ಸುದ್ಧಿ

ಹದಗೆಟ್ಟಿರುವ ಬೀದರ್ ಬೆಂಗಳೂರು ರಾಜ್ಯ ಹೆದ್ದಾರಿ. ರಸ್ತೆ ಅಪಘಾತದಲ್ಲಿ ದೇವಪುರ ಗ್ರಾಮದ 4 ಜನ ದುರ್ಮರಣ

ಬೆಂಗಳೂರು ಬೀದರ್ ರಸ್ತೆ ಇನ್ನಿ ಲ್ಲದಂತೆ ಕೆಟ್ಟಿದ್ದು ಜನ ಈ ರಸ್ತೆಯಲ್ಲಿ ವಾಹನ ಓಡಿಸಲು ಹೆದರುತ್ತಿದ್ದಾರೆ. ವಾಹನ ಸವಾರರಿಗೆ ಜೀವ ಬಾಯಿಗೆ ಬಂದಂಥಗುತ್ತಿದೆ ರಾಜಕಾರಣಿಗಳು ಅಧಿಕಾರಿಗಳು ಏನು ಮಾಡ್ತಾ ಇದ್ದರೋ ತಿಳಿಯದಾಗಿದೆ. ಸರ್ಕಾರ ಕಣ್ಣಿದ್ದೂ ಕುರುಡು ಆಗಿದೆ ಇಂತಹ ಅದೆಷ್ಟು ಬಲಿಯಾದ ನಂತರ ಅಧಿಕಾರಿಗಳು ಎಚೇತ್ತುಕೊಳ್ಳುತ್ತಾರೋ ತಿಳಿಯದಾಗಿದೆ ?? ಎಷ್ಟು ಜನ ಕೈ ಕಾಲು ಮುರಿದುಕೊಂಡು ಮೂಲೆಗುಂಪಾಗಬೇಕು?? ಇಲ್ಲಿ ಸತ್ತವರೆಲ್ಲ ಕಡು ಬಡವರು, ಮಧ್ಯಮ ವರ್ಗದವರು… ಸಂಬಂಧಿಸಿದ ಅಧಿಕಾರಿಗಳಿಗೆ ದಯವಿಟ್ಟು ಮನವಿ ಮಾಡ್ತೇವೆ ರಸ್ತೆಯ ಪಕ್ಕದಲ್ಲಿ ತಾತ್ಕಾಲಿಕ ಮಣ್ಣು ತುಂಬಿರಿ ಮತ್ತು ರಸ್ತೆಯ ಮಧ್ಯದಲ್ಲಿ (ಪ್ಯಾಚ್ ವರ್ಕ್) ಡಾಂಬರೀಕರಣ ಮಾಡುವಂತೆ ಸಾರ್ವಜನಿಕರ ಮನವಿ

ಸುರಪುರದಿಂದ ದೇವಪೂರಕ್ಕೆ ಸಾರ್ವಜನಿಕರನ್ನು ಕರೆದುಕೊಂಡು ಬರುತ್ತಿದ್ದ ೩ ಚಕ್ರದ ಆಟೋ. ಈ ಆಟೋ ಪ್ರತಿ ನಿತ್ಯ ದೇವಪುರದಿಂದ ಸುರಪೂರಕ್ಕೆ –
ಸೂರಪುರದಿಂದ ದೇವಪುರಕ್ಕೇ ಪ್ಯಾಸೆಂಜರ್ ಕರೆದುಕೊಂಡು ಬರುತ್ತಿದ್ದ ವಾಹನ. ಆಟೋ ಚಾಲಕ ಮತ್ತು ಮಾಲೀಕರಾದ ಬುಡ್ಡಪ್ಪ ತಂದೆ ನಂದಪ್ಪ ತಳವಾರ್. ಸುರಪುರದಿಂದ ಬರುವ ಮಾರ್ಗ ಮಧ್ಯೆ ಶೆಳ್ಳಗಿ ಕ್ರಾಸ್ ದಾಟಿದ ನಂತರ ಕ್ರೂಷರ್ ವಾಹನ ರಭಸವಾಗಿ ಬಂದು ಗುದ್ದಿದ ಪರಿಣಾಮ ಚಾಲಕ ಮತ್ತು ದೇವಪ್ಪ ಚಿಂಚೋಡಿ ಅನ್ನುವವರು ಸ್ಥಳದಲ್ಲೇ ಮರಣ ಹೊಂದಿದರು. ಉಳಿದ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು ಇದರಲ್ಲಿ ಸಾವು ಬದುಕಿನ ಮದ್ದೆ ಹೊರಡುತ್ತಿದ್ದ ರಾಚಯ್ಯ ಸ್ವಾಮಿ ಮತ್ತು ಮಾನಪ್ಪ ಕಬ್ಬೇರ್ ಎನ್ನುವವರನ್ನು ಹೆಚ್ಚಿನ ಚಿಕಿತ್ಸೆಗೆ ಕಲಬುರ್ಗಿ ಗೆ ಕರೆದುಕೊಂಡು ಹೋಗುವಾಗ ಮಾರ್ಗ ಮದ್ಯದಲ್ಲಿ ಅಸುನೀಗಿದ್ದಾರೆ. ದೇವಪುರ ಗ್ರಾಮದ ಒಟ್ಟು 4 ಜನ ಅಸುನಿಗಿದ್ದಾರೆ, ಇನ್ನುಳಿದ ಕೆಲವರು ಯಾದಗಿರಿ ಮತ್ತು ಸುರಪುರದ ಸರಕಾರಿ ಆಸ್ಪತ್ರೆಯಲ್ಲಿ ಇದ್ದಾರೆ.

Related Articles

Leave a Reply

Your email address will not be published. Required fields are marked *

Back to top button