ಬೆಂಗಳೂರು ಪ್ರೆಸ್ ಕ್ಲಬ್ನಲ್ಲಿ 56 ವರ್ಷದಿಂದಲೂ ಕ್ಯಾಂಟೀನ್ ನಡೆಯಿಸುತ್ತಿದ್ದ ಥಾಮಸನೆಂಬ ಸಾತ್ವಿಕನನ್ನು ಹೊರ ಹಾಕುತ್ತಿರುವುದೇಕೆ? ಅಲ್ಪಸಂಖ್ಯಾತ ವ್ಯಕ್ತಿಯ ಪಾಡೇನು?

ಪತ್ರಕರ್ತರ, ಪತ್ರಕರ್ತರಿಗಾಗಿ, ಪತ್ರಕರ್ತರ ಹೆಸರಿನಿಂದ ಸ್ಥಾಪಿತವಾಗಿರುವ ” ಬೆಂಗಳೂರು ಪ್ರೆಸ್ ಕ್ಲಬ್ ” ಜಾತೀಯತೆಯಿಂದಲೇ ತುಂಬಿದೆ ಎಂದು ಸಾರ್ವಜನಿಕರ ಆಕ್ರೋಶ. ಇಂದಿನ ದಿನಗಳಲ್ಲಿ ಬೆಂಗಳೂರು ಪ್ರೆಸ್ ಕ್ಲಬ್ಬಿನಲ್ಲಿ ಬಲಿಷ್ಠ ಜಾತಿಯವರದ್ದೇ ಕಾರುಬಾರು. ಒಮ್ಮೆ ಅಧಿಕಾರ ಕೈಗೆ ಸಿಕ್ಕರೆ, ನೂರು ವರ್ಷದವರೆಗೂ ಶತಾಯ ಗತಾಯ ತಾವೇ ಗೂಟ ಹೊಡೆದು ಕುಳಿತುಕೊಳ್ಳಬೇಕೆಂಬ ದುರಾಸೆಯ ವ್ಯಕ್ತಿಗಳಿಂದ ದಿನೇ ದಿನೇ ಪ್ರೆಸ್ಸಿನ ಹೆಸರು ಕೆಡುತ್ತಿದೆ, ” ಜಿಸ್ಕಾ ಲಾಠಿ ಉಸ್ಕಾ ಬೈoಯ್ಸ್” ಎಂಬ ನಾಣ್ಣುಡಿ ಅಕ್ಷರಷ ಈ ಕ್ಲಬ್ಬಿನಲ್ಲಿ ಅಧಿಕಾರ ನಡೆಸುತ್ತಿರುವವರಿಗೆ ಅನ್ವಯವಾಗುತ್ತದೆ. ಎಂದು ಕ್ಲಬ್ ಸ್ಥಾಪಿಸಿದ ಹಿರಿಯರು, ಕ್ಲಬ್ಬಿನ ಹಿತೈಷಿಗಳು, ನೊಂದು ನುಡಿಯುತ್ತಿದ್ದಾರೆ.

ದೇಶಕ್ಕೊಂದು ಕಾನೂನು ಇದ್ದರೆ ಬೆಂಗಳೂರು ಪ್ರೆಸ್ ಕ್ಲಬ್ ನದೇ ಬೇರೆ ಕಾನೂನು ಎಂಬಂತಾಗಿದೆ. ಕ್ಲಬ್ ನ ಅಧಿಕಾರ ಹಿಡಿದ ವ್ಯಕ್ತಿಗಳು ಕಾನೂನಿನ ಪರಿಧಿಯಲ್ಲಿ ಕೆಲಸ ಮಾಡದೇ ತಮ್ಮ ಮೂಗಿನ ನೇರಕ್ಕೆ ಆಡಳಿತ ನಡೆಸುತ್ತಿರುವುದು ಹಲವಾರು ಜನರ ಕೆಂಗಣ್ಣಿಗೆ ಗುರಿಯಾಗಿದೆ..
