ಸುದ್ಧಿ

ಹುಣಸಗಿ ತಾಲೂಕಿನ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಅದ್ದೂರಿಯಿಂದ ಮೆರವಣಿಗೆ ಮಾಡಲಾಯಿತು.

ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿತು ದಿ/೯/೧/೨೦೨೬, ರಂದು
ಹುಣಸಗಿ ತಾಲೂಕಿನ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಅದ್ದೂರಿಯಿಂದ ಮೆರವಣಿಗೆ ಮಾಡಲಾಯಿತು ಶ್ರೀ ಮಹಾಂತಯ್ಯ ಸ್ವಾಮಿ ಸರ್ಕಲ್ಲಿನಿಂದ ಪ್ರಾರಂಭಿಸಿ ಶ್ರೀ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಯು ಕೆ ಪಿ ಕ್ಯಾಂಪ್ ಶ್ರೀ ನೀಲಕಂಠೇಶ್ವರ ದೇವಸ್ಥಾನ ಮಂದಿರದಲ್ಲಿ ವೇದಿಕೆಗೆ ಆಗಮಿಸಿದರು ಮೆರವಣಿಗೆಯಲ್ಲಿ ಕನ್ನಡಾಂಬೆಯ ಭಾವಚಿತ್ರ ಹಾಗು ಪುನೀತ್ ರಾಜಕುಮಾರ್ ಭಾವಚಿತ್ರದೊಂದಿಗೆ ಡೊಳ್ಳು ಕುಣಿತ ವಾದ್ಯ ಮೇಳ ಹಲಗೆ ಮೇಳ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತೀರ್ಥ ಮಕ್ಕಳಿಂದ ಕುಣಿತ ಹಾಗೂ ಹುಣಸಗಿ ಪಟ್ಟಣದ ಶಾಲಾ ಮಕ್ಕಳು ಮಹಿಳೆಯರು ಕನ್ನಡಪರ ಹೋರಾಟಗಾರರು ಎಲ್ಲಾ ಸಾಮೂಹಿಕ ಸಂಘಟನೆಗಳೊಂದಿಗೆ ವಿಜೃಂಭಣೆಯಿಂದ ಮೆರವಣಿಗೆ ನಡೆಸಲಾಯಿತು ಮೆರವಣಿಗೆಯಲ್ಲಿ ಹುಣಸಗಿ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಸಾಹಿತಿ ಶ್ರೀ ವೀರೇಶ್ ಹಿರೇಮಠ ಹಳ್ಳೂರು ಕಸಾಪ ತಾಲೂಕು ಅಧ್ಯಕ್ಷರಾದ ವೆಂಕಟಗಿರಿ ದೇಶ್ಪಾಂಡೆ ಸಮ್ಮೇಳನ ಅಧ್ಯಕ್ಷತೆ ವಹಿಸಿಕೊಂಡಿದ್ದರು
ಬೆಳಗ್ಗೆ ಸುರಪುರ ಶಾಸಕರಾದ ಶ್ರೀ ರಾಜ ವೇಣುಗೋಪಾಲ ನಾಯಕ ರಾಷ್ಟ್ರಧ್ವಜ ಧ್ವಜಾರೋಹಣ ನೆರವೇರಿಸಿದರು ಹಾಗೂ ವೇದಿಕೆಯ ಉದ್ಘಾಟಕರಾಗಿ ಸುರಪುರ ಸಂಸ್ಥಾನದ ಶ್ರೀ ರಾಜ ಕೃಷ್ಣಪ್ಪ ನಾಯಕ ಹಾಗೂ ಹಂಪಿ ಕನ್ನಡ ವಿವಿ ಅಧ್ಯಯನ ನಿರ್ದೇಶಕ ಡಾ ಅಮರೇಶ್ ಯತ್ಗಲ ವೇದಿಕೆಯ ಮುಖ್ಯ ಅತಿಥಿಗಳಾಗಿ ಸುರಪುರ ತಾಲೂಕು ವೈದ್ಯಾಧಿಕಾರಿಗಳಾದ ಡಾ ಶ್ರೀ ರಾಜ ವೆಂಕಟಪ್ಪ ನಾಯಕ್ ಕೃಷಿಕರ ಸಮಾಜದ ಉಪ ಅಧ್ಯಕ್ಷರು ಶ್ರೀ ನಾಗಣ್ಣ ಸಾಹುಕಾರ್ ದಂಡಿನ್ ಸಿದ್ದನಗೌಡ ಕರಿಬಾವಿ ಬಸವರಾಜ ಸ್ಥಾವರ ಮಠ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರು ಕೆಪಿಸಿಸಿ ಸದಸ್ಯರಾದ ಸಿದ್ದಣ್ಣ ಮಲಗಿದ್ದೀನಿ ಹೊನ್ನಪ್ಪ ದೇಸಾಯಿ ವೀರೇಶ್ ಬಿ ಚಿಂಚೋಳಿ ಬಿಎಂ ಹಳ್ಳಿ ಕೋಟಿ ಗುತ್ತಿಗೆದಾರರು ಎಸ್ ಸಿ ಪಾಟೀಲ್ ರಾಜನಕೋಳೂರು ತಾಲೂಕಿನ ತಹಸಿಲ್ದಾರ್ ತಾಲೂಕು ಪಂಚಾಯಿತಿ ಸಿ ಓ ತಾಲೂಕಿನ ಮುಖ್ಯ ಕಚೇರಿ ಅಧಿಕಾರಿಗಳು ಹಾಗೂ ಶಿಕ್ಷಕರು ಸುತ್ತಮುತ್ತಲಿನ ಗ್ರಾಮಸ್ಥರು ಹುಣಸಗಿ ಪಟ್ಟಣದ ಗ್ರಾಮಸ್ಥರು ಹಾಗೂ ಮಹಿಳೆಯರು ಮಕ್ಕಳು ವೇದಿಕೆಯಲ್ಲಿ ಉಪಸ್ಥಿತರಿದ್ದರು

ಗುಂಡಪ್ಪ ಜೈ ಬೋಗಿ ಬೈಲಕುಂಟಿ

Related Articles

Leave a Reply

Your email address will not be published. Required fields are marked *

Back to top button