ಸುದ್ಧಿ

ಶಿಕ್ಷಣದ ಜೊತೆಗೆ ಪರಿಸರದ ಬಗ್ಗೆ ಅರಿವು ಮೂಡಿಸಿ…..ಶಾಸಕ ಆರ್.ಬಸನಗೌಡ ತುರುವಿಹಾಳ

ಶಿಕ್ಷಣದ ಜೊತೆಗೆ ಪರಿಸರದ ಬಗ್ಗೆ ಅರಿವು ಮೂಡಿಸಿ ಶಾಸಕ ಆರ್. ಬಸನಗೌಡ ತುರುವಿಹಾಳ

ತುರುವಿಹಾಳ:ಇಂದು ಪಟ್ಟಣದ ಸರ್ಕಾರಿ ಪ್ರೌಢ ಶಾಲೆಯಲ್ಲಿ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನಂತರ ಮಾತನಾಡಿದ ಶಾಸಕ ಆರ್.ಬಸನಗೌಡ ತುರ್ವಿಹಾಳ ವಿಶ್ವ ಪರಿಸರ ದಿನಾಚರಣೆಯ ನಿಮಿತ್ಯವಾಗಿ ಮನಸ್ಸಿನ ಭಾವನೆಗಳನ್ನು ವ್ಯಕ್ತಪಡಿಸಿದರು.ಇವತ್ತಿನ ದಿನಮಾನಗಳಲ್ಲಿ ಮಳೆ ಬೆಳೆ ಇಲ್ಲದೆ ನಾವೆಲ್ಲಾ ತೊಂದರೆಗಳನ್ನು ಕಾಣ್ತಾ ಇದೀವಿ. ಜೊತೆಗೆ ಹಲವಾರು ಕಾಯಿಲೆಗಳನ್ನು ಅನುಭವಿಸುತ್ತಾ ಇದೀವಿ. ಇದಕ್ಕೆ ಮುಖ್ಯ ಕಾರಣ ಏನೆಂದರೆ ಪರಿಸರವನ್ನು ನಾವು ಮಾರಣಹೋಮ ಮಾಡುತ್ತಿದ್ದೇವೆ. ಆದ ಕಾರಣ ನಾವುಗಳು ರೋಗಗಳನ್ನು ಕಾಣುತ್ತಿದ್ದೇವೆ.
ಯಾಕಂದ್ರೆ ಹಿಂದಿನಿಂದ ಮನುಷ್ಯ ಮತ್ತು ಪ್ರಕೃತಿಯ ಸಂಬಂಧ ಗಟ್ಟಿಯಾಗಿದೆ.ಪ್ರಕೃತಿಗೆ ಮನುಷ್ಯನ ಮಾನಸಿಕ ಮತ್ತು ದೈಹಿಕ ಅಗತ್ಯವು ಹಾಗೇ ಉಳಿದಿದೆ. ಪ್ರಕೃತಿಯು ಮನುಷ್ಯನ ದೈಹಿಕ ಮತ್ತು ಮಾನಸಿಕ ಯೋಗಕ್ಷೇಮದ ಮೂಲವಾಗಿ ಮುಂದುವರಿಯುತ್ತದೆ, ಮಾನವರು ಪ್ರಕೃತಿಯೊಂದಿಗೆ ಆಳವಾದ ಸಂಪರ್ಕವನ್ನು ಹೊಂದಿದ್ದಾರೆ. ಇದು ಪ್ರಕೃತಿ ಮತ್ತು ಮನುಷ್ಯನ ನಡುವಿನ ಆಳವಾದ ಮತ್ತು ಬಲವಾದ ಸಂಬಂಧವನ್ನು ವಿವರಿಸುತ್ತದೆ. ಮುಂದಿನ ದಿನಮಾನಗಳಲ್ಲಿ ಪ್ರತಿಯೊಬ್ಬರೂ ಸಸಿಗಳನ್ನು ತಂದು ಮರಗಳನ್ನು ಬೆಳಸಿ ಪರಿಸರವನ್ನು ರಕ್ಷಿಸಬೇಕು.ಏಕೆಂದರೆ ಸಧ್ಯದ ಪರಿಸ್ಥಿತಿಯಲ್ಲಿ ಮರಗಳನ್ನು ಕಡಿದು ಪರಿಸರ ನಾಶ ಮಾಡಿ ಆಮ್ಲಜನಕವನ್ನು ಹಣ ಕೊಟ್ಟು ಖರೀದಿ ಮಾಡುವ ಪರಿಸ್ಥಿತಿ ಬಂದಿದ್ದೇವೆ. ಇದು ಯಾವುದು ಕೂಡ ಇನ್ಮುಂದೆ ಆಗಬಾರದೆಂದು ಹೇಳಿದರು,

ಈ ಸಂದರ್ಭದಲ್ಲಿ:-ಪಟ್ಟಣ ಪಂಚಾಯತ್ ಸದಸ್ಯ ಬಾಪುಗೌಡ ದೇವರಮನಿ, ದೊಡ್ಡಪ್ಪ ಸೀಗಿ ಮುಖ್ಯ ಶಿಕ್ಷಕರು,
ಮಲ್ಲಪ್ಪ ಪ್ರಾಂಶುಪಾಲರು, ಸೋಮಲಿಂಗಪ್ಪ ಶಿಕ್ಷಕರು, ಸತೀಶ್ ಶಿಕ್ಷಕರು, ಎಸ್ ಡಿ ಎಂ ಸಿ ಅಧ್ಯಕ್ಷ ರಮೇಶ್ ದಲ್ಬಂಜನ್,ಹಾಗೂ ಸಿಬ್ಬಂದಿಗಳು ಇನ್ನಿತರರು ಇದ್ದರು

ವರದಿ:-ವಿಜಯಕುಮಾರ್ ಹಿರೇಮಠ್ ತುರುವಿಹಾಳ.

Related Articles

Leave a Reply

Your email address will not be published. Required fields are marked *

Back to top button