ಸುದ್ಧಿ

ಸಿಂಹದ ಮರಿ ಖರ್ಗೆ.ಕಲ್ಯಾಣ ಕರ್ನಾಟಕದ ಭರವಸೆಯ ನಾಯಕ.

ಸಿಂಹದ ಮರಿ ಖರ್ಗೆ. ಸಿಂಹದ ಮರಿಗೆ ಬೇಟೆಯಾಡುವುದನ್ನು ಮೀನಿನ ಮರಿಗೆ ಈಜುವು ದನ್ನು ಹಕ್ಕಿಯ ಮರಿಗೆ ಹಾರಾಡುವುದನ್ನು ಕಲಿಸಬೇಕಾಗಿಲ್ಲ ಇವುಗಳಿಗೆ ಸಹಜವಾಗಿಯೇ ನಿಸರ್ಗದತ್ತವಾಗಿಯೇ ದೇವರು ಕೊಟ್ಟ ವರಗಳಾಗಿವೆ. ಹಾಗೆ ಪ್ರಿಯಾಂಕ ಖರ್ಗೆಯವರು ಸಿಂಹದಮರಿಯಂತೆ ಇದ್ದಾರೆ ಅವರು ಲೋಕನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರರಾಗಿದ್ದಾರೆ ಆರು ದಶಕಗಳ ಕಾಲ ರಾಜಕೀಯ ಅನುಭವವಿರುವ ಡಾಕ್ಟರ್ ಮಲ್ಲಿಕಾರ್ಜುನ ಖರ್ಗೆ ಅವರ ಕರುಳ ಕುಡಿಯಾಗಿ ಅವರ ಮಾನಸ ಪುತ್ರರಾಗಿ ಅವರ ಗರಡಿಯ ಮನೆಯಲ್ಲಿ ಪಳಗಿದ್ದಾರೆ ಮತ್ತು ಬೆಳದಿದ್ದಾರೆ ಹೀಗಾಗಿ ಪ್ರಿಯಾಂಕ ಖರ್ಗೆ ಅವರಿಗೆ ರಾಜಕೀಯ ಪಟ್ಟು ವರಸೆ ಟ್ರಿಕ್ಕು ಕಲಿ ಸಿ ಕೊಡಬೇಕಾಗಿಲ್ಲ ಅವರಿಗೆ ರಕ್ತಗತವಾಗಿ ಸಹಜವಾಗಿ ಬದುಕಿನಲ್ಲಿ ಬಂದಿರುತ್ತದೆ ಅಪಾರವಾದ ರಾಜಕೀಯ ಅನುಭವವಿರುವ ಪರಿಸರದಲ್ಲಿ ಬೆಳೆದಿರುವುದರಿಂದ ಧೈರ್ಯ ಸಾಹಸ ಅವರಲ್ಲಿ ಮನೆ ಮಾಡಿಕೊಂಡಿದೆ ಪ್ರಿಯಾಂಕ ಒಬ್ಬ ಕಲ್ಯಾಣ ಕರ್ನಾಟಕದ ಭರವಸೆಯ ನಾಯಕರಾಗಿ ಬೆಳೆಯುತ್ತಿದ್ದಾರೆ ಮತ್ತು ಮುಂದೊಂದು ದಿನ ಅವರ ತಂದೆ ಸಾಧಿಸಲಾರದಷ್ಟು ಮುಂದೆ ಹೋಗಿ ಸಾಧನೆ ಮಾಡಿ ತಂದೆಗೆ ತಕ್ಕ ಮಗನಾಗಿ ಕರ್ನಾಟಕದ ಮುಖ್ಯಮಂತ್ರಿ ಆಗುವ ಎಲ್ಲಾ ಅರ್ಹತೆ ಮತ್ತು ಲಕ್ಷಣಗಳನ್ನು ಹೊಂದಿದ್ದಾರೆ ಹಿಂದಿನ ಕಾಲದಲ್ಲಿ ರಾಜಕುಮಾರರಿಗೆ 64 ವಿದ್ಯೆಗಳನ್ನು ಕಲಿಸಲಾಗುತ್ತಿದ್ದಂತೆ ಹಾಗೆ ಪ್ರಿಯಾಂಕ ಖರ್ಗೆ ಅವರಿಗೆ ಆಧುನಿಕ ಭಾರತದ ಸಂವಿಧಾನದತ್ತವಾದ ಎಲ್ಲ ವಿದ್ಯೆಗಳನ್ನು ಅವರು ಕಲಿತು ಕರಗತ ಮಾಡಿಕೊಂಡಿದ್ದಾರೆ ಅಷ್ಟೇ ಅಲ್ಲ ಯಾರಿಗೆ ಪ್ರಶ್ನಿಸಬೇಕು ಯಾರಿಗೆ ಉತ್ತರಿಸಬೇಕು ಹೇಗೆ ಪ್ರಶ್ನಿಸಬೇಕು ಹೇಗೆ ಉತ್ತರಿಸಬೇಕು ಇವೆಲ್ಲವೂ ಅವರು ಕಲಿತಿದ್ದಾರೆ ಎನ್ನುವುದಕ್ಕಿಂತ ಪಳ ಗಿದ್ದಾರೆ ಎಂದು ಹೇಳಬಹುದು ವಿದ್ಯಾರ್ಥಿ ಸಂಘಟನೆಯಿಂದ ಬಂದ ಅವರು ವಿದ್ಯಾರ್ಥಿ ಜೀವನದಲ್ಲಿಯೇ ನಾಯಕತ್ವವನ್ನು ಬೆಳೆಸಿಕೊಂಡವರು ಹೀಗಾಗಿ ಧೈರ್ಯದಿಂದ ಮಾತನಾಡುವ ಉತ್ತರಿಸುವ ಎದೆಗಾರಿಕೆ ಅವರಿಗಿದೆ ಮುಂದಿನ ಅವರ ರಾಜಕೀಯ ಜೀವನದಲ್ಲಿ ಶಾಸಕರಾದ ಮೇಲೆ ವಿಧಾನಸಭೆಯಲ್ಲಿ ಅದ್ಭುತವಾಗಿ ಮಾತನಾಡುವುದರ ಮೂಲಕ ದಾಖಲೆ ಸಹಿತ ಪತ್ರಿಕೆ ಗೋಸ್ಟಿಗಳನ್ನು ನಡೆಸುವುದರ ಮೂಲಕ ಅಧಿಕೃತವಾಗಿ ಮಾತನಾಡುವ ಕಾಂಗ್ರೆಸ್ ರಾಜ್ಯ ವಕ್ತಾರಂತೆ ಕಾಣಿಸಿಕೊಳ್ಳುತ್ತಿದ್ದಾರೆ ಆಧಾರದ ರೈತ ಹೇಳಿಕೆಗಳು ಅವಸರದ ಮಾತುಗಳು ಗಾಳಿಯಲ್ಲಿ ಗುಂಡು ಹೊಡೆಯುವುದು ಅವರು ಎಂದು ಮಾಡಲಿಲ್ಲ ಅಧಿಕೃತವಾಗಿ ಮಾತನಾಡುವುದನ್ನು ಸತ್ಯ ಹೇಳುವುದನ್ನು ಇದ್ದಕ್ಕಿದ್ದಂತೆ ವಿಷಯ ಪ್ರತಿಪಾದಿಸುವದನ್ನು ರೂಡಿಸಿಕೊಂಡಿದ್ದಾರೆ ಹೀಗಾಗಿ ಅವರನ್ನು ಎದುರಿಸುವುದು ಎದುರಾಳಿಗಳಿಗೆ ಕಷ್ಟವಾಗುತ್ತಿದೆ ಇತ್ತೀಚಿನ ದಿನಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಂತರ ಕಾಂಗ್ರೆಸ್ ಪರವಾಗಿ ಕರ್ನಾಟಕದಲ್ಲಿ ಧನಿಯೆತ್ತಿ ಮಾತನಾಡುವ ಏಕೈಕ ನಾಯಕರೆಂದರೆ ಪ್ರಿಯಾಂಕ ಖರ್ಗೆ ಎಂಬ ಹೆಸರಿಗೆ ಪಾತ್ರರಾಗಿದ್ದಾರೆ ಅವರ ಮಾತುಗಾರಿಕೆ ಛಲಗಾರಿಕೆ ಎದೆಗಾರಿಕೆ ನೋಡಿದ ಬಿಜೆಪಿ ಮತ್ತು ಆರ್ ಎಸ್ ಎಸ್ ನಾಯಕರ ಎದೆ ಡವಾಗುಟ್ಟುತ್ತಿದೆ ಇವರ ಶಕ್ತಿ ಸಾಮರ್ಥ್ಯ ನೋಡಿ ಹೇಗಾದರೂ ಮಾಡಿ ಈ ದಲಿತ ನಾಯಕನ ದಮನ ಮಾಡಬೇಕೆಂಬ ರಾಜಕೀಯ ಷಡ್ಯಂತ್ರದಿಂದ ಕುತಂತ್ರ ಮಾರ್ಗವನ್ನು ತು ಳಿಯುತ್ತಿದ್ದಾರೆ ಆದರೆ ಅವರು ಅಷ್ಟು ಸುಲಭವಾಗಿ ಬಗ್ಗಿ ಬೆಂಡಾಗುತ್ತಿಲ್ಲ ಅವರು ತುಳಿದಷ್ಟು ಸೆಟೆದು ನಿಲ್ಲುತ್ತಿದ್ದಾರೆ ನೆಲಕ್ಕೆ ಹೊಡೆದಷ್ಟು ಪ್ರಬಲ ಚಂಡಾಗಿ ತುಟಿದು ಮೇಲೆ ಹೇಳುತ್ತಿದ್ದಾರೆ ಬಿಜೆಪಿ ನಾಯಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸುತ್ತಿದ್ದಾರೆ ದಲಿತ ಶಕ್ತಿ ಅಥವಾ ಶೂದ್ರ ಶಕ್ತಿ ಎಂತಹ ದೆಂಬದನ್ನು ತೋರಿಸಿ ಕೊಡುತ್ತಿದ್ದಾರೆ ಅವರಲ್ಲಿ ಬ್ರಾಹ್ಮಣರ ಬುದ್ಧಿ ಇದೆ ಕ್ಷತ್ರಿಯರ ಧೈರ್ಯವಿದೆ ವೈಶರ ವ್ಯವಹಾರಿಕ ಗುಣವಿದೆ ಶೂದ್ರ ಸೇವಾ ಮನೋಭಾವ ಹಾಗೂ ಬಲಿಷ್ಠವಾದ ಶಕ್ತಿ ಇದೆ ಈ ಬಲಗಳ ಮುಂದೆ ಎದುರಾಳಿಗಳಎದೆ ನಡೂ ಗೆ ಹೋಗುತ್ತಿವೆ ಅವರನ್ನು ಕಲ್ಬುರ್ಗಿ ಜಿಲ್ಲೆಯಲ್ಲಿ ಅಷ್ಟೇ ಯಾಕೆ ಕಲ್ಯಾಣ ಕರ್ನಾಟಕದಲ್ಲಿ ಯಾವೊಬ್ಬ ಬಿಜೆಪಿ ನಾಯಕರು ಮುಖಂಡರು ಎದೆತಟ್ಟಿ ಧೈರ್ಯವಾಗಿ ಮಾತನಾಡುತ್ತಿಲ್ಲ ಹಿಂದಿನ ಬಾಗಿಲನಿಂದ ನುಸುಳುತ್ತಿದ್ದಾರೆ ಏನೇ ಮಾಡಿದರೂ ಹಿಂದೆ ನಿಂತು ಮಾಡುತ್ತಿದ್ದಾರೆ ಬೆಂಗಳೂರಿನಿಂದ ಬಾಡಿಗೆ ನಾಯಕರನ್ನು ಕರೆಸಿಕೊಂಡು ಪ್ರಿಯಾಂಕ ಅವರ ತೇಜೋ ವಧೆ ಮಾಡುತ್ತಿದ್ದಾರೆ ಎಂಬ ಆರೋಪ ಬರುತ್ತಿದೆ ಪ್ರಿಯಾಂಕ ಖರ್ಗೆ ಪ್ರಜಾಸತ್ತಾತ್ಮಕ ವ್ಯಕ್ತಿ ಅವರು ಹೇಳುವದಿಷ್ಟೇ ನಮ್ಮ ಕೆಲಸ ಕಾರ್ಯಗಳ ಬಗ್ಗೆ ಅಭಿವೃದ್ಧಿಪರ ಜನಪರ ಪ್ರಗತಿಪರ ಚಿಂತನೆಗಳ ಬಗ್ಗೆ ಟೀಕಿಸಿ ಅದಕ್ಕೆ ನನ್ನ ಸಮ್ಮತಿ ಇದೆ ಮತ್ತು ಅದನ್ನು ನಾನು ಮನಸ ಸ್ವೀಕರಿಸುತ್ತೇನೆ ಅದನ್ನು ಬಿಟ್ಟು ನಮ್ಮ ತಂದೆ ನಮ್ಮ ಸೋದರರು ನಮ್ಮ ಸೋದರ ಮಾವ ನನಗೆ ವೈಯಕ್ತಿಕವಾಗಿ ಟೀಕಿಸುತ್ತಿರುವುದು ಸರಿಯಲ್ಲ ನನ್ನನ್ನ ನಾಯಿ ಎಂದು ನಾರಾಯಣಸ್ವಾಮಿ ಕರೆದಿರುವುದು ನನಗೂ ನನ್ನ ಅಭಿಮಾನಿಗಳಿಗೂ ನೋವಾಗಿದೆ ಹೀಗಾಗಿ ನಾರಾಯಣಸ್ವಾಮಿ ಚೆಲುವಾದಿ ಅವರನ್ನು ನಮ್ಮ ಜನ ದಿಗ್ಬಂಧನ ಗೊಳಿಸಿದ್ದಾರೆ ಎಂದು ಅವರು ಹೇಳಿರುವ ಮಾತಿನಲ್ಲಿ ಅರ್ಥವಿದೆ ಆಳುವ ಪಕ್ಷಕ್ಕೆ ಕೇಳುವ ಪಕ್ಷ ಇರಬೇಕು ನಿಜ ಆದರೆ ತೇಜೋವಧೆ ಮಾಡುವ ಪಕ್ಷವಾಗಬಾರದು ಚಲವಾದಿ ನಾರಾಯಣಸ್ವಾಮಿಯವರಿಗೆ ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಹಿರಿಯ ನಾಯಕರಾದ ಯಡಿಯೂರಪ್ಪನವರು ವೈಯಕ್ತಿಕವಾಗಿ ಯಾರನ್ನು ಟೀಕಿಸಬೇಡಿ ಹಾಗೆ ನಾಯಿ ಬೆಕ್ಕು ಎಂದು ಮಾತನಾಡುವುದು ಸರಿಯಲ್ಲ ಎಂದು ನಾರಾಯಣಸ್ವಾಮಿಗೆ ಕಿವಿ ಹಿಡಿದು ಬುದ್ಧಿ ಹೇಳಿದ್ದಾರೆ ಆದರೂ ಅವರು ತಮ್ಮ ವಾದವನ್ನು ಮಂಡಿಸಿ ಮತ್ತೆ ಅದೇ ದಾರಿಯಲ್ಲಿ ನಡೆಯುತ್ತಿರುವುದು ನೋಡುಗರಿಗೆ ಸರಿ ಕಾಣುತ್ತಿಲ್ಲ ಇಲ್ಲಿ ಮಹತ್ವದ ಸಂಗತಿ ಎಂದರೆ ಪ್ರಿಯಾಂಕ ಖರ್ಗೆಯವರ ಬಗ್ಗೆ ಅವಹೇಳನಕಾರಿ ಮಾತನಾಡಿರುವುದನ್ನು ಕಲಬುರ್ಗಿಯ ಜನ ಸಹಿಸಿಕೊಳ್ಳುತ್ತಿಲ್ಲ ಹೀಗಾಗಿ ಬಿಜೆಪಿ ವಿರುದ್ಧ ಸಿಡಿದೆದ್ದಿದ್ದಾರೆ ಈ ವಿಷಯದಲ್ಲಿ ಅನಾವಶ್ಯಕವಾಗಿ ಛಲವಾದಿ ನಾರಾಯಣ ಸ್ವಾಮಿಯವರಿಗೆ ಪ್ರಚಾರ ಕೊಟ್ಟಂತಾಗಿದೆ ಪ್ರಿಯಾಂಕ ಖರ್ಗೆ ಅವರನ್ನು ಬೈದು ಟೀಕಿಸಿ ದೊಡ್ಡವರಾಗಲು ಹೊರಟಿದ್ದಾರೆ ಈ ದೇಶದಲ್ಲಿ ವಿಚಿತ್ರವಾದ ಸಂಗತಿಗಳಿವೆ ಒಬ್ಬ ಸಾಮಾನ್ಯ ಲಿಂಗಾಯಿತ ದೊಡ್ಡ ಲಿಂಗಾಯಿತ ನನ್ನು ಬೈದು ಬದುಕಬಹುದು ಒಬ್ಬ ಸಾಮಾನ್ಯ ಮುಸ್ಲಿಂ ದೊಡ್ಡ ಮುಸ್ಲಿಮನನ್ನು ಬೈದು ಬದುಕಬಹುದು ಒಬ್ಬ ಸಾಮಾನ್ಯ ದಲಿತ ಬಹುದೊಡ್ಡ ದಲಿತ ನನ್ನು ಬೈದು ಟೀಕಿಸಿ ಬದುಕಬಹುದು ಈ ತಂತ್ರಗಾರಿಕೆಯನ್ನು ತಿಳಿದ ಬಿಜೆಪಿ ಪ್ರಿಯಾಂಕ ಖರ್ಗೆಯವರನ್ನು ಬಯ್ಯುವುದಕ್ಕಾಗಿಯೇ ಟೀಕಿಸುವುದಕ್ಕಾಗಿಯೇ ಚಲವಾದಿ ನಾರಾಯಣ ಸ್ವಾಮಿಯನ್ನು ಎಂಎಲ್ಸಿ ಮಾಡಿ ವಿರೋಧಪಕ್ಷದ ನಾಯಕ ಪಟ್ಟ ಕಟ್ಟಿರುವುದು ಎಂದು ಹೇಳಲಾಗುತ್ತಿದೆ ಅವರ ಕೆಲಸವೆಂದರೆ ಕೇವಲ ಖರ್ಗೆ ಕುಟುಂಬವನ್ನು ಟೀಕಿಸುವುದು ಎಂದು ಹೇಳಲಾಗುತ್ತಿದೆ ತಾತ್ವಿಕ ಸೈದ್ಧಾಂತಿಕ ನಿಲುವಿನ ಮೇಲೆ ಟೀಕಿಸಬೇಕು ವೈಯುಕ್ತಿಕ ಟೀಕೆ ಮಾಡುವುದನ್ನು ಬಿಡಬೇಕು ಎಂದು ಚರ್ಚೆ ನಡೆಯುತ್ತಿದೆ ಅವರನ್ನು ಟೀಕಿಸುವುದು ಬಿಡಬೇಕು ನಾರಾಯಣಸ್ವಾಮಿಯವರು ಏನಾದರೂ ಸೈದ್ಧಾಂತಿಕ ರಾಜಕಾರಣ ಮಾಡಬೇಕು ಎಂದು ಬುದ್ಧಿವಾದ ಹೇಳಲಾಗುತ್ತಿದೆ ಅವರಿಗೆ ದಿಗ್ಬಂದನ ಹಾಕುವುದು ಮತ್ತು ಅವರ ಮೇಲೆ ದೂರು ನೀಡುವುದರಿಂದ ನಾರಾಯಣಸ್ವಾಮಿ ಮತ್ತಷ್ಟು ದೊಡ್ಡವರಾಗುತ್ತಿದ್ದಾರೆ ಇದಕ್ಕೆ ಖ್ಯಾತಿಯನ್ನ ಬೇಕು ಕುಖ್ಯಾತಿ ಎನ್ನಬೇಕು ತಿಳಿಯದು. ಇದು ಪ್ರಖ್ಯಾತಿಯಂತೂ ಅಲ್ಲವೇ ಅಲ್ಲ ಒಟ್ಟಿನಲ್ಲಿ ಪ್ರಿಯಾಂಕ ಖರ್ಗೆ ಹೀರೋ ಆದರೆ ನಾರಾಯಣಸ್ವಾಮಿ ಖಳನಾಯಕರಂತೆ ಕಾಣುತ್ತಿದ್ದಾರೆ ಕಲ್ಬುರ್ಗಿ ಜನ ಅವರನ್ನು ತೀವ್ರವಾಗಿ ವಿರೋಧಿಸುತ್ತಿದ್ದಾರೆ ಹೀಗಾಗಿ 31 ಮೇ 2025 ರಂದು