ಸಿಪಿಐಎಂ ಪಕ್ಷದ ನೇತೃತ್ವದಲ್ಲಿ ಪಟ್ಟಣ ಪಂಚಾಯತ್ ಮುಂದೆ ಧರಣಿ

ಸಿಪಿಐಎಂ ಪಕ್ಷದ ನೇತೃತ್ವದಲ್ಲಿ ಪಟ್ಟಣ ಪಂಚಾಯತ್ ಮುಂದೆ ಧರಣಿ
ನಿತ್ಯ ದಿನಗೂಲಿಕಾರರ ಸಮಸ್ಯೆಗೆ ಸ್ಪಂದಿಸಬೇಕಾದ ಅಧಿಕಾರಿಗಳು ಮಾಯ
ಇಲ್ಲಿನ ಸರ್ವಸಾಮಾನ್ಯರ ಸಮಸ್ಯೆ ಕೇಳುವರ್ಯಾರಯ್ಯ
ತುರ್ವಿಹಾಳ:-ಇಲ್ಲಿನ ಪಪಂ ಕಚೇರಿ ಮುಂದೆ ಸೇರಿದ ಪಕ್ಷದ ಮುಖಂಡರು,ನಿವಾಸಿಗಳ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಘೋಷಣೆ ಕೂಗಿದರು. ಈ ವೇಳೆ ಮಾತನಾಡಿದ ಸಿಪಿಐಎಂ ಜಿಲ್ಲಾ ಸಂಚಾಲಕ ಬಸವಂತರಾಯಗೌಡ, ಪಟ್ಟಣದ ವಾರ್ಡ ನಂ.10ರ ಸೂಗಪ್ಪನ ಹೊಲದಲ್ಲಿನ ನಿವಾಸಿಗಳಿಗೆ ಪಟ್ಟಾ (ಹಕ್ಕು ಪತ್ರ) ನಿಡುವಂತೆ ಹಾಗೂ ವಾರ್ಡ ನಂ.11ರಲ್ಲಿನ ಲೇಔಟ್‌ನಲ್ಲಿ ಶೌಚಾಲಯ, ಚರಂಡಿ, ಮುಖ್ಯ ರಸ್ತೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸಬೇಕು ಎಂದು ಒತ್ತಾಯಿಸಿದರು.
ಪಟ್ಟಣದ ವಾರ್ಡ್ ನಂ.10ರಲ್ಲಿ ಕಳೆದ 20 ವರ್ಷದಿಂದ ವಾಸ ಮಾಡುತ್ತಿದ್ದ ಬಡ ಮತ್ತು ಕೂಲಿ ಕಾರ್ಮಿಕ ಜನರಿಗೆ ಹಕ್ಕು ಪತ್ರ (ಪಟ್ಟಾ) ವಿತರಣೆ ಮಾಡ ಬೇಕಾದ ಸರ್ಕಾರ ಅಲ್ಲಿರುವ ಅರ್ಹ ಫಲಾನುಭವಿಗಳ ತೆರವಿಗೆ ಏಕಾಏಕಿ ಮುಂದಾಗಿರುವುದನ್ನು ಖಂಡಿಸಿ ಸಿಪಿಐಎಂ ಪಕ್ಷದ ನೇತೃತ್ವದಲ್ಲಿ ಪಟ್ಟಣ ಪಂಚಾಯತ್ ಮುಂದೆ ಧರಣಿ ನಡೆಸಲಾಯಿತು.
