ಸುದ್ಧಿ

ನಗರಾಭಿವೃದ್ಧಿ ಕಾರ್ಯದರ್ಶಿಗಳು ಪೌರಾಯುಕ್ತರಾದ ರಮೇಶ್ ಬಡಿಗೇರ್ ಅವರನ್ನು. ಅಮಾನತುಗೊಳಿಸಲು ವಿಳಂಬವೇಕೆ?

ಐ.ಡಿ.ಎಸ್.ಎಂ.ಟಿ. ಯೋಜನೆ ಅಡಿಯಲ್ಲಿ ನಿವೇಶನಗಳ ಅಕ್ರಮ ನೊಂದಣಿ ಹಾಗೂ ಅಕ್ರಮ ಖಾತಾ ನಕಲುಗಳ ದೂರು ದೃಢಪಟ್ಟರು ಕೂಡ ಸರ್ಕಾರದ ಕಾರ್ಯದರ್ಶಿಗಳು ನಗರಾಭಿವೃದ್ಧಿ ಇಲಾಖೆರವರು ಪೌರಾಯುಕ್ತರಾದ ರಮೇಶ್ ಬಡಿಗೇರ್ ಅವರನ್ನು. ಅಮಾನತು. ಗೊಳಿಸಲು. ಮಾಡುತ್ತಿರುವ ವಿಳಂಬ ಕುರಿತು !

ಯಾದಗಿರಿ ಜಿಲ್ಲೆಯ ಶಹಾಪೂರ ನಗರಸಭೆ ವ್ಯಾಪ್ತಿಯಲ್ಲಿ ಐ. ಡಿ. ಎಸ್ ಎಂ. ಟಿ. ಯೋಜನೆಯ ನಿವೇಶನಗಳಲ್ಲಿ ಅಕ್ರಮ ನೊಂದಣಿ ಮತ್ತು ಅಕ್ರಮ ಖಾತಾ ನಕಲುಗಳ ವಿರುದ್ಧ. ದಿನಾಂಕ. 21/05/2024 ರಂದು. ಶ್ರೀ ಮರಳು ಸಿದ್ದಪ್ಪ ನಾಯ್ಕಲ್ ರವರು. ಪ್ರಾದೇಶಿಕ ಆಯುಕ್ತರು ಕಲ್ಬುರ್ಗಿ ರವರಿಗೆ. ದೂರು ನೀಡಿದ್ದರ ಪ್ರಯುಕ್ತ ದೂರಿನ ಅರ್ಜಿಯ ಕುರಿತಂತೆ ತನಿಖೆ ಕೈಗೊಂಡು. ವರದಿ ಸಲ್ಲಿಸುವಂತೆ ಕಂದಾಯ ಲೆಕ್ಕ ಪರಿಶೋಧಕರನ್ನು ತನಿಖೆಗಾಗಿ ನಿಯೋಜಿಸಲಾಗಿತ್ತು. ತನಿಖಾ ತಂಡವು ಈ ಕಾರ್ಯಾಲಯಕ್ಕೆ ವರದಿ ಸಲ್ಲಿಸಿದ್ದು. ಅದರ ಆಧಾರದ ಮೇಲೆ. ಶ್ರೀ ರಮೇಶ್ ಬಡಿಗೇರ್ ಪೌರಾಯುಕ್ತರು. ನಗರ ಸಭೆ ಶಹಾಪೂರ ಇವರ ವಿರುದ್ಧ ಶಿಸ್ತು ಕ್ರಮಕ್ಕೆ. ದಿನಾಂಕ 28/02/2025 ರಂದು. ನಿರ್ದೇಶಕರು ಪೌರಾಡಳಿತ. ನಿರ್ದೇಶನಾಲಯ ಬೆಂಗಳೂರು ಅವರಿಗೆ. ವರದಿ ಸಲ್ಲಿಸಲಾಗಿತ್ತು………. ಪೌರಾಡಳಿತ. ನಿರ್ದೇಶನಾಲಯವು. ಪ್ರಾದೇಶಿಕ ಆಯುಕ್ತರು ಕಲಬುರ್ಗಿ ರವರ ವರದಿ ತಮಗೆ ತಲುಪಿದ ಎರಡು ತಿಂಗಳ ನಂತರ ಸರ್ಕಾರದ ಕಾರ್ಯದರ್ಶಿಗಳು ನಗರ ಅಭಿವೃದ್ಧಿ ಇಲಾಖೆಯವರಿಗೆ. ದಿನಾಂಕ 8/ 5 /2025 ರಂದು. ಶಹಾಪುರ ನಗರಸಭೆಯ ಪೌರಾಯುಕ್ತರಾದ. ಶ್ರೀ ರಮೇಶ್ ಬಡಿಗೆರವರು. ಅಕ್ರಮ ನೊಂದಣಿ. ಹಾಗೂ ಅಕ್ರಮ ಖಾತಾ ನಕಲು. ನೀಡಿರುವ ಕ್ರಮವು. ನಿಯಮ ಬಾಹಿರವಾದ. ಗಂಭೀರ ಪ್ರಮಾಣದ. ದುರ್ನಡತೆಯಾಗಿ ಸರ್ಕಾರಿ ನೌಕರರಲ್ಲದ ರೀತಿಯಲ್ಲಿ ಕಾರ್ಯ ನಿರ್ವಹಿಸಿರುವುದು ಕಂದಾಯ ಲೆಕ್ಕ ಪರಿಶೋಧಕರ ತನಿಖಾ ವರದಿಯಿಂದ ದೃಢಪಟ್ಟಿದ್ದು. ಗಂಭೀರ ಪ್ರಮಾಣದ ಕ್ಷಮೆ ರಹಿತ ವಾದಂತಹ ಕ್ರಿಮಿನಲ್ ಸ್ವರೂಪವನ್ನು ಒಳಗೊಂಡ ಕರ್ತವ್ಯ ಲೋಪ ವಾಗಿರುತ್ತದೆ ಎಂದು ವರದಿ ನೀಡುತ್ತಾ ಶ್ರೀ ರಮೇಶ್ ಬಡಿಗೇರ್ ಇವರ ವಿರುದ್ಧದ ದೂರು ದೃಡಪಟ್ಟಿರುವ ಹಿನ್ನೆಲೆಯಲ್ಲಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ. ಸೇವೆಯಿಂದ ಅಮಾನತ್ತುಗೊಳಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದರು ಯಾವುದೇ ಕ್ರಮ ಜರುಗಿಸಿರುವದಿಲ್ಲ ಎಂದು

ಕರ್ನಾಟಕ ದಲಿತ ಸಂಘರ್ಷ ಸಮಿತಿ
(ಅಂಬೇಡ್ಕರ್ ವಾದ) ಕಲಬುರ್ಗಿ ವಿಭಾಗಿಯ ಸಂಘಟನಾ ಸಂಚಾಲಕರಾದ ಶ್ರೀ ಮರಳು ಸಿದ್ದಪ್ಪ ನಾಯ್ಕಲ್ ರವರು ಕೂಡಲೆ ರಮೇಶ್ ಬಡಿಗೇರ ರವರನ್ನು ಅಮಾನತು ಮಾಡಬೇಕೆಂದು ಒತ್ತಾಯಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button