ನಾಗರಿಕ ಕ್ರಿಯಾ ಸಮಿತಿಯ ಹೆಸರಿನಲ್ಲಿ ಬಹುದೊಡ್ಡ ಪ್ರಮಾಣದ ದಲಿತ ಶಕ್ತಿ ಪ್ರದರ್ಶನ ವಾಗುವ ಸಾಧ್ಯತೆ ಇದೆ ಬಿಜೆಪಿಗೆ ಮತ್ತು ನಾರಾಯಣ ಸ್ವಾಮಿಗೆ ಉತ್ತರಿಸುವ ಕೆಲಸ ಅಂದು ನಡೆಯುತ್ತಿದೆ ಈ ಮುಂಚೆ ಬಿಜೆಪಿಯ ಬೆಂಗಳೂರಿನ ಎಲ್ಲ ನಾಯಕರು ಕಲಬುರ್ಗಿಗೆ ಬಂದು ಒಂದು ಪಾಯಿಂಟ ಪ್ರೋಗ್ರಾಮ್ ಪ್ರಿಯಾಂಕ ಖರ್ಗೆ ಅವರನ್ನು ಟೀಕಿಸುವುದು ಮನ ಬಂದಂತೆ ಮಾತನಾಡುವುದು ಅವರನ್ನು ಅವಹೇಳನಕಾರಿಯಾಗಿ ವೇದಿಕೆ ಮೇಲೆ ಜರೆಯುವ ಕೆಲಸ ಬಿಜೆಪಿ ಮುಖಂಡರು ವ್ಯವಸ್ಥಿತವಾಗಿ ಮಾಡಿ ಹೋಗಿದ್ದಾರೆ ಇದರಿಂದ ಏನೂ ಪ್ರಯೋಜನವಾಗಲಿಲ್ಲ ಬದಲಿಗೆ ಅವರ ನಾಲಿಗೆ ಅವರು ಬೆಳೆದ ಪರಿಸರ ಏನೆಂಬುದು ಎಲ್ಲರಿಗೂ ತಿಳಿಯಿತು ಇದು ಆರೋಗ್ಯಕರವಾದ ಬೆಳವಣಿಗೆಯಲ್ಲ ಪ್ರಜಾಪ್ರಭುತ್ವಕ್ಕೆ ಮಾರಕ ಪ್ರಿಯಾಂಕ ಅವರು ಮೋದಿ ಅವರನ್ನು ಟೀಕಿಸುವುದು ತಪ್ಪು ಎಂದು ಹೇಳುವ ಮೂಲಕ ಪೇಚಿಗೆ ಸಿಕ್ಕಿಕೊಂಡಿದ್ದಾರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಯಾರನ್ನು ಬೇಕಾದರೂ ಟೀಕಿಸಬಹುದು ಇದು ವಾಕ್ ಸ್ವಾತಂತ್ರ್ಯ ಸಂವಿಧಾನದತ್ತವಾದ ಸ್ವಾತಂತ್ರ್ಯ ವನ್ನು ಯಾರೂ ಕಸಿದುಕೊಳ್ಳುವಂತಿಲ್ಲ ಹೀಗೆ ಮಾತನಾಡುವುದನ್ನು ಸರಿಯಲ್ಲ ಹೇಳುವುದರ ಹಿಂದೆ ಪಟ್ಟಭದ್ರ ಹಿತಾಸಕ್ತಿತನ ಅಡಗಿದೆ ಹಿಂದೆ ಶ್ರೀ ರಾಮನಿಗೆ ರಾಮ ರಾಜ್ಯದಲ್ಲಿ ಒಬ್ಬ ಸಾಮಾನ್ಯ ಪ್ರಜೆಯಾಗಿದ್ದ ಅಗಸ ರಾಮನ ಕಾರ್ಯವನ್ನು ಟೀಕಿಸಿದ ರಾಜಪ್ರಭುತ್ವದಲ್ಲಿಯೇ ವಾಸಿಸುತಿರುವಾಗ ಹೀಗೆ ಧೈರ್ಯವಾಗಿ ಪ್ರಜೆಗಳು ರಾಜನನ್ನು ಟೀಕಿಸಿದ ಮೇಲೆ ಇನ್ನು ಪ್ರಜಾಪ್ರಭುತ್ವದಲ್ಲಿ ಟೀಸಬೇಡವೆಂದರೆ ಹೇಗೆ? ಇದು ಬಿಜೆಪಿ ನಾಯಕರ ಸರ್ವಾಧಿಕಾರಿ ಧೋರಣೆಯನ್ನು ತೋರಿಸುತ್ತದೆ ಒಟ್ಟಾರೆ ಪ್ರಿಯಾಂಕ ಖರ್ಗೆ ಅವರ ಬೆಳವಣಿಗೆ ಅವರ ಕಲ್ಯಾಣ ಪಥ ಮತ್ತು ಜನಪದ ಕೆಕೆಆರ್ಡಿಬಿ ಪ್ರಗತಿಪರ ಕಾರ್ಯಗಳು ಕಲ್ಬುರ್ಗಿ ಸಮಗ್ರ ಸುಧಾರಣೆ ಪ್ರಗತಿ ಬದಲಾವಣೆ ಸಹಿಸಿಕೊಳ್ಳಲಾರದೆ ಬಿಜೆಪಿಯವರು ಟೀಕಿಸುತ್ತಿರುವುದು ಸರಿಯಲ್ಲ ಎಂದು ಹೇಳಲಾಗುತ್ತಿದೆ ಇಂದಿನ ಎಲ್ಲ ಬೆಳವಣಿಗೆಗಳನ್ನು ಗಮನಿಸಿದರೆ ಪ್ರಿಯಾಂಕ ಖರ್ಗೆ ಅತ್ಯಂತ ಸ್ವಾಭಿಮಾನಿ ಸಮರ್ಥ ದಕ್ಷ ಮತ್ತು ಮೌಲಿಕ ರಾಜಕಾರಣಿಯಾಗಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಅಪ್ಪಟ ಅನುಯಾಯಿಯಾಗಿ ಬೆಳೆಯುತ್ತಿದ್ದಾರೆ ಅವರ ಬೆಳವಣಿಗೆ ಸಹಿಸಲಾರದೆ ಅವರನ್ನು ನಾಯಿ ಎಂದು ಬೊಗಳಿದರೆ ಯಾವ ವ್ಯತ್ಯಾಸವು ಆಗಲಾರದು ಅವರು ತಮ್ಮ ಗಂಭೀರವಾದ ನಡೆಯಲ್ಲಿ ನಡೆದು ಆನೆಯಂತೆ ತಮ್ಮ ರಾಜಕೀಯ ಹೆಜ್ಜೆಗಳ ಮೂಡಿಸಲಿದ್ದಾರೆ ಅವರನ್ನು ಎದುರಿಸಲಾಗದ ಕೆಲವು ಹೇ ಡಿಗಳು ಬಿಜೆಪಿಯ ರಣಹೇಡಿಗಳನ್ನು ಮುಂದಿರಿಸಿಕೊಂಡು ಅವರ ವೈಯುಕ್ತಿಕವಾದ ತೇಜೋವಧೆ ಮಾಡುತ್ತಿರುವುದು ಸರಿಯಲ್ಲ ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ಬಿಜೆಪಿಯವರು ಕಲಬುರ್ಗಿಯಲ್ಲಿ ಅಡ್ಡಾಡುವುದು ಕಷ್ಟ ಎಂದು ಪ್ರಿಯಾಂಕ ಖರ್ಗೆ ಎಚ್ಚರಿಕೆ ನೀಡುವುದರಲ್ಲಿ ಅರ್ಥವಿದೆ ಈಗಲಾದರೂ ಬಿಜೆಪಿ ನಾಯಕರು ವೈಯಕ್ತಿಕ ದ್ವೇಷವನ್ನು ಮರೆತು ಸಾರ್ವಜನಿಕ ಹಿತಾಸಕ್ತಿಗಾಗಿ ತಮ್ಮ ವಿರೋಧ ಪಕ್ಷದ ಸೈದ್ಧಾಂತಿಕ ನಿಲ ವುಗಳನ್ನು ಪ್ರಕಟಿಸಿ ಅವುಗಳನ್ನು ಮುಂದಿರಿಸಿಕೊಂಡು ಹೋರಾಟ ಮಾಡಬೇಕು ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಈ ಪ್ರದೇಶವನ್ನು ಅಲಕ್ಷಿಸಿದರು ಎಂಬುದು ನಾವು ಮರೆಯುವಂತಿಲ್ಲ ಕಲ್ಯಾಣ ಕರ್ನಾಟಕ ಪ್ರವೇಶಕ್ಕೆ ಬಿಜೆಪಿ ಪಕ್ಷ ಅಧಿಕಾರದಲ್ಲಿ ದಾಗ ಅಭಿವೃದ್ಧಿಪಡಿಸುವುದಿರಲಿ ಜಿಲ್ಲೆಗೊಬ್ಬ ಮಂತ್ರಿಯನ್ನು ಮಾಡಲಿಲ್ಲ ಹೀಗಾಗಿ ಬಾಗಲಕೋಟೆ ಬಿಜಾಪುರ ಬೆಳಗಾವಿಯಿಂದ ಬಂದವರು ಇಲ್ಲಿ ಜಿಲ್ಲಾ ಉಸ್ತುವಾರಿಗಳಾದರೆ ವಿನಃ ಕಾಂಗ್ರೆಸ್ ಸರ್ಕಾರ ಇಲ್ಲಿಯ ಮನೆಯ ಮಗನಿಗೆ ಮನೆಯ ಮಗನಿಗೆ ಮಂತ್ರಿ ಸ್ಥಾನ ನೀಡಲಿಲ್ಲ: ಜಿಲ್ಲಾ ಉಸ್ತುವಾಸ್ತುವಾರಿಯನ್ನಾಗಿ ಮಾಡಲಿಲ್ಲ ಈಗ ಇವರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಿದ್ದು ಅದರಲ್ಲಿ ಇವರು ದಲಿತ ಸಮುದಾಯಕ್ಕೆ ಸೇರಿದ್ದು ಬಿಜೆಪಿ ಮತ್ತು ಆರೆಸ್ಸೆಸ್ ಸಿಗರಿಗೆ ನುಂಗಲಾರದ ತುತ್ತಾಗಿದೆ ಇದನ್ನು ಅರುಗಿಸಿಕೊಳ್ಳಲಾರದ ಬಿಜೆಪಿ ಅನಾವಶ್ಯಕವಾಗಿ ಆರೋಪದಲ್ಲಿ ತೊಡಗಿ ಪ್ರಿಯಾಂಕ ಖರ್ಗೆ ಅವರಿಗೆ ವಿನಾಕಾರಣ ತೊಂದರೆ ಕೊಡುತ್ತಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಾ ಇದಕ್ಕೆ ತಕ್ಕ ಉತ್ತರ ಮುಂದಿನ ಚುನಾವಣೆಗಳಲ್ಲಿ ಸಿಗುತ್ತದೆ ಎಂಬುದು ಕಾಂಗ್ರೆಸ್ ನಾಯಕರ ಹೇಳಿಕೆಯಾಗಿದೆ. ಪ್ರೊಫೆಸರ್ ಶಿವರಾಜ್ ಪಾಟೀಲ್ ರಾಜಕೀಯ ಚಿಂತಕರು ಕಲ್ಬುರ್ಗಿ

Related Articles

Leave a Reply

Your email address will not be published. Required fields are marked *

Back to top button