ಪ್ರೆಸ್ ಕ್ಲಬ್ ಎಂದರೆ ಪತ್ರಕರ್ತರಿಗೆ ಸಂಬಂಧಿಸಿದ ಒಂದು ಕ್ಲಬ್ ಇಲ್ಲಿ ಪತ್ರಕರ್ತರಿಗೆ ಪತ್ರಿಕಾರಂಗದ ಹಲವಾರು ಸೌಲಭ್ಯಗಳು ಎಂಟರ್ಟೈನ್ಮೆಂಟ್, ಸುದ್ದಿ ಸಂಗ್ರಹಣೆಗೆ ಬೇಕಾಗಿರುವ ಒಂದು ಪ್ರಶಸ್ತವಾದ ಸ್ಥಳವೇ ಪ್ರೆಸ್ ಕ್ಲಬ್.
ಆದರೆ ಈ ಕ್ಲಬ್ಬಿನಲ್ಲಿ ಪತ್ರಕರ್ತರಲ್ಲದ ಸುಮಾರು 350 ಜನ ಬೇರೆ ಬೇರೆ ಕ್ಷೇತ್ರದಲ್ಲಿ ಇರುವವರಿಗೆ ಸದಸ್ಯತ್ವ ಕೊಟ್ಟಿದ್ದು ಕುರುಡು ಕಾಂಚಣದ ಕುಣೀತವೇ ಕಾರಣ. ಈ ವಿಚಾರವಾಗಿ ಬೆಂಗಳೂರು ಪ್ರೆಸ್ ಕ್ಲಬ್ ನ ಹಿತೈಷಿಗಳು ಗಲಾಟೆ ಮಾಡಿದಾಗ ಅದಕ್ಕೊಂದು ಸಮಿತಿ ನೇಮಿಸಿದ್ದರು. ಅದರಂತೆ ಸಮಿತಿ ತನ್ನ ವರದಿಯನ್ನು ಸಲ್ಲಿಸಿದೆ. ಆದರೆ ಆ ವರದಿಯನ್ನು ಬಹಿರಂಗಪಡಿಸಲು ಆಡಳಿತ ಮಂಡಳಿಯ ಪದಾಧಿಕಾರಿಗಳು ತಯಾರಿಲ್ಲ. ಆ ವರದಿಯನ್ನು ಮುಚ್ಚಿಟ್ಟಿದ್ದಾರೆ ವಿಶೇಷವೆಂದರೆ ಸಮಿತಿ ನೇಮಕ ಮಾಡಿದ ನಂತರವೂ ಎರಡಂಕಿಗಿಂತಲೂ ಹೆಚ್ಚು ಹೊರಗಿನ ವ್ಯಕ್ತಿಗಳಿಗೆ ಕ್ಲಬ್ ನ ಸದಸ್ಯತ್ವ ಕೊಟ್ಟಿದ್ದಾರೆ.
