ಸುದ್ಧಿ

ಭಾರತ ದೇಶದ ಸಂವಿಧಾನದ ತಾಕತ್ತು.

ನೆನ್ನೆ ಬಂದ ಒಂದು ತೀರ್ಪು ಎಷ್ಟೋ ಜನರ ಬಾಳಲ್ಲಿ ಆಟ ಆಡಿ ಅತ್ಯಾಚಾರ ಮಾಡಿರುವ ಪ್ರಜ್ವಲ್ ರೇವಣ್ಣ ರ ತೀರ್ಪು ನೋಡಿ ಇವರಂತೆ ಇರುವ ಅತ್ಯಾಚಾರಿಗಳಿಗೆ ಮನಸ್ಸಲ್ಲಿ ನಡುಕ ಹುಟ್ಟಿಸಿದೆ ಇದು ಸಂವಿಧಾನದ ನಮ್ಮ ಭಾರತ ದೇಶದ ತಾಕತ್ತು ಎಚ್ಚರ ಅತ್ಯಾಚಾರಿಗಳೇ ಉಪ್ಪು ತಿಂದವರು ನೀರು ಕುಡಿಲೇಬೇಕು ಇದು ಗಾದೆ ಮಾತಿಗೆ ಅನುಗುಣವಾಗಿದೆ ನಮ್ಮ ಪ್ರಜ್ವಲ್ ರೇವಣ್ಣರ ತೀರ್ಪು ಪ್ರಧಾನಮಂತ್ರಿಯ ಮೊಮ್ಮಗನೇ ಆಗಲಿ ಮುಖ್ಯಮಂತ್ರಿ ಆಗಲಿ ಅವರ ಅಣ್ಣನ ಮಗನೇ ಆಗಲಿ ಮಾಜಿ ಮಂತ್ರಿ ಆಗಲಿ ಸ್ವಂತ ತಾನೇ ಸಂಸದನಾಗಿರಲಿ ಪ್ರೇಮ್ ಕೇಂದ್ರ ರಾಜ್ಯ ಮಂತ್ರಿ ಸಂಬಂಧಿಕರಾಗಲಿ ಪ್ರಧಾನ ಮಂತ್ರಿಗೆ ಅಪ್ಪನೆ ಆಗಿರಲಿ…… ಸಾವಿರಾರು ಕೋಟಿ ಆಸ್ತಿ ಒಡೆಯನೇ ಆಗಿರಲಿ ಎಂಥ ಪ್ರಬಲ ಜಾತಿಯವನೇ ಆಗಿರಲಿ ಯಾರೇ ಆಗಿರಲಿ ಮಾಡಿದ ಅಪರಾಧಕ್ಕೆ ತಕ್ಕ ಶಿಕ್ಷೆ ಅನುಭವಿಸಲೇಬೇಕು. ಇದೇ ನಮ್ಮ ಭಾರತ ಸಂವಿಧಾನದ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಬರೆದಿರುವ ಅವರ ತಾಕತ್ತು ಸಂವಿಧಾನದ ಗತ್ತು ಈ ನಮ್ಮ ಭಾರತದ ಸಂವಿಧಾನದ ಕಾನೂನು ಮುಂದೆ ಎಲ್ಲರೂ ಒಂದೇ ಎಲ್ಲರಿಗೂ ಒಂದೇ ಇದೇ ಶಿಕ್ಷೆ…! ಸಂವಿಧಾನ ಮತ್ತು ಅದರ ಕಾನೂನುಗಳು ಅನುಚ್ಛೇದ ಪರಿಚ್ಛೇದಗಳು ಸರಿಯಾಗಿ ಇವೆ ಪ್ರಬಲವಾಗಿಯೇ ಇವೆ ಸಂವಿಧಾನವು ಸದಾ ಅನ್ಯಾಯದ ವಿರುದ್ಧ ನ್ಯಾಯದ ಪರ ಇದ್ದೇ ಇದೆ. ಸಂವಿಧಾನದೀನ ನ್ಯಾಯಾಂಗ ವ್ಯವಸ್ಥೆಯು ಅಷ್ಟೇ ಪ್ರಬಲವಾಗಿಯೇ ಇದೆ ವಾದಿಸುವ ವಕೀಲರು ಮತ್ತು ತೀರ್ಪುಕೊಡುವ ನ್ಯಾಯಾಧೀಶರ ಮೇಲೆ ಎಲ್ಲವೂ ನಿಂತಿರುತ್ತದೆ..! ಇದು ಪ್ರಜ್ವಲ್ ರೇವಣ್ಣ ಅತ್ಯಾಚಾರ ಪ್ರಕರಣದ ತೀರ್ಪು ಬಂದಿದೆ ಅಪರಾಧಿ ಎಂದು ಸಾಬೀತಾಗಿದೆ ಜೀವ ಅವಧಿ ಶಿಕ್ಷೆ ಹತ್ತು ಲಕ್ಷ ದಂಡ ಶಿಕ್ಷೆಯ ಪ್ರಮಾಣ ಇದೇ ರೀತಿ ನಮ್ಮ ದೇಶದ ಪ್ರತಿಯೊಂದು ಕೋರ್ಟಿನಲ್ಲಿಯೂ ಪ್ರಕಟವಾಗುತ್ತಿದೆ ಆಗುತ್ತಾ ಇರುತ್ತೆ ಇದೇ ರೀತಿ ತಪ್ಪಿಗಸ್ತರಿಗೆ ಶಿಕ್ಷೆಗಳು ಪ್ರಕಟವಾಗಲಿ ವಕೀಲರಿಗೂ ಮತ್ತು ನ್ಯಾಯಾಧೀಶರಿಗೆ ಅನಂತ ಅನಂತ ಕೋಟಿ ವಂದನೆಗಳು ವರದಿ ಗಿರೀಶ್ ಕುಮಾರ್ ಯಡ್ಡಳ್ಳಿ ಸಾಮಾಜಿಕ ಹೋರಾಟಗಾರ ಹಾಗೂ ಪತ್ರಕರ್ತ

Related Articles

Leave a Reply

Your email address will not be published. Required fields are marked *

Back to top button