ಸುದ್ಧಿ

ಬೇರ್ಪಟ್ಟಿದ್ದ ದಂಪತಿಗಳ ಮನ ಮಿಡಿಯುವ ಕಥೆ.

ದಂಪತಿಗಳ ಮನ ಮಿಡಿಯುವ ಕಥೆ.

ಕೋರ್ಟಿನ ಮೆಟ್ಟಿಲೇರಿದ್ದ ದಂಪತಿಗಳ ಪ್ರಕರಣ ಪ್ರಶ್ಚಾತಾಪದಿಂದ ಕೊನೆಗೊಂಡಿತ್ತು.

” ನನ್ನದು ತಪ್ಪಾಗಿದೆ ಕ್ಷಮಿಸಿಬಿಡಿ ಎಂದು ಈಗಲೇ ಹೇಳಬಲ್ಲೇ ಅಂಕಲ್, ಆದರೇ ಅವರು ಕ್ಷಮಿಸುವುದಿಲ್ಲ ಅಂಥಹ ಕಠೋರತನ ನಮ್ಮಿಬ್ಬರ ನಡುವೆ ನಡೆದಿದೆ. ಎಂದು ಹುಡುಗಿ ಹೇಳುತ್ತಿದ್ದಾಗಲೇ
“ ನೀನು ನನ್ನ ಬಾಳಿನಲ್ಲಿ ಕಾಲಿಟ್ಟಾಗಿನಿಂದ ನಿನ್ನ ಎಲ್ಲಾ ಒಳ್ಳೆಯ ಗುಣಗಳನ್ನು ಸಮೀಪದಿಂದ ಕಂಡಿದ್ದೇನೆ. ನೀನಾಡಿದ ಚುಚ್ಚು ಮಾತನ್ನು ಸಿರಿಯಸ್ಸಾಗಿ ತೆಗೆದುಕೊಳ್ಳದೇ ನಿರ್ಲಕ್ಷಿಸಿ, ನಾನು ಅಂದೇ ನಿನ್ನನ್ನು ಕ್ಷಮಿಸಿ ದೊಡ್ಡವನಾಗಬೇಕಾಗಿತ್ತು. ಆದರೇ ನಾನೂ ಕೂಡ ಇರ್ಷೆಗೆ ಬಿದ್ದು ನನ್ನ ಸಂಸಾರ ಹಾಳು ಮಾಡಿಕೊಂಡು ಇಂದಿಗೂ ಕೊರಗುತ್ತಿದ್ದೆನೆ ನಿನಗೆ ಕ್ಷಮೀಸುವ ಮನಸ್ಸಿದ್ದರೆ ನನ್ನನ್ನು ಕ್ಷಮಿಸಿಬಿಡು. ಒಟ್ಟಾಗಿರೋಣ ಒಪ್ಪಿಬಿಡು’’ ಎಂದು ನಮ್ಮ ಬೆನ್ನ ಹಿಂದೆ ನಿಂತಿದ್ದ ಹುಡುಗನೊಬ್ಬನು ಮಾತಾಡಿದಾಗ, ಹುಡುಗಿ ಅವನನ್ನು ದಿಟ್ಟಿಸಿ ನೋಡಿ ಗಳಗಳನೇ ಅಳುತ್ತಾ ಆ ಯುವಕನನ್ನು ಅಪ್ಪಿಕೊಂಡಳು.

ದಿನಾಂಕ. 22/೦7/2025 ರಂದು ಬೆಂಗಳೂರು ಮಹಾನಗರದ ಶಾಂತಿನಗರ ಸಿದ್ದಯ್ಯ ರಸ್ತೆಯಲ್ಲಿರುವ “ ನ್ಯಾಯ ದೇಗುಲ ” ಫ್ಯಾಮಿಲಿ ಕೋರ್ಟಿನಲ್ಲಿ ನನ್ನ ಕೆಲಸ ಮುಗಿಸಿಕೊಂಡೆನು. ೩ನೇ ಮಹಡಿಯಲ್ಲಿ ವಿಪರೀತ ಗದ್ದಲದಲ್ಲಿ ಹರಸಾಹಸಪಟ್ಟು ಹಾದಿ ಮಾಡಿಕೊಂಡು ಲಿಫ್ಟ ಹತ್ತಿರ ನಡೆದಿದ್ದೇನು. ನನ್ನ ಮುಂದೆ ಮಧ್ಯವಯಸ್ಸಿನ ಹೆಂಗಸು ಮತ್ತು ಆಕೆಯ ಸುಮಾರು 25 ವರ್ಷದ ಮಗಳು ಮಾತಾಡುತ್ತಾ ನಡೆದಿದ್ದರು. “ ಅಮ್ಮಾ ನಾನು ದುಡುಕಿದೆನೇನೋ ಅನ್ನಿಸ್ತಾ ಇದೆ. ಅವರ ಆ ಮಾತಿನಿಂದ ನಾನು ಕೋಪಗೊಂಡು ಹಿಯಾಳಿಸದಿದ್ದರೇ ನಮ್ಮ ಬಾಂಧವ್ಯ ಚೆನ್ನಾಗಿರುತ್ತಿತ್ತೇನೋ ಕೋರ್ಟಿಗೆ ಅಲೆದಾಡುವ ಮತ್ತು ನನ್ನ ಸಂಸಾರ ಕೋಲ್ಯಾಪ್ಸ್ ಆಗುವ ಹಂತಕ್ಕೆ ಬರುತ್ತಿರಲಿಲ್ಲವೇನೋ? ” ಎಂದು ಕಣ್ಣಿಗೆ ಕೈ ವಸ್ತ್ರದಿಂದ ಒತ್ತಿಕೊಳ್ಳುತ್ತಾ ನಡೆದಿದ್ದಳು.

“ಅಳಿಮಯ್ಯ ಚೆನ್ನಾಗಿಯೇ ಇದ್ದಾರೆ ಕಣೇ ಅದ್ಯಾಕೆ ನೀನು ದುಡುಕಿದೆಯೋ ಇಂದಿಗೂ ನನಗೆ ಅರ್ಥವಾಗುತ್ತಿಲ್ಲ.’’
ಎಂದು ಹುಡುಗಿಯ ತಾಯಿ ಹೇಳುತ್ತಿದ್ದಳು,

ಹೆಂಗಸಿಗೆ ಆಗಲೀ ಗಂಡಸಿಗೇ ಆಗಲೀ ತಾಳ್ಮೆ ಎಂಬುದು ಬಹುಮುಖ್ಯ ಅಮ್ಮಾ. ಈಗಲೂ ಪ್ರಯತ್ನಿಸಬಹುದಲ್ಲವೇ? ಎಂದು ಅವರ ಹಿಂದಿನಿoದ ನಾನು ಮಾತಾಡಿದಾಗ, ತಾಯಿ ಮಗಳಿಬ್ಬರೂ ಹಿಂದಿರುಗಿ ನನ್ನನ್ನು ನೋಡಿ “ ಅದೆಲ್ಲಾ ಮುಗಿದು ಹೋದ ಕಥೆ ವಕೀಲರೇ ಎಂದು ಹುಡುಗಿಯ ತಾಯಿ ಅಂದಳು.  ಸಮಸ್ಯೆ ತುಂಬಾ ದೂರ ಹೋಗಿದೆ ಅಂಕಲ್ ಸರಿಪಡಿಸದಷ್ಟು ಕೆಟ್ಟಿದೆ ” ಎಂದು ಹುಡುಗಿ ಅತೀಯಾದ ನಿರಾಶೆ ಮತ್ತು ಕುಗ್ಗಿದ ಧ್ವನಿಯಲ್ಲಿ ಮಾತಾಡಿದಳು ಅಷ್ಟರಲ್ಲಿಯೇ ನಾವು ೩ ಜನ ಲಿಫ್ಟ ಹತ್ತಿರ ಬಂದೆವು. 

ಕೆಲವರ ಜೀವನದಲ್ಲಿ ಯಾಕೆ ಹೀಗಾಗುತ್ತದೆ ಅಂಕಲ್ ಎಂದು ಹುಡುಗಿ ನನ್ನತ್ತ ತಿರುಗಿ ನೋಡುತ್ತಾ ಕೇಳಿದಳು.  ಸೋಷಿಯಲ್ ಮಿಡಿಯಾ, ಐಟಿ.ಬಿಟಿ. ಲಕ್ಷ ಲಕ್ಷ ಸಂಬಳ ಐಷಾರಾಮಿ ಜೀವನ, ಇನ್ನೂ ಬೇಕು. ಇನ್ನೂ ಬೇಕು. ಎಂಬ ದುರಾಶೆಯೇ ಇದಕ್ಕೆಲ್ಲ ಕಾರಣ ಅಮ್ಮಾ ಎಂದು ಹುಡುಗಿಯ ಪ್ರಶ್ನೆಗೆ ಉತ್ತರಿಸಿದೆನು. 