ಈಗಾಗಲೇ ಅರ್ಹ ಫಲಾನುಭವಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಅಧ್ಯಕ್ಷರು ಮತ್ತು ಮುಖ್ಯಾಧಿಕಾರಿಗಳು ಈ ಪಟ್ಟಿ ಪರಿಶೀಲಿಸಿ ಅವರಿಗೆ ಪಟ್ಟಾ (ಹಕ್ಕುಪತ್ರ) ನೀಡಬೇಕು ಹಾಗೂ ವಾರ್ಡ ನಂ 11 ಅರ್ಹ ಲೇ-ಔಟ್ ಆಗಿದ್ದು, ಅದರಲ್ಲಿ ಈಗಾಗಲೇ 180 ಕುಟುಂಬಗಳು ವಾಸಮಾಡುತ್ತಿದ್ದೆ ಆ ಲೇಔಟ್ ಗೆ ಮುಖ್ಯ ರಸ್ತೆ ಸಂಪರ್ಕ ಇಲ್ಲ ಮುಖ್ಯ ರಸ್ತೆಗೆ ಬರಲು ನಿವಾಸಿಗಳು ತೊಂದರೆ ಅನುಭವಿಸುವಂತಾಗಿದೆ. ಅಧಿಕಾರಿಗಳು ಕೂಡಲೇ ಲೇಔಟ್‌ಗೆ ಮುಖ್ಯ ರಸ್ತೆ ಕಲ್ಪಿಸಬೇಕು, ಚರಂಡಿ ನೀರು ಮುಂದೆ ಸಾಗಲು ಯಾವುದೇ ವ್ಯವಸ್ಥೆ ಇರುವುದಿಲ್ಲ. ಇದನ್ನು ಪರಿಶೀಲಿಸಿ ಲೇಔಟ್ ನಲ್ಲಿರುವ ಚರಂಡಿ ನೀರು ಮುಂದೆ ಸಾಗುವಂತೆ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.
ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ಅನ್ವರ್‌ಪಾಷಾ ಮಾತನಾಡಿ, ಈ ಸಮಸ್ಯೆಗೆ ಅಧಿಕಾರಿಗಳು ಮುಖ್ಯಾಧಿಕಾರಿಗಳು, ತಹಸೀಲ್ದಾರರು ಕಿವಿಗೊಡದಂತೆ ಕುಳಿತಿರುವುದು ವಿಪರ್ಯಾಸ ಸಂಗತಿಯಾಗಿದೆ. ನಿತ್ಯ ನಾವೆಲ್ಲರೂ ದಿನಗೂಲಿಯನ್ನು ಬಿಟ್ಟ ಸರ್ಕಾರಿ ಕಚೇರಿಗಳಿಗೆ ಅಲಿದಾಡುವಂತಾಗಿದೆ. ನಮ್ಮ ಸಮಸ್ಯೆಗೆ ಸ್ಪಂದಿಸಬೇಕಾದ ಅಧಿಕಾರಿಗಳು ಮಾಯವಾಗಿದ್ದಾರೆ.
ನಾವು ಕೇಳುತ್ತಿರುವುದು ಯಾರಪ್ಪನ ಆಸ್ತಿಯಲ್ಲ, ನಮಗೆ ನಮ್ಮ ಹಕ್ಕು ಪತ್ರ ಬೇಕು. ಇಲ್ಲದಿದ್ದಲ್ಲಿ ನಾವು ಉಗ್ರ ಹೋರಾಟವನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಧರಣಿಯಲ್ಲಿ ಮುಖಂಡರಾದ ಮುನಿಸ್ವಾಮಿ ಕಟ್ಟಿಮನಿ, ಎಂ. ಗೋಪಾಲ ಕೃಷ್ಣ ಜನವಾದಿ ಘಟಕದ ಅಧ್ಯಕ್ಷೆ ಗಿರಿಜಾ ಕಿಲ್ಲೆಡ್, ಯಂಕಪ್ಪ ಕೆಂಗಲ್, ಹೊನ್ನುರಪ್ಪ ಕುಂಬಾರ, ಭಂಡಾರೇಪ್ಪಮಳ್ಳಿ, ವಿರೇಶ ನಾಯಕ್, ಹನುಮಂತ ಕಾರ್ಯದರ್ಶಿಗಳಾದ ಇಬ್ರಾಹಿಂ ಸಾಬ್, ಮರಿಯಪ್ಪ ಕುಂಬಾರ, ವಿರೇಶ ಚೆಂಚರ ನಾಗರತ್ನ ನಾಯಕಿ ಮೌಲಾಸಾಬ್, ನೂರಾರು ಮಹಿಳೆಯರು ಇದ್ದರು.






