ಸುದ್ಧಿ

ಸೂತ್ರಧಾರಿ ಪಾತ್ರಧಾರಿಯಾಗಿದ್ದಾರೆ ಬೆಂಬಲಿಸೋಣ ಬನ್ನಿ. ರಾಧಾಕೃಷ್ಣ ಎಮ್.ಪಿ ಅಭ್ಯರ್ಥಿ ಕಲಬುರ್ಗಿ.

ಸೂತ್ರಧಾರಿ ಪಾತ್ರಧಾರಿಯಾಗಿದ್ದಾರೆ ಬೆಂಬಲಿಸೋಣ ಬನ್ನಿ.

ಸೂತ್ರಧಾರಿ ಪಾತ್ರಧಾರಿಯಾದಾಗ…..

ಅಖಂಡ ೩೫ ವರ್ಷ ತೆರೆಯ ಮರೆಯಲ್ಲಿಯೇ ಭಾವ ಮಲ್ಲಿಕಾರ್ಜುನ ಖರ್ಗೆಯವರ ಬೆನ್ನಿಗೆ ನಿಂತು ಹಲವಾರು ಸಮಾಜ್ಯೊದ್ಧಾರಕ ಕೆಲಸಗಳು, ರಸ್ತೆ, ನೀರು, ಆರೋಗ್ಯ ಕ್ಷೇತ್ರದ ಕೆಲಸ. ಶಿಕ್ಷಣ, ಸಾಮರಸ್ಯ ಕೆಲಸ ಮಾಡಿದ್ದಾರೆ. ಕಾಡುಕಲ್ಲಿನಂತಿದ್ದ ಕಲಬುರ್ಗಿ ಪ್ರದೇಶವನ್ನು ನಾಡುಗಲ್ಲನ್ನಾಗಿಸಿದವರು ಖರ್ಗೆಯವರು. ಭಾವನ ಬೆನ್ನೆಲುಬಾಗಿ ನಿಂತು ತಮ್ಮ ಜೀವನ ತೆರೆ – ಮರೆಯಲ್ಲಿಯೇ ಸವೆಸುತ್ತಾ ಅಳಿಯ ಪ್ರಿಯಾಂಕ ಖರ್ಗೆಯವರನ್ನು ರಾಜಕೀಯದಲ್ಲಿ ಪಳಗಿಸಿ ವಿರೋಚಿತವಾಗಿ ವೈರಿಗಳನ್ನು ಎದುರಿಸುವ ಚಾಕುಚಾಕತ್ಯೆ, ಜಾಣತನ, ಚಾಣಕ್ಯನ ನೀತಿ,, ರೀತಿ, ಕಲಿಸಿದ್ದಾರೆ. ಇಂದು ರಾಜ್ಯದೆಲ್ಲೆಡೆ ಪ್ರೀಯಾಂಕ ಖರ್ಗೆ ಎಂದರೆ‌ ಬಲು ಜೋರು. ರಾಜಕೀಯ ಪಟ್ಟು ಕಲಿತ ರಾಜಕೀಯ ಜಾಣ ಎಂದು ಜನರು ಆಡಿಕೊಳ್ಳಲು ಅನುವು ಮಾಡಿಕೊಟ್ಟ ಶ್ರೇಯಸ್ಸಿನಲ್ಲಿ ಮಾವ ರಾಧಾಕೃಷ್ಣರ ಪಾಲೂ ಇದೆ.

ರಾಧೆಯಂಥಹ ಹೆಂಗರುಳು, ಸೂಕ್ಷ್ಮ ಬುದ್ಧಿ, ದೂರಾಲೋಚನೆ ಜೊತೆಗೆ ಕೃಷ್ಣನಂಥಹ ಧೈರ್ಯ ಹೊಂದಿದವರು. ರಾಜಕೀಯ ಎದುರಾಳಿಗಳೊಂದಿಗೆ ಹೋರಾಟ ಮಾಡದೇ, ಕೈ ಮಲೀನ ಮಾಡಿಕೊಳ್ಳದೇ ರಾಜಕೀಯ ವೈರಿಗಳನ್ನು ಸದೆಬಡಿಯುವ ಜಾಣರಿವರು.

ರಾಷ್ಟ್ರೀಯ ನಾಯಕರೊಂದಿಗೆ ೩೫ ವರ್ಷ ಜೀವ ಸವೆಸಿದರೂ ಸ್ವಲ್ಪಾನೂ ಹಮ್ಮು-ಬಿಮ್ಮು ಇಲ್ಲದೇ ಜನಸಾಮಾನ್ಯರಂತೆ‌, ಎಲೆಮರೆಯ ಕಾಯಿಯಂತೆ ಬದುಕುತ್ತಿರುವವರು.

ದೊಡ್ಡ ಸಾಹೇಬರು ( ಮಲ್ಲಿಕಾರ್ಜುನ ಖರ್ಗೆಯವರು) ಭೇಟಿಯಾಗಿ‌ ಕೆಲಸ ಮಾಡಿಸಿಕೊಳ್ಳೋಣ ಎಂದು ಬರುವ ಜನರು, ಖರ್ಗೆಯವರನ್ನು ಭೇಟಿಯಾಗುತ್ತಾರೆ ನಂತರ ರಾಧಾಕೃಷ್ಣರಿಗೆ ಭೇಟಿಯಾಗಲು ಬರುವವರು ಇವರನ್ನು ಚಿಕ್ಕ ಸಾಹೇಬರು, ಎಂದು ಕರೆದಾಗ ” ಹಾಗೆಲ್ಲಾ ಚಿಕ್ಕ ಸಾಹೇಬರು, ಸಣ್ಣ ಸಾಹೇಬರು ಎಂದು‌ ಕರೆಯಬೇಡ್ರಪ್ಪಾ. ರಾಧಾಕೃಷ್ಣ ಎಂದು ಕರೆದರೇ ಸಾಕು ” ಎಂದು ಪ್ರೀತಿಯಿಂದಲೇ ಗದರುತ್ತಾರೆ. ಅದೇ ಕಾರಣಕ್ಕೆ ಇರಬಹುದು ಇವರನ್ನು ರಾಧಾಕೃಷ್ಣ ಸರ್ ಎಂದೇ ಜನ ಕರೆಯುತ್ತಾರೆ. ಅದೇ ಥರಹ ಹೆಸರು ವಾಸಿಯಾಗಿದ್ದಾರೆ.

ಮಲ್ಲಿಕಾರ್ಜುನ ಖರ್ಗೆಯವರು ತಮ್ಮ ರಾಜಕೀಯ ಜೀವಿತಾವಧಿಯಲ್ಲಿ ಹಲವಾರು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದರು, ಸಾಮಾಜಿಕ ಕಾರ್ಯಗಳನ್ನು ಮಾಡಿದ್ದಾರೆ. ಮಾಡುತ್ತಿದ್ದಾರೆ. ಮಾಡುತ್ತಲೇ ಇರುತ್ತಾರೆ. ಇವರ ಅವಧಿಯಲ್ಲಿ ಮಾಡಿರುವ ಹಲವಾರು ಐತಿಹಾಸಿಕ ಕೆಲಸಗಳನ್ನು ಪಟ್ಟಿ ಮಾಡದಷ್ಟು ಉದ್ದ ಇವೆ. ಕಲಬುರ್ಗಿ ಪ್ರದೇಶಕ್ಕೆ ಇ.ಎಸ್.ಐ.ಸಿ. ಆಸ್ಪತ್ರೆ. ಹಾಗೂ ಬುದ್ಧ ಮಂದಿರ ಇನ್ನೂ ಹಲವಾರು ಹೃದಯಸ್ಪರ್ಶಿ ಕೆಲಸ ಮಾಡಿದ್ದಾರೆ ಮತ್ತು ಹಿಂದುಳಿದ ಕಲಬುರ್ಗಿ ಜಿಲ್ಲೆಗೆ ಇವರ ಕೊಡುಗೆ ಅಪಾರವಾಗಿದೆ. ಖರ್ಗೆಯವರ ಕನಸಿನ ಕೂಸಿಗೆ ನೀರೆರೆದು ಬೆಳೆಸಿದವರಲ್ಲಿ ರಾಧಾಕೃಷ್ಣರ ಶ್ರಮ, ತುಂಬಾ ಇದೆ ಎಂದು ಕಲಬುರ್ಗಿಯ ಜನ ಮಾತಾಡುತ್ತಾರೆ.

ರಾಧಾಕೃಷ್ಣ ಇವರು ಹಿಂದುಳಿದ ಕಲಬುರ್ಗಿ ಜಿಲ್ಲೆಗೆ ಮತ್ತು ಈ ಪ್ರದೇಶಕ್ಕೆ ಎಲೆಮರೆಯ ಕಾಯಿಯಂತೆ ಹಲವಾರು ಪ್ರಗತಿಪರ, ಜನಮಾನಸದಲ್ಲಿ ಉಳಿಯುವಂಥಹ ಕೆಲಸ ಮಾಡಿದ್ದಾರೆ.

ಈ ಪ್ರದೇಶದ ಮತದಾರೇ, ಇವರು ಮಾಡಿದ ಜನೋಪಯೋಗಿ ಕೆಲಸಗಳನ್ನು ಕಣ್ತೆರೆದು ನೋಡಿರಿ. ಕಣ್ಮುಚ್ಚಿ ಕೂಲಿ ಕೊಡಿ ಸಾಕು. ತಮ್ಮ ಅಮೂಲ್ಯವಾದ ಮಾತ ಎಂಬ ಕೂಲಿ‌ ಕೊಡಿ. ಮುಂದಿನ ಪ್ರಗತಿ ಕೆಲಸಗಳನ್ನು ಇವರಿಂದ ಕೈಹಿಡಿದು ಮಾಡಿಸಿಕೊಳ್ಳಿರಿ. ಈ ಸಾತ್ವಿಕ ಜನ ನಮಗಾಗಿ ಹಗಲಿರುಳು ದುಡಿಯಲು ತಯಾರಿದ್ದಾರೆ ಎಂಬ ಮಾತು ನಿತ್ಯ-ಸತ್ಯೆ ಎನ್ನುವುದು ಈ ಪ್ರದೇಶದ ಪ್ರಬುದ್ಧರ ಮನದಾಳದ ಮಾತಾಗಿದೆ. ಅರ್.ಎಮ್.ಎಸ್. ಬೆಂಗಳೂರು.

Related Articles

Leave a Reply

Your email address will not be published. Required fields are marked *

Back to top button