“ನೀವು ಹೇಳಿದ ಎಲ್ಲಾ ವಿಷಯ ನನ್ನ ಜೀವನದಲ್ಲಿ ನಿಜವಾಗಿವೇ ಅಂಕಲ್, ನಾನೇ ಮುಂಗೋಪಿಯಾಗಿಬಿಟ್ಟೇ, ಸಹನೇ, ತಾಳ್ಮೇಯ ಕೊರತೆ ನನ್ನಲ್ಲಿ ತುಂಬಾ ಇದೆ ಎನ್ನುವುದು ಈಗ ನನಗೆ ಅರ್ಥವಾಗುತ್ತಿದೆ.’’ 

ನನ್ನ ಪತಿ ಸಂಭಾವಿತರು, ತಮ್ಮ ಕೆಲಸದಲ್ಲಿ ಶ್ರೇದ್ಧೆ, ಶ್ರಮ ವಹಿಸುತ್ತಾ ನನ್ನ ಬೇಕು ಬೇಡಗಳ ಕಡೆಗೆ ನಿಗಾ ವಹಿಸುತ್ತಿದ್ದರು ನಾನು ಸರಿಯಾಗಿ. ಅವರನ್ನು ನಾನು ಅರ್ಥ ಮಾಡಿಕೊಳ್ಳಲಿಲ್ಲ ಎನ್ನಿಸುತ್ತಿದೆ. ಮನೆಯಲ್ಲಿ ಒಬ್ಬಳೇ ಮಗಳೆಂದು ನನ್ನನ್ನು ತುಂಬಾ ಅಕ್ಕರೆಯಿಂದ ಕಷ್ಟ, ವ್ಯೆಸನ, ಚಿಂತೆಯ ನೆರಳೇ ಸೋಕದಂತೆ ನನ್ನನ್ನು ಬೆಳೆಸಿದರು. ಇದರಿಂದಾಗಿ ನಾನು ತುಂಬಾ ಕೊಬ್ಬಿದ್ದೇ, ಅಹಂಕಾರ ನನ್ನ ನರನಾಡಿಯಲ್ಲಿ ಝೇಂಕರಿಸುತ್ತಿತ್ತು,  ಜಗತ್ತಿನಲ್ಲಿ ನನ್ನ ಥರಹ ಯಾರೂ ಇಲ್ಲ. ನಾನೇ ಎಲ್ಲಾ. ಎಂದು ಬೀಗುತ್ತಿದ್ದೆ ಇದೇ ಕಾರಣಕ್ಕೆ ನನ್ನ ದಾಂಪತ್ಯದಲ್ಲಿ ನಾನೇ ಕಷ್ಟ ತಂದು ಕೊಂಡೆನು. ನನ್ನ ತಪ್ಪಿನಿಂದ ಒಬ್ಬ ಒಳ್ಳೆಯ ಗೆಳೆಯ, ಒಳ್ಳೆಯ ಸಂಗಾoತಿಯನ್ನು ಕಳೆದುಕೊಂಡು ನೆಮ್ಮದಿಯ ತಾಣವಾಗಿದ್ದ ನನ್ನ ಪತಿಯ ಮನೆ ತೊರೆದು ಬಂದೆನು.

ಈಗಲೂ ಕಾಲ ಮಿಂಚಿಲ್ಲ ಮನಸ್ಸು ಮಾಡು ತಾಯಿ.  ಎಲ್ಲಾ ಸರಿ ಹೋಗುತ್ತದೆ. " ಇಗೋ"  ಬಿಟ್ಟು ಕೆಳಗಿಳಿದು ಬಾ ಅಮ್ಮ.  ನಾನು ಪ್ರಯತ್ನಿಸಲೇ? ಎಂದು ಹುಡುಗಿಯನ್ನು ಕೇಳಿದೆನು. ಬೇಡ ಅಂಕಲ್ ನನ್ನದೇ ತಪ್ಪು ಒಂದು ಬಾರಿ ಕೋಪದಿಂದ ನನ್ನ ಯಜಮಾನರಿಗೆ ಆಡಬಾರದ ಮಾತು ಆಡಿಬಿಟ್ಟೇ,  ಅವರು ನನ್ನ ಮಾತಿನಿಂದ ನೊಂದುಬಿಟ್ಟರು. ನಂತರ ಸಿಡಿದೆದ್ದರು,  ಅದೇ ಇಂದು ನನ್ನ ಜೀವನಕ್ಕೆ ಮುಳುವಾಗಿ ಫ್ಯಾಮಿಲಿ ಕೋರ್ಟಿನ ತನಕ ತಂದು ನಿಲ್ಲಿಸಿದೆ. ಎನ್ನುತ್ತಾ ಕಣ್ಣೊರಸಿಕೊಂಡಳು. 