ಪತ್ರಕರ್ತರಿಗಾಗಿಯೇ ಸ್ಥಾಪನೆಗೊಂಡ ಈ ಕ್ಲಬ್ ಇಂದಿನ ದಿನಗಳಲ್ಲಿ ಹೊರಗಿನ ಜನರ ಸದಸ್ಯತ್ವದಿಂದ ತುಂಬಿಕೊಂಡಿದ್ದು ಬೆಂಗಳೂರು ಪ್ರೆಸ್ ಕ್ಲಬ್ ತನ್ನ ಮುಲ ಸ್ವರೂಪವನ್ನೇ ಕಳೆದುಕೊಂಡು ” ಗ್ಯಾಂಬಲಿಂಗ್ ಮತ್ತು ಬಾರ್ ಶಾಪ್ ” ಆಗಿ ಪರಿವರ್ತಿತಗೊಂಡಿದೆ. ಇಲ್ಲಿ ಪತ್ರಕರ್ತರೇ ಪರಕೀಯ ರಾಗಿದ್ದಾರೆ ಮತ್ತು ಅನಾಥರಾಗಿದ್ದಾರೆ ಈ ವಿಷಯದ ಬಗ್ಗೆ ಹಿರಿಯ ಪತ್ರಕರ್ತರೊಬ್ಬರು ತಮ್ಮ ಮನದಾಳದ ಮಾತನ್ನು ಫೇಸ್ಬುಕ್ನಲ್ಲಿ ಬರೆದುಕೊಂಡು ಜನಜಾಗೃತಿ ಮೂಡಿಸಲು ಹೊರಟಿರುವುದು ಶ್ಲಾಘನೀಯ ಕಾರ್ಯವಾಗಿದೆ ಹಿರಿಯ ಪತ್ರಕರ್ತರ ಮನದಾಳದ ಮಾತನ್ನು ಕೇಳೋಣ
/
ಥಾಮಸನೆಂಬ ಸಾತ್ವಿಕ
ನಮ್ಮಲ್ಲಿ ಇವತ್ತಿನ ಸಂದರ್ಭದಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ಆಹಾರ ಸಂಸ್ಕೃತಿ ಮುಂಚೂಣಿಯಲ್ಲಿದೆ.
ಹೀಗೆ ನಿರಂತರವಾಗಿ ಐವತ್ತು ವರ್ಷಗಳಿಗೂ ಹೆಚ್ಚು ಕಾಲದಿಂದ ನಮ್ಮ ಪತ್ರಕರ್ತರಿಗೆ ತಾಯಿಯಂತೆ ಆಹಾರ ಬಡಿಸುತ್ತಿದ್ದ ಥಾಮಸ್ ಕುಕ್ ರನ್ನು ಲಿಟರಲೀ ಪ್ರೆಸ್ ಕ್ಲಬ್ ನಿಂದ ಹೊರ ದಬ್ಬಲಾಗುತ್ತಿದೆ.
ಈ ತಿಂಗಳು ಅವರ ಮತ್ತು ಪ್ರೆಸ್ ಕ್ಲಬ್ ಸಂಬಂಧವನ್ನು ಕೊನೆಗಾಣಿಸಲಾಗುತ್ತಿದೆ.
ಪ್ರೆಸ್ ಕ್ಲಬ್ ಹುಟ್ಟಿದ್ದು ೧೯೬೯ ಅದಕೆ ಮೂಲ ಕಾರಣ ಮತ್ತು ಪ್ರೇರಣೆ ಪ್ರಜಾವಾಣಿ ಪತ್ರಿಕೆಯ ಛೂ ಬಾಣದ ರೂವಾರಿ ಟಿ ಎಸ್ ರಾಮಚಂದ್ರ ರಾವ್.
ಒಂದು ಟೇಬಲ್ ಎಂಟು ಮಂದಿಯಲ್ಲಿ ವಾರ್ತಾ ಇಲಾಖೆಯ ಎ ಎನ್ ಪಿ, ಪಿ ಆರ್, ಶ್ರೀಕಾಂತ್ ಶೆಟ್ಟರು ಸೇರಿಕೊಂಡರೆ ಎಂಟು ಮಂದಿ ಆದಾರು.
ಇವರಿಗೊಬ್ಬ ಬಾಣಸಿಗನಾಗಿ ಬಂದವನೇ ಈ ಥಾಮಸ್,
ಅಲ್ಲಿಂದ ಬೆಳೆದ ಕ್ಲಬ್ ನಲ್ಲಿ ಈಗ ಬೇಕಾದವರೂ ಬೇಡವಾದವರೆಲ್ಲ ಸೇರಿದರೆ ಸಾವಿರದ ಏಳುನೂರು ಸದಸ್ಯರಿರಬಹುದು.
