ಸುದ್ಧಿ

ಕೆಪಿಎಸ್ ಶಾಲೆಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರದರ್ಶನ ಕನಕಗಿರಿ.

ಕೆಪಿಎಸ್ ಶಾಲೆಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರದರ್ಶನ

ಕನಕಗಿರಿ ಪಟ್ಟಣದ ಕರ್ನಾಟಕ ಪಬ್ಲಿಕ್ ಪ್ರೌಢಶಾಲಾ ವಿಭಾಗದಿಂದ ಮತ್ತು ಅಗಸ್ತ್ಯ ಫೌಂಡೇಶನ್ ಅವರ ಮಾರ್ಗದರ್ಶನದಲ್ಲಿ ವಿಜ್ಞಾನ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು ಈ ವಸ್ತು ಪ್ರದರ್ಶನವನ್ನು ಉದ್ಘಾಟನೆ ಮಾಡಿದ ಪ್ರಾಶುಂಪಾಲರಾದ ಜಗದೀಶ್ ಆದಿಮನಿಯವರು ಮಾತನಾಡಿ ವಿಜ್ಞಾನ ವಸ್ತು ಪ್ರದರ್ಶನಗಳು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ಮೂಡಿಸುವುದಲ್ಲದೆ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಸಂಶೋಧನಕಾರರಾಗಿ ದೇಶದ ಅಭಿವೃದ್ಧಿಗೆ ಸಹಾಯಕವಾಗುತ್ತದೆ ಎಂದು ತಿಳಿಸಿದರು.

ಪ್ರಸ್ತಾವಿಕ ನುಡಿಯಲ್ಲಿ ಅಗಸ್ತ್ಯ ಫೌಂಡೇಶನ್ ಮಾರ್ಗದರ್ಶಿ ಶಿಕ್ಷಕರಾದ ಹನುಮಂತಪ್ಪ ಬಳ್ಳಾರಿಯವರು ವಿಜ್ಞಾನ ವಸ್ತು ಪ್ರದರ್ಶನ ಏರ್ಪಡಿಸುವುದರಿಂದ ಗ್ರಾಮೀಣ ಭಾಗದ ಸರ್ಕಾರಿ ಶಾಲೆಯ ಮಕ್ಕಳಿಗೆ ಆಗುವ ಲಾಭಗಳನ್ನು ತಿಳಿಸಿದರು.

ಈ ವಸ್ತು ಪ್ರದರ್ಶನವನ್ನು ಸುಮಾರು ಒಂದು ಸಾವಿರಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ವೀಕ್ಷಿಸಿದರು ಪೆದ್ದು ಮುನಿ ಪ್ರೌಢಶಾಲೆ ವಿದ್ಯಾರ್ಥಿಗಳು ಮೌಲಾನಾ ಅಜಾದ್ ಶಾಲೆಯ ವಿದ್ಯಾರ್ಥಿಗಳು ಮತ್ತು ಕೆಪಿಎಸ್ ಶಾಲೆ ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳು ವೀಕ್ಷಿಸಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ನಂತರ ಕಾರ್ಯಕ್ರಮದ ನಿರೂಪಣೆಯನ್ನು ಜೀವ ವಿಜ್ಞಾನ ಶಿಕ್ಷಕರಾದ ಸೈಫುಲ್ಲಾ ಟಿ ಹೆಚ್ ಮಾಡಿದರು ಈ ಸಂದರ್ಭದಲ್ಲಿ ಪ್ರಭು ವಸ್ತ್ರದ ಸುಮಾ ಜಿಎಸ್ ತಿಪ್ಪಮ್ಮ ಸಲ್ಮ ಜಹಾನ್ ಮಂಜುಳಾ ಮೇಟಿ ಬಿಬಿ ಉಮ್ಮೆ ಸಲ್ಮ ವಿಜಯೇಂದ್ರ ಮೌನೇಶ್ ಬಡಿಗೇರ್ ರಾಜೇಶ್ ನಾಗರಾಜ್ ಇತರೆ ಎಲ್ಲಾ ಶಿಕ್ಷಕ ಶಿಕ್ಷಕರು ಹಾಜರಿದ್ದರು.
ಗೌತಮ್ ಯಾದವ್ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ 8867257737

Related Articles

Leave a Reply

Your email address will not be published. Required fields are marked *

Back to top button