“ ಅಮ್ಮಾ ನೀನು ಹೂಂ ಅನ್ನು ನಾನು ಪ್ರಯತ್ನ ಮಾಡುತ್ತೇನೆ’’ ಎಂದು ನಾನು ಹೇಳಿದಾಗ “ಕ್ಷಮಿಸಲಾರದಂಥಹ ಮಾತಾಡಿಬಿಟ್ಟಿದ್ದೆನೆ ಅಂಕಲ್, ನನ್ನ ಮತ್ತು ಅವರ ನಡುವೆ ದೊಡ್ಡದಾದ ಕಂದಕ ನಿರ್ಮಾಣವಾಗಿದೆ. ನನ್ನದು ತಪ್ಪಾಗಿದೆ ಕ್ಷಮಿಸಿಬಿಡಿ ಎಂದು ಈಗಲೇ ನಾನು ಹೇಳಬಲ್ಲೇ ಆದರೇ ಅವರು ಕ್ಷಮಿಸುವುದಿಲ್ಲ ಅಂಥಹ ಕಠೋರತನ ನಮ್ಮಿಬ್ಬರ ನಡುವೆ  ನಡೆದಿದೆ. ಎಂದು ಹುಡುಗಿ ಹೇಳುತ್ತಿದ್ದಾಗಲೇ “ ಕ್ಷಮಿಸುವುದು ನಾನಲ್ಲ ನೀನು ನನ್ನನ್ನು ಕ್ಷಮಿಸಿ ಬಿಡೇ,  ನಿನ್ನ ಎಲ್ಲಾ ಒಳ್ಳೆಯ ಗುಣಗಳನ್ನು ನಾನು ಕಂಡಿದ್ದೇನೆ. ನೀನಾಡಿದ ಮಾತು ನಾನು ಅಂದೇ ಕ್ಷಮಿಸಿ ದೊಡ್ಡವನಾಗಬೇಕಾಗಿತ್ತು. ಆದರೇ ನಾನೂ ಕೂಡ ಇರ್ಷೆಗೆ ಬಿದ್ದು ನನ್ನ ಸಂಸಾರ ಹಾಳು ಮಾಡಿಕೊಂಡಿದ್ದೆನೆ.’’ ಎಂದು ನಮ್ಮಗಳ ಹಿಂದಿನಿoದ ಯುವಕನ ಜೋರಾದ ಮಾತಿಗೆ ನಾವೆಲ್ಲಾ ಹಿಂದಿರುಗಿ ನೋಡಿದೆವು. ಹುಡುಗಿ ಆ ಯುವಕನನ್ನೇ ದಿಟ್ಟಿಸಿ ನೋಡಿ,  ಜೋರಾಗಿ ಅಳುತ್ತಾ ಆ ಯುವಕನನ್ನು ಅಪ್ಪಿಕೊಂಡಳು. 

ಆಗ ನಾನು ಮತ್ತೇಕೇ ” ego ” ಇಟ್ಟುಕೊಂಡಿದ್ದಿರಾ? ಇಬ್ಬರೂ ವಿದ್ಯಾವಂತರಿದ್ದಿರಿ, ಬುದ್ದಿವಂತರಿದ್ದಿರಿ. ಎಲ್ಲದಕ್ಕೂ ಮೇಲಾಗಿ ಒಳ್ಳೆಯ ಪ್ರೇಮಿಗಳಾಗಿದ್ದಿರಾ. ಒಬ್ಬರಿಗೊಬ್ಬರು ಕ್ಷಮಿಸಿಕೊಂಡು ಭವಿಷ್ಯದಲ್ಲಿ ಮುನ್ನಡೆಯುತ್ತಾ ಜೀವನ ರೂಪಿಸಿಕೊಳ್ಳ ಬಹುದಲ್ಲವೇ? ಎಂದು ಹುಡುಗ-ಹುಡುಗಿ ಇಬ್ಬರನ್ನೂ ಹರಸುತ್ತಾ ತೆರೆದುಕೊಂಡ ಲಿಫ್ಟಿನೆಡೆಗೆ ನಡೆದೆನು. ನಿಮ್ಮಿಬರಿಗೂ ಆ ದೇವರು ಒಳ್ಳೆಯದು ಮಾಡಲಿ ಎಂದು ಹರಸುತ್ತಾ ನಾನು ಲಿಫ್ಟನೊಳಗೆ ಸೇರಿಕೊಂಡೆನು. ಈ ದೃಶ್ಯ ನನ್ನ ಜೀವನದಲ್ಲಿಯೇ ಅತೀ ವಿಶೇಷ ಮತ್ತು ಮರೆಯದ ಘಟನೆ.

Related Articles

Leave a Reply

Your email address will not be published. Required fields are marked *

Back to top button