ನಾನು ಸದಸ್ಯನಾದಾಗ ಮೂನ್ನೂರಿದ್ದರು.ವಾರ್ಷಿಕ ಚುನಾವಣೆ, ಜನರಲ್ ಬಾಡಿ ಕಡ್ಡಾಯವಾಗಿ ನಡೆಯುತ್ತಿತ್ತು.ವರ್ಷಕ್ಕೆ ಇಪ್ಪತೈದು ಮಂದಿ ನಿಜವಾದ ಪತ್ರಕರ್ತರನ್ನು ಮಾತ್ರವೇ ಪರಿಗಣಿಸಲಾಗುತ್ತಿತ್ತು. ವಾರ್ಷಿಕ ಚುನಾವಣೆಗಳು ಸಮಯಕ್ಕೆ ಸರಿಯಾಗಿ ನಡೆಯುತ್ತಿಲ್ಲ.
ಹಣದ ಥೈಲಿಯಲ್ಲಿ ಸದಸ್ಯತ್ವ ಪಡೆದವರು ಪ್ರೆಸ್ ಕ್ಲಬ್ ನಲ್ಲಿ ಕುಂತು ವ್ಯವಹರಿಸುತ್ತಿದ್ದಾರೆ.
ಹಿರಿಯರು ಈ ಕಡೆ ಬರುತ್ತಿಲ್ಲ.ಅವರುಗಳಿಗೆ ಈ ರಾಜಕೀಯ ಉಸಾಬರಿ ಬೇಕಾಗಿಲ್ಲ.ನಮ್ಮಂತಹವರು ಊರುದನ ಕಾದು ದೊಡ್ಡ ಬೋರ ಅನ್ನಿಸಿಕೊಂಡು ಓಡಾಡುತ್ತಿದ್ದೇವೆ.
ಅಕ್ಷರಶಃ ವ್ಯವಹಾರಕ್ಕಿಳಿದಿರುವ ಕೆಲವರಿಂದ ಕಮಿಟಿಗೆ,ಇಡೀ ಪ್ರೆಸ್ ಕ್ಲಬ್ ಗೆ ಕೆಟ್ಟ ಹೆಸರು.
ಜಾತಿಯ ಆಧಾರದಲ್ಲಿ ಪ್ರಶಸ್ತಿ ನಿರ್ಣಯ ಮಾಡುವುದು, ಹೊರಗಿನವರಿಂದ ಹಣ ಪಡೆದು ಪ್ರೆಸ್ ಕ್ಲಬ್ ಐಕಾನ್ ಪ್ರಶಸ್ತಿ ನೀಡುವುದು.ನಿಮಗೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯಿಂದ ಸನ್ಮಾನ ಮಾಡಿಸುತ್ತೇವೆ ಕಾದು ಲಕ್ಷಾಂತರ ರೂಪಾಯಿ ಹಣ ಕೇಳುವುದು ಇದೆಲ್ಲ ನಡೆದಿದೆ.
ಖ್ಯಾತ ಪತ್ರಕರ್ತರು
‘ಥಾಮಸ್ ಕುಕ್’ ಎಂದು ಲೇಖನ ಬರೆದು ಹಾಡಿ ಹೊಗಳಿದ್ದಾರೆ.
ವೆಜ್ ಊಟವನ್ನು ಮೂರು ರೂಪಾಯಿ ದರದಲ್ಲಿ ಸವಿದಿದ್ದೇವೆ.ಮಂಗಳವಾರ
ನಾಟಿ ಕೋಳಿ ಮುದ್ದೆ, ಬುಧವಾರ ಮಟನ್ ಬಿರಿಯಾನಿ, ಗುರುವಾರ ಫಿಶ್ ಕರಿ ರೈಸ್, ಶುಕ್ರವಾರ ಚಿಕನ್ ಬಿರಿಯಾನಿ ಹೀಗೆ ಎಲ್ಲವೂ ಕಡಿಮೆ ದರದಲ್ಲಿ ಸಿಬ್ಬಂದಿಗೂ ಕೊಡಬೇಕು.
