ಸುದ್ಧಿ

ಬೆಂಗಳೂರು ಪದವೀಧರ ಕ್ಷೇತ್ರ, ವಿಧಾನ ಪರಿಷತ್ ಚುನಾವಣಾ ಅಭ್ಯರ್ಥಿ- ಕರಬಸಪ್ಪ

ಬೆಂಗಳೂರು ಪದವೀಧರ ಕ್ಷೇತ್ರ, ವಿಧಾನ ಪರಿಷತ್ – ಕರಬಸಪ್ಪ

ಬೆಂಗಳೂರು . ಮಾನ್ಯ ಮತದಾರರಲ್ಲಿ ಮನವಿ ಈ ಬಾರಿ ಬದಲಾವಣೆಗಾಗಿ ನನ್ನನ್ನು 1576 ನಾನು ಕರಬಸಪ್ಪ ಎಂ.ಪಿ., (ಎಂ.ಎ, ಬಿ.ಇಡಿ), ಮೂಲತಃ ಗ್ರಾಮೀಣ ಪ್ರದೇಶದ……..

61, 8ನೇ ಅಡ್ಡ ರಸ್ತೆ, ಶಿವಾನಂದ ನಗರ, ಮೂಡಲಪಾಳ್ಯ, ಬೆಂಗಳೂರು-560072 ನಿವಾಸಿಯಾಗಿರುತ್ತೇನೆ ಹಾಗೂ 1990 ರಿಂದ ಸತತ ಸಂಘಟನೆಯ ಹೋರಾಟದಲ್ಲಿದ್ದು ಪದವೀಧರ ಶಿಕ್ಷಕರ ಸಲುವಾಗಿ ಬೆಂಗಳುರು ಪದವೀಧರ ಕ್ಷೇತ್ರಕ್ಕೆ ಪಕ್ಷಾತೀತವಾಗಿ ಹಾಗೂ ಜಾತ್ಯಾತೀತವಾಗಿ ತಮ್ಮೆಲ್ಲರ ಒಳಿತಿಗಾಗಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೆನೆ ಎಂದು ಇಂದು ಕರಬಸಪ್ಪ ನವಾರು ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಮನವಿ ಮಾಡಿದರು. (ಬೆಂಗಳೂರು ನಗರ, ಗ್ರಾಮಾತರ, ಹಾಗೂ ರಾಮನಗರ) ಪ್ರಸ್ತುತ ನಾನು ನಿವೃತ್ತ ಪ್ರಾಂಶುಪಾಲನಾಗಿದ್ದು ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ, ರಾಜ್ಯ ಪದವಿ ಪೂರ್ವ ಪ್ರಾಂಶುಪಾಲರ ಸಂಘದ ನಿಕಟಪೂರ್ವ ಉಪಾಧ್ಯಕ್ಷ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲೆ ಪ್ರಾಂಶುಪಾಲರ ಸಂಘದ ಅಧ್ಯಕ್ಷನಾಗಿ ಸೇವೆ ಸಲ್ಲಿಸಿರುತ್ತೇನೆ. ನಾನು ಎಲ್ಲಾ ರೀತಿಯ ಅರ್ಹತೆ ಹೊಂದಿರುವ ಅಭ್ಯರ್ಥಿಯಾಗಿದ್ದು ಈ ಬಾರಿ ಬದಲಾವಣೆ ಮಾಡಿ ತಮ್ಮೆಲ್ಲರ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕೆಂದು ಚೆಂದ್ರೆ ಗೌಡರು ಕೋರಿದರು.

“ಪ್ರಥಮ ಪ್ರಾಶಸ್ತ್ರದ” ಮತ ನೀಡಿ ಜಯಶೀಲರನ್ನಾಗಿ ಮಾಡಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ. ಮತದಾನ ದಿನಾಂಕ : 03-06-2024, ಸೋಮವಾರ ಬೆಳಗ್ಗೆ 8.00ರಿಂದ ಸಂಜೆ 4.00 ರವರೆಗೆ

ಕ್ರ.ಸಂ.7 ಅಭ್ಯರ್ಥಿಯ ಹೆಸರುಕರಬಸಪ್ಪ ಪಕ್ಷೇತರ ಕರಬಸಪ್ಪ ಅಭ್ಯರ್ಥಿಯಾಗಿ ಸ್ಪರ್ಧಿಸಿರುತ್ತೇನೆ. ನನ್ನ ಹೆಸರಿನ ಮುಂದೆ “1” ಎಂದು ನಮೂದಿಸುವುದು ಎಂದು ರೇವಣ್ಣ ಅವರು ತಿಳಿಸಿದರು. ಅಭ್ಯರ್ಥಿಯಾದ ನಾನು ಹಾಗೂ ವಿವಿಧ ಸಂಘಟನೆಗಳೊಂದಿಗೆ ಜೊತೆಗೂಡಿ ಮಾಡಿರುವ ಸಾಧನೆಗಳು

  1. 1991-92, 1992-93 ರಲ್ಲಿ 66 ಪದವಿಪೂರ್ವ ಕಾಲೇಜುಗಳು, 59 ಪ್ರೌಢಶಾಲೆ ಹಾಗೂ 180 ಪ್ರಾಥಮಿಕ ಶಾಲೆಗಳನ್ನು ಸರಕಾರದ ಅನುದಾನಕ್ಕೆ ಒಳಪಡಿಸಲು ಸಂಘಟನೆ ಮೂಲಕ ಪ್ರಯತ್ನಿಸಿ ಸಫಲರಾಗಿದ್ದೇವೆ. 2. 1987 ರಿಂದ ಬೋಧಕೇತರ ಸಿಬ್ಬಂದಿಗೆ ಸರಕಾರ ವಿಧಿಸಿದ್ದ ಆರ್ಥಿಕ ಮಿತವ್ಯಯವನ್ನು ರದ್ದುಪಡಿಸಿ, 1992ರ ವರೆಗೂ ವಿಸ್ತರಿಸುವಲ್ಲಿ

ಯಶಸ್ವಿಯಾಗಿದ್ದೇವೆ. 3. 01-01-1990ರ ಹಿಂದೆ ನೇಮಕವಾಗಿ ಮೀಸಲಾತಿ ಉಲ್ಲಂಘನೆಯಾದ ಸಿಬ್ಬಂದಿಗೆ ಮೀಸಲಾತಿ ಮನ್ನಾ ಮಾಡಿ, ಅನುದಾನಕ್ಕೆ ಒಳಪಡಿಸಲು ಮಾಡಿದ ಪ್ರಯತ್ನದಲ್ಲಿ ಸಫಲರಾಗಿದ್ದೇವೆ.

  1. 01-06-1992 ರವರೆಗೂ ಮತ್ತೊಮ್ಮೆ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ನೇಮಕವಾಗಿ ಮೀಸಲಾತಿ ಉಲ್ಲಂಘನೆಯಾದ ಸಿಬ್ಬಂದಿಯವರಿಗೆ ಮೀಸಲಾತಿ ಮನ್ನಾ ಮಾಡಿ ಅನುದಾನಕ್ಕೆ ಒಳಪಡಿಸಲು ಯಶಸ್ವಿಯಾಗಿದ್ದೇವೆ.
  2. ಇ.ಡಿ.103.ಎಸ್.ಇ.ಪಿ.1996 ದಿನಾಂಕ:09-06-1999ರ ಪ್ರಕಾರ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿನ 1116

ಬೋಧಕೇತರರಿಗೆ ಸತತ 7 ತಿಂಗಳು ನನ್ನ ನೇತೃತ್ವದಲ್ಲಿ ಹೋರಾಟ ಮಾಡಿ ಅನುದಾನಕ್ಕೊಳಪಡಿಸಲಾಯಿತು. 6. ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚುವರಿ ವಿಭಾಗ ಮತ್ತು ವಿಷಯಗಳಿಗೆ ನೇಮಕವಾದ ಸಿಬ್ಬಂದಿಗೆ ವೇತನ ಬಿಡುಗಡೆಗೆ ಪ್ರಯತ್ನ ಮಾಡಿ ಯಶಸ್ವಿಯಾಗಿದ್ದೇವೆ.

  1. ಅನುದಾನಿತ ಶಾಲಾ-ಕಾಲೇಜುಗಳಲ್ಲಿ ದಿ:31-12-2015ರ ವರೆಗೆ ಖಾಲಿ ಇದ್ದ ಹುದ್ದೆಗಳ ಭರ್ತಿಗೆ ಅನುಮತಿ ಕೊಡಿಸುವಲ್ಲಿ ಯಶಸ್ವಿಯಾಗಿದ್ದು, ಇಲ್ಲಿಯವರೆಗೂ ಖಾಲಿ ಇರುವ ಹುದ್ದೆಗಳ ಭರ್ತಿಗೆ ಪ್ರಯತ್ನ ಮುಂದುವರೆಸಿದ್ದೇವೆ.
  2. ದಿ||ಚನ್ನಬಸವಯ್ಯನವರು, ಮಾಜಿ ವಿಧಾನ ಪರಿಷತ್ ಸದಸ್ಯರು ಮತ್ತು ಶ್ರೀ ಬಸವರಾಜ ಹೊರಟ್ಟಿಯವರ ನೇತೃತ್ವದಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ಮುಚ್ಚಲ್ಪಟ್ಟ ಶಾಲಾ ಕಾಲೇಜುಗಳ ಸಿಬ್ಬಂದಿಯವರಿಗೆ ಸೇವಾ ಭದ್ರತೆ ಹಾಗೂ ವೇತನ ಕೊಡಿಸುವಲ್ಲಿ ಸಫಲರಾಗಿದ್ದೇವೆ.
  3. 1987ರ ನಂತರ ಪ್ರಾರಂಭವಾದ ಪ.ಜಾ/ಪ.ಪಂ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸುವಲ್ಲಿ ಆ ಸಂಘಟನೆಗಳ ಜೊತೆ

