಿ
ಅವರಾರು ಬಾಬಾ ಸಾಹೇಬರ ಕನಸನ್ನು ನನಸು ಮಾಡಲು ಪಣ ತೊಟ್ಟವರಲ್ಲ ನಿಮಗೆ ಬಾಬಾ ಸಾಹೇಬರಷ್ಟೆ ಕಾಣಿಸಬೇಕೆ ಹೊರತು ಹಣ, ಅಂತಸ್ತು,ಅಧಿಕಾರವಲ್ಲ ಇವುಗಳ ಹಿಂದೆ ಹೋದವರು ಇತಿಹಾಸದಲ್ಲಿ ಉಳಿದಿಲ್ಲ ಮಣ್ಣಾಗಿ ಹೋಗಿದ್ದಾರೆ.
ನೀವು ಅಧಿಕಾರದಾಸೆಗೋ, ಹಣದಾಸೆಗೋ, ಇಲ್ಲ ರಾತ್ರೋರಾತ್ರಿ ಶ್ರೀಮಂತರಾಲೋ ಅವರಿವರ ಜೊತೆ ಸೇರಿ ಹೋದರೆ ನೀವು ಮಣ್ಣಾಗಿ ಹೋಗುವುದು ಗ್ಯಾರಂಟಿ ಅದಕ್ಕಾಗಿ ನೀವು ಆಸೆ ಬುರುಕರಾಗಬೇಡಿ ನಿಮಗೆ ಬಾಬಾ ಸಾಹೇಬರಿಗಿಂತ ಇನ್ನಾರು ಸ್ಪೂರ್ತಿಯಾಗಬೇಕು ಹೇಳಿ…?
ಪ್ರಪಂಚದಲ್ಲಿ ಅಂಬೇಡ್ಕರಂತ ಒಬ್ಬನೇ ಒಬ್ಬ ವ್ಯಕ್ತಿ ಸಿಗುವುದು ಕಷ್ಟ ನಿಮಗೆ ಅಂತ ಜ್ಞಾನಿ ಸಿಕ್ಕಿದ್ದಾರೆ ನಿಮಗಾಗಿ ಹಗಲಿರುಳೆನ್ನದೆ ತನ್ನ ಜೀವನವನ್ನೇ ತ್ಯಾಗ ಮಾಡಿ ದುಡಿದ ಜೀವವದು. ನಿಮ್ಮ ಹಕ್ಕು, ಸ್ವಾತಂತ್ರ್ಯ, ಅಧಿಕಾರ, ವಿದ್ಯೆ, ಹೀಗೆ ಭಾರತದ ಎಲ್ಲ ಜನರಿಗೆ ಸಿಗಬೇಕಾದ ಸೌಲಭ್ಯಗಳನ್ನು ದೊರಕಿಸಿಕೊಡಲು ತನ್ನ ವೈಯಕ್ತಿಕ ಬದುಕನ್ನೆ ಮುಡುಪಾಗಿಟ್ಟು ಸಾವು ನೋವು ಎಲ್ಲವನ್ನು ಲೆಕ್ಕಿಸದೆ ತನ್ನ ಸಂಸಾರವನ್ನು ತ್ಯಾಗ ಮಾಡಿಕೊಂಡು ದುಡಿದ ಏಕೈಕ ಭಾರತದ ನಾಯಕರವರು.
ಅವರ ಕನಸನ್ನು ನನಸು ಮಾಡಲು ಎಲ್ಲವನ್ನು ಅವರಿಂದ ಪಡೆದುಕೊಂಡ ನೀವು ಈಗಾ ಟೊಂಕ ಕಟ್ಟಿ ದುಡಿಯಬೇಕಾದ ತುರ್ತಿದೆ ನೀವು ಸ್ವಲ್ಪ ಮೈ ಮರೆತು ಅವರಿವರ ಜೊತೆ ಸೇರಿ ಕ್ಷಣಿಕ ಸುಖಕ್ಕೆ ಆಸೆ ಪಟ್ಟು ರಾಜಿಯಾಗಿ ಬೀದಿಯಲ್ಲಿ ನಿಂತು ಅದೇ ಹಳೆಯ ಪ್ರತಿಭಟನೆ ಅದೇ ಹೋರಾಟ ಮಾಡಿ ನಿಂತರೆ ನೀವೆಂದಿಗೂ ಉದ್ದಾರ ಆಗಲು ಸಾಧ್ಯವಾಗುವುದಿಲ್ಲ.
ನೀವು ಈ ಕಾನ್ಷಿರಾಂನಂತೆ ಯೋಚಿಸಿ ಗೆಲುವು ಪಡೆಯಿರಿ ಸ್ವತಂತ್ರ ಚಿಂತನೆ ಇಲ್ಲದ ಮನುಷ್ಯನನ್ನು ಶತ್ರುಗಳು ಬಹಳ ಸುಲಭವಾಗಿ ಸೋಲಿಸುತ್ತಾರೆ. ನಿಮಗೆ ಸ್ವತಂತ್ರ ಚಿಂತನೆ ಇದೆ ಎಂದು ಭಾವಿಸುತ್ತೇನೆ. ಬಾಬಾ ಸಾಹೇಬ್ ಅಂಬೇಡ್ಕರರ ಬಿಕ್ಷೆಯಲ್ಲಿ ಬದುಕುತ್ತಿರುವ ಯಾರು ಅವರಿಗೆ ಮೋಸ ಮಾಡಬೇಡಿ ಅವರ ಕನಸು ನನಸು ಮಾಡಲು ಪಣ ತೊಡಿ
ಜೈ ಭೀಮ್…
ಸಿದ್ದು ಜನ್ನೂರ್….೦೯-೦೩-೨೦೨೫



