ಸುದ್ಧಿ

ಮಹಿಳೆಯರಿಗಾಗಿಯೇ ರೂಪಿಸಿರುವ ಕೆನರಾ ಬ್ಯಾಂಕಿನ ಈ ಅದ್ಭುತ ಯೋಜನೆ

ಆತ್ಮೀಯ ಗ್ರಾಹಕ ಬಂದುಗಳೇ,

ಕೆನರಾ ಬ್ಯಾಂಕ್ ಮಹಿಳೆಯರಿಗಾಗಿಯೇ ಒಂದು ವಿಶೇಷ ಹೊಸ ಉಳಿತಾಯ ಖಾತೆಯನ್ನು ಪ್ರಾರಂಭಿಸಿದೆ ಎಂದು ನಿಮಗೆ ಸಂತೋಷದಿಂದ ಮತ್ತು ಹೆಚ್ಚು ಹೆಮ್ಮೆಯಿಂದ ತಿಳಿಸುತ್ತಿದ್ದೇವೆ ಈ ಖಾತೆಯ ಬಗ್ಗೆ ಹೆಮ್ಮೆಯ ವಿಷಯವೆಂದರೆ ಭಾರತದಲ್ಲಿ ಮೊದಲ ಬಾರಿಗೆ ಇಂತಹ ವಿಶೇಷ ಉಳಿತಾಯ ಬ್ಯಾಂಕ್ ಖಾತೆ
💐ಕೆನರಾ ಏಂಜೆಲ್ 💐
ಎಂದು ಕರೆಯಲ್ಪಡುವ ಈ ಖಾತೆಯು ಮೂರು ವಿಧಗಳನ್ನು ಹೊಂದಿದೆ. ಈ ಖಾತೆಯ ವಿಶೇಷತೆಯೆಂದರೆ ನೀವು ಈ ಖಾತೆಯನ್ನು ಹೊಂದಿದಾಗ ಅದರೊಂದಿಗೆ ಉಚಿತ ಕ್ಯಾನ್ಸರ್ ಕವರೇಜ್ ಸಿಗುತ್ತದೆ. ನಿಮ್ಮ ಜೀವನದ ಯಾವುದೇ ಹಂತದಲ್ಲಿ ಕ್ಯಾನ್ಸರ್ ಇರುವುದು ಪತ್ತೆಯಾದರೆ 3 ಲಕ್ಷದಿಂದ 10 ಲಕ್ಷದವರೆಗೆ ನೀವು ಉಚಿತ ಚಿಕಿತ್ಸೆ ಪಡೆಯುಬಹುದು.(ಈ ಖಾತೆಯನ್ನು ತೆರೆಯಲು ವಯಸ್ಸಿನ ಮಿತಿ 18 ರಿಂದ 70 ವರ್ಷಗಳು ಮತ್ತು ಆ ವಯಸ್ಸಿನವರೆಗೆ ಕ್ಯಾನ್ಸರ್ ಕವರೇಜ್ ಲಭ್ಯವಿದೆ). ಈ ಖಾತೆದಾರರಿಗೆ, 8 ರಿಂದ 26 ಲಕ್ಷಗಳ ಅಪಘಾತ ಮರಣ ವಿಮೆ, ಪತಿಗೆ 2 ಲಕ್ಷಗಳ ಅಪಘಾತ ಮರಣ ವಿಮೆ, ಪತಿಗೆ 4 ಲಕ್ಷಗಳ ವಿಮಾನ ಅಪಘಾತ ವಿಮೆ, ಉಚಿತ ಪ್ಲಾಟಿನಂ ATM ಕಾರ್ಡ್ (ವಾರ್ಷಿಕ ಶುಲ್ಕವಿಲ್ಲದೆ), ಉಚಿತ ಲಾಕರ್ ಕಾರ್ಯಾಚರಣೆ (ಯಾವುದೇ ಮಿತಿ ಇಲ್ಲ) ಇತ್ಯಾದಿ ಸೌಲಭ್ಯಗಳು ಮಹಿಳೆಯರಿಗೆ ಲಭ್ಯವಿದೆ.

ಭಾರತದಲ್ಲಿ ಮೊದಲ ಬಾರಿಗೆ ನಮ್ಮ ಸಂಸ್ಥೆ ,ಕೆನರಾ ಬ್ಯಾಂಕ್ ನಯ ಪೈಸೆಯೂ ವಿಮಾ ಪ್ರೀಮಿಯಂ ಪಾವತಿಸದೆ ಕ್ಯಾನ್ಸರ್ ಕವರ್ ಪಾಲಿಸಿಯನ್ನು ನೀಡುತ್ತಿದೆ ಮತ್ತು ಎಲ್ಲಾ ಕುಟುಂಬದ ಎಲ್ಲಾ ಮಹಿಳೆಯರು ಈ ಉಚಿತ ಕೊಡುಗೆಯನ್ನು ಪಡೆದುಕೊಳ್ಳಲು ವಿನಂತಿಸುತ್ತಿದ್ದೇವೆ .

ಕೆನರಾ ಏಂಜೆಲ್ ಹೊಸ ಖಾತೆ ತೆರೆಯಲು ,2 ಭಾವಚಿತ್ರಗಳು, ಮೂಲ ಆಧಾರ್, ಪ್ಯಾನ್ (ಯಾವುದಾದರೂ ಇದ್ದರೆ) ಅವುಗಳ ಪ್ರತಿಯೊಂದಿಗೆ ಕೆನರಾ ಬ್ಯಾಂಕ್ ನ ಯಾವುದೇ ಶಾಖೆಗೆ ಭೇಟಿ ನೀಡಿ.

ಈ ಸಂದೇಶವನ್ನು ಸಾಧ್ಯವಾದಷ್ಟು ಮಹಿಳೆಯರಿಗೆ ತಲುಪಿಸಿ ಹಾಗೂ ಸಾಧ್ಯವಾದಷ್ಟು ಹೊಸ ಖಾತೆಗಳನ್ನು ತೆರೆಯಲು ವಿನಂತಿಸುತ್ತಿದ್ದೇವೆ.

ಕೆನರಾ ಬ್ಯಾಂಕ್
ಮಂಗಳೂರು ವಲಯ ಕಚೇರಿ

Related Articles

Leave a Reply

Your email address will not be published. Required fields are marked *

Back to top button