ಹೋರಾಟದಲ್ಲಿ ಭಾಗಿಯಾಗಿ ಯಶಸ್ವಿಯಾಗಿದ್ದೇವೆ.

  1. 1-4-2006ರ ಪೂರ್ವದಲ್ಲಿ ನೇಮಕವಾಗಿ ಅನುದಾನಕ್ಕೊಳಪಟ್ಟ ಹಾಗೂ ದಿ:1-4-2006ರ ನಂತರ ನೇಮಕವಾದ ಪಿಂಚಣಿ

ಇಲ್ಲದ ನೌಕರರಿಗೆ ಹಳೆ ಪಿಂಚಣಿ ಜಾರಿಗೊಳಿಸುವ ಪ್ರಯತ್ನದಲ್ಲಿರುತ್ತೇವೆ.

  1. ಬಿ.ಇಡಿ ಪದವಿ ಹೊಂದದ ಸರ್ಕಾರಿ/ಅನುದಾನಿತ ಸಾವಿರಾರು ನೌಕರರಿಗೆ ಬಿ.ಎಡ್. ಪದವಿಯಿಂದ ವಿನಾಯಿತಿ ಕೊಡಿಸಲು ಯಶಸ್ವಿಯಾಗಿದ್ದು, ಇನ್ನು ಕೆಲವು ಸಿಬ್ಬಂದಿಗೆ ವಿನಾಯಿತಿ ಕೊಡಿಸುವ ಪ್ರಯತ್ನದಲ್ಲಿದ್ದೇವೆ.
  2. ಖಾಸಗಿ ಅನುದಾನಿತ ಶಾಲಾ-ಕಾಲೇಜುಗಳ ಕಾಲ್ಪನಿಕ ವೇತನ ಬಡ್ತಿಯ ಹೊರಟ್ಟಿ ವರದಿ ಅನುಷ್ಠಾನ ಹಾಗೂ ಕನ್ನಡ ವಿಶೇಷ ವೇತನ ಇನ್ನೂ ಹಲವಾರು ಪ್ರಮುಖ ಸಮಸ್ಯೆಗಳ ನಿವಾರಣೆಗೆ ಸತತ ಪತ್ರಯತ್ನ ನಡೆಸಿರುತ್ತೇವೆ.್ಡ್
  3. ಸರ್ಕಾರಿ ಹಾಗೂ ಖಾಸಗಿ ಶಾಲಾ-ಕಾಲೇಜುಗಳ ಸಿಬ್ಬಂದಿಯವರ ವೇತನ ತಾರತಮ್ಯ ನಿವಾರಣೆಯ ಕುಮಾರನಾಯ್ಕ ವರದಿ ಅನುಷ್ಠಾನದ ಸತತ ಪ್ರಯತ್ನ ಹಾಗೂ ಹೋರಾಟ ಮಾಡಿ ಯಶಸ್ವಿಯಾಗಿರುತ್ತೇವೆ.
  4. ಅನೇಕ ನಿರುದ್ಯೋಗಿಗಳಿಗೆ ಉದ್ಯೋಗ ಪಡೆಯುವಲ್ಲಿ ಮಾರ್ಗದರ್ಶನ ಮತ್ತು ಸಹಾಯ ಮಾಡುತ್ತಿದ್ದೇವೆ.
  5. ಅನೇಕ ಸಿಬ್ಬಂದಿಯವರ ನೇಮಕಾತಿ ಅನುಮೋದನೆ ಅನುದಾನಕ್ಕೆ ಒಳಪಡಿಸುವಲ್ಲಿ ಅನೇಕ ರೀತಿಯ ಸಹಾಯಗಳನ್ನು ಮಾಡಿದ್ದೇವೆ. ಎಂದರು . ವರದಿ. ಮಂಜುಳಾ ರೆಡ್ಡಿ..

Related Articles

Leave a Reply

Your email address will not be published. Required fields are marked *

Back to top button