ಸುದ್ಧಿ

ಮಹಾತ್ಮ ಗಾಂಧಿ ಜಯಂತಿ ದಿನಾಚರಣೆ. ಮಾದೂರು. ಹೆಚ್.ಬಿ.ಹಳ್ಳಿ.

ಮಹಾತ್ಮ ಗಾಂಧಿ ಜಯಂತಿ ದಿನಾಚರಣೆ
ಅ.02 ವಿಜಯನಗರ ಜಿಲ್ಲೆ, ಹಗರಿಬೊಮ್ಮನಹಳ್ಳಿ ತಾಲೂಕು, ಮಾದೂರು ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವತಿಯಿಂದ ಮಹಾತ್ಮ ಗಾಂಧಿ ಜಯಂತಿಯನ್ನು ಸರಳ ರೀತಿಯಿಂದ ಆಚರಿಸಲಾಯಿತು.
ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರುಶಾಸ್ತ್ರಿಗಳ ಭಾವ ಚಿತ್ರಗಳಿಗೆ ಪುಷ್ಪ ಅಲಂಕಾರಗಳಿಂದ ಶೃಂಗರಿಸಿ ಹೂವಿನಹಾರ ಹಾಕಿ ಪೂಜೆ ಸಲ್ಲಿಸಲಾಯಿತು. ಪ್ರೌಢಶಾಲೆ ಮುಖ್ಯೋಫಾಧ್ಯಯರಾದ ಶ್ರೀನಿವಾಸ ಶ್ರೇಷ್ಟಿ ಮಕ್ಕಳನ್ನು ಉದ್ದೇಶಿಸಿ ಮಾತನಾಡುತ್ತಾ ಗಾಂಧಿಜೀ ಅವರ ಸತ್ಯ, ಅಹಿಂಸೆ, ಶಾಂತಿ ಚಿರಸ್ತಾಯಿ ಆಗಿದೆ ಹಾಗಾಗಿ ಇಂದಿನ ಕಾಲದ ಮಕ್ಕಳು ಗಾಂಧೀಜಿ ಅವರ ತತ್ವಗಳನ್ನು ಮೈಗೂಡಿಸಿಕೊಳ್ಳಲು ಕರೆ ನೀಡಿದರು, ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕರಾದ ಶ್ರೀ ಮಂಜುನಾಥ ವಿ ಅವರು ಲಾಲ್ ಬಹದ್ದೂರು ಶಾಸ್ತ್ರಿಗಳು ಭಾರತ ದೇಶಕ್ಕೆ ನೀಡಿದ ಕೊಡುಗೆ ಅವರ ಪ್ರಾಮಾಣಿಕತೆಯನ್ನು ಕೊಂಡಾಡಿದರು, ಶಾಸ್ತ್ರಿಗಳ ದ್ಯೇಯವಾಕ್ಯ ಜೈ ಜವಾನ್ ಜೈ ಕಿಸಾನ್ ಮಂತ್ರವು ಇಂದಿಗೂ ಎಂದೆಂದಿಗೂ ಅಮರ ಮಂತ್ರವಾಗಿದೆ ಎಂದೂ ಹೇಳಿದರು.
ಸಮಾರಂಭದ ಅಧ್ಯಕ್ಷೆತೆಯನ್ನು ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಪಿ.ಮಲ್ಲಿಕಾರ್ಜುನ ವಹಿಸಿದ್ದರು, ಸಹ ಶಿಕ್ಷಕರಾದ ಬಿ.ರಾಮಣ್ಣ, ಎಲ್.ಪಿ ಕಾಳ್ಯನಾಯ್ಕ, ಟಿ ರವಿ, ಜಿ. ವೀರೇಶ್, ರೇಣುಕಮ್ಮ, ಗಂಗಮ್ಮ, ಅಬ್ಬುಲ್ ಅಲಿ ಲೇಖತ್ ಹಾಗೂ ಮಾದೂರು ಗ್ರಾಮದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾದ ಈ. ಮಲ್ಲೇಶ, ವಿ. ಕೋಟ್ರೇಶ್ ಸಭೆಯಲ್ಲಿ ಉಪಸಿಸ್ಥತರಿದ್ದರು.
ಪ್ರಾರ್ಥನೆ ಬಿ.ಸಂಧ್ಯಾ, ಸ್ವಾಗತ ಮತ್ತು ನಿರೂಪಣೆ ಸಹ ಶಿಕ್ಷಕಿ ಉಷಾರಾಣಿ, ವಂದನಾರ್ಪಣೆ ಟಿ. ಸುರೇಶ್ ಸಹ ಶಿಕ್ಷಕರು ನೆರವೇರಿಸಿ ಕೊಟ್ಟರು.
ಮಹೇಶ್ ಮಾದೂರು

Related Articles

Leave a Reply

Your email address will not be published. Required fields are marked *

Back to top button