ಸಂಜೆಗೆ ಖಾರಾಬಾತ್, ಅವಲಕ್ಕಿ ಬಾತ್, ದೋಸೆ, ಉಪ್ಪಿಟ್ಟು, ಆಯಾ ಸೀಜನ್ ಉಸ್ಲಿಗಳು ದಿನಕ್ಕೊಂದು ವಿಬಿನ್ನತೆ … ಜೊತೆಗೆ ಥಾಮಸನ ಸಾತ್ವಿಕತೆ.
ರಾತ್ರಿಯ ಸಮಾಗಮಕ್ಕೆ
ಮಂಡಕ್ಕಿ ಮಸಲಾ, ಕುಕಂಬರ್ ಸಲಾಡ್,ಉಸುಲಿ, ಬಜಿಬೋಂಡ ಸರ್ವೀಸ್ ಗಳು ನಾನ್ ವೆಜ್ ಪ್ರಿಯರಿಗೆ ಪೆಪ್ಪರ್ ಚಿಕನ್ ಸೂಪರ್ ಸ್ಟಾರ್ ಹೋಟೇಲ್ ನಡೆಸುತ್ತಿರುವ ನನ್ನ ಗೆಳೆಯ ಭಾಸ್ಕರ್ ರಾಜು ಇವತ್ತಿಗೂ ಇದರ ರುಚಿ ಸವಿಯಲು ಕಬ್ಬನ್ ಪಾರ್ಕ್ ವಾಕ್ ಬರ್ತಾರೆ.
ಹಿಂದೆ ರಂಗಣ್ಣ ಮಂಗಣ್ಣ ಟೀಂ ಇದ್ದಾಗಲೂ ಥಾಮಸನ ಕಳಿಸಿದ್ದರು.ನಾವು ಗಲಾಟೆ ಎಬ್ಬಿಸಿದ್ದೆವು.
ಆಮೇಲೆ ಹುಚ್ಚಿಗೆ ಬಿದ್ದ ನಮ್ಮ ಸದಸ್ಸರೇ ಕೆಲವರು ಕ್ಯಾಂಟೀನ್ ನಡೆಸಿ ನಪಾಸಾದರು.
ಈಗ “ವ್ಯವಸ್ಥೆ”ಯ ಭಾಗಿದಾರರು
‘ಮಾಮೂಲಿ ‘ ಗಾಗಿ ಮತ್ತೆ ಅವರನ್ನು ಆಚೆ ಹಾಕುತ್ತಿದ್ದಾರೆ.
ನಾವು ಸಹೆನೆಯಿಂದ ಕಾಯುತ್ತೇವೆ.
ಥ್ಯಾಂಕ್ಸ್ ಥಾಮಸ್ ನಮ್ಮನು ತಾಯಿಯಂತೆ ಸಲಹಿದ್ದಕ್ಕೆ
ಈ ಕಮಿಟಿ ತೊಲಗಿದ ಮೇಲೆ ಮತ್ತೆ ಪ್ರೆಸ್ ಕ್ಲಬ್ ನಲ್ಲೇ ಭೇಟಿಯಾಗೋಣ.
ಥಾಮಸ್ ಮಗ ನಿನ್ನೆ ಹೇಳಿದ ಮಾತು; ಬಿಡಿ ಸಾರ್ ಹುಟ್ಸಿದ ದೇವ್ರು ಹುಲ್ಲು ಮೇಯಸಲ್ಲ.
(ಹಣಕ್ಕಿಂತ ಹೆಚ್ಚಾಗಿ ಭಾವನಾತ್ಮಕ ಸಂಬಂಧಗಳು ಕಳಚಿ ಹೋದಂತೆ.
ಆರ್ ಕನ್ನಡಕ್ಕೆ ಹೊಸ ಗೋಣಿಚೀಲ ಬಂದೊಡನೆ ಹದಿನಾರು ಹಳಬರು ಹೊರ ಹೋದಂತೆ ಸರ್ವಜ್ಞ….)
@ ವೈ ಜಿ ಅಶೋಕ್ ಕುಮಾರ್



