ಸುದ್ಧಿ
ಅಂಬೇಡ್ಕರ್ ಬ್ಯಾನರ್ ಹರಿದ ದುಷ್ಕರ್ಮಿಗಳು: ಬಂಧನಕ್ಕೆ ಶಶೀ ಕೋರಿ ಆಗ್ರಹ.

ಅಂಬೇಡ್ಕರ್ ಬ್ಯಾನರ್ ಹರಿದ ದುಷ್ಕರ್ಮಿಗಳು: ಬಂಧನಕ್ಕೆ ಶಶೀ ಕೋರಿ ಆಗ್ರಹ
ಕನಕಗಿರಿ:ಸಮೀಪದ ಬರಗೂರಿನಲ್ಲಿ ಸಂವಿಧಾನ ಜಾಗೃತಿ ಜಾಥಾದ ಅಂಗವಾಗಿ ಹಾಕಿದ್ದ ಬ್ಯಾನರ್ ಅನ್ನು ದುಷ್ಕರ್ಮಿಗಳು ಹರಿದು ಹಾಕಿದ್ದಾರೆ ಎಂದು ದಲಿತಪರ ಸಂಘಟನೆಗಳು ಆರೋಪಿಸಿವೆ.
ಬರಗೂರು ಗ್ರಾಮದ ಗ್ರಾಪಂ ಆವರಣದ ಎದುರು ಸಂವಿಧಾನದ ಜಾಗೃತಿ ಜಾಥಾದ ಅಂಗವಾಗಿ ಬ್ಯಾನರ್ ಹಾಕಲಾಗಿತ್ತು. ಕಿಡಿಗೇಡಿಗಳು ರಾತ್ರಿ ಅಂಬೇಡ್ಕರ್ ಅವರ ಭಾವಚಿತ್ರವಿದ್ದ ಜಾಥಾದ ಪ್ಲೆಕ್ಸ್ ಹರಿದು ಬಿಸಾಕಿದ್ದಾರೆ. ಆರೋಪಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆ ಕರ್ನಾಟಕ ಮಾದಿಗ ದಂಡೊರ್ ತಾಲೂಕು ಉಪಾಧ್ಯಕ್ಷ ಶಶೀಕೋರಿ ಒತ್ತಾಯಿಸಿದ್ದಾರೆ. ಗೌತಮ್ ಯಾದವ್ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ



