8 ವರ್ಷದ ಹಿಂದಿನ ಫೋಟೋ ನೆನಪಿಸಿ ಕೊಟ್ಟಿದ್ದಕ್ಕಾಗಿ ಫೇಸಬುಕ್ ಗೆ ಧನ್ಯವಾದ ಅರ್ಪಿಸುತ್ತೇನೆ.

ಬೆಂಗಳೂರು ಮಹಾನಗರದ ರೇಸ್ ಕೋರ್ಸ್ ರಸ್ತೆಯ ಪಕ್ಕದಲ್ಲಿ ಸಹಕಾರ ಇಲಾಖೆಯ ಕಾಂಪ್ಲೆಕ್ಸ್ ಇದೆ.
ನಾನು ಕಾರ್ಯನಿಮಿತ್ಯ ಸಹಕಾರಿ ಇಲಾಖೆಗೆ ಹೋದಾಗ, ಆ ಕಾಂಪ್ಲೆಕ್ಸ್ ನಲ್ಲಿ ವಾಚ್ ಮ್ಯಾನ್ ಆಗಿದ್ದ ಒಬ್ಬ ವ್ಯಕ್ತಿ ನನ್ನ ಬೈಕ್ ಪಾರ್ಕ್ ಮಾಡಲು ಸಹಾಯ ಮಾಡಿದನು. ಆಗ ನಾನು ಆತನ ಜೊತೆ ಮಾತನಾಡುತ್ತಾ ಆತನ ಉಭಯ ಕುಶಲೋಪರಿ ವಿಚಾರಿಸಿದೆನು , ಆತನ ಹಿನ್ನೆಲೆ ಕೇಳಿದೆನು , ಸಾಧ್ಯ ಆ ವ್ಯಕ್ತಿ ಹೆಸರು ಜ್ಞಾಪಕೆ ಬರ್ತಾ ಇಲ್ಲ.
ಆತನು ತನ್ನಿಬ್ಬರು ಮಕ್ಕಳನ್ನು ಬೆಂಗಳೂರಿನ ಇಂಜಿನಿಯರಿಂಗ್ ಕಾಲೇಜಿಗೆ ಸೇರಿಸಿ ಎಲೆಕ್ಟ್ರಾನಿಕ್ ಮತ್ತು ಮೆಕ್ಯಾನಿಕಲ್ ಇಂಜಿನಿಯರಿಂಗ್ ಕೋರ್ಸ್ ಮಾಡಿಸುತ್ತಿದ್ದಾನೆ. ಮಕ್ಕಳಿಬ್ಬರು ಬೆಂಗಳೂರಿನಲ್ಲಿ ವ್ಯಾಸಂಗ ಮಾಡುವಾಗ ತಾನು ಮತ್ತು ತನ್ನ ಹೆಂಡತಿ ನೇಪಾಳದಲ್ಲಿ ಇರುವದು ಬೇಡವೆಂದು ನಿರ್ಧರಿಸಿ, ಮಕ್ಕಳೊಂದಿಗೆ ಎಮ್ ಎಸ್ ರಾಮಯ್ಯ ಕಾಲೇಜ್ ಪಕ್ಕದಲ್ಲಿ ಒಂದು ಚಿಕ್ಕ ರೂಂ ಮಾಡಿಕೊಂಡು ಪತಿ-ಪತ್ನಿ ವಾಸಿಸುತ್ತಿದ್ದರು. ಈತನು ಈ ಕಾಂಪ್ಲೆಕ್ಸ್ ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಮತ್ತು ಪತ್ನಿ ಯಾವುದು ಹಾಸ್ಪಿಟಲ್ ನಲ್ಲಿ ಸಹಾಯಕಳಾಗಿ ದುಡಿಯುತ್ತಿದ್ದರು. ಮಕ್ಕಳಿಬ್ಬರು ಹಾಸ್ಟೆಲ್ ನಲ್ಲಿ ಇದ್ದುಕೊಂಡು ಕಾಲೇಜ ವ್ಯಾಸಂಗ ಮಾಡುತ್ತಿದ್ದರು. ಪ್ರತಿ ರವಿವಾರ ತಂದೆ ತಾಯಿ ಮನೆಗೆ ಬಂದು ಬೆಳಗ್ಗಿನಿoದ ಸಾಯಂಕಾಲದವರೆಗೂ ಇದ್ದು ತಮ್ಮ ಇಷ್ಟದ ನೇಪಾಳಿ ಅಡಿಗೆ ಮಾಡಿಸಿಕೊಂಡು ತಿಂದು ಸೋಮವಾರ ಬೆಳಗ್ಗೆ ಕಾಲೇಜಿಗೆ ಹೋದವರು ಮತ್ತೆ ಒಂದು ವಾರ ಬಿಟ್ಟು ತಂದೆ-ತಾಯಿಯವರನ್ನು ಭೇಟಿಯಾಗಲು ಬರುತ್ತಿದ್ದರಂತೆ.

ನಿಮ್ಮ ಮಕ್ಕಳ ವ್ಯಾಸಂಗ ಮುಗಿದ ನಂತರ ನೀವು ಮರಳಿ ನೇಪಾಳಕ್ಕೆ ಹೋಗುತ್ತೀರಾ? ಎಂದು ಕೇಳಿದಾಗ ” ಹೋಗಲೇಬೇಕು ಸರ್ , ನನ್ನ ಊರಿನಲ್ಲಿ ಮಗಳು ಅಳಿಯ ಇದ್ದಾರೆ ಮೂರು ಎಕರೆ ಜಮೀನು ಇದೆ , ಬೇಸಾಯ ಮಾಡಬೇಕಾಗಿದೆ ಥ್ಯಾಂಕ್ಸ್ ಇಂಡಿಯಾ ನನ್ನ ಮಕ್ಕಳಿಗೆ ಉನ್ನತ ವ್ಯಾಸಂಗಕ್ಕೆ ಸಹಾಯ ಮಾಡಿದ ಕಾರಣಕ್ಕೆ. ನನ್ನ ಜೀವನದಲ್ಲಿ ಭಾರತ ದೇಶವನ್ನು ಎಂದಿಗೂ ಮರೆಯುವುದಿಲ್ಲವೆಂದು ಮಿಲಿಟರಿ ಸೆಲ್ಯೂಟ್ ಮಾಡಿದರು ” ಈ ಘಟನೆ ನಡೆದು ಇಂದಿಗೆ 8 ವರ್ಷ ಆಗಿದೆ. ಈ ದಿನ ಫೇಸ್ಬುಕ್ 8 ವರ್ಷದ ಹಿಂದಿನ ಫೋಟೋ ನೆನಪಿಸಿ ಕೊಟ್ಟಿದ್ದಕ್ಕಾಗಿ ನಾನು ಸಹ ಫೇಸಬುಕ್ ಗೆ ಧನ್ಯವಾದ ಅರ್ಪಿಸುತ್ತೇನೆ



