ಹನಿ ನೆಕ್ಕಲು ಆಸೆ ಪಡದಿದ್ದರೆ ಟ್ರ್ಯಾಪ್ ಯಾಕೆ ಆಗುತ್ತದೆ?

ಹನಿ ನೆಕ್ಕಲು ಆಸೆ ಪಡದಿದ್ದರೆ ಟ್ರ್ಯಾಪ್ ಯಾಕೆ ಆಗುತ್ತದೆ?
ಸದಾಕಾಲ ಹನಿ ನೆಕ್ಕಲು ಹಾತೋರೆಯುವವರು, ಕಳ್ಳ ಬೆಕ್ಕಿನಂತೆ ಹನಿಗಾಗಿಯೇ ಹಪಾಹಪಿಸುವವರು ಹನಿಟ್ರ್ಯಾಪಗೆ ಬಿಳುವುದು ಯಾವುದೇ ಸಂಶಯ ಇಲ್ಲ.
ಈ ದೇಶದ ಕೇಂದ್ರ ಮತ್ತು ರಾಜ್ಯಗಳಲ್ಲಿ ಬಹುತೇಕ ರಾಜಕಾರಣಿಗಳು ಹನಿ ನೆಕ್ಕುವುದರಲ್ಲಿ ನಿಸ್ಸಿಮರಾಗಿದ್ದಾರೆ ಇತಿಹಾಸ ಪುಟ ತೆರೆದರೆ, ಹನಿ ನೆಕ್ಕುವ ರಾಜಕಾರಣಿಗಳದ್ದೇ ಮೇಲುಗೈ. ಮಧುರೆ ಮಾನಿನಿ ಮತ್ತು ರಾಜಕಾರಣಿ ಅವಿನಾಭಾವ ಸಂಬಂಧವಿದೆ. ಇವುಗಳ ಬಗ್ಗೆ ಸವಿಸ್ತಾರವಾಗಿ ಸಾರ್ವಜನಿಕವಾಗಿ ಮಾತನಾಡಿದವರೆಂದರೆ ಜೆ ಹೆಚ್. ಪಟೇಲ್ರು. ಅವರ ಆಡಳಿತ ಕಾಲದಲ್ಲಿ ಮುದ್ದುಮುಖದ ಎಳೆನಿಂಬೆಕಾಯಿಯಂತೆ ಇದ್ದ ಸುರಸುಂದರಿ ಕನ್ನಡ ಚಿತ್ರ ಜಗತ್ತಿನಲ್ಲಿ ಮುಂದೊಂದು ದಿನ ಪ್ರಖ್ಯಾತ ನಟಿಯಾಗುವ ಎಲ್ಲಾ ಭರವಸೆಗಳನ್ನು ಹೊಂದಿದ್ದ ನಿವೇದಿತಾ ಜೈನ್ ಇದ್ದಕ್ಕಿದ್ದಂತೆ ಮರಣಿಸಿದ್ದು ಯಾಕೆ?
2) ರಾಜಕಾರಣದಲ್ಲಿ ಮಿಂಚಬೇಕೆಂಬ ಒಂದೇ ಉದ್ದೇಶದಿಂದ ತನ್ನದೆಲ್ಲವನ್ನು ಬಿಚ್ಚಿ ನಿಂತ ನಟಿಯೊಬ್ಬಳು ವಿಧಾನ ಪರಿಷತ್ ಸದಸ್ಯೆಯಾಗಿ ಮತ್ತು ಸಚಿವೆಯಾಗಿ ಮಿಂಚಲು ಇದೆ ಹನಿಯೇ ಕಾರಣ. ತನ್ನ ಆಸೆ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ತನ್ನದೆಲ್ಲವನ್ನು ಬಿಚ್ಚಿದಳು ಅಷ್ಟೇ ಅಲ್ಲದೇ ತನ್ನ ಮಗಳದ್ದನ್ನೂ ಸಹ ಬಿಚ್ಚಿಸಿ ತಾನು ಅಧಿಕಾರ ಅನುಭವಿಸಿದಳು , ಸಧ್ಯ ಮೂಲೆಗುಂಪಾಗಿದ್ದಾಳೆ.ಇಂತಹ ಸಾವಿರ ಉದಾಹ ಹಣೆ ಸಿಕ್ಕುತ್ತವೆ.
ಕೇಂದ್ರ ಮತ್ತು ರಾಜ್ಯದಲ್ಲಿಯ ಶೇಕಡ 90ರಷ್ಟು ರಾಜಕಾರಣಿಗಳು ಜನಸಾಮಾನ್ಯರ ನೋವಿಗೆ ಮಿಡಿಯುತ್ತಾ, ಹಗಲು ರಾತ್ರಿ ಎನ್ನದೇ ಮೈ ಮುರಿದು ದುಡಿದು ರಾತ್ರಿಯಾಗುತ್ತಿದ್ದಂತೆ ಗುಂಡು ತುಂಡನ್ನು ಸಕತ್ತಾಗಿ ಗಬ- ಗಬನೇ ತಿಂದುಂಡು ತೊಡೆ ಕುಣಿಸಲಾರಂಭಿಸುತ್ತಾರೆ. ಈ ಗುಂಡು ತುಂಡಿನ ಮಹಿಮೆಯೇ ಹಾಗೆ ! ಅಧಿಕಾರವೆoಬ ಪಿಲ್ಲರಿಗೆ ಗುಂಡು ತುಂಡು ತೊಡೆ ಅತಿಮುಖ್ಯವಾದ ಪಾತ್ರವಹಿಸುತ್ತವೆ. ರಾಜಕಾರಣಿಗಳ ಮಾನ ಹರಾಜಾಕಲು, ರಾಜಕಾರಣ ಸ್ಥಾನ ಪಲ್ಲಟ ಹೊಂದಲು, ಅಧಿಕಾರಕ್ಕಾಗಿ ಬಕೆಟ್ ಹಿಡಿಯಲು ಈ ಗುಂಡು ತುಂಡು ತೊಡೆಯ ಮಹಿಮೆಯೇ ಕಾರಣ ಮತ್ತು ಪರಿಹಾರವಾಗಿದೆ.
ಹಿಂದಿನ ದಿನಗಳಲ್ಲಿ ಮಾಜಿ ಪ್ರಧಾನಿಯೊಬ್ಬರನ್ನು ಈ ಹನಿ ಟ್ರ್ಯಾಪನಲ್ಲಿ ಸಿಕ್ಕಿಹಾಕಿಸಲು ಒಬ್ಬ ಮಂತ್ರಿ ತುಂಬಾ ಪ್ರಯತ್ನ ಪಟ್ಟನು. ಆದರೇ, ದಿನದ 24 ಗಂಟೆಯೂ ರಾಜಕಾರಣದಲ್ಲಿಯೇ ತಲೆ ಬಿಸಿ ಮಾಡಿಕೊಂಡಂತ ವ್ಯಕ್ತಿ ಈ ಹನಿ ಟ್ರಾಪ್ ನ ವಾಸನೆ ಗುರುತಿಸಿ ತಟ್ಟನೇ ನುಣುಚಿಕೊಂಡರು.
ಆಟ ಆಡಲು ಬಾರದಿದ್ದರೆ ಗ್ರೌಂಡನ್ನೇ ಬದಲಾಯಿಸಿ ಎನ್ನುವುದು ಸೋಮಾರಿಗಳ, ಅಸಹಾಯಕರ, ದಡ್ಡರ, ಅನಾನುಭವಿಗಳ ಅಲಾಪ. ಮೂರು ಹೊತ್ತು ಮಾಡಬಾರದ ಹಲ್ಕಟ್ ಕೆಲಸ ಮಾಡ್ತೇವೆ ರಕ್ಷಣೆ ಕೊಡಿ ಎನ್ನುವುದು ಅದೆಷ್ಟು ಸರಿ?
ಕಂಡ ಕಂಡ ಜಾಗೆಯಲ್ಲಿ ಕುಡಿದು ತೊಡೆ ಕುಣಿಸಲು ಹಪಾಹಾಪಿಸುವ ಅಜ್ಞಾನಿಯೇ ಈ ಹನಿಟ್ರ್ಯಾಪ್ ಗೆ ಸಿಕ್ಕು ನರಳುತ್ತಾನೆಯೇ ವಿನಃ ಜಾಣರಿಗೆ, ಮುತ್ಸದ್ದಿಗಳಿಗೆ, ಭವಿಷ್ಯದ ಭಯ ಇರುವ ವ್ಯಕ್ತಿ ದಿನದ 24 ಗಂಟೆಯೂ ಎಚ್ಚರಿಕೆಯಿಂದ ಇರುತ್ತಾನೆ.
ಕರ್ನಾಟಕ ರಾಜ್ಯದ ಸಚಿವರೊಬ್ಬರು ಗುಂಡು, ತುಂಡು, ತೊಡೇ ಕುಣಿಸುವುದರಲ್ಲಿ ನಿಸ್ಸಿಮರಂತೆ, ಸರಕಾರಿ ಕಾರ್ಯಕ್ರಮದ ಕಾರಣ ರಾಜ್ಯ ಸುತ್ತುತ್ತಿದ್ದರು. ಒಮ್ಮೆ ತಮ್ಮ ಕಾರ್ಯಕ್ರಮ ಮುಗಿಸಿಕೊಂಡು ತಾಲ್ಲೂಕು ಸ್ಥಳದ ಸರಕಾರಿ ಬಂಗ್ಲೆಯಲ್ಲಿ ಆ ರಾತ್ರಿ ತಂಗಿದ್ದರಂತೆ ಯಥಾ ಪ್ರಕಾರ ತಮ್ಮ ಜಾಯಮಾನದಂತೆ ತಮ್ಮ ಇಲಾಖೆಯ ಅಧಿಕಾರಿಗಳು ರಾತ್ರಿ ಪಾರ್ಟಿ ಏರ್ಪಡಿಸಿದ್ದಾರೆ ಗುಂಡು ತುಂಡು ಜೋರಾಗಿಯೇ ಇಳಿಸಿದ ಸಚಿವ ರಾತ್ರಿ ಒಬ್ಬನೇ ಮಲಗಿ ಅಭ್ಯಾಸವಿಲ್ಲ ಕಾರಣ ರಸಪುರಿ ಗರ್ಲ್ ಬೇಕೆ ಬೇಕೆಂದು ಒತ್ತಾಯಿಸಿದಾಗ ಅಧಿಕಾರಿಗಳು ಗಾಬರಿಯಾಗಿ ಊರೆಲ್ಲ ಸುತ್ತಿ ಒಬ್ಬ ಕಾಲ್ ಗರ್ಲ್ ಳನ್ನು ತಂದು ಸಚಿವರ ಕೊಣೆಗೆ ಬಿಟ್ಟಿದ್ದಾರೆ.
ಮರುದಿನ ಬೆಳಗ್ಗೆ ಎದ್ದ ಸಚಿವರು ರೆಡಿ ಆಗಿ ಅಧಿಕಾರಿಗಳನ್ನು ಕರೆದು ” ಎಂಥಾ ಜನರಯ್ಯ ನೀವು ಒಳ್ಳೆ ರಸಪುರಿ ಮಾವಿನ ಹಣ್ಣು ತನ್ನಿ ಎಂದರೆ ನೀವೇನು ಮಾಡಿದ್ದೀರಾ? ರಾತ್ರಿ ಅಮಲಿನಲ್ಲಿ ಏನೂ ತಿಳಿಯಲಿಲ್ಲ ಬೆಳಗ್ಗೆ ಎದ್ದು ನೋಡಿದರೆ ಹಲಸಿನ ಹಣ್ಣು ನನ್ನೊಂದಿಗೆ ಬಿಟ್ಟಿದ್ದರಲ್ಲ? ಬಡಕೋ ಬೇಕು ನಿಮ್ಮ ಟೇಸ್ಟಿಗೆ ಎಂದು ಗೊಣಗಿದರಂತೆ “



