ಸುದ್ಧಿ
ಶೀಲವಂತನ, ಶೀಲದ ಬಗ್ಗೆ ಮಾತಾಡಿ ಕೊಡಗು-ಮೈಸೂರು ಕ್ಷೇತ್ರದ ಎಮ್.ಪಿ.ಟಿಕೇಟ್ ತಪ್ಪಿಸುತ್ತಿರುವ ಅಶ್ಲೀಲ ನಾಯಕರು.

ಶೀಲದ ಅರ್ಥ ತಿಳಿಯದ ಬಿಜೆಪಿಯ ಕೆಲ…..ಕೆಲ…..ಅಶ್ಲೀಲ ನಾಯಕರು ಶೀಲವಂತನ, ಶೀಲದ ಬಗ್ಗೆ ಮಾತಾಡಿ ಕೊಡಗು-ಮೈಸೂರು ಕ್ಷೇತ್ರದ ಎಮ್.ಪಿ.ಟಿಕೇಟ್ ತಪ್ಪಿಸುತ್ತಿದ್ದಾರೆ.
೩ ನೇ ಬಾರಿ ಅಥವಾ ಹ್ಯಾಟ್ರಿಕ್ ವಿಜಯ ಸಾಧಿಸಲು ಸಿದ್ಧತೆ ನಡೆಸಿರುವ ಯುವ ಕಣ್ಮಣಿ, ಪ್ರತಾಪಸಿಂಹರಿಗೆ ಶತಾಯ-ಗತಾಯ ಕೊಡಗು ಮೈಸೂರು ಎಮ್.ಪಿ. ಟಿಕೇಟ್ ತಪ್ಪಿಸಲು ಒಳ ಒಪ್ಪಂದವೇ ಕಾರಣ ಎಂಬ ಸತ್ಯೆ ತಳಮಟ್ಟದ ಕಾರ್ಯಕರ್ತನಿಗೂ ಗೊತ್ತಾಗಿದೆ ತನ್ಮೂಲಕ ಬಿ.ಜೆ.ಪಿ. ಪಕ್ಷದ ಬಗ್ಗೆ ಜನರಿಗೆ ಹೇಸಿಗೆ ಎನ್ನಿಸುತ್ತಿದೆಯಂತೆ.
ವಕ್ರಬುದ್ಧಿಯ ನಾಯಕ ತನ್ನ ಮಗನ ರಾಜಕೀಯ ಭವಿಷ್ಯಕೋಸ್ಕರ ಅದೇ ಬುದ್ಧಿ ಹೊಂದಿರುವ ಮತ್ತೊಂದು ಪಕ್ಷದ ಘನಶಿಲವಂತ, ಶ್ರೀರಾಮನಂತೆ ಏಕಪತ್ನೀ ವೃತಸ್ಥ ನಾಯಕನೊಂದಿಗೆ ಮಿಳಿತವಾಗಿ ಪ್ರತಾಪಸಿಂಹರಂತಹ ಪಾದರಸದಂಥಹ ರಾಜಕೀಯ ಯುವನಾಯಕನಿಗೆ ಅನ್ಯಾಯ ಮಾಡಲು ಪಣತೊಟ್ಟು ಇನ್ನಿಲ್ಲದಂತೆ ತೆರೆಯ-ಮರೆಯಲ್ಲಿ ತಾಲೀಮು ನಡೆದಿದೆ.
ಈ ರಾಜಕೀಯ ಪುಡಾರಿಗಳ ಹಣೆ ಬರಹವೇ ಇಷ್ಟು.



