ಪೊಲೀಸ್ ಇಲಾಖೆಯಲ್ಲಿಯ ಸಿಬ್ಬಂಧಿ, ಅಧಿಕಾರಿಗಳಲ್ಲಿ ಅಡಗಿರುವ ಕಲೆ, ಸಂಗೀತ, ಸಾಹಿತ್ಯ ಹೊರ ತೆಗೆಯುವ ಕಾರ್ಯಕ್ಕೆ ಕೈ ಜೋಡಿಸಿ.

ಸಾಹಿತ್ಯ ಹುಣ್ಣಿಮೆಗೆ ಪೋಲಿಸ್ ಇಲಾಖೆಯ ಸಹಯೋಗ
*ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ಪೋಲಿಸ್ ಇಲಾಖೆಯ ಪ್ರತಿಭೆಗಳನ್ನು ಒಂದೇ ವೇದಿಕೆಗೆ ತರುವ ಪ್ರಯತ್ನ. ಪೋಲಿಸ್ ಇಲಾಖೆಯೊಳಗೆ ಕವಿಗಳಿದ್ದಾರೆ, ಕಥೆಗಾರರಿದ್ದಾರೆ, ಹಾಡುಗಾರರಿದ್ದಾರೆ. ಹಾಸ್ಯ, ಮಿಮಿಕ್ರಿ ಮಾಡುವ ಕಲಾವಿದರು ಇದ್ದಾರೆ. ಅವರೆಲ್ಲರೂ ಒಂದೇ ವೇದಿಕೆಯಲ್ಲಿ ತಮ್ಮ ಪ್ರೌಢಿಮೆ ಹೊರತರಲು ವೇದಿಕೆ ಕಲ್ಪಿಸುವ ಬಯಕೆ ಮಾನ್ಯ ಜಿಲ್ಲಾ ರಕ್ಷಣಾಧಿಕಾರಿಗಳಾದ ಶ್ರೀ ಮಿಥುನ್ ಕುಮಾರ್ ಅವರದು. ಅವರ ಅವಧಿಯಲ್ಲಿ ಹುಣ್ಣಿಮೆ ಕಾರ್ಯಕ್ರಮ ಮಾಡಿದ್ದೆವು. ಆ ಸಂದರ್ಭದಲ್ಲಿ ನಮ್ಮ ಪೋಲಿಸ್ ಸಿಬ್ಬಂದಿ ಕಾರ್ಯ ಒತ್ತಡದಲ್ಲಿರುತ್ತಾರೆ. ಅವರಿಗೆ ಈ ರೀತಿಯ ಸ್ಥೈರ್ಯ ತುಂಬುವ ಕೆಲಸ ಆಗಬೇಕೆಂದು ಬಯಸುತ್ತಿದ್ದರು. ಅವರ ಸ್ಪೂರ್ತಿಯಿಂದ ಮತ್ತೆ ಮತ್ತೆ ಇಲಾಖೆಯ ನಡುವೆ ನಡೆಯುತ್ತಿದೆ. ಅವರು ನಮಗೆ ತಿಳಿಸಿದ್ದು ನಿಮ್ಮ ಸ್ನೇಹಿತರಾದ ಅನಿಲ್ ಅವರ ಜೊತೆಯಲ್ಲಿ ಕೋಆರ್ಡಿನೇಟ್ ಮಾಡಿ. ಚನ್ನಾಗಿ ಮಾಡೋಣ. ಡಿ.ಆರ್. ಡಿ.ವೈ. ಎಸ್ಪಿ ಅವರಿಗೆ ಹೇಳಿ. ಎಲ್ಲರೂ ಸೇರಿ ಅರ್ಥ ಪೂರ್ಣ ಶ್ರಾವಣ ಸಂಭ್ರಮ ಆಚರಿಸೋಣ. ಎಂದಿದ್ದಾರೆ.
ನಿಮ್ಮ ಠಾಣೆ ವ್ಯಾಪ್ತಿಯಲ್ಲಿ ಹಾಡುವವರಿದ್ದರೆ ವೃಂದಗಾನದಲ್ಲಿ ಹಾಡಲು ಅವಕಾಶ ಮಾಡೋಣ. ತಾಲ್ಲೂಕು ವ್ಯಾಪ್ತಿಯಲ್ಲಿ ಒಂದು ತಂಡವಾಗಿ ಹಾಡುವುದಾದರೆ ಹೆಚ್ಚು ಜನರಿಗೆ ಅವಕಾಶ ಕಲ್ಪಿಸಬಹುದು. ನಿಮಗೆ ಆಸಕ್ತಿ ಯಿದ್ದರೆ ನಮ್ಮನ್ನು ಸಂಪರ್ಕ ಮಾಡಿ.
ಡಿ. ಮಂಜುನಾಥ
ಅಧ್ಯಕ್ಷರು,
ಕನ್ನಡ ಸಾಹಿತ್ಯ ಪರಿಷತ್ತು
ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ರಿ.,
ಕರ್ನಾಟಕ ಜಾನಪದ ಪರಿಷತ್ತು,
ಬೆಂಗಳೂರು
ದೂರವಾಣಿ